ಶಿವಮೊಗ್ಗ :- ಸಿದ್ದರಾಮಯ್ಯರೇ ಇನ್ನೂ 4 ವರ್ಷ ನೀವೇ CM ಆಗಬೇಕೆನ್ನುವುದು ನನ್ನ ಆಸೆ ಎಂದು ಮಾಜಿ ಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸ್ನೇಹಿತನಾಗಿ, ಹಿತೈಷಿಯಾಗಿ, ಸಹೋದರನಾಗಿ ಹೇಳುತ್ತೇನೆ ಎಷ್ಟು ದಿನ ನೀವು ಮುಖ್ಯಮಂತ್ರಿ ಆಗಿರುತ್ತಿರೆಂದು ಗೊತ್ತಿಲ್ಲ. ನೀವು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಿರಬೇಕೆಂದು ನನ್ನ ಆಸೆ. ನಿಮ್ಮ ಆಡಳಿತದಲ್ಲಿ ದೇವರಾಜ್ ಅರಸ್ ಅವರು ಮಾಡಿದ ಕೆಲಸ ಮಾಡಲಾಗಲ್ಲ. ಅವರನ್ನು ಪದೇ ಪದೆ ನೆನಪಿಸಿಕೊಳ್ಳುತ್ತಿರಿ. ವಸತಿ ಯೋಜನೆಯ ಮನೆಗಳು ಶಿವಮೊಗ್ಗದಲ್ಲಿ ನಿಂತು ಹೋಗಿದೆ. ಬಡವರಿಗೆ ಮನೆ ಕಟ್ಟಲು ಹಿಂದಿನ ಸರ್ಕಾರ ಮಾಡಿದ ಕೆಲಸವನ್ನು ಪೂರ್ಣಗೊಳಿಸಿ. ಆಗ ಜನ ನಿಮ್ಮ ಪೋಟೋ ಹಾಕಿ ನೆನಪಿಸಿಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು. ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಾಡಿರುವ ಅರ್ಥ ಸಚಿವರು ನೀವು. ಆದರೂ ಗ್ಯಾರಂಟಿಗಳ ಹಳ್ಳಕ್ಕೆ ಯಾಕೆ ಬಿದ್ದಿರಿ ಗೊತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳು ಅರ್ಧಕ್ಕೆ ನಿಂತು ಹೋಗಿದೆ. ನಿಮ್ಮ ಸ್ವತಂತ್ರ ಯೋಚನೆಗಳನ್ನು…
Author: AIN Author
ಬೆಳಗಾವಿ:- ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ ಎಂದು ಹೇಳುವ ಮೂಲಕ ಎಸ್ ಟಿ ಸೋಮಶೇಖರ್ ಅವರು ಯು ಟರ್ನ್ ಹೊಡೆದಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಪಕ್ಷದ ಮೇಲೆಯೇ ಮುನಿಸಿಕೊಂಡಿದ್ದ ಮಾಜಿ ಸಚಿವ ಎಸ್ಟಿ ಸೋಮಶೇಖರ್ ಯುಟರ್ನ್ ತೆಗೆದುಕೊಂಡಂತೆ ಕಾಣಿಸುತ್ತಿದೆ. ಬಿಜೆಪಿ ಸಭೆಗಳಿಗೆ ಗೈರಾಗುತ್ತಿದ್ದ ಎಸ್ಟಿ ಸೋಮಶೇಖರ್, ಸದ್ಯಕ್ಕೆ ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ. ಮೂರು ರಾಜ್ಯಗಳ ಬಿಜೆಪಿ ಗೆಲುವು ಏನು ಹೇಳೋಕೆ ಆಗಲ್ಲ. ಅದು ರಾಷ್ಟ್ರೀಯ ಪಕ್ಷಗಳಿಗೆ ಕಾಮನ್. ಸದನದಲ್ಲಿ ನನ್ನ ನಿಲುವು ಏನಿರುತ್ತೆ ಅಂದರೆ ಏನು ಹೇಳಲಿ? ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ, ಮುಂದೆ ನೋಡೋಣ ಎಂದು ಎಸ್ಟಿ ಸೋಮಶೇಖರ್ ಹೇಳಿದರು.
‘ಬಿಗ್‌ಬಾಸ್ ಮನೆಗೆ ‘ಚಾರ್ಲಿ’ ಬರ್ತಾನೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ‘ಚಾರ್ಲಿ’ಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್, ಸಂಗೀತಾ ಶೃಂಗೇರಿ ನಾಯಿ ಥರ ಆಡ್ತಿದ್ದಾರೆ! ಇದೇನು ಇಷ್ಟು ಕೀಳುಭಾಷೆಯಲ್ಲಿ ಸ್ಪರ್ಧಿಯನ್ನು ಹೀಗಳೆಯುತ್ತಿದ್ದಾರೆ ಎಂದು ಕೋಪಿಸಿಕೊಳ್ಳಬೇಡಿ. ಇದು ಹೀಗಳೆಯಲು ಹೇಳಿದ್ದು ಖಂಡಿತ ಅಲ್ಲ. ಈ ಮಾತು ಅಕ್ಷರಶಃ ಸತ್ಯ! ಅದು ಹೇಗೆಂಬುದು ಇಂದು JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ. ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ! ಬಿಗ್‌ಬಾಸ್ ಮನೆಯೊಳಗೆ ಇದೇನೂ ಹೊಸ ಸಮಸ್ಯೆ ಎನ್ನಬೇಡಿ. ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿದ ಹೊಸ ಟಾಸ್ಕ್! ‘ಬಿಗ್‌ಬಾಸ್ ಸೂಚಿಸಿದ ಚಟುವಟಿಕೆಗಳನ್ನು ಮನೆಯ ಸ್ಪರ್ಧಿಗಳು ಮಾಡಬೇಕು’ ಎಂಬುದು ಈ ವಾರದ ಮೊದಲ ಟಾಸ್ಕ್. ಇದರ ಭಾಗವಾಗಿಯೇ ಸಂಗೀತಾ ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ…
ನವದೆಹಲಿ:- ಮೂರು ರಾಜ್ಯಗಳ ಗೆಲುವಿಗೆ ನಡ್ಡಾ ಪರಿಶ್ರಮ ಕಾರಣ ಎಂದು PM ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಡ್ಡಾ ಅವರ ಸಂಘಟನಾ ಕೌಶಲ್ಯ ಮತ್ತು ತೆರೆಮರೆಯಲ್ಲಿ ಅವರು ಮಾಡಿದ ದಣಿವರಿಯದ ಕೆಲಸಕ್ಕಾಗಿ ಶ್ಲಾಘಿಸಿದರು, ಇದು ಪಕ್ಷದ ಅಂತಿಮ ಚುನಾವಣಾ ಯಶಸ್ಸಿಗೆ ಅಡಿಪಾಯ ಹಾಕಿತು. ವೈಯಕ್ತಿಕ ದುಃಖದ ನಡುವೆಯೂ ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥರು ಚುನಾವಣಾ ಪ್ರಚಾರಕ್ಕೆ ಹೇಗೆ ಧುಮುಕಿದರು ಎಂಬುದರ ಕುರಿತು ಪ್ರಧಾನಿ ಮೋದಿ ವಿಶೇಷ ಉಲ್ಲೇಖವನ್ನು ಮಾಡಿದರು. ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ಕಾರ್ಯಕರ್ತರು ಅವರ ಹೆಸರನ್ನು ಜಪಿಸುತ್ತಿದ್ದಂತೆ, ಪಕ್ಷದ ಅದ್ಭುತ ಗೆಲುವಿಗೆ ನಡ್ಡಾ ಅವರು ಪಕ್ಷದಲ್ಲಿನ ಆರೋಪಗಳ ಸಮರ್ಥ ಉಸ್ತುವಾರಿ ಮತ್ತು ಅವರ ಚುನಾವಣಾ ಚಾಣಾಕ್ಷತೆ ಮತ್ತು ತಂತ್ರಗಳು ಕಾರಣವೆಂದು ಪ್ರಧಾನಿ ಮೋದಿ ಹೇಳಿದರು.
ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. “ಲಿಯೋ” ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಶ್ರೀನಗರ ಕಿಟ್ಟಿ “ರೋಜಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. “ಕ್ರಿಸ್ಟೋಫರ್” ನನ್ನ ಪಾತ್ರದ ಹೆಸರು ಎಂದರು ಶ್ರೀನಗರ ಕಿಟ್ಟಿ.ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಆರಂಭಿಸಿದ ನಟ ಯೋಗಿ, ನಾವಿಬ್ಬರು “ಹುಡುಗರು” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ ಎಂದರು. ನಿರ್ದೇಶಕ ಶೂನ್ಯ,…
ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಡಿ.9ರ ತನಕ ‘ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಲ ಆರಂಭವಾದರೂ ಸಹಿತ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷ ಇಲ್ಲ. ಕೆಲವು ದಿನಗಳಿಂದ ಚಳಿಯೂ ಅಲ್ಲದ, ಅಧಿಕ ಬಿಸಿಲು ಬೀಳದೆ ಮತ್ತು ನಿರೀಕ್ಷಿತ ಮಳೆ ಆಗದೇ ಇರುವ ವಾತಾವರಣ ಉಂಟಾಗಿತ್ತು. ಸದ್ಯ ಅದೆಲ್ಲವು ಈಗ ಬದಲಾಗಿದ್ದು, ಚಳಿಯ ವಾತಾವರಣ ಏರಿಕೆ ಆಗಲಿದೆ. ಬಂಗಾಳಕೊಲ್ಲಿ-ಅಂಡಮಾನ್ ಸಮುದ್ರ ಭಾಗದಲ್ಲಿ ಉಂಟಾಗಿರುವ ಮೈಚಾಂಗ್ ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಮೈಚಾಂಗ್ ಇಂದು ತೀವ್ರ ಸ್ವರೂಪ ಪಡೆದುಕೊಂಡು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ. ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಮಂಗಳವಾರದವರೆಗೆ ಇದೇ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸೋನೆ ಮಳೆ ಬರಲಿದೆ. ನಂತರದ ಡಿಸೆಂಬರ್ 10ರವರೆಗೆ ಮತ್ತಷ್ಟು ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ನಗರದಲ್ಲಿ ಡಿಸೆಂಬರ್…
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಧುಮುಕ್ಕಿದ್ದ ಚಿತ್ರತಂಡ ಕುಂದಾಪುರದ ಕೆರಾಡಿ ಭಾಗದಲ್ಲಿ ಚಿತ್ರೀಕರಣ ನಡೆಸ್ತಿದೆ. ಈಗಾಗಲೇ 10 ದಿನ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ನಾಯಕ ರೂಪೇಶ್ ಖಾಕಿ ಖದರ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ…
ಕಾಂತಾರ ಬೆಡಗಿ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮ್ಮುಡು (Thammadu) ಚಿತ್ರದ ಮೂಲಕ ತೆಲುಗು (Telugu) ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದ್ದಾರೆ. ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಯುವರಾಜ್ ಕುಮಾರ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಲಾಂಚ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
ಜಕಾರ್ತ: ಇಂಡೋನೇಷ್ಯಾದ (Indonesia) ಮೌಂಟ್ ಮರಾಪಿಯಲ್ಲಿ (Mount Marapi) ಜ್ವಾಲಾಮುಖಿ (Volcano) ಸ್ಫೋಟಗೊಂಡಿದ್ದು, ಈ ವೇಳೆ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭ ಅಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ. https://ainlivenews.com/congress-president-has-called-an-important-meeting-on-december-6/#google_vignette 11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ. ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜ್ವಾಲಾಮುಖಿಯಿಂದಾದ ದಟ್ಟವಾದ ಹೊಗೆ ಆಕಾಶದಲ್ಲಿ ಹರಡಿರುವುದು, ರಸ್ತೆ, ವಾಹನಗಳು ಜ್ವಾಲಾಮುಖಿಯ ಬೂದಿಯಿಂದ ಆವೃತವಾಗಿರುವುದು ಕಂಡುಬಂದಿದೆ.
ಕಾಂತಾರ ಬೆಡಗಿ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮ್ಮುಡು (Thammadu) ಚಿತ್ರದ ಮೂಲಕ ತೆಲುಗು (Telugu) ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದ್ದಾರೆ. ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಯುವರಾಜ್ ಕುಮಾರ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಲಾಂಚ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಯುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದೇ ಒಂದು ರೋಚಕ. ಶನಿವಾರ (ಫೆ.4)ರಂದು ಸಂಜೆ ಕೆಸಿಸಿ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ನಟಿ ಸಪ್ತಮಿ…