ಶಿವಮೊಗ್ಗ: ಸ್ಥಳಿಯ ಶಾಸಕರನ್ನು ಬಿಟ್ಟು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ, ಶಾಸಕ ಬೇಳೂರು ಗೋಪಾಲಕೃಷ್ಣ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದ್ದಾರೆ. ಸ್ಥಳಿಯ ಸಮಸ್ಯೆ, ಸ್ಥಳೀಯ ಶಾಸಕರಿಲ್ಲದೇ ಬಗೆಹರಿಸಲು ಮುಂದಾಗಿರುವ ಸಚಿವ ಮಧು ಬಂಗಾರಪ್ಪ ನಡೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ. https://ainlivenews.com/witchcraft-in-the-prestigious-karnataka-university-professors-chamber/ ಸಭೆಗಳಿಗೆ ನನ್ನನ್ನು ಕರೆಯಲ್ಲ ಎಂದು ಹಲವು ಬಾರಿ ಮಧುಬಂಗಾರಪ್ಪ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಕೇವಲ ಟಿಪಿ ಬಂದಿದೆ. ನನ್ನ ಕ್ಷೇತ್ರದ ಸಭೆ ನಡೆಸುವ ಮುನ್ನ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಆದರೆ, ನನಗೆ ಮಾಹಿತಿ ನೀಡದೇ, ಚರ್ಚಿಸಿದೇ ಸಭೆ ನಡೆಸುತ್ತಿದ್ದಾರೆಂದು ಬೇಳೂರು ಆರೋಪಿಸಿದ್ದಾರೆ.
Author: AIN Author
ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಕಾವು ಜೊತೆಗೆ ಪ್ರತಾಪ್ ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ʻʻತಾನು ಚೆನ್ನಾಗಿ ತಂತ್ರ ಮಾಡ್ತೀನಿ, ಟೀಂ ಲೀಡ್ ಮಾಡ್ತೀನಿ’ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಡ್ರೋನ್ ಪ್ರತಾಪ್ ಅವರು ಈ ಬಾರಿ ಕಳಪೆ ಪಟ್ಟ ಪಡೆದರು. ಈ ವಾರ ಕಾರ್ತಿಕ್ ಅವರನ್ನು ಹೊರಗಿಟ್ಟರು ಪ್ರತಾಪ್. ಮಾತ್ರವಲ್ಲ ಎದುರಾಳಿ ತಂಡದಿಂದ ಕರೆದುಕೊಂಡು ಬಂದಿದ್ದ ನಮ್ರತಾರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟರು.ಹಾಗಾಗಿ ತಂಡ ಹೀನಾಯ ಸೋಲು ಕಂಡಿತು. ಇದರ ಬಗ್ಗೆ ಕಿಚ್ಚ ಸಕತ್ ಕ್ಲಾಸ್ ಕೂಡ ತೆಗೆದುಕೊಂಡರು. ಹಾಗೇ ಸಂಗೀತಾ ಕೂಡ ಈ ಬಗ್ಗೆ ಮಾತನಾಡಿ ʻʻ’ಪ್ರತಾಪ್ ಯಾಕೆ ಈ ನಿರ್ಧಾರ ತಗೊಂಡ ಅಂತ ಅರ್ಥ ಆಗಲ್ಲ. ಪ್ರತಾಪ್ ಯಾರ ಮಾತನ್ನೂ ಕೇಳೋದಿಲ್ಲ. ಅವನು ವೈಯಕ್ತಿಕವಾಗಿ ಆಟ ಆಡಿದ್ದಾನೆ ಎಂದು ಅನಿಸಿತುʼʼಎಂದರು. ಇನ್ನು ಈ ಬಗ್ಗೆ ಕಾರ್ತಿಕ್ ಕೂಡ ʻʻನನ್ನನ್ನು ಯಾಕೆ ಆಟದಿಂದ ಹೊರಗೆ ಇಟ್ಟರು ಎಂದು ಗೊತ್ತಿಲ್ಲ. ಇದರ ಹಿಂದೆ ನಮ್ರತಾ, ವರ್ತೂರು ಸಂತೋಷ್ ಅವರನ್ನು ಆಟದಿಂದ ತೆಗೆದರುʼʼ…
ಶಿವಮೊಗ್ಗ: ಶೀಘ್ರದಲ್ಲಿಯೇ ಜಗದೀಶ್ ಶೆಟ್ಟರ್ ಬಿಜೆಪಿ ಸೇರುತ್ತಾರೆ. ಇತ್ತ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ ನೋಡ್ತಾ ಇರಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ” ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ಕಳ್ಳರ ಕೈಯಲ್ಲಿ ಬೀಗ ಕೊಟ್ಪಂತಾಗಿದೆ. ಸಚಿವ ಸಂಪುಟ ಡಿಕೆಶಿ ಮೇಲಿನ ಸಿಬಿಐ ಕೇಸ್ ವಾಪಸ್ ಪಡೆದಿದೆ. ಸಿಬಿಐ ತನಿಖೆ ಶೇಕಡಾ 90 ರಷ್ಟು ಮುಗಿದಿದೆ. ಲೋಕಸಭೆ ಚುನಾವಣೆ ಮೊದಲು ಅಥವಾ ನಂತರ ಡಿಕೆಶಿ ಜೈಲಿಗೆ ಹೋಗುವುದು ಗ್ಯಾರಂಟಿ ” ಎಂದರು. https://ainlivenews.com/witchcraft-in-the-prestigious-karnataka-university-professors-chamber/ ” ಜಗದೀಶ್ ಶೆಟ್ಟರ್ ಕುಟುಂಬ ಹಿಂದೂ ಸಮಾಜ ರಕ್ತಗತ ಮಾಡಿಕೊಂಡ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್, ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಮೈಯಲ್ಲಿ ಹಿಂದು ರಕ್ತ ಹರಿಯುತ್ತಿದೆ. ಕಾಂಗ್ರೆಸ್ ಸಂಸ್ಕೃತಿ, ಜಮೀರ್ ಅವರ ಧೋರಣೆ ಅವರಿಗೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ…
ಬೆಂಗಳೂರು:- ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ನಕಲಿ ನೋಟು ತಯಾರಿಸುವ ಆರೋಪದಡಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಮಹೇಂದರ್ ಬಂಧಿತ ಆರೋಪಿ. ನಕಲಿ ನೋಟು ತಯಾರಿಕೆಯ ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮಹೇಂದರ್ ಮನೆಯಲ್ಲೇ 500, 200, 100 ರೂ.ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದ್ದು, ನೋಟು ತಯಾರಿಸುವ ಪೇಪರ್, ಮುದ್ರಣ ಯಂತ್ರವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಇಂದು ಹಗುರ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಇವತ್ತು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಕೆಲವೆಡೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದೆ. ಇದರ ಪರಿಣಾಮ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಬೆಂಗಳೂರು:- ಕಾಂಗ್ರೆಸ್ ಸರ್ಕಾರ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ ಹೀಗಾಗಿ ಅದರ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ವರ್ಗಾವಣೆ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳ ಹಣ ಸಿಕ್ಕಿದ್ದು, ಇದು ವರ್ಗಾವಣೆ ದಂಧೆಯ ಸ್ಪಷ್ಟ ರೂಪ ಎಂದು ಆರೋಪಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ದ್ರೋಹ ಬಗೆಯಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ. ವಿರೋಧ ಪಕ್ಷದ ನಾಯಕನಾಗಿ, ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಜನರು ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದರು. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್‍ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ. 236 ತಾಲೂಕುಗಳಲ್ಲಿ…
ಬೆಂಗಳೂರು:- ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ ಜಿರಳೆ ಕಾಟ ಜೋರಾಗಿದ್ದು, ಮಕ್ಕಳು, ಬಾಣಂತಿಯರು ಪರದಾಟ ನಡೆಸಿದ್ದಾರೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಜಿರಳೆ ಕಾಟಕ್ಕೆ ಮಕ್ಕಳು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಪರದಾಡಿದ್ದಾರೆ. 2 ದಿನದ ಹಿಂದೆ ಗಂಡು ಮಗುವಿಗೆ ಆಶಾರಾಣಿ ಜನ್ಮ ನೀಡಿದ್ದರು. ಬಾಣಂತಿ ವಾರ್ಡ್ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಸ್ವಚ್ಛತೆ ಮಾಡಿಲ್ಲ. ಹೆರಿಗೆ ವಾರ್ಡ್ನಲ್ಲೂ ಸ್ವಚ್ಛತೆ ಇಲ್ಲದ್ದರಿಂದ ಜಿರಳೆ ಕಾಟ ಹೆಚ್ಚಿದೆ. ಈ ವಿಚಾರವಾಗಿ ವಾಣಿವಿಲಾಸ ಆಸ್ಪತ್ರೆ ಅಧೀಕ್ಷಕಿ ಸವಿತಾ ಮಾತನಾಡಿ, ಹಸುಗೂಸಿಗೆ ಜಿರಳೆ ಕಚ್ಚಿಲ್ಲ, ಬಟ್ಟೆಯಿಂದ ರ‍್ಯಾಷಸ್ ಆಗಿದೆ. ವಾಣಿವಿಲಾಸ ಆಸ್ಪತ್ರೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಪೋಷಕರು ಬಂದು ನಮ್ಮ ಬಳಿ ಕೂಡ ಹೇಳಿಲ್ಲ. ಕೂಡಲೇ ಮಕ್ಕಳ ತಜ್ಞರನ್ನು ಕರೆಸಿ ಮಾಹಿತಿ ಪಡೆದಿದ್ದೇವೆ. ಆದರೆ ಯಾಕೆ ಆ ರೀತಿ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಯಪುರ: ಆಸೀಸ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಯುವಪಡೆ ಅಮೋಘ ಜಯ ಸಾಧಿಸುವ ಜೊತೆಗೆ ಆಸೀಸ್ (Australia) ವಿರುದ್ಧ ಸರಣಿ ಜಯ ತನ್ನದಾಗಿಸಿಕೊಂಡಿತು. ಇದರೊಂದಿಗೆ ಭಾರತ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) ಅತಿಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2006ರಲ್ಲಿ ಟಿ20 ಕ್ರಿಕೆಟ್ ಆರಂಭವಾದಾಗಿನಿಂದ ಭಾರತ ಈವರೆಗೆ ಆಡಿದ 213 ಪಂದ್ಯಗಳಲ್ಲಿ 136 ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 226 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದ ಪಾಕ್ ತಂಡವನ್ನು ಹಿಂದಿಕ್ಕಿದೆ. ಭಾರತದ ಗೆಲುವಿನ ಪ್ರಮಾಣ 63.84 ಇದೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಕೀರ್ತಿ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಆದ್ರೆ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಯುವಪಡೆ 20 ರನ್‌ಗಳ ಜಯ ಸಾಧಿಸುವ ಮೂಲಕ ಈ ದಾಖಲೆಯನ್ನು ಮುರಿಯಿತು. ಜೊತೆಗೆ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿದೆ. ಕೊನೆಯ…
ಗೌರಿಬಿದನೂರು:- ಗೆಳೆಯರ ಜೊತೆ ಈಜಾಡಲು ಹೊಗಿ ಸಾವನ್ನಪ್ಪಿರುವ ಘಟನೆ ಗುರುವಾರ ಗೌರಿಬಿದನೂರು ತಾಲ್ಲೂಕಿನ ತೊಂಡೆಭಾವಿ ಗ್ರಾಮದಲ್ಲಿ ನಡೆದಿದೆ. ಹೌದು ತೊಂಡೆಭಾವಿ ಗ್ರಾಮದ ನಿವಾಸಿ Sslc ವ್ಯಾಸಂಗ ಮಾಡುತಿದ್ದ 16_ವರ್ಷದ ವಯಸ್ಸಿನ ಚರಣ್ ಎಂಬ ಯುವಕ ಗುರುವಾರ ಕನಕ ದಾಸರ ಜಯಂತಿ ಇರುವ ಕಾರಣ ಬೆಳಗ್ಗೆ ಶಾಲೆಗೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ, ನಂತರ ತನ್ನ ಸ್ನೆಹಿತರ ಜೊತೆ ತಮ್ಮದೆ ಗ್ರಾಮದ ರೈತರ ಹೊಲದಲಿದ್ದ ಕೃಷಿಹೊಂಡ ದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ, ಸಧ್ಯ ಮಂಚೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಎಲ್ಲಾ ಸ್ಪರ್ಧಿಗಳು ಇದೀಗ ತಮ್ಮ ಬದುಕಿನ ಭಾವನಾತ್ಮಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಬದುಕಿನ ದಿಕ್ಕನ್ನೇ ಬದಲಿಸಿದ ಕೆಲ ಘಟನೆಗಳು ಏಳು ಬೀಳಿನ ಹಾದಿ ಹೇಗಿತ್ತು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 50 ದಿನ ಪೂರೈಸಿರೋ ಸ್ಪರ್ಧಿಗಳಿಗೆ ಮನಸ್ಸು ಭಾರ ಆಗಿರುತ್ತದೆ. ಹಾಗಾಗಿ ಟಾಸ್ಕ್ ಮುಗಿದ ಮೇಲೆ ತಮ್ಮ ಬದುಕಿನ ಟರ್ನಿಂಗ್ ಪಾಯಿಂಟ್ ಬಗ್ಗೆ ಮಾತನಾಡಿದ್ದಾರೆ. ಅದರಂತೆಯೇ ನಟಿ ಸಂಗೀತಾ ಶೃಂಗೇರಿ ಅವರು ತಮ್ಮ ತಾಯಿಯ ಕಣ್ಣಿನ ಆಪರೇಷನ್ ಮಾಡಿಸುವಾಗ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಸಂಗೀತಾ ಅವರು ಶಿಸ್ತು ಬದ್ಧ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಏರ್‌ಫೋರ್ಸ್‌ಲ್ಲಿದ್ದವರು. ಟ್ರಾನ್ಸಫರ್ ಆಗುತ್ತಲೇ ಇತ್ತು. ಫ್ರೆಂಡ್ಸ್ ಬದಲಾಗುತ್ತಲೆ ಇದ್ದರು. ನಾನು ಕಾಲೇಜಿನಲ್ಲಿ ಓದುವಾಗ ಅಪ್ಪ ರಿಟೈರ್ಮೆಂಟ್ ತೆಗೆದುಕೊಂಡರು. ಆದರೆ, ಆಗ ಅಪ್ಪನಿಗೆ ಬೇರೆ ಕೆಲಸ ಬೇಗ ಸಿಗಲಿಲ್ಲ. ಈ ಕಡೆ ಅಮ್ಮನಿಗೆ ಕಣ್ಣಿನ ಸಮಸ್ಯೆಯೂ ಇತ್ತು. ಕಾಲೇಜು ಫೀಸ್ ಕಟ್ಟುವುದಕ್ಕೂ ಕಷ್ಟ ಆಗಿತ್ತು ಎಂದು…