ಇಸ್ಲಾಮಾಬಾದ್: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಖೀರ್ ಸಿಂಗ್ ರೋಡ್ ಹೃದಯಾಘಾತದಿಂದ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ. ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ (72), ಭಿದ್ರಾನ್‌ವಾಲೆ ಸಾವಿನ ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಡಿ.2 ರಂದು ಲಖ್ಖೀರ್ ಕೂಡ ಮೃತಪಟ್ಟಿದ್ದಾನೆ. ಲಖ್ಖೀರ್ ಸಿಂಗ್ ರೋಡ್ (Lakhbir Singh Rode) ನಿಷೇಧಿತ ಸಂಘಟನೆ ‘ಖಲಿಸ್ತಾನ್ ಜಿಂದಾಬಾದ್ ಫೋರ್ಸ್’ ಮುಖ್ಯಸ್ಥನಾಗಿದ್ದ. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಗುಪ್ತಚರ ಸಂಸ್ಥೆಗಳ ಪ್ರಕಾರ, ಆತ ಲಾಹೋರ್‌ನಲ್ಲಿ ವಾಸಿಸುತ್ತಿದ್ದ. ಪಂಜಾಬ್‌ಗೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಬಾಂಬ್‌ಗಳನ್ನು ಕಳುಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತ ರಾಜ್ಯದ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಶಂಕಿಸಲಾಗಿತ್ತು. ಒಮ್ಮೆ ಆತನನ್ನು ನೇಪಾಳದಲ್ಲಿ 20 ಕೆಜಿ ಸ್ಫೋಟಕ ಆರ್‌ಡಿಎಕ್ಸ್‌ನೊಂದಿಗೆ ಬಂಧಿಸಲಾಗಿತ್ತು. ಸ್ಫೋಟಕವನ್ನು ಪಾಕಿಸ್ತಾನದಿಂದ ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಕ್ಟೋಬರ್‌ನಲ್ಲಿ ದಾಳಿ ನಡೆಸಿ ಪಂಜಾಬ್‌ನ ಮೊಗಾದಲ್ಲಿರುವ…
Author: AIN Author
ಶ್ರೀನಿವಾಸರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಡಬ್ಬಿಂಗ್ ನಡೆಯುತ್ತಿದ್ದು, ಡಬ್ಬಿಂಗ್ ಕೂಡ ಮುಕ್ತಾಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ. ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ,…
ಬೆಂಗಳೂರು:- ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ವಜಾ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಅಲ್ಲದೆ, ಪ್ರಕರಣದಲ್ಲಿ ವಿವಾದಿತ ಜಮೀನನ್ನು 1998-99ನೇ ಸಾಲಿನಲ್ಲೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಜಾಗದಲ್ಲಿ ಅರಣ್ಯ ಇಲಾಖೆಯು ನಡು ತೋಪು ಬೆಳೆಸಿದೆ. ಹಾಗಾಗಿ, ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಸಕ್ರಮಗೊಳಿಸುವ ಪ್ರಶ್ನೆಯೇ ಇಲ್ಲ. 200 ಎಕರೆಯನ್ನು ಅರಣ್ಯ ಇಲಾಖೆಗೆ ನೀಡಿರುವಾಗ, ತಮ್ಮ ಕಕ್ಷಿದಾರರು ಸಾಗುವಳಿ ಮಾಡುತ್ತಿರುವ 10 ಎಕರೆಯನ್ನಾದರೂ ಸಕ್ರಮಗೊಳಿಸಬೇಕು ಎಂದು ಮೇಲ್ಮನವಿದಾರರ ಪರ ವಕೀಲರು ಕೋರಿದರು. ವಕೀಲರ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಇಡೀ ಜಾಗವನ್ನೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಆ ಕುರಿತು ದಾಖಲೆಗಳು ನೋಂದಣಿಯಾಗಿವೆ. ಇದು ಅರಣ್ಯ ಜಮೀನು ಎಂಬುದಾಗಿ ಸ್ಪಷ್ಟಪಿಸಿ 1998ರ ನ. 3ರಂದು ಜಿಲ್ಲಾಧಿಕಾರಿ ಆದೇಶ ಸಹ ಹೊರಡಿಸಿದ್ದಾರೆ. ಆ ಜಾಗದಲ್ಲಿ ನಡುತೋಪ ಎಂಬುದಾಗಿ ಘೋಷಿಸಿ, ಅರಣ್ಯ…
ಬೆಂಗಳೂರು: ಗ್ಯಾರಂಟಿ ಸ್ಕೀಂನಿಂದ ಬರಿದಾಗ್ತಿರೊ ಬೊಕ್ಕಸಕ್ಕೆ ಮಧ್ಯಪ್ರಿಯರು ಸರ್ಕಾರಕ್ಕೆ ಗುಡ್ ನ್ಯೂಸ್ ನೀಡ್ತಿದಾರೆ. ಯಾಕೆಂದ್ರೆ ರಾಜ್ಯದಲ್ಲಿ ಬಿಯರ್ ಗೆ ಎಲ್ಲೆಲ್ಲದ ಡಿಮ್ಯಾಂಡ್ ಶುರುವಾಗಿದೆ. ಇದರ ಜೊತೆಗೆ ಲಿಕ್ಕರ್ ಸೇಲ್ ಫುಲ್ ಸಹ ಜೋರಿದೆ. ಇದ್ರಲ್ಲಿ ರಾಜಧಾನಿ ಯದ್ದೇ ಸಿಂಹಪಾಲು. ಈ ಕುರಿತು ರಿಪೋರ್ಟ್ ಇಲ್ಲಿದೆ. ಹೌದು..ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ಬಿಯರ್ ಪ್ರಿಯರು ಫೈನಾನ್ಸಿಯಲ್ ಬೂಸ್ಟರ್ ಡೋಸ್ ನೀಡಿದ್ದಾರೆ. ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಗೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರವನ್ನು ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾಸ್ಕ್ ನೀಡಿತ್ತು. ಮೊದಲು ಮದ್ಯದ ದರ ಹೆಚ್ಚಳದಿಂದಾಗಿ ದೂರ ಉಳಿದಿದ್ದ ಮದ್ಯಪ್ರಿಯರು ಚಳಿಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಿನ ಮದ್ಯ ಸೇವನೆಗೆ ಮುಂದಾಗಿದ್ದಾರೆ. https://ainlivenews.com/good-news-for-rakibhai-fans-next-movie-title-announced-on-december-8/ ಈ…
ಜೀರಿಗೆ ಕಾಳಿನಂತೆ ಸೋಂಪೂ ಆರೋಗ್ಯಕ್ಕೆ ತುಂಬಾ ಸಹಾಯಕ. ಭಾರತೀಯ ಜನರಿಗಂತೂ ಸೋಂಪೆಂದರೆ ವಿಶೇಷ ಪ್ರೀತಿ. ಊಟವಾದ ಬಳಿಕ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ. ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಸೋಂಪನ್ನು ಪ್ರತಿದಿನ ಅಡುಗೆಯಲ್ಲಿ ಬಳಸಿದರೆ ದೇಹಕ್ಕೆ ಬೇಕಾದ ಫೈಬರ್, ಪೊಟ್ಯಾಷಿಯಂ, ಸತು, ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಾಮಿನ್ ಸಿ, ಕಬ್ಬಿಣಾಂಶಗಳು ದೊರೆಯುತ್ತವೆ. ಸೋಂಪು ಕಾಳು ಕೆಟ್ಟ ಉಸಿರಾಟ, ಬಾಯಿ ವಾಸನೆ ನಿವಾರಿಸುತ್ತದೆ. ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಜೊತೆಗೆ ಆ್ಯಸಿಡಿಟಿ, ಹೊಟ್ಟೆಯಲ್ಲಿ ತಳಮಳ ಮೊದಲಾದ ಸಮಸ್ಯೆಗಳೂ ದೂರವಾಗುತ್ತವೆ. ಫೈಬರ್ ಅಂಶವಿರುವ ಇದು ಸೇವಿಸಿದಲ್ಲಿ ಕೊಲೆಸ್ಟ್ರಾಲ್ ಲೆವೆಲ್ ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡ ನಿವಾರಿಸುತ್ತದೆ. ಸೋಂಪು ಕಾಳು ಚಹಾ ಮಾಡಿ ನಿಯಮಿತವಾಗಿ ಸೇವಿಸಿದರೆ ಟಾಕ್ಸಿನ್ ಅಂಶ ನಿವಾರಣೆಯಾಗಿ, ಮೂತ್ರ ಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು. ಸೈನಸ್ ಸಮಸ್ಯೆಗೂ ಸೋಂಪು ಒಳ್ಳೆ ಮದ್ದು ತಾಯಿಯ ಎದೆಹಾಲು ಹೆಚ್ಚಿಸುತ್ತದೆ. ಸ್ತನಗಳ ಬೆಳವಣಿಗೆಗೂ ಸೋಂಪು ಕಾಳು ಸಹಾಯಕ. ಆದರೆ ಇದನ್ನು ಸೇವಿಸೋ ಮುನ್ನ ವೈದ್ಯರ ಸಲಹೆ ಕೇಳುವುದು…
ಸೂರ್ಯೋದಯ: 06.29 AM, ಸೂರ್ಯಾಸ್ತ : 05.52 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಅಷ್ಟಮಿ 12:37 AM ತನಕ ನಂತರ ನವಮಿ ನಕ್ಷತ್ರ: ಇವತ್ತು ಪುಬ್ಬಾ 03:38 AM ತನಕ ನಂತರ ಉತ್ತರ ಫಾಲ್ಗುಣಿ ಯೋಗ: ಇವತ್ತು ಪ್ರೀತಿ 11:30 PM ತನಕ ನಂತರ ಆಯುಷ್ಮಾನ್ ಕರಣ: ಇವತ್ತು ಕೌಲವ 12:37 AM ತನಕ ನಂತರ ತೈತಲೆ 01:53 PM ತನಕ ನಂತರ ಗರಜ ರಾಹು ಕಾಲ: 12:00 ನಿಂದ 01:30 ವರೆಗೂ ಯಮಗಂಡ: 07:30 ನಿಂದ 09:00 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 10.25 PM to 12.13 AM (ಮರುದಿನ) ಅಭಿಜಿತ್ ಮುಹುರ್ತ: 0: ನಿಂದ 0: ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ನಿರ್ವಹಣಾ ಅಧಿಕಾರಿಗಳಿಗೆ ಧನ ಲಾಭ ಮತ್ತು…
ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಚುಟುಕು ಮಾದರಿಯಲ್ಲಿ ಯಶಸ್ಸು ಕಂಡಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಗೆಲುವಿನ ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತಂಡ ಯಶಸ್ವಿ ಕ್ರಿಕೆಟ್ ವರ್ಷವನ್ನು ಕಂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಬಾಂಗ್ಲಾದೇಶ ವಿರುದ್ಧದ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಇನ್ನೊಂದೆಡೆ, ಇಂಗ್ಲೆಂಡ್ ವನಿತೆಯರು ತವರಿನಲ್ಲಿ ಶ್ರೀಲಂಕಾ ವಿರುದ್ಧ 1-2 ಅಂತರದಲ್ಲಿ ಸೋತ ನಿರಾಶೆ ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ತಂಡವು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆೆ ಹೊಂದಿದೆ. ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 9 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಂಗ್ಲ ವನಿತೆಯರು ಇದೇ ಭರವಸೆಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ 27 ಬಾರಿ ಮುಖಾಮುಖಿಯಾಗಿದ್ದು ಕೇವಲ…
ಬೆಂಗಳೂರು:- ನನ್ನ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ, ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವೆಂದು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದು ತಿಳಿಸಿದ್ದೇನೆ. ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಪ್ರಾಂಜಲ್ ಅವರ ಕುಟುಂಬಕ್ಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಂಪ್ಲಿ: ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಲಯ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರ ನೇತೃತ್ವದಲ್ಲಿ ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಪಿ.ಐ ಗಳಾದ ಸಂಗಮೇಶ,ಮಹ್ಮದ ರಫಿ ಅವರ ಸಿಬ್ಬಂದಿಗಳ ತಂಡದಿಂದ ಮಂಗಳವಾರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ದೂರಿನ ಮೇಲೆ ಕಂಪ್ಲಿ ನಿವಾಸಿ ಬೋಯಾ ಮಾರುತಿ,ಅರಣ್ಯ ಅಧಿಕಾರಿ ಮನೆ ಹಾಗೂ ಪ್ರಾದೇಶಿಕ ವಲಯ ಉಪವಲಯ ಅರಣ್ಯಾಧಿಕಾರಿ ಕಚೇರಿ ಗಂಗಾವತಿ ಕೊಪ್ಪಳ ಜಿಲ್ಲೆ ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ಜರುಗಿತು. ಬೆಳ್ಳೆಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ಫೀಲ್ಡ್‌ಗೆ ಇಳಿದಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ ಉದ್ದಗಲಕ್ಕೂ ಹಲವು ಕಡೆ ದಾಳಿ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳನ್ನು ಪರಿಶೀಲಿಸಿದರು. ಭ್ರಷ್ಟಾಚಾರ ಆರೋಪ ಸಂಬಂಧ…
ಆನೇಕಲ್:- ಬಾಸ್ಕೆಟ್ ಬಾಲ್ ಆಟವಾಡುವಾಗ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಎಸ್ಎಫ್ಎಸ್ ಶಾಲೆಯಲ್ಲಿ ನಡೆದಿದೆ. ಚಾರ್ವಿ(16) ಮೃತ ಬಾಲಕಿ. ಮದ್ಯಾಹ್ನ ಸ್ಪೋರ್ಟ್ಸ್ ತರಗತಿಯಲ್ಲಿ ಆಟವಾಡುವಾಗ ಮುಂಬಾಗಕ್ಕೆ ಕುಸಿದು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಕೂಡಲೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾಳೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದೆ.