Author: AIN Author

ಬೆಂಗಳೂರು:- ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ ಪ್ರದರ್ಶನ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ FIR ದಾಖಲಾಗಿದೆ. ಕಲಾಪದ ಲಿಂಕ್ ಮೂಲಕ ಭಾಗವಹಿಸಿದ ಅಪರಿಚಿತರಿಂದ‌ ಕೃತ್ಯವೆಸಗಲಾಗಿದೆ. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಕಚೇರಿಯ ಎನ್. ಸುರೇಶ್​ ಎಂಬುವವರಿಂದ ದೂರು ನೀಡಿದ್ದು, ನ್ಯಾಯಾಲಯದ ಕಲಾಪಕ್ಕೆ‌ ಅಡ್ಡಿಪಡಿಸಿದ ಹಿನ್ನೆಲೆ ಐ.ಟಿ. ಕಾಯ್ದೆ ಸೆ. 67, 67(A) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಶ್ಲೀಲ ಚಿತ್ರ ಪ್ರದರ್ಶಿಸಿ ಅನುಚಿತ ವರ್ತನೆ ತೋರಿದ್ದಾರೆ. ಹೈಕೋರ್ಟ್​ನ ಸೈಬರ್ ಭದ್ರತೆಗೆ ಆತಂಕ ಎದುರಾದ ಹಿನ್ನೆಲೆ ತಾತ್ಕಾಲಿಕವಾಗಿ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಲಾಪ ಅಮಾನತು ಮಾಡಲಾಗಿದೆ.

Read More

ಬೆಂಗಳೂರು:- ಬೆಂಗಳೂರಿನ ಟಿಂಬರ್​ಲೇಔಟ್​ನಲ್ಲಿ ಆಟೋ ಚಾಲಕ ಇನ್ನೇನು ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರಬೇಕು ಎನ್ನುವಷ್ಟರಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ಜರುಗಿದೆ. 24 ವರ್ಷದ ಅರುಣ್​ಗೆ ಕೊಲೆಯಾದ ದುರ್ದೈವಿ. ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಆದ್ರೆ, 10ಕ್ಕೂ ಹೆಚ್ಚು ದುಷ್ಕರ್ಮಿಗಳು ಅರಣ್​ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಪರಿಶೀಲಿಸಿದ್ದು, ಕೊಲೆಗೆ ಕಾರಣವೇನು ಎನ್ನುವುದನ್ನು ತನಿಖೆ ಕೈಗೊಂಡಿದ್ದಾರೆ. ಆಟೋ ಚಾಲಕ ಅರುಣ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆ ಪ್ರೀತಿಯೊಂದಿಗೆ ಮದುವೆಯಾಗಿ ಸಂಸಾರ ಶುರು ಮಾಡಬೇಕಿದ್ದ. ಅದಕ್ಕೆ ಅಂತಾಲೇ ಮುಂದಿನ ತಿಂಗಳು ಮದುವೆ ಫಿಕ್ಸ್​ ಆಗಿತ್ತು ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ಮನೆಯ ಎರಡನೇ ಯಜಮಾನರಿಗೂ ಅನ್ನ ಭಾಗ್ಯ ಹಣ ನೀಡುವ ಮೂಲಕ ಆಹಾರ ಇಲಾಖೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.ಈ ಕುರಿತ ಡೀಟೈಲ್ಸ್ ಇಲ್ಲಿದೆ. ಸರ್ಕಾರ ನೀಡಿರುವ ಯೋಜನೆಗಳಲ್ಲಿ ಒಂದಲ್ಲ ಒಂದು ಕೊರತೆಗಳಿದ್ದು,ಅನ್ನ ಭಾಗ್ಯ ಯೋಜನೆ ಬಗ್ಗೆ ಯು ಸಾಕಷ್ಟು ದೂರುಗಳು ಬಂದಿವೆ.ಅನ್ನ ಭಾಗ್ಯ ಯೋಜನೆ DBT ಪ್ರತಿ ತಿಂಗಳು 8 ರಿಂದ 10 ಸಾವಿರ ಜನರಿಗೆ ಸಿಗದೆ ದೂರುಗಳು ಹೆಚ್ಚಾಗುತ್ತಲೆ ಇತ್ತು.ಈ ಹಿಂದೆ ಕೇವಲ ಕೇವಲ ಕಾರ್ಡ್ ನ ಮೊದಲ ಯಜಮಾನರಿಗೆ DBTಮೂಲಕ ಹಣ ಹಾಕಲಾಗುತ್ತಿತ್ತು. https://ainlivenews.com/natural-star-in-bangalore-nani-is-busy-with-hi-nanna-promotion/ ಆದ್ರೀಗ ದೂರುಗಳು ಹೆಚ್ಚಾಗಿದ್ದರಿಂದ  ಮನೆಯ ಎರಡನೇ ಯಜಮಾನರಿಗೂ ಹಣ ಹಾಕುವುದಾಗಿ ನಿರ್ಧರಿಸಲಾಗಿದೆ. ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಅಧಿಕೃತವಾಗಿ ಈ ತಿಂಗಳಿನಿಂದ ಜಾರಿ ಮಾಡಲಾಗುತ್ತದೆ.ಇದರಿಂದ ಸುಮಾರು 9ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿಗೆ ಇದರ ಲಾಭ ಸಿಗಲಿದೆ. ಒಟ್ಟಿನಲ್ಲಿ ಯೋಜನೆಗಳು ಘೋಷಣೆ ಆಗಿ ಜಾರಿಗೆ ಬಂದರು ಸರಿಯಾಗಿ ಸಮರ್ಪಕವಾಗಿ ನಿರ್ವಹಣೆ ಆಗದೆ ದೂರುಗಳ ಸರಮಾಲೆಯೆ ಕಾಣುತ್ತಿದ್ದು ಇನ್ನು ಮುಂದೆ ಆದರು…

Read More

ಪಾಟ್ನಾ: ಬಿಹಾರದಲ್ಲಿ (Bihar) ಶಿಕ್ಷಕನೊಬ್ಬನನ್ನು (Teacher) ಅಪಹರಿಸಿ, ಗನ್ ತೋರಿಸಿ ಬೆದರಿಸಿ ತನ್ನ ಮಗಳೊಂದಿಗೆ ಕಿಡ್ನ್ಯಾಪರ್ ಮದುವೆ (Mariiage) ಮಾಡಿಸಿರುವ ಘಟನೆಯೊಂದು ನಡೆದಿದೆ. ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕ ಗೌತಮ್ ಕುಮಾರ್‌ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಗೌತಮ್ ಕುಮಾರ್ ಎಂದಿನಂತೆ ಶಾಲೆಗೆ ಹೋಗಿದ್ದಾಗ ಅಲ್ಲಿಗೆ ಬಂದ 3-4 ಜನರು ಆತನನ್ನು ಅಪಹರಿಸಿದ್ದಾರೆ. ಆತನಿಗೆ ಬಂದೂಕು ತೋರಿಸಿ, ಬೆದರಿಸಿ, ಅಪಹರಣವಾದ ಕೇವಲ 24 ಗಂಟೆಯಲ್ಲಿ ಕಿಡ್ನ್ಯಾಪರ್‌ನ ಮಗಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. https://ainlivenews.com/good-news-for-rakibhai-fans-next-movie-title-announced-on-december-8/ ಗಮನಾರ್ಹ ವಿಚಾರವೆಂದರೆ ಈ ರೀತಿ ಯುವಕರನ್ನು ಅಪಹರಣ ಮಾಡಿ ಮದುವೆ ಮಾಡುವುದು ಬಿಹಾರದಲ್ಲಿ ಸಾಮಾನ್ಯವಾಗಿದೆ. ಇದನ್ನು ‘ಪಕಡ್ವಾ ವಿವಾಹ’ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಒಳ್ಳೆಯ ಹುದ್ದೆಗೇರಿದ ಯುವಕರನ್ನು ಈ ರೀತಿ ಅಪಹರಣ ಮಾಡಿ ತಮ್ಮ ಮಕ್ಕಳೊಂದಿಗೆ ಮದುವೆ ಮಾಡಿಸುತ್ತಾರೆ. ಆದರೆ ಮದುವೆ ಬಗ್ಗೆ ಯೋಚನೆಯೇ ಮಾಡಿರದ…

Read More

ಹುಬ್ಬಳ್ಳಿ: ಈ ದೇಶದ ಸಂಪತ್ತು ಮುಸ್ಲಿಮರಿಗೂ ಸೇರಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರ ಹೇಳಿಕೆ ವಿಚಾರ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ಸಮರ್ಥನೆ ಮಾಡಿಕೊಂಡಿದ್ದಾರೆ ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಸಿದ್ದರಾಮಯ್ಯ ಅವರು ಯಾವ ಸಮಾಸವೇಶದಲ್ಲಿ ಹೇಳಿದ್ದಾರೆ ಅನ್ನೋದು ಮುಖ್ಯ ಮುಸ್ಲಿಂ ಸಮಾವೇಶದಲ್ಲಿ ಮುಸ್ಲಿಮರಿಗೆ ಏನು ಮಾಡುತ್ತೇವೆ ಅನ್ನೋದು ಹೇಳಬೇಕಾಗುತ್ತದೆ ಬೇರೆ ಸಮಾವೇಶದಲ್ಲಿ ಬೇರೆಯವರಿಗೆ ಏನು ಮಾಡುತ್ತೇವೆ ಅಂತ ಹೇಳುತ್ತಾರೆ, ಆದರೆ ಇದರಲ್ಲಿ ತಪ್ಪು ಹುಡುಕೋ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಚೀನಾದಲ್ಲಿ ಹೊಸ ವೈರಸ್ ಪತ್ತೆ ವಿಚಾರ ಕುರಿತು ಮಾತನಾಡಿದ ಅವರು ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಯಾವುದೇ ಸಂಸ್ಥೆಯಾಗಲಿ ಎಚ್ಚರಿಕೆಗಳನ್ನು ನೀಡಿಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆಡಿಸಿನ್ ಕೊರತೆ ಸಹ ಇದ್ದುಬೇರೆ ಬೇರೆ ಕಾರಣಗಳಿಂದ ಔಷಧ ಕೊರತೆಯಾಗ್ತಿದೆ ಈ ಸಮಸ್ಯೆ ಸರಿಪಡಿಸಲು ಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು

Read More

ಶಿಕ್ಷಣ ಕ್ಷೇತ್ರದ ಪ್ರಮುಖ ಸ್ಟಾರ್ಟಪ್ ಕಂಪನಿ ಬೈಜೂಸ್‍  ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಈ ಕಂಪನಿ ತನ್ನ ಉದ್ಯೋಗಿಗಳಿಗೆ ವೇತನವನ್ನು ಪಾವತಿ ಮಾಡಿರಲಿಲ್ಲ. ಆದರೆ ಇದೀಗ ತಮ್ಮ ಮನೆಯನ್ನೇ ಅಡವಿಟ್ಟು ಸಂಬಳ ನೀಡುವ ಮೂಲಕ ಭಾರೀ ಸುದ್ದಿಯಾಗಿದೆ. ಹೌದು. ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್ (Byju’s Founder Byju Raveendran), ತಮ್ಮ ಬೆಂಗಳೂರಿನ ಮನೆಯನ್ನೇ ಅಡವಿಟ್ಟು  ಸೋಮವಾರ ಒಂದು ಸಾವಿರ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಮಾಡಿದ್ದಾರೆ ಎಂಬ ಸಂಗತಿಯೊಂದು ಇದೀಗ ಬಯಲಾಗಿದೆ. ಬೈಜು ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಒಂದು ಇದೆ. ಇವುಗಳನ್ನು ಅಡವಿಟ್ಟು ಸುಮಾರು 100 ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಸಾಲದಿಂದ ತಮ್ಮ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. https://ainlivenews.com/natural-star-in-bangalore-nani-is-busy-with-hi-nanna-promotion/ ಸೋಮವಾರದಂದು ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್‍ನ 15,000 ಉದ್ಯೋಗಿಗಳಿಗೆ ಸಂಬಳ (Employees…

Read More

ಹುಬ್ಬಳ್ಳಿ : ಕುಂದಾನಗರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಗೆ ಎರಡು ದಿನ ಮೀಸಲು ಇಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಹೇಳಿದರು ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು ಅಧಿವೇಶನದಲ್ಲಿ ಒಳ್ಳೆಯ ಚರ್ಚೆಗಳು ನಡೆದಿವೆ. ನಾಳೆಯೂ ಒಂದು ದಿನ ಉತ್ತರ ಕರ್ನಾಟಕ ಚರ್ಚೆಯಾಗಲಿದ್ದು, ಮೊದಲ ಬಾರಿಗೆ ಈ ರೀತಿಯ ಚರ್ಚೆಗಳು ನಡೆದಿವೆ ಉತ್ತರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ ಇದು ಒಳ್ಳೆಯ ವಿಚಾರ ಆಗಿದ್ದು ಏನಾದರೂ ಅಗತ್ಯವಿದ್ದಲ್ಲಿ ಚರ್ಚೆ ವಿಸ್ತರಣೆಯಾಗಲಿದೆ ಎಂದರು. ಇನ್ನೂ ಇದೇ ಸಂದರ್ಭದಲ್ಲಿ ಬಹಳಷ್ಟು ಸಚಿವರು ಅಧಿವೇಶನಕ್ಕೆ ಚಕ್ಕರ್ ವಿಚಾರ ಕುರಿತು ಮಾತನಾಡಿದ ಅವರು ಯಾವ ಸಚಿವರು ಗೈರಾಗಿಲ್ಲ. ಎಲ್ಲ ಸಚಿವರು ಅಧಿವೇಶನಕ್ಕೆ ಬಂದಿದ್ದು ಅವರಿವರನ್ನ ಭೇಟಿಯಾಗೋಕೆ ಎಲ್ಲಾದರೂ ಹೋಗಿರುತ್ತಾರೆ ಸಮಜಾಯಿಷಿದರು‌ಮುಸ್ಲಿಂ ಮುದಾಯಕ್ಕೆ ದೇಶದ ಆಸ್ತಿ ಹಂಚಿಕೆ ವಿಚಾರ ಸಹ ಪ್ರತಿಕ್ರಿಯೆ ಕೊಡಲು ನಿರಾಕರಣೆ ಮಾಡಿದ ಅವರು ಇದು ಮುಗಿದು ಹೋದ ವಿಚಾರ…

Read More

ಇಸ್ಲಮಾಬಾದ್: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಜಯ ಸಾಧಿಸಿರುವ ಬಿಜೆಪಿ (BJP) ಸಂಭ್ರಮದ ನಡುವೆ ಪಾಕ್ (Pakistan) ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ರಾಹುಲ್ ಗಾಂಧಿಯವರಿಗೆ (Rahul Gandhi) ಪರೋಕ್ಷವಾಗಿ ಕುಟುಕಿದ್ದಾರೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಂತೆ ಕನೇರಿಯಾ, ಯಾವ ಪಕ್ಷ ಹಾಗೂ ಯಾರ ಹೆಸರನ್ನೂ ತೆಗೆದುಕೊಳ್ಳದೆ ತಮ್ಮ ಎಕ್ಸ್ ಖಾತೆಯಲ್ಲಿ ಪನೌತಿ ಕೌನ್? ಎಂದು ಬರೆದುಕೊಂಡು ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರನ್ನು ಪನೌತಿ ಎಂದಿದ್ದ ರಾಹುಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.  ನ.19 ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯವ ವೇಳೆ ನರೇಂದ್ರ ಮೋದಿಯವರು (Narendra Modi) ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಿದ ಕಾರಣ ಭಾರತ ಸೋಲನ್ನು ಅನುಭವಿಸಿತು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ದಾನಿಶ್ ಕನೇರಿಯಾ ಅವರು ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು.…

Read More

ಹುಬ್ಬಳ್ಳಿ: ಮುಸ್ಲೀಮರಿಗೆ ದೇಶದ ಸಂಪತ್ತು ಹಂಚುತ್ತೇವೆ ಎಂದು ಸಿಎಮ್ ಹೇಳಿಕೆ ವಿಚಾರ ಒಳ್ಳೆಯದು ಎಂದು ಅಬಕಾರಿ ಸಚಿವ ಆರ್ . ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿಗಾದ ಸಿದ್ದರಾಮಯ್ಯ ಸಾಹೆಬ್ರು ಹೇಳಿದ್ದು ನೂರಕ್ಕೆ ನೂರು ಸತ್ಯವಿದೆ. ಮುಸ್ಲೀಮರು ನಮ್ಮ ನಾಡಿನವರು, ಈ ನೆಲದ‌ ಮೇಲೆ ಅವರಿಗೂ ಹಕ್ಕಿದೆ ಎಂದ ಅವರು ಮುಸ್ಲಿಂ ಸಮುದಾಯದವರಿಗೆ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಭಾರತೀಯ ಜನತಾ ಪಕ್ಷದ ವರು ಹಿಂದೂ ಓಲೈಕೆ ಮಾಡ್ತಾರೆ, ಮುಸ್ಲೀಮರ ಗಲಾಟೆ ಹಚ್ತಾರೆ ನಾನು, ಸಿದ್ದರಾಮಯ್ಯ ಹಿಂದೂಗಳು ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಬಳಸುತ್ತಿದ್ದಾರೆ ನಾನು ಜನರ ಕಲ್ಯಾಣಕ್ಕಾಗಿ ಕಾರ್ಯ ಮಾಡತಾ ಇದ್ದೇವೆ ಎಂದರು. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಆಗಲಿ, ಇನ್ನು ಸದನ ಸುಮ್ಮನೆ ಹಾಳಾಗಬಾರದು. ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿವೆ ವಿರೋಧ ಪಕ್ಷ ನಾಯಕರಿಗೆ ವಿನಂತಿ ಮಾಡುತ್ತೇವೆ. ಬೇರೆಬೇರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಗದ್ದಲದಲ್ಲಿ ಅಧಿವೇಶನ…

Read More

ಹುಬ್ಬಳ್ಳಿ: ನಾನು ಮುಖ್ಯಮಂತ್ರಿ ನಾನು ಸಿದ್ದರಾಮಯ್ಯ ವಕ್ತಾರನಲ್ಲ ಎಂದು ಎಐಸಿಸಿ ಸದಸ್ ಹುಬ್ಬಳ್ಳಿಯಲ್ಲಿ ಬಿ.ಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊರಹಾಕಿದ ಅವರು, ಮುಸ್ಲಿಂ ಸಮುದಾಯ ಹೇಳಿಕೆ ವಿಚಾರಕ್ಕೆ ಹರಿಪ್ರಸಾದ್ ಪ್ರತಿಕ್ರಿಯೆನ್ನ ಪಡೆಯಲು ಹೋದ ಸುದ್ದಿಗಾರರ ಪ್ರಶ್ನೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯಾ ಮೇಲಿನ ಸಿಟ್ಟು ಈ ಮೂಲಕ ಹೊರ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಅನುಭವ ಇದ್ದು, ಅವರಿಗೆ ಬಹಳ ಮಾಹಿತಿ ಇರತ್ತೆ ಆದ್ದರಿಂದ ಅದಕ್ಕೆ ಅವರನ್ನ ಕೇಳೋದ ಒಳ್ಳೆದು ಅದಕ್ಕೆ ನಾನು ಉತ್ತರ ಕೊಡಲ್ಲ. ನಾನೆಲ್ಲಿ ಸಿದ್ದರಾಮಯ್ಯ ವಿರುದ್ದ ಮಾತಾಡ್ತಿಲ್ಲ ಇನ್ನು ನಮ್ಮ ಸಮುದಾಯಕ್ಕೆ ಇವಾಗಿಂದ ಅಲ್ಲ, ಮುಂಚೆ ಇಂದ ಅನ್ಯಾಯ ಆಗಿದೆ ಈ ಬಗ್ಗೆ ಹೆಚ್ಚಿನ ಚರ್ಚೆ ಬೇಡಾ ಪಕ್ಷದಲ್ಲಿ ಎಲ್ಲ ಚೆನ್ನಾಗಿದೆ, ನಾನು ಚೆನ್ನಾಗಿದೀನಿ ಎಂದ ಹರಿಪ್ರಸಾದ್ ಎಲ್ಲೋ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಪರವಾಗಿ ಸಾಪ್ಟ್ ಕಾರ್ನರ್ ಇದೆ ಅಂತಾ ತೋರಿಸಿಕೊಳ್ಳಲಿಲ್ಲ ಎಂದರು.

Read More