ಮನೆಯಲ್ಲಿ ನಿಮಗೆ ಬೇಕಾದ ತಿನಿಸನ್ನು ಮಾಡಿ ತಿನ್ನಲು ಕಲಿಯಬೇಕು. ಇತ್ತೀಚೆಗೆ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವುದು ಪಾನಿಪುರಿ. ಕಡಿಮೆ ಹಣದಲ್ಲಿ ಸಿಗುವ, ನಾಲಿಗೆ ರುಚಿ ತಣಿಸುವ ಪಾನಿಪೂರಿ ಹಲವರ ಫೇವರಿಟ್. ಇದರಲ್ಲಿ ಹಲವು ವಿಧಗಳಿವೆ. ಮಸಾಲಾ ಪೂರಿ, ಆಲೂ ಪೂರಿ, ಸೇವ್ ಪೂರಿ, ಗೋಲ್‌ಗಪ್ಪ ಹೀಗೆ. ಪಾನಿಪೂರಿಯನ್ನು ಮನೆಯಲ್ಲೇ ಮಾಡುವುದು ಕಷ್ಟ ಎಂದುಕೊಂಡಿದ್ದಾರೆ ಹಲವರು. ಆದರೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಲವರು ಪಾನಿಪುರಿ ಮಾಡಲು ಕಲಿತಿದ್ದಾರೆ. ಮನೆಯಲ್ಲೇ ಆರೋಗ್ಯಕರವಾಗಿ ಪಾನಿಪೂರಿ ತಯಾರಿಸಿಕೊಂಡು ತಿನ್ನುತ್ತಿದ್ದಾರೆ. ನಿಮಗಿನ್ನೂ ಮಾಡೋಕೆ ಬರೋಲ್ವಾ? ಇಲ್ಲಿದೆ ರೆಸಿಪಿ. ಪೂರಿ ಮಾಡುವ ವಿಧಾನ ಬೇಕಾಗುವ ಸಾಮಗ್ರಿಗಳು: ಫೇಣಿ (ಚಿರೋಟಿ) ರವೆ 1 ಬಟ್ಟಲು, ಮೈದಾಹಿಟ್ಟು 2 ಚಮಚ, ಅಡುಗೆ ಸೋಡಾ 1 ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ನೀರು 1/4 ಬಟ್ಟಲು, ಎಣ್ಣೆ 3-4 ಚಮಚ ತಯಾರಿಸುವ ವಿಧಾನ: ಮೊದಲಿಗೆ ರವೆಯನ್ನು ಒಂದು ಕಡಾಯಿಗೆ ಹಾಕಿಕೊಂಡು ಮೈದಾ ಉಪ್ಪು ಮತ್ತು 2 ಚಮಚ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ…
Author: AIN Author
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಚುನಾವಣೆಯಲ್ಲಿ ಸೋಲಿನ ಬಳಿಕವೂ ಎಕ್ಸ್‌ನಲ್ಲಿ ಬರೆದು ಧನ್ಯವಾದ ತಿಳಿಸಿದ್ದಾರೆ. ಹೌದು ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು. ಕಳೆದ ಕೆಲವು ವರ್ಷಗಳಿಂದ ಈ ಬೆಂಬಲವು ಹೆಚ್ಚುತ್ತಿದೆ. ನಾವು ತೆಲಂಗಾಣ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಚುನಾವಣೆಯಲ್ಲಿ ಸೋಲಿನ ಬಳಿಕವೂ ಎಕ್ಸ್‌ನಲ್ಲಿ ಬರೆದು ಧನ್ಯವಾದ ತಿಳಿಸಿದ್ದಾರೆ. https://ainlivenews.com/congress-president-has-called-an-important-meeting-on-december-6/ ಈ ಬಾರಿ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿಗೆ ಅಲ್ಲಿನ ಜನತೆ ನೀಡಿರುವ ಬೆಂಬಲ ಎದ್ದು ಕಾಣಿಸಿದೆ. ಈ ಹಿನ್ನೆಲೆ ಎಕ್ಸ್‌ನಲ್ಲಿ ಬರೆದಿರುವ ನರೇಂದ್ರ ಮೋದಿ ಪಂಚರಾಜ್ಯ ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರು ಸೇರಿದಂತೆ ತೆಲಂಗಾಣದಲ್ಲಿ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಏನಿದೆ? ಜನತಾ ಜನಾರ್ದನರಿಗೆ ನಮಿಸುತ್ತೇವೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಫಲಿತಾಂಶಗಳಲ್ಲಿ ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದೊಂದಿಗೆ ದೃಢವಾಗಿ ನಿಂತಿದ್ದಾರೆ. ಈ ರಾಜ್ಯಗಳ ಜನರಿಗೆ ಅವರ ಅಚಲ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ.…
ಬೆಂಗಳೂರು: ಈ ಫಲಿತಾಂಶ ಲೋಕಸಭೆಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದೆ ಎಂದು ಆರ್‌ಆರ್ ನಗರ ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಎರಡೂ ದೊಡ್ಡ ರಾಜ್ಯಗಳಲ್ಲಿ ನಮಗೆ ಗೆಲುವು ಸಿಕ್ಕಿದೆ. ಛತ್ತೀಸ್‌ಗಢದಲ್ಲೂ ಬಿಜೆಪಿ ಗೆಲ್ಲುತ್ತದೆ. ಇಲ್ಲಿನ ಗ್ಯಾರಂಟಿ ತೆಲಂಗಾಣದಲ್ಲಿ ವರ್ಕ್ ಆಗಿದೆ. ನಮ್ಮ ನಿರೀಕ್ಷೆ ತೆಲಂಗಾಣದಲ್ಲಿ ಹುಸಿಯಾಯ್ತು. ಆದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇಂದಿನ ಫಲಿತಾಂಶ ಮತ್ತೆ ಮೋದಿ ಪ್ರಧಾನಿ ಅನ್ನೋದನ್ನೇ ಹೇಳುತ್ತಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಇಂದು ಬಿಜೆಪಿಗೆ ಒಳ್ಳೆಯ ದಿನ ಎಂದರು.
ಬೆಂಗಳೂರು : ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರೆವೇರಿಸಿ ಮಾತನಾಡಿದರು. ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿ ಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ನಿಮ್ಮೊಂದಿಗೂ ಇರುತ್ತೇವೆ ಎಂದರು. https://ainlivenews.com/congress-president-has-called-an-important-meeting-on-december-6/ ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು.
ಬೆಂಗಳೂರು, ಡಿಸೆಂಬರ್ 3, 2023- ಪ್ರತಿಷ್ಠೆಯ ಕಣವಾಗಿದ್ದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‍ಗೆ ಐತಿಹಾಸಿಕ ಗೆಲವು ಎಂದು ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಬಣ್ಣಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ ಕ್ಲಸ್ಟರ್ಉಸ್ತುವಾರಿ ಆಗಿದ್ದ ಶರಣಪ್ರಕಾಶ್ ಪಾಟೀಲ್ ಅವರು ಸುಮಾರು 10 ದಿನಕ್ಕೂ ಹೆಚ್ಚು ಕಾಲ ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಶಿಸ್ತುಬದ್ಧ ಪ್ರಚಾರ ನಡೆಸಿದ್ದರು. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆ ಮಾಡಿದ್ದ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಪಾಟೀಲ್ ಅವರು ಗ್ರಾಮ ಪಂಚಾಯತ್ ನಿಂದ ಹಿಡಿದು ಹೋಬಳಿ ಮಟ್ಟದವರೆಗೂ ಪಾಟೀಲ್ ವೆವಸ್ಥಿತ ಪ್ರಚಾರ ನಡೆಸಿದ್ದರು. ವಿಶೇಷವಾಗಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಹಾಗೂ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನ, ನುಡಿದಂತೆ ನಡೆದಿರುವುದು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಪಾಟೀಲ್ ಮನವರಿಕೆ ಮಾಡಿಕೊಟ್ಟಿದ್ದರು. ಬಿಜೆಪಿ ಹಾಗು ಬಿಆರ್‍ಎಸ್ ಎಷ್ಟೇ ಅಪಪ್ರಚಾರ ನಡೆಸಿದರೂ ಮತದಾರ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಸಚಿವರು…
ಬೆಂಗಳೂರು: ಇಡೀ ದೇಶದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ಲೇಷಿಸಿದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿ ಆಗಬೇಕೆಂಬ ಆಸೆ ಜನತೆಯಲ್ಲಿ ಇದೆ ಎಂಬುದು ಈ ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ ಎಂದು ತಿಳಿಸಿದರು. ಪಂಚರಾಜ್ಯ ಚುನಾವಣೆ ಒಂದು ರೀತಿಯ ಸೆಮಿ ಫೈನಲ್ ಎಂದು ವಿಶ್ಲೇಷಿಸಲಾಗುತ್ತಿತ್ತು. ಸುನಾಮಿ ರೀತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು. 5 ರಾಜ್ಯಗಳ ವಿಜಯ, ವಿಜಯ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಜೀ ಅವರು ಪ್ರಧಾನಿ ಆಗುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಷಯದಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ತಿಳಿಸಿದರು. ದೇಶದ ಜನರು ದೇಶರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಹೊರತು, ಅಧಿಕಾರ ಕಬಳಿಗುವ ಆಮಿಷದ ಗ್ಯಾರಂಟಿಗಳನ್ನಲ್ಲ ಎಂಬುದು ಸ್ಪಷ್ಟವಾಗಿ ಈ ಫಲಿತಾಂಶದ ಮೂಲಕ ಗೊತ್ತಾಗಿದೆ. ಇದು ಕಾಂಗ್ರೆಸ್…
ಕಲಬುರಗಿ: ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಜಯಸಾಧಿಸಿದ ಹಿನ್ನಲೆ ಬಿಜೆಪಿ ಜಿಲ್ಲಾ ಘಟಕ ಕಲಬುರಗಿಯಲ್ಲಿಂದು ವಿಜಯೋತ್ಸವ ಆಚರಿಸಿತು.ನಗರದ ಸರ್ದಾರ ಪಟೇಲರ ಸರ್ಕಲ್ ಬಳಿ ಜಮಾಯಿಸಿದ ಕೇಸರಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.ಇದೇವೇಳೆ ಪಟಾಕಿ ಸಿಡಿಸಿ ಒಬ್ಬರಿಗೊಬ್ರು ಸಿಹಿ ಹಂಚಿದ್ರು…
ಮಹದೇವಪುರ: ಪ್ರೀತಿಸಿ ಎರಡು ತಿಂಗಳ ಹಿಂದೆಷ್ಟೆ ಮದುವೆಯಾಗಿದ್ದರು.. ಮದುವೆಯಾಗಿ ಎರಡು ತಿಂಗಳೇ ವರನ ಕಡೆಯವರು ವಧುವಿಗೆ ವರದಕ್ಷಿಣೆ ಕಿರುಕುಳ ನೀಡಿದ್ದು, ಅನುಮಾನಾಸ್ಪದವಾಗಿ ಯುವತಿಯ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ವಿಭಾಗದ ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಮುದ್ದಾಗಿ ಕಾಣುತ್ತಿರುವ ಜೋಡಿಯ ಹೆಸರು ಪ್ರವೀಣ್ ಮತ್ತು ಅನುಷಾ.. ಇವರಿಬ್ಬರೂ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನವರು.. ಎರಡು ತಿಂಗಳ ಹಿಂದೆ ಕುಟುಂಬದವರ ವಿರೋಧ ನಡುವೆಯೂ ಯುವತಿ ಪಕ್ಕದ ಊರಿನ ಪ್ರವೀಣ್ ನನ್ನು ಮದುವೆಯಾಗಿ ಮಹದೇವಪುರದ ಸಿಂಗಯ್ಯನಪಾಳ್ಯಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.. ಕೆಲ ದಿನಗಳ ನಂತರ ಯುವತಿಯ ಪೋಷಕರು ನವ ದಂಪತಿಯನ್ನು ಕರೆಸಿ ಬುದ್ದಿವಾದ ಹೇಳಿ ಸುಖ ಸಂಸಾರದಿಂದ ಬಾಳುವಂತೆ ಆಶೀರ್ವದಿಸಿದ್ದರೂ.. ಆದ್ರೆ ಹುಡುಗ ಕುಟುಂಬದವರು ಯುವತಿಗೆ ಆಸ್ತಿ ಮತ್ತು ವರದಕ್ಷಿಣೆ ಕಿರುಕುಳ ನೀಡಿ, ಹತ್ಯೆ ಮಾಡಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.. ಇನ್ನೂ ಯುವತಿ ಸಾವಿಗೆ ಅತ್ತೆ ನಾಗಮ್ಮ, ಸೋದರ ಮಾವ ರಾಜೇಶ್ ಹಾಗೂ ದೊಡ್ಡಪ್ಪ ತಿಮ್ಮೆಗೌಡನ ಮಗ ಮಹೇಶ್ ಕಾರಣವೆಂದು ಎಫ್…
ಹುಬ್ಬಳ್ಳಿ : ದೇಶದ ಐದು ರಾಜ್ಯಗಳ ಚುನವಣಾ ಫಲಿತಾಂಶ ಲೋಕಸಭಾ ಚುನಾವಣೆ ಮುನ್ನಡೆ ಆಗಲಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಭಾರತೀಯ ರಾಷ್ಟ್ರೀಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅಭಿಪ್ರಾಯಪಟ್ಟರು.ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ್ ಜೋಶಿ ಪರ ಘೋಷಣೆ ಸೆಮಿಫೈನಲ್ಸ್ ಮ್ಯಾಚ್ ನಲ್ಲಿ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಆಸೆಯನ್ನು ಮೀರಿ ಜನ ಬಿಜೆಪಿ ಕೈ ಹಿಡಿದಿದ್ದಾರೆ ಇದು ಲೋಕಸಭಾ ಚುನಾವಣಾ ಮುನ್ನುಡಿ ಆಗಲಿದೆ. ದೇಶದ ಪ್ರಧಾನಿ ಮೋದಿ ನಾಯಕತ್ವವನ್ನು ದೇಶದ ಜನತೆ ಮತ್ತೊಮ್ಮೆ ಒಪ್ಪಿದೆಆದರೆ ಕಾಂಗ್ರೆಸ್ ಇದ್ದ ಎರಡು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದೆ ಎಂದ ಅವರು, ತೆಲಂಗಾಣದಲ್ಲಿಯೂ ಸಹ ಒಂದು ಸ್ಥಾನದಿಂದ ಹತ್ತು ಸ್ಥಾನಕ್ಕೆ ಬಿಜೆಪಿ ಬಂದಿದೆ ಇದೊಂದು ಒಳ್ಳೆಯ ಬೆಳವಣಿಗೆ ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷದ ಗೆಲ್ಲುವ ಭರವಸೆಯಿದೆ ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ಸರ್ಕಲದಲ್ಲಿ ಪಂಚರಾಜ್ಯ ಚುನಾವಣೆ ರಾಜಸ್ಥಾನ ಮಧ್ಯಪ್ರದೇಶ ಛತ್ತಿಸ್ಗಢ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಭಾರತ ದೇಶದ ಭದ್ರತೆಗಾಗಿ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಬಿಟ್ಟಿ ಗ್ಯಾರಂಟಿಗೆ ಬಗ್ಗದೆ ದೇಶದ ಭದ್ರತೆಗಾಗಿ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಜೆಬಿಗೆ ಕತ್ರಿ ಹಾಕಿ ಬಿಟ್ಟಿ ಭಾಗ್ಯಗಳು ನೀಡುತ್ತಿದ್ದಾರೆ. ಅಂತಹ ಬಿಟ್ಟಿ ಭಾಗ್ಯಗಳಿಗೆ ಪಂಚ ರಾಜ್ಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಸಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ದೇಶದ ಸುಭದ್ರತೆ ಮತ್ತು ಮೋದಿಯವರ ಕಾರ್ಯ ವೈಖರಿಯಗಳನ್ನು ನೋಡಿ ರಾಜಸ್ಥಾನ ಮಧ್ಯಪ್ರದೇಶ ಛತ್ತಿಸ್ಗಢ ದಲ್ಲಿ ಅಬುತಪೂರ್ವ ಬಿಜೆಪಿ ಗೆಲ್ಲಿಸುವುದರ ಜೊತೆಗೆ ಕಾಂಗ್ರೆಸ್ಸಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮಣ್ಣ ಹುಲಕುಂದ. ಸಂಜಯ ತೆಗ್ಗಿ. ಬಸವರಾಜ ತೆಗ್ಗಿ. ಮಾರುತಿ ಗಾಡಿವಡ್ಡರ. ರವಿ ಕೋರತಿ. ಶ್ರೀಶೈಲ ದಲಾಲ ಮಾಹಾದೇವ ದುಪದಾಳ ಬಸವರಾಜ ಅಮ್ಮನಿಗಿಮಠ ಯಲ್ಲಪ್ಪ ಕಟಗಿ ಪ್ರಕಾಶ…