ಬೆಂಗಳೂರು:- ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ ಹೀಗಾಗಿ ಅದರ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ವರ್ಗಾವಣೆ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳ ಹಣ ಸಿಕ್ಕಿದ್ದು, ಇದು ವರ್ಗಾವಣೆ ದಂಧೆಯ ಸ್ಪಷ್ಟ ರೂಪ ಎಂದು ಆರೋಪಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ದ್ರೋಹ ಬಗೆಯಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ. ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಜನರು ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದರು. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್‍ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ. 236 ತಾಲೂಕುಗಳಲ್ಲಿ…
Author: AIN Author
ಬೆಂಗಳೂರು:- ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಜಿರಳೆ ಕಾಟ ಜೋರಾಗಿದ್ದು, ಮಕ್ಕಳು, ಬಾಣಂತಿಯರು ಪರದಾಟ ನಡೆಸಿದ್ದಾರೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಜಿರಳೆ ಕಾಟಕ್ಕೆ ಮಕ್ಕಳು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಪರದಾಡಿದ್ದಾರೆ. 2 ದಿನದ ಹಿಂದೆ ಗಂಡು ಮಗುವಿಗೆ ಆಶಾರಾಣಿ ಜನ್ಮ ನೀಡಿದ್ದರು. ಬಾಣಂತಿ ವಾರ್ಡ್ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಸ್ವಚ್ಛತೆ ಮಾಡಿಲ್ಲ. ಹೆರಿಗೆ ವಾರ್ಡ್ನಲ್ಲೂ ಸ್ವಚ್ಛತೆ ಇಲ್ಲದ್ದರಿಂದ ಜಿರಳೆ ಕಾಟ ಹೆಚ್ಚಿದೆ. ಈ ವಿಚಾರವಾಗಿ ವಾಣಿವಿಲಾಸ ಆಸ್ಪತ್ರೆ ಅಧೀಕ್ಷಕಿ ಸವಿತಾ ಮಾತನಾಡಿ, ಹಸುಗೂಸಿಗೆ ಜಿರಳೆ ಕಚ್ಚಿಲ್ಲ, ಬಟ್ಟೆಯಿಂದ ರ‍್ಯಾಷಸ್ ಆಗಿದೆ. ವಾಣಿವಿಲಾಸ ಆಸ್ಪತ್ರೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಪೋಷಕರು ಬಂದು ನಮ್ಮ ಬಳಿ ಕೂಡ ಹೇಳಿಲ್ಲ. ಕೂಡಲೇ ಮಕ್ಕಳ ತಜ್ಞರನ್ನು ಕರೆಸಿ ಮಾಹಿತಿ ಪಡೆದಿದ್ದೇವೆ. ಆದರೆ ಯಾಕೆ ಆ ರೀತಿ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಯಪುರ: ಆಸೀಸ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಯುವಪಡೆ ಅಮೋಘ ಜಯ ಸಾಧಿಸುವ ಜೊತೆಗೆ ಆಸೀಸ್ (Australia) ವಿರುದ್ಧ ಸರಣಿ ಜಯ ತನ್ನದಾಗಿಸಿಕೊಂಡಿತು. ಇದರೊಂದಿಗೆ ಭಾರತ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) ಅತಿಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2006ರಲ್ಲಿ ಟಿ20 ಕ್ರಿಕೆಟ್ ಆರಂಭವಾದಾಗಿನಿಂದ ಭಾರತ ಈವರೆಗೆ ಆಡಿದ 213 ಪಂದ್ಯಗಳಲ್ಲಿ 136 ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 226 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದ ಪಾಕ್ ತಂಡವನ್ನು ಹಿಂದಿಕ್ಕಿದೆ. ಭಾರತದ ಗೆಲುವಿನ ಪ್ರಮಾಣ 63.84 ಇದೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಕೀರ್ತಿ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಆದ್ರೆ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಯುವಪಡೆ 20 ರನ್‌ಗಳ ಜಯ ಸಾಧಿಸುವ ಮೂಲಕ ಈ ದಾಖಲೆಯನ್ನು ಮುರಿಯಿತು. ಜೊತೆಗೆ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿದೆ. ಕೊನೆಯ…
ಗೌರಿಬಿದನೂರು:- ಗೆಳೆಯರ ಜೊತೆ ಈಜಾಡಲು ಹೊಗಿ ಸಾವನ್ನಪ್ಪಿರುವ ಘಟನೆ ಗುರುವಾರ ಗೌರಿಬಿದನೂರು ತಾಲ್ಲೂಕಿನ ತೊಂಡೆಭಾವಿ ಗ್ರಾಮದಲ್ಲಿ ನಡೆದಿದೆ. ಹೌದು ತೊಂಡೆಭಾವಿ ಗ್ರಾಮದ ನಿವಾಸಿ Sslc ವ್ಯಾಸಂಗ ಮಾಡುತಿದ್ದ 16_ವರ್ಷದ ವಯಸ್ಸಿನ ಚರಣ್ ಎಂಬ ಯುವಕ ಗುರುವಾರ ಕನಕ ದಾಸರ ಜಯಂತಿ ಇರುವ ಕಾರಣ ಬೆಳಗ್ಗೆ ಶಾಲೆಗೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ, ನಂತರ ತನ್ನ ಸ್ನೆಹಿತರ ಜೊತೆ ತಮ್ಮದೆ ಗ್ರಾಮದ ರೈತರ ಹೊಲದಲಿದ್ದ ಕೃಷಿಹೊಂಡ ದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ, ಸಧ್ಯ ಮಂಚೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಎಲ್ಲಾ ಸ್ಪರ್ಧಿಗಳು ಇದೀಗ ತಮ್ಮ ಬದುಕಿನ ಭಾವನಾತ್ಮಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಬದುಕಿನ ದಿಕ್ಕನ್ನೇ ಬದಲಿಸಿದ ಕೆಲ ಘಟನೆಗಳು ಏಳು ಬೀಳಿನ ಹಾದಿ ಹೇಗಿತ್ತು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 50 ದಿನ ಪೂರೈಸಿರೋ ಸ್ಪರ್ಧಿಗಳಿಗೆ ಮನಸ್ಸು ಭಾರ ಆಗಿರುತ್ತದೆ. ಹಾಗಾಗಿ ಟಾಸ್ಕ್ ಮುಗಿದ ಮೇಲೆ ತಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಬಗ್ಗೆ ಮಾತನಾಡಿದ್ದಾರೆ. ಅದರಂತೆಯೇ ನಟಿ ಸಂಗೀತಾ ಶೃಂಗೇರಿ ಅವರು ತಮ್ಮ ತಾಯಿಯ ಕಣ್ಣಿನ ಆಪರೇಷನ್ ಮಾಡಿಸುವಾಗ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಸಂಗೀತಾ ಅವರು ಶಿಸ್ತು ಬದ್ಧ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಏರ್‌ಫೋರ್ಸ್‌ಲ್ಲಿದ್ದವರು. ಟ್ರಾನ್ಸಫರ್ ಆಗುತ್ತಲೇ ಇತ್ತು. ಫ್ರೆಂಡ್ಸ್ ಬದಲಾಗುತ್ತಲೆ ಇದ್ದರು. ನಾನು ಕಾಲೇಜಿನಲ್ಲಿ ಓದುವಾಗ ಅಪ್ಪ ರಿಟೈರ್ಮೆಂಟ್ ತೆಗೆದುಕೊಂಡರು. ಆದರೆ, ಆಗ ಅಪ್ಪನಿಗೆ ಬೇರೆ ಕೆಲಸ ಬೇಗ ಸಿಗಲಿಲ್ಲ. ಈ ಕಡೆ ಅಮ್ಮನಿಗೆ ಕಣ್ಣಿನ ಸಮಸ್ಯೆಯೂ ಇತ್ತು. ಕಾಲೇಜು ಫೀಸ್ ಕಟ್ಟುವುದಕ್ಕೂ ಕಷ್ಟ ಆಗಿತ್ತು ಎಂದು…
ನೆಲಮಂಗಲ : ತಾಲ್ಲೂಕಿನ ಬೂದಿಹಾಳ್ ಗ್ರಾಮ ಪಂಚಾಯಿತಿಯಲ್ಲಿ 2017 ರಿಂದ 2019ರ ವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಿ.ಎಂ ಪದ್ಮನಾಭ್ ರವರು ಈ ಸಂದರ್ಭದಲ್ಲಿ ನೂತನ ಗ್ರಾಮ ಸೌಧ ಕಟ್ಟಡವನ್ನು ಸಿ ಎಸ್ ಆರ್ ಅನುದಾನ ಹಾಗೂ ದಾನಿಗಳಿಂದ ಹಣವನ್ನು ಕ್ರೂಡಿಕರಿಸಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಿಸಿದ್ದರು ಎನ್ನಲಾಗಿದೆ ಕೆಲವರು ಆರೋಪಿಸಿ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಕ್ಷಮ ಶಿಸ್ತು ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸಿದ್ದ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಪಿಡಿಒ ಪದ್ಮನಾಭ್ ಹೇಳಿಕೆಯನ್ನು ಪಡೆಯದೆ. ದಾಖಲೆಗಳನ್ನು ಪರಿಶೀಲಿಸದೆ ಅಮಾನತ್ತು ಆದೇಶ ಮಾಡಿದ್ದರುಎನ್ನಲಾಗಿದ್ದು. ಸದರಿ ಪಿ ಡಿ ಓ ಪದ್ಮನಾಬ್ ರವರು ಅಮಾನತ್ತು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ನ್ಯಾಯ ಮಂಡಳಿ ಯಲ್ಲಿ ( ಕೆಎಟಿ ) ಪ್ರಕರಣ ದಾಖಲಿಸಿದ್ದರು. ಅಮಾನತು ಪ್ರಕರಣವನ್ನು ಪರಿಶೀಲಿಸಿದ ನ್ಯಾಯ ಮಂಡಳಿ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ನೆಲಮಂಗಲ ತಾಲೂಕಿನ ಬೂದಿಹಾಳ್ ಪಂಚಾಯತಿಯಲ್ಲಿ ಮಾದರಿ ಗ್ರಾಮ…
ಹಾಸನ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಮಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಘೋಷಿಸಿದರು. ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ” ನನಗೆ ಇನ್ನೂ ಎರಡೂವರೆ ವರ್ಷ ರಾಜ್ಯಸಭೆ ಅಧಿಕಾರ ಇದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ಬಗ್ಗೆ ಸಂಶಯ, ಗೊಂದಲಬೇಡ ” ಎಂದರು. https://ainlivenews.com/witchcraft-in-the-prestigious-karnataka-university-professors-chamber/ ಕಳೆದ ಬಾರಿ ಪ್ರಜ್ವಲ್ ರೇವಣ್ಣನನ್ನು ಎಲ್ಲಾ ಮುಖಂಡರು ಆಯ್ಕೆ ಮಾಡಿದ್ದರು. ಕಾಂಗ್ರೆಸ್‌ನಲ್ಲೂ ಜೆಡಿಎಸ್‌ನಲ್ಲೂ ಒಬ್ಬರೇ ಲೋಕಸಭೆ ಸದಸ್ಯರು ಈ ಬಾರಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜೆಡಿಎಸ್ ಸೇರಿ ಹೋರಾಡುತ್ತೇವೆ ಎಂದು ತಿಳಿಸಿದರು. ಸೀಟು ಹೊಂದಾಣಿಕೆ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಮಿತ್‌ಶಾರವರು ಮೊದಲನೇ ಹಂತದಲ್ಲಿ ಮಾತನಾಡಿದ್ದಾರೆ ಐದು ರಾಜ್ಯಗಳ ಚುನಾವಣೆ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರ ತೆ ಸಮಾಲೋಚನೆ ಮಾಡಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಯಲಹಂಕ:-ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೆ ಗೌಡರ ನೇತೃತ್ವದಲ್ಲಿ ರಾಜ್ಯೋತ್ಸವದ ಆಚರಣೆ ಮಾಡಲಾಗಿದೆ. ಯಲಹಂಕದ ನೂರಾರು ಯುವಕರು ಸೇರಿ ಅದ್ದೂರಿ ಆಚರಣೆ ಮಾಡಲಾಗಿದ್ದು, ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿ ರಾರಾಜಿಸಿದ್ದಾರೆ. ಯಲಹಂಕದ ನೂರಾರು ಯುವಕರು ಸೇರಿ ಅದ್ದೂರಿ ಆಚರಣೆ ಮಾಡಿದ್ದಾರೆ. ಶಾಸಕ ಎಸ್ ಆರ್ ವಿಶ್ವನಾಥ್ ರಿಂದ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇ ಗೌಡರಿಂದ ಕನ್ನಡ ದ್ವಜಾರೋಹಣ ನಡೆದಿದೆ. ಇದೆ ವೇಳೆ ನೂರಾರು ಜನಕ್ಕೆ ಅನ್ನ ಸಂತರ್ಪಣೆ ಕೂಡ ಏರ್ಪಡಿಸಲಾಗಿತ್ತು. ಕನ್ನಡ ಚಲನ ಚಿತ್ರ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ.
ಹಾಸನ : ಹೊಸ ತಾಂತ್ರಿಕತೆ, ವಿಷಯಗಳ ಅಧ್ಯಯನಕ್ಕೆ ಹಾಗೂ ಹೊಸ ಅವಿಷ್ಕಾರಗಳ ಮಂಡನೆಗೆ ಮೈಸೂರ್ ಕಾನ್‌ನಂತಹ ಕಾರ್ಯ ಕ್ರಮಗಳು ಸಹಕಾರಿಯಾಗಲಿದೆ ಎಂದು ಜೈನ್ ವಿಶ್ವವಿದ್ಯಾಲಯ ಮುಖ್ಯಸ್ಥರು ಸ್ಪೇನ್ ದೇಶದ ಡಾ. ರೋಸಿಯೊ ಫೆರಜ್ ಪರಡೋ ತಿಳಿಸಿದರು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಐಇಇಇ ಮೈ ಸೂರು ಉಪ ವಿಭಾಗದವರು ಹಾಗೂ ಮಲೆನಾಡು ಇಂಜಿನೀ ಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಆಯೋಜಿ ಸಲಾಗಿದ್ದ ಸ್ಮಾರ್ಟ್ ಸಿಟಿಗಳ ಕುರಿತು ಮೈಸೂರ್ ಕಾನ್-೨೦೨೩ ಎಂಬ ಅಂತಾ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈ ರೀತಿಯ ಅಂತಾ ರಾಷ್ಟ್ರೀಯ ಸಮ್ಮೇಳನದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಹೆಚ್ಚಿನ ರೀತಿ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿ ಗಳ ಮುಂದಿನ ಅಧ್ಯಾಯದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ಮಾತ ನಾಡಿ, ಅಂತಾರಾಷ್ಟ್ರೀಯ ಸಮ್ಮೇಳ ನವನ್ನು ಮಲೆನಾಡು ಇಂಜಿನೀ ಯರಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಲು ಅವಕಾಶ ಸಿಕ್ಕಿರು…
ಕನಕಪುರ:- ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಸರ್ಕಾರ ಕಟ್ಟಿಹಾಕಲು ನಾನೇ ಹಗ್ಗ ಕಳಿಸಿಕೊಡುವೆ ಎಂದು DCM ಡಿಕೆಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮ್ಮಲ್ಲಿ ಒಳ್ಳೆ ತೆಂಗಿನ ನಾರಿನ ಹಗ್ಗ ಸಿಗುತ್ತದೆ. ಬೇಕಾದರೆ ವಿಪಕ್ಷಗಳಿಗೆ ಕಳುಹಿಸಿಕೊಡುತ್ತೇನೆ. ಅದರಲ್ಲಿ ನಮ್ಮನ್ನು ಕಟ್ಟಿ ಹಾಕಲಿ ಎಂದರು. ನಮ್ ಮನೆಯವ್ರಿಗೆ ಮತ್ತು ಕ್ಷೇತ್ರದ ಜನರಿಗೆ ಟೈಮ್ ಕೊಡಲು ಆಗುತ್ತಿಲ್ಲ. ಅಷ್ಟೊಂದು ಕೆಲಸದ ಒತ್ತಡ ಇದೆ. ಈಗ ಅಧಿವೇಶನಕ್ಕೆ ಬೆಳಗಾವಿಗೆ 10 ದಿನ ಹೋಗುತ್ತೇವೆ. ಅದರ ಜೊತೆಗೆ ರಾಜಕೀಯ ಜಂಜಾಟ ಬೇರೆ ಇದೆ. ಕ್ಷೇತ್ರದಲ್ಲಿನ ಕೆಲ ಕೆಲಸಗಳ ಪ್ರಗತಿ ಬಗ್ಗೆ ಸಂಸದ ಡಿ.ಕೆ.ಸುರೇಶ್ ನಿಗಾ ವಹಿಸಿದ್ದಾರೆ ಎಂದರು.