ಹಾಸನ : ಹೊಸ ತಾಂತ್ರಿಕತೆ, ವಿಷಯಗಳ ಅಧ್ಯಯನಕ್ಕೆ ಹಾಗೂ ಹೊಸ ಅವಿಷ್ಕಾರಗಳ ಮಂಡನೆಗೆ ಮೈಸೂರ್ ಕಾನ್ನಂತಹ ಕಾರ್ಯ ಕ್ರಮಗಳು ಸಹಕಾರಿಯಾಗಲಿದೆ ಎಂದು ಜೈನ್ ವಿಶ್ವವಿದ್ಯಾಲಯ ಮುಖ್ಯಸ್ಥರು ಸ್ಪೇನ್ ದೇಶದ ಡಾ. ರೋಸಿಯೊ ಫೆರಜ್ ಪರಡೋ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಐಇಇಇ ಮೈ ಸೂರು ಉಪ ವಿಭಾಗದವರು ಹಾಗೂ ಮಲೆನಾಡು ಇಂಜಿನೀ ಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಆಯೋಜಿ ಸಲಾಗಿದ್ದ ಸ್ಮಾರ್ಟ್ ಸಿಟಿಗಳ ಕುರಿತು ಮೈಸೂರ್ ಕಾನ್-೨೦೨೩ ಎಂಬ ಅಂತಾ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,
ಈ ರೀತಿಯ ಅಂತಾ ರಾಷ್ಟ್ರೀಯ ಸಮ್ಮೇಳನದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಹೆಚ್ಚಿನ ರೀತಿ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿ ಗಳ ಮುಂದಿನ ಅಧ್ಯಾಯದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ ಮಾತ ನಾಡಿ, ಅಂತಾರಾಷ್ಟ್ರೀಯ ಸಮ್ಮೇಳ ನವನ್ನು ಮಲೆನಾಡು ಇಂಜಿನೀ ಯರಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಲು ಅವಕಾಶ ಸಿಕ್ಕಿರು ವುದು ಸಂತೋಷ ವಾಗಿದೆ. ನಮ್ಮ ಸಂಸ್ಥೆಯ ಅಧ್ಯಕ್ಷರಾದ ಆಶೋಕ್ ಹಾರನಹಳ್ಳಿರ ವರು ಹಾಗೂ ಸಂಸ್ಥೆಯ ಎಲ್ಲಾ ಪದಾ ಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ, ಸಂಶೋ ಧಕರಿಗೆ ಸಾಕಷ್ಟು ಅನುಕೂಲ ವಾಗುವುದು ಎಂದರು.
ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಪ್ರದೀಪ್ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಡಾ.ಪಿ.ಸಿ. ಶ್ರೀಕಾಂತ್ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್. ಶ್ರೀಧರ್, ವ್ಯವಸ್ಥಾಪಕ ಶಿವರಾಮ್ ಕೃಷ್ಣಯ್ಯ, ನಿರ್ದೇಶಕರಾದ ಪಾರ್ಶ್ವನಾಥ. ಗುರುಮೂರ್ತಿ, ಚೌಡವಳ್ಳಿ ಜಗದೀಶ್, ಎ.ಸಿ. ಛೇರ್ ಬೆಂಗಳೂರು ಸೆಕ್ಷನ್ ಡಾ. ಪರಮೇಶಚಾರಿ, ಐಇಇಇ ಛೇರ್ ಡಾ ಸುದರ್ಶನ್ ಪಾಟೀಲ್ ಕುಲಕರ್ಣಿ, ಡಾ ನರೇಶನ್, ಅಸೋಸಿಯೇಟ್ ವ್ಯೆಸ್ ಪ್ರೆಸಿಡೆಂಟ್ ಇತರರು ಭಾಗವಹಿಸಿದ್ದರು.