ವಿಜಯಪುರ:- ಬಿಜೆಪಿ ಗ್ಯಾರಂಟಿಗಳೇ 3 ರಾಜ್ಯಗಳ ಗೆಲುವಿಗೆ ಕಾರಣ ಎಂದು ಸಚಿವ MB ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಕೂಡ ಗ್ಯಾರಂಟಿಗಳನ್ನು ಘೋಷಿಸಿತ್ತು. 3 ರಾಜ್ಯಗಳ ಗೆಲುವಿಗೆ ಅದೂ ಕಾರಣವಾಗಿದೆ. ಗ್ಯಾರಂಟಿಗಳನ್ನು ವಿರೋಧ ಮಾಡಿದವರೇ ಗ್ಯಾರಂಟಿ ಘೋಷಿಸಿದರು, ಅದರಿಂದಲೇ ಗೆಲುವಾಗಿರಬಹುದು ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯಸವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇಬೇಕು. ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮತದಾರರ ತೀರ್ಪು ಒಪ್ಪಬೇಕು. ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಎಲ್ಲಿ ಎಡವಿದ್ದೀವಿ, ಯಾಕೆ ಈ ರೀತಿಯ ಫಲಿತಾಂಶ ಬಂತು ಎನ್ನುವುದು ಪಕ್ಷದಲ್ಲಿ ಚರ್ಚೆಯಾಗುತ್ತದೆ” ಎಂದರು. ಯಾರು ಗ್ಯಾರಂಟಿಗಳನ್ನು ವಿರೋಧ ಮಾಡಿದರು, ಅವರೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಬಿಜೆಪಿಯವರೂ ಗ್ಯಾರಂಟಿ ಭರವಸೆ ಕೊಟ್ಟಿದ್ದಾರೆ. ಇದೇ ಕಾರಣಗಳಿಂದಾಗಿ ಈ ಫಲಿತಾಂಶ ಬಂದಿರಬಹುದು. ಅಂದರೆ, ಕರ್ನಾಟಕದ ಗ್ಯಾರಂಟಿ ವರ್ಕ್‌ಔಟ್ ಆಗಿದೆ ಅಂತ ಆಯಿತಲ್ಲಾ” ಎಂದು ಎಂಬಿ ಪಾಟೀಲ್ ಹೇಳಿದರು ಫಲಿತಾಂಶ ಕುರಿತು ಪಕ್ಷದ ವರಿಷ್ಠರು, ಸಿಡಬ್ಲ್ಯೂಸಿಯಲ್ಲಿ…
Author: AIN Author
ಕಲಬುರ್ಗಿ:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಲಯವು ನಗರದ ಮರಾಠಿ ಸಾಹಿತ್ಯ ಮಂಡಲದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಹುತಾತ್ಮರಾದ ಸೇನಾ ಯೋಧರನ್ನು ಗೌರವಿಸಲು ಸಂತಾಪ ಸೂಚಕ ಸಭೆಯನ್ನು ಆಯೋಜಿಸಿತು. ಪ್ರಗತಿಪರ ಚಿಂತಕರಾದ ಸಂಜೀವ್ ಸೀರ್ನೂರಕರ್ ಅವರ ಭಾಷಣದೊಂದಿಗೆ ಆರಂಭವಾದ ಸಂತಾಪ ಸಭೆಯು ಹುತಾತ್ಮ ಯೋಧರ ಶೌರ್ಯ ಮತ್ತು ತ್ಯಾಗವನ್ನು ಶ್ಲಾಘಿಸಿದರು. ಮತ್ತು ಅವರು ರಾಜೌರಿ ಜಿಲ್ಲೆಯ ಘಟನೆಯನ್ನು ವಿವರಿಸಿದರು ಮತ್ತು ಅಗಲಿದ ಆತ್ಮಗಳಿಗಾಗಿ ಪ್ರಾರ್ಥಿಸಿದ ಕುಟುಂಬಗಳಿಗೆ ಸಂತಾಪ ಸೂಚಿಸಿದರು, ನಂತರ ಎಕೆಬಿಎಂಎಸ್ ಪದಾಧಿಕಾರಿಗಳು ಮತ್ತು ಇತರ ಸಮುದಾಯದ ಮುಖಂಡರು ಭಾಷಣ ಮಾಡಿದರು. ಸಭೆಯಲ್ಲಿ ಹುತಾತ್ಮ ಯೋಧರ ಗೌರವಾರ್ಥ 2 ನಿಮಿಷಗಳ ಮೌನವನ್ನು ಮಾಡಲಾಯಿತು. ಸಭೆಯು ಸಶಸ್ತ್ರ ಪಡೆಗಳ ಬಗ್ಗೆ ಸಮುದಾಯ ಹೊಂದಿರುವ ಆಳವಾದ ಗೌರವವನ್ನು ಮತ್ತು ಶಾಂತಿ ಮತ್ತು ನ್ಯಾಯಕ್ಕಾಗಿ ಅವರ ಬದ್ಧತೆಯನ್ನು ತೋರಿಸಿದೆ. ಸಭೆಯಲ್ಲಿ ಎಕೆಬಿಎಂಎಸ್ ಪದಾಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜದ ಇತರೆ ಸದಸ್ಯರು ಉಪಸ್ಥಿತರಿದ್ದರು.
ಹುಬ್ಬಳ್ಳಿ: ಛತ್ತೀಸಘಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಕಾರ್ಯಕರ್ತರಿಗೆ ಹರ್ಷದಾಯಕ ಸಂದೇಶ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹರ್ಷ ವ್ಯಕ್ತಪಡಿಸಿದ್ದಾರೆ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ರವಿವಾರ ಜರುಗಿದ ಮತ ಎಣಿಕೆಯಲ್ಲಿ ಉತ್ತರ ಭಾರತದರಾಜಸ್ಥಾನ, ಮಧ್ಯಪ್ರದೇಶ,ಛತ್ತೀಸಘಡ್ ರಾಜ್ಯಗಳಲ್ಲಿ ಬಿಜೆಪಿಗೆ ನಿಚ್ಚಳ ಲಭಿಸಿದ್ದು ಪಕ್ಷದ ಸಾಮಥ್ರ್ಯವನ್ನು ಸಾಬೀತುಪಡಿಸಿದಂತಾಗಿದೆ. ಇದೇ ವೇಳೆ ನೆರೆಯ ತೆಲಂಗಾಣದಲ್ಲಿ ಕಳೆದ ಬಾರಿಗಿಂತ ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸಿದೆ. ಈ ಫಲಿತಾಂಶಗಳು ಬಿಜೆಪಿ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸಿದೆ. ಪಕ್ಷದ ಇಂತಹ ಸಾಧನೆಯು ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದಂತಾಗಿದೆ. ರಾಜಸ್ಥಾನ ಚುನಾವಣೆಯ ನೇತೃತ್ವವಹಿಸಿದ್ದ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ರವರು ಹಾಗೂ ಇತರ ರಾಜ್ಯಗಳಲ್ಲಿನ ಮುಂದಾಳತ್ವ ವಹಿಸಿದ್ದ ಪಕ್ಷದ ಸಮಸ್ತ ನಾಯಕರ ಶ್ರಮ ಯಶ ಕಂಡಿದೆ. ಪಕ್ಷದ ನಾಯಕತ್ವ, ಆಡಳಿತ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಬೆಂಬಲಿಸಿದ ಮೂರೂ…
ದಾವಣಗೆರೆ:- ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಹಿನ್ನೆಲೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ರಸ್ತೆಯಲ್ಲಿ ಪಟಾಕಿ ಹೊಡೆದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆದಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ.
ಬೆಂಗಳೂರು:- ‘ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಬೇರೆ ಪಕ್ಷಗಳಲ್ಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಇತರ ಪಕ್ಷಗಳಲ್ಲಿಲ್ಲ ಎನ್ನುವುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಮೋದಿ ನಾಯಕತ್ವಕ್ಕೆ ಜನರು ಜೈ ಅಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಸ್ಥಾನಗಳನ್ನು ಗೆದ್ದು ಮೋದಿ ಅವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದರು. ಈ ಅಧಿವೇಶನ ಮುಗಿದ ನಂತರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುತ್ತೇವೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಎಲ್ಲ ಕಡೆಗಳಲ್ಲೂ ಬಹಳ ದೊಡ್ಡ ಸ್ವಾಗತ ಸಿಕ್ಕಿದೆ. ಜನರಲ್ಲಿ ವಿಶ್ವಾಸ ಮೂಡಿದೆ. ಅದರ ಲಾಭವನ್ನು ಪಡೆದು ಪಕ್ಷವನ್ನು ಬಲಪಡಿಸಲಿದ್ದೇವೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ಎಸ್ಸಿ, ಎಸ್ಟಿ, ಒಬಿಸಿಯನ್ನು ನಮ್ಮ ಜೊತೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಬೆಂಗಳೂರು:- ಚುನಾವಣೆಯಲ್ಲಿ ಗ್ಯಾರಂಟಿಗಳು ಯಾವುದೇ ಪರಿಣಾಮ ಬೀರಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಚುನಾವಣೆಯಲ್ಲಿ ಗ್ಯಾರಂಟಿಗಳು ಯಾವುದೇ ಪರಿಣಾಮ ಬೀರಿಲ್ಲ. ಉತ್ತರದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದರೆ ಇದು ಗೊತ್ತಾಗುತ್ತಿದೆ. ಗ್ಯಾರಂಟಿಗಳು ಠುಸ್ ಪಟಾಕಿ ಆಗಿವೆ. ತೆಲಂಗಾಣದಲ್ಲಿ ಬಿಆರ್‌ಎಸ್ ಕುಟುಂಬ ರಾಜಕೀಯ ಮಾಡಿದೆ. ತನ್ನ ತಪ್ಪಿನಿಂದಲೇ ಬಿಆರ್‌ಎಸ್ ತೆಲಂಗಾಣ ಕಳೆದುಕೊಂಡಿದೆ ಎಂದರು. ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನ ಇಟ್ಟುಕೊಂಡು ಕಾಂಗ್ರೆಸ್ನವರು ರೆಸಾರ್ಟ್ ರಾಜಕಾರಣ ಮಾಡಲು ಹೊರಟಿದ್ದಾರೆ. ದೊಡ್ಡ ಶೋ ಕೊಡಲು ಡಿ.ಕೆ ಶಿವಕುಮಾರ್ ತೆಲಂಗಾಣಕ್ಕೆ ಹೋಗಿದ್ದಾರೆ. ಜನರ ಕಷ್ಟ ಮರೆತು ತೆಲಂಗಾಣ ಶಾಸಕರಿಗಾಗಿ ಡಿಸಿಎಂ ಹೋಗಿರುವುದು ನಾಚಿಕೆಗೇಡಿನ ವಿಷಯ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು. ತೆಲಂಗಾಣ ಕಾಂಗ್ರೆಸ್ನವರಿಗೆ ಧಮ್ ಇಲ್ಲ. ಬರಗಾಲ ಬಂದಾಗ ಸಿದ್ದರಾಮಯ್ಯನವರು ಕಣ್ಣೀರು ಸುರಿಸಿದ್ದೇ ಬಂತು. ಅವರದ್ದು ಬರೀ ಮೊಸಳೆ ಕಣ್ಣೀರು. ಅಧಿವೇಶನ ಇದೆ. ಆದರೆ, ಇವರು ತೆಲಂಗಾಣದ ಸೇವೆ ಮಾಡ್ತಿದ್ದಾರೆ. ಮುಂದೆ ಇವರಿಗೆ…
ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್ ಅವರು ಹಾಸ್ಯದ ಮಾತಿನಿಂದ ಬಿಗ್ಬಾಸ್ ಸ್ಪರ್ಧಿಗಳಿಗೆ ನಗುವಿನ ಟಾನಿಕ್ ನೀಡುತ್ತಿದ್ದಾರೆ. ಇದೀಗ ತುಕಾಲಿ ಸಂತೋಷ್ ಅವರನ್ನು ಉದ್ದೇಶಿಸಿ ಸುದೀಪ್ ಅವರು, ತುಕಾಲಿಯವರೇ ಒಬ್ಬೊಬ್ಬರ ಭವಿಷ್ಯ ಹೇಳಿ ಎಂದಿದ್ದಾರೆ. ಪ್ರತಾಪ್ ಹೆಸರನ್ನು ಸುದೀಪ್ ಅವರು ಹೇಳಿದಾಗ, ತುಕಾಲಿ ಸಂತೋಷ್ ಅವರು, ಪ್ರತಾಪ್ ಆರಕ್ಕೆ ಏರ್ತಿಲ್ಲ, ಮೂರಕ್ಕೆ ಇಳಿತೀಲ್ಲ. ಅವನಿಗೆ ನಾನು ಯಾವಾಗ್ಲೂ ಹೇಳ್ತಾನೇ ಇರ್ತೇನೆ. ಮಗು ಥರ ಇರ್ಬೆಡ್ವೋ… ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಎಂದು ಎಂದು ತಮಾಷೆ ಮಾಡಿದಾಗ ಎಲ್ಲರೂ ನಕ್ಕಿದ್ದಾರೆ. ಇದೇ ವೇಳೆ ತನಿಷಾ ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆಗೆಂದು ಬಿಗ್ಬಾಸ್ನಿಂದ ಎರಡು ದಿನ ಹೊರಕ್ಕೆ ಹೋಗಿದ್ದ ವೇಳೆ ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದ ವರ್ತೂರ್ ಸಂತೋಷ್ ಅವರನ್ನು ಕಿಚ್ಚ ಸುದೀಪ್ ಹಾಗೂ ತುಕಾಲಿ ಸಂತೋಷ್ ತಮಾಷೆ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ಚಾನೆಲ್ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಡ್ರೋನ್ ಪ್ರತಾಪ್ ಕುರಿತು ಹೇಳುವುದಾದರೆ, ಡ್ರೋನ್ ಮಾಡುವುದಾಗಿ ಹೇಳಿ…
ಬಿಗ್ ಬಾಸ್ ಮನೆಯಲ್ಲಿ ಇದೀಗ ಯಾರು ಮನೆಯಿಂದ ಹೋಗ್ತಾರೆ ಎಂಬೆಲ್ಲಾ ಚರ್ಚೆ ಜೋರಾಗಿದೆ. ಈ ವಾರ ಮೇಬಿ ಸ್ನೇಹಿತ್ ಹೋಗ್ತಾರೆ ಅನ್ನೋದು ಹಲವರ ಅಭಿಪ್ರಾಯ ಆಗಿತ್ತು. ಆದ್ರೆ ಈಗ ಸ್ನೇಹಿತ್ ಮನೆಯಿಂದ ಹೊರಗೆ ಹೋಗ್ತಾರಾ ಅಥವಾ ಇಲ್ವಾ ಅನ್ನೋದಕ್ಕೆ ಎಲ್ಲರೂ ಕಾಯ್ತಾ ಇದ್ದಾರೆ. ಆದರೆ ಈ ವಾರ ಎಲಿಮಿನೇಷನ್ ಇಲ್ಲಾ ಅಂತ ಆದ್ರೆ ಯಾರೂ ಸಹ ಮನೆಯಿಂದ ಹೋಗಲ್ಲ. ಈ ಬಾರಿ ಎಲಿಮಿನೇಷನ್ ನಡೆಯೋದಿಲ್ಲ ಎಂದು ಹೇಳಲಾಗುತ್ತಿದೆ ಈ ಮಾತು ನಿಜವಾದ್ರೆ ಖಂಡಿತ ಈ ವಾರ ಸ್ನೇಹಿತ್ ಸೇಫ್ ಆಗ್ತಾರೆ. ಇವರ ಬದಲಾಗಿ ಯಾರಾದ್ರೂ ಮನೆಯಿಂದ ಹೊರಗಡೆ ಹೋಗಬಹುದಾ ಅಂತ ಹಲವರಲ್ಲಿ ಪ್ರಶ್ನೆ ಬರುತ್ತದೆ. ಆದರೆ ಇವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಎಲಿಮಿನೇಟ್ ಆಗೋದಿಲ್ಲ ಅಂತ ಅಂದುಕೊಂಡಿದ್ರೂ ಸಹ ಹಿಂದಿನ ಬಾರಿ ಆ ಮಾತು ಸುಳ್ಳಾಗಿದೆ. ಹಾಗಾಗಿ ಕ್ಯಾಪ್ಟನ್ ಆಗಿದ್ರೂ ಕೂಡ ಈ ವಾರ ತಾನು ಮನೆಯಲ್ಲೇ ಇರಬಹುದು ಅನ್ನುವ ನಂಬಿಕೆ ಸ್ನೇಹಿತ್ ಅವರಿಗೆ ಹಾಗೂ ವೀಕ್ಷಕರಿಗೆ ಯಾರಿಗೂ…
ಬೆಂಗಳೂರು:- ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ? ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಗಾಣಿಗ ಸಮುದಾಯಕ್ಕೆ ಸೇರಿದವರಾದ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಪ್ರಧಾನಿಯಾಗಿದ್ದಾರೆ. ಆದರೂ ವಿಶ್ವಕರ್ಮ ಯೋಜನೆಯಲ್ಲಿ ಎಣ್ಣೆ ಉತ್ಪಾದನಾ ಘಟಕಗಳನ್ನು ಕೈಬಿಟ್ಟಿದ್ದಾರೆ. ನಿಮ್ಮ ಪ್ರಧಾನಿಗೆ ನಿಮ್ಮ ಸಮಸ್ಯೆ ಗೊತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ವಿಶ್ವಕರ್ಮ ಯೋಜನೆಯಲ್ಲಿ ಗಾಣಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಗಾಣಗಳನ್ನೂ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಶೀಘ್ರದಲ್ಲೇ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಭರವಸೆ ನೀಡಿದರು. ಸಾಮಾಜಿಕ ನ್ಯಾಯ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಯಾರು ಏನೇ ಹೇಳಿದರೂ ರಾಜಿಯಾಗದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಅದರಲ್ಲೂ ಸಣ್ಣ…
ಮನೆಯಲ್ಲಿ ನಿಮಗೆ ಬೇಕಾದ ತಿನಿಸನ್ನು ಮಾಡಿ ತಿನ್ನಲು ಕಲಿಯಬೇಕು. ಇತ್ತೀಚೆಗೆ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವುದು ಪಾನಿಪುರಿ. ಕಡಿಮೆ ಹಣದಲ್ಲಿ ಸಿಗುವ, ನಾಲಿಗೆ ರುಚಿ ತಣಿಸುವ ಪಾನಿಪೂರಿ ಹಲವರ ಫೇವರಿಟ್. ಇದರಲ್ಲಿ ಹಲವು ವಿಧಗಳಿವೆ. ಮಸಾಲಾ ಪೂರಿ, ಆಲೂ ಪೂರಿ, ಸೇವ್ ಪೂರಿ, ಗೋಲ್‌ಗಪ್ಪ ಹೀಗೆ. ಪಾನಿಪೂರಿಯನ್ನು ಮನೆಯಲ್ಲೇ ಮಾಡುವುದು ಕಷ್ಟ ಎಂದುಕೊಂಡಿದ್ದಾರೆ ಹಲವರು. ಆದರೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಲವರು ಪಾನಿಪುರಿ ಮಾಡಲು ಕಲಿತಿದ್ದಾರೆ. ಮನೆಯಲ್ಲೇ ಆರೋಗ್ಯಕರವಾಗಿ ಪಾನಿಪೂರಿ ತಯಾರಿಸಿಕೊಂಡು ತಿನ್ನುತ್ತಿದ್ದಾರೆ. ನಿಮಗಿನ್ನೂ ಮಾಡೋಕೆ ಬರೋಲ್ವಾ? ಇಲ್ಲಿದೆ ರೆಸಿಪಿ. ಪೂರಿ ಮಾಡುವ ವಿಧಾನ ಬೇಕಾಗುವ ಸಾಮಗ್ರಿಗಳು: ಫೇಣಿ (ಚಿರೋಟಿ) ರವೆ 1 ಬಟ್ಟಲು, ಮೈದಾಹಿಟ್ಟು 2 ಚಮಚ, ಅಡುಗೆ ಸೋಡಾ 1 ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ನೀರು 1/4 ಬಟ್ಟಲು, ಎಣ್ಣೆ 3-4 ಚಮಚ ತಯಾರಿಸುವ ವಿಧಾನ: ಮೊದಲಿಗೆ ರವೆಯನ್ನು ಒಂದು ಕಡಾಯಿಗೆ ಹಾಕಿಕೊಂಡು ಮೈದಾ ಉಪ್ಪು ಮತ್ತು 2 ಚಮಚ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ…