ಪೀಣ್ಯ ದಾಸರಹಳ್ಳಿ:’ ಇಂದು ಬೆಳಿಗ್ಗೆ ಗಿಳಡಿಗೇಡಿಗಳು ಕೆಲವು ಖಾಸಗಿ ಶಾಲೆಗಳಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು ಅದರ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು.
ಬೆಳಿಗ್ಗೆ ಬೆಂಗಳೂರು ನಗರದಲ್ಲಿ ಕಿಡಿಗೇಡಿಗಳು ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದ್ದು ಪೊಲೀಸ್ ಅಧಿಕಾರಿಗಳು ಸರಿಯಾದ ತನಿಖೆ ನಡೆಸಬೇಕು. ಬೆಳಿಗ್ಗೆ ಶಾಲೆಗೆ ರೆಡಿಯಾಗಿ ಮಕ್ಕಳು ಹೋಗುವ ಸಮಯದಲ್ಲಿ ಇಂತಹ ಆತಂಕ ವಿಷಯಗಳಿಗೆ ಮಕ್ಕಳು, ಪೋಷಕರು, ಶಾಲಾ ಆಡಳಿತ ಸಿಬ್ಬಂದಿ ಭಯಭೀತರಾಗುತ್ತಾರೆ.
ನಮ್ಮ ಭಾಗದಲ್ಲಿ ಪೋಷಕರು ಶಾಲೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ಕಳುಹಿಸಿ ಎಂದು ಭಯಭೀತರಾಗಿದ್ದಾರೆ. ಇಂತಹ ಕೃತ್ಯ ವ್ಯಸಗುತ್ತಿರುವವರನ್ನು ಪತ್ತೆಹಚ್ಚಿ ಇಂತಹ ಉಗ್ರ ಚಟುವಟಿಕೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ’ ಎಂದು ಶಾಸಕ ಮುನಿರಾಜು ತಿಳಿಸಿದರು.