ಶಿವಮೊಗ್ಗ: ಸ್ಥಳಿಯ ಶಾಸಕರನ್ನು ಬಿಟ್ಟು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ, ಶಾಸಕ ಬೇಳೂರು ಗೋಪಾಲಕೃಷ್ಣ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದ್ದಾರೆ. ಸ್ಥಳಿಯ ಸಮಸ್ಯೆ, ಸ್ಥಳೀಯ ಶಾಸಕರಿಲ್ಲದೇ ಬಗೆಹರಿಸಲು ಮುಂದಾಗಿರುವ ಸಚಿವ ಮಧು ಬಂಗಾರಪ್ಪ ನಡೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಸಭೆಗಳಿಗೆ ನನ್ನನ್ನು ಕರೆಯಲ್ಲ ಎಂದು ಹಲವು ಬಾರಿ ಮಧುಬಂಗಾರಪ್ಪ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಕೇವಲ ಟಿಪಿ ಬಂದಿದೆ. ನನ್ನ ಕ್ಷೇತ್ರದ ಸಭೆ ನಡೆಸುವ ಮುನ್ನ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಆದರೆ, ನನಗೆ ಮಾಹಿತಿ ನೀಡದೇ, ಚರ್ಚಿಸಿದೇ ಸಭೆ ನಡೆಸುತ್ತಿದ್ದಾರೆಂದು ಬೇಳೂರು ಆರೋಪಿಸಿದ್ದಾರೆ.