ದಾವಣಗೆರೆ:- ನಗರ ಪಾಲಿಕೆ ಪೌರಕಾರ್ಮಿಕ ಬಂಧುಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ವಾಹನ ಚಾಲಕ ಕಾರ್ಮಿಕ,ಹಾಗೂ ಒಳಚರಂಡಿ ಸಹಾಯಕ ಕಾರ್ಮಿಕರು, ಹಾಗೂ ವಾಲ್ ಮ್ಯಾನ್ ಸಹಾಯಕ ಕಾರ್ಮಿಕರನ್ನು, ಏಕಕಾಲದಲ್ಲಿಯೇ ನೇರ ಪಾವತಿ ಮುಖಾಂತರ ಕಾಯಂ ಮಾಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ
ಧರಣಿ ಸತ್ಯಾಗ್ರಹ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ನೀಡಲಾಯಿತು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಮೈಸೂರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಧ್ಯಕ್ಷ ಎಲ್ ಎಂ ಹನುಮಂತಪ್ಪ ನೇತೃತ್ವದಲ್ಲಿ ನಡೆದ ಧರಣಿ ಯಶಸ್ವಿಯಾಗಿ ನಡೆಸಲಾಗಿದೆ.
ಹೋರಾಟದಲ್ಲಿ ಪೌರಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಎಂ.ಉಮೇಶ್,
ಕಾಂತರಾಜ್, ರಾಧಾಕೃಷ್ಣ, ವಾಲ್ಮಿನ್ಗಳಾದ ಅಂಜಿನಪ್ಪ ಅವರಗೆರೆ, ರವಿವರ್ಧನ್, ಶಿವರಾಜ್.ಎನ್.ಆದಾಪುರ್,
ಮತ್ತೂರಮ್ಮ, ರೇಣುಕಮ್ಮ,ರತ್ನಮ್ಮ ಶಿವರಾಜ್,ಪರಶುರಾಮ್. ಗುರುರಾಜ್. ಎಲ್ಲಾ ಪಾಲಿಕೆ ಸ್ವಚ್ಛತಾ ಕಾರ್ಮಿಕರು,ವಾಹನ ಚಾಲಕರು ಭಾಗವಹಿಸಿದ್ದರು.