ನವದೆಹಲಿ:-ಚಲಿಸುವ ರೈಲಿನಲ್ಲಿ ಯುವಜೋಡಿ ಮದುವೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಯಾಣಿಕರ ನಡುವೆ ಯುವಕನೊಬ್ಬ ಯುವತಿಗೆ ತಾಳಿ ಕಟ್ಟುತ್ತಿರುವ ಮತ್ತು ಹಾರ ಬದಲಾಯಿಸುತ್ತಿರುವ ದೃಶ್ಯವಿದೆ. ಪರಸ್ಪರ ಇಬ್ಬರು ತಬ್ಬಿಕೊಳ್ಳುತ್ತಿರುವುದು ಹಾಗೂ ಯುವತಿಯನ್ನು ಯುವಕ ಸಂತೈಸುತ್ತಿರುವುದು ಮತ್ತು ಪ್ರಯಾಣಿಕರು ನವಜೋಡಿಗೆ ಶುಭ ಹಾರೈಸುತ್ತಿರುವ ಭಾವುಕ ಕ್ಷಣಗಳಿಗೆ ರೈಲು ಸಾಕ್ಷಿಯಾಯಿತು. ವರದಿಗಳ ಪ್ರಕಾರ ಅಸನ್ಸೋಲ್-ಜಸಿದಿಹ್ ರೈಲಿನಲ್ಲಿ ಈ ವಿಶಿಷ್ಟ ವಿವಾಹ ನಡೆಯಿತು. ಸಹ ಪ್ರಯಾಣಿಕರ ಹರ್ಷೋದ್ಘಾರದ ನಡುವೆ ಯುವಕ, ಯುವತಿಯ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮದುವೆಯ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Author: AIN Author
ಪ್ರಿಟೋರಿಯಾ: ಭಾರತ (Team India) ವಿರುದ್ಧದ ಮೂರು ಸರಣಿಗಳಿಗೆ ದಕ್ಷಿಣ ಆಫ್ರಿಕಾ (South Africa) ತಂಡ ಪ್ರಕಟಿಸಿದ್ದು, ಟಿ20 ಮತ್ತು ಏಕದಿನ ಸರಣಿಯಿಂದ ನಾಯಕ ತೆಂಬಾ ಬವುಮಾ ಮತ್ತು ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಇಬ್ಬರೂ ಆಟಗಾರರು ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಏಡನ್ ಮಾರ್ಕ್ರಮ್ (Aiden Markram) ಮುನ್ನೆಡೆಸಲಿದ್ದಾರೆ. ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮುಖಾಮುಖಿ 3 ಪಂದ್ಯಗಳ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಬಳಿಕ ನಡೆಯಲಿರುವ ಏಕದಿನ ಸರಣಿಯಿಂದ ಖಾಯಂ ನಾಯಕ ತೆಂಬಾ ಬವುಮಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ಏಡನ್ ಮಾರ್ಕ್ರಮ್ ತುಂಬಲಿದ್ದಾರೆ. ಮಾಕ್ರ್ರಾಮ್ ಈ ಹಿಂದೆಯೂ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಉಳಿದಂತೆ ಟಿ20 ಸರಣಿಗೆ ಆಯ್ಕೆಯಾಗಿರುವ ಜೆರಾಲ್ಡ್ ಕೊಯೆಟ್ಜಿ, ಮಾರ್ಕೊ ಯಾನ್ಸನ್ ಮತ್ತು ಲುಂಗಿ ಎನ್‍ಗಿಡಿಗೆ ಮೂರನೇ ಟಿ20 ಮತ್ತು ಏಕದಿನ ಸರಣಿಯಿಂದ ಕೋಕ್ ನೀಡಲಾಗಿದೆ. ಮೂರು ಸ್ವರೂಪಗಳಿಗೆ ದಕ್ಷಿಣ ಆಫ್ರಿಕಾದ ತಂಡ ಟಿ20 ತಂಡ: ಏಡನ್ ಮಾರ್ಕ್ರಮ್…
ಬೆಂಗಳೂರು/ ಬೆಳಗಾವಿ:- ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಮೋಟಾರು ವಾಹನಗಳ ಖರೀದಿ ಮೇಲೆ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದರಿಂದ 25 ರಿಂದ 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಟೈಲರಿಂಗ್ ವೃತ್ತಿನಿರತ ಕಾರ್ಮಿಕರಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಯು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜತೆಗೆ ಕಟ್ಟಡ ಕಾರ್ಮಿಕರ ಸೆಸ್‌ನಿಂದ ಟೈಲರ್‌ಗಳು, ನೇಕಾರರಂತಹ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಇ-ಶ್ರಮ್ ಪೋರ್ಟಲ್ ಮೂಲಕ 7.28 ಲಕ್ಷ ಟೈಲರ್ ಗಳು ಅಸಂಘಟಿತ ಕಾರ್ಮಿಕರಾಗಿ ನೋಂದಣಿ…
ಬೆಂಗಳೂರು:- ಮಹಾನಗರಗಳ ಪೈಕಿ ಬೆಂಗಳೂರು ನಗರ ಸೈಬರ್ ಅಪರಾಧಗಳಲ್ಲಿ ಮೊದಲ ಸ್ಥಾನದಲ್ಲಿದೆ. ಸೈಬರ್ ಕ್ರೈಂ ಕುರಿತು ಜನರಲ್ಲಿ ಜಾಗೃತಿ ಮೂಡಿ ಪೊಲೀಸ್ ಠಾಣೆಗೆ ದೂರು ಕೊಡುವರ ಮತ್ತು ಕಳ್ಳರ ಪ್ರಮಾಣದಲ್ಲಿ ಹೆಚ್ಚಳದ ಪರಿಣಾಮ ಪ್ರಕರಣಗಳ ಸರಾಸರಿ ಏರಿಕೆಯಾಗಿದೆ ಎನ್ನಲಾಗಿದೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೇ, 2022ರಲ್ಲಿ 65,893 ಕೇಸ್ ದಾಖಲಾಗಿವೆ. ಇದೇ ಅಲ್ಲದೆ ಆರ್ಥಿಕ ಅಪರಾಧ (ಶೇ.11), ಹಿರಿಯ ನಾಗರಿಕರ ವಿರುದ್ಧ ಅಪರಾಧ (ಶೇ.9), ಮಹಿಳೆಯರ ವಿರುದ್ಧ (ಶೇ.4) ಅಪರಾಧಗಳು ಸಹ ಹೆಚ್ಚಳವಾಗಿರುವ ಅಂಶ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ಅಡಿಯಲ್ಲಿ 65,893 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ 2022ನೇ ಸಾಲಿನಲ್ಲಿ 15,297 ಕೇಸ್‌ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 12,556 ಮತ್ತು ಉತ್ತರ ಪ್ರದೇಶದಲ್ಲಿ 10,117 ಪ್ರಕರಣಗಳು ದಾಖಲಾಗಿದ್ದು, 2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ ದಾಖಲಾಗಿರುವ 12,556 ಸೈಬರ್ ಕ್ರೈಂಗಳ ಪೈಕಿ 11,025 ವಂಚನೆ, 338…
ದಾಖಲೆ ಮಟ್ಟಕ್ಕೆ ಏರಿದ್ದ ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿದೆ. ನಿನ್ನೆ ದಾಖಲೆ ಮಟ್ಟಕ್ಕೆ ಚಿನ್ನದ ಬೆಲೆ ಹೋಗಿತ್ತು. ಈಗ ತುಸು ಕಡಿಮೆ ಆಗಿರುವುದು ಗಮನಾರ್ಹ. ಗ್ರಾಮ್ಗೆ 100 ರೂನಷ್ಟು ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,925 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 6ಕ್ಕೆ): 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,850 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,110 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 785 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22…
ಹುಬ್ಬಳ್ಳಿ: ರಾಜ್ಯದ ವಿವಿಧ ಜಿಲ್ಲೆಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು, ಧಾರವಾಡ ಜಿಲ್ಲೆಗೆ ₹212 ಕೋಟಿ ಬರ ಪರಿಹಾರದ ಹಣ ಬರಬೇಕಿತ್ತು. ಆದರೆ ಇದುವರೆಗೆ ಯಾವುದೇ ಹಣ ಜಮಾ ಆಗಿಲ್ಲ. ಈ ಕೂಡಲೇ ಧಾರವಾಡ ಜಿಲ್ಲೆಗೆ ಪರಿಹಾರ ಬಿಡುಗಡೆ ಮಾಡಲು ಆಗ್ರಹಿಸಿ ಬಾರುಕೋಲು ಚಳುವಳಿ ಮುಖಾಂತರ ರತ್ನಭಾರತ ರೈತ ಸಮಾಜದ ವತಿಯಿಂದ ಡಿ. 7ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರತ್ನ ರೈತ ಭಾರತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕಳಸಾ ಬಂಡೂರಿ ಮಹದಾಯಿ ಯೋಜನೆ ಹೋರಾಟಗಾರರು ಆದ ಹೇಮನಗೌಡ ಬಸನಗೌಡ್ರ ಆಗ್ರಹಿಸಿದರು. ರಾಜ್ಯದಾದ್ಯಂತ ಬರಗಾಲಕ್ಕೆ ತುತ್ತಾಗಿ ರೈತರು ಬೆಳೆ ಸಾಲ ಮಾಡಿ ತುಂಬಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರು ತುಂಬಿದ ಬೆಳೆ ವಿಮೆ ಹಣವನ್ನು ಮಿಮಾ ಕಂಪನಿಯಿಂದ ಕೊಡಿಸಬೇಕು, ಕೇಂದ್ರ ಸರ್ಕಾರದಿಂದ ರೈತರಿಗೆ ₹6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ ಬರುವ ₹4 ಸಾವಿರವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದ್ದು, ಕೂಡಲೇ ಪುನರಾರಂಭಿಸುವಂತೆ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಬೇಕು…
ಬೆಳಗಾವಿ:- ಸಿದ್ದರಾಮಯ್ಯ ನೀವೇ 5 ವರ್ಷ ಸಿಎಂ ಆಗಿರಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಹೇಳಿದ್ದಾರೆ. ಮೊದಲಿನ ಸಿದ್ದರಾಮಯ್ಯ ಅಲ್ಲ ಅಂತ ಜನಸಾಮಾನ್ಯನಿಗೂ ಗೊತ್ತಾಗಿದೆ, ಅವರು ಮೊದಲಿನ ಹಾಗಿದ್ದರೆ ಆಡಳಿತ ಮತ್ತು ರಾಜ್ಯದ ಬರದ ಸ್ಥಿತಿ ಹೀಗಿರುತ್ತಿರಲಿಲ್ಲ. ಅವರು ಮಂಕಾಗಿರೋದ್ರಿಂದಲೇ ಸ್ಥಿತಿ ಬಿಗಡಾಯಿಸಿದೆ, ಸಿದ್ದರಾಮಯ್ಯ ಯಾರಿಗೂ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ನಾವೆಲ್ಲ ಅವರೊಂದಿಗಿದ್ದೇವೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಸದಸದಲ್ಲಿಯೇ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬಿಸಿದ್ದಾರೆ. ಇನ್ನೂ ರಾಜ್ಯ ಕಾಂಗ್ರೆಸ್ ನಲ್ಲಿ ಬರೋಬ್ಬರಿ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಗ ಗದ್ದುಗೆಗಾಗಿ ಗುದ್ದಾಟ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಪದೇ ಪದೇ ಕೈ ಪಾಳಯದಲ್ಲಿ ಸಿಎಂ ಚರ್ಚೆ ಜಾಲ್ತಿಯಲ್ಲಿರುತ್ತದೆ.
ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಇಸ್ರೋ (ISRO) ಯಶಸ್ವಿಯಾಗಿ ಮರಳಿ ತರಲಿದೆ. ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಚಂದ್ರನಿಂದ ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. https://ainlivenews.com/natural-star-in-bangalore-nani-is-busy-with-hi-nanna-promotion/ ಜು.14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆ.23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಐತಿಹಾಸಿಕ ಸಾಧನೆ ಮಾಡಿತು. ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯನ್ನು…
ಬೆಂಗಳೂರು:- ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿಯ ಮೋರಿಯಲ್ಲಿ 2 ವರ್ಷದ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ. ಚಾಪೆ ಹಾಕಿ ಮಗುವನ್ನು ಮಲಗಿಸಿದ ರೀತಿಯಲ್ಲಿ ಮಗು ಪತ್ತೆಯಾಗಿದೆ. ಆದರೆ ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಇದು ಕೊಲೆಯೊ ಅಥವಾ ಸಹಜ ಸಾವುವೋ ತಿಳಿದು ಬಂದಿಲ್ಲ. ಮಗುವಿನ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಂಗಳೂರು:- ಕಳೆದ ಹತ್ತು ವರ್ಷಗಳಿಂದ ಜಾಹೀರಾತು ಶುಲ್ಕ ಕಟ್ಟದೇ ಬಿಬಿಎಂಪಿಗೆ ವಂಚನೆ ಮಾಡಿದ ಜಾಹೀರಾತುಗಳ ಮೇಲೆ ಬಿಬಿಎಂಪಿ ನೋಟಿಸ್ ಲಗತ್ತಿಸುತ್ತಿದೆ. ಜಾಹೀರಾತು ಶುಲ್ಕ ಪಾವತಿಸದ ಮೇಲ್ಸೇತುವೆ, ಸ್ಕೈವಾಕ್, ಬಸ್ ತಂಗುದಾಣಗಳಲ್ಲಿನ ಜಾಹೀರಾತುಗಳ ಮೇಲೆ ಬಿಬಿಎಂಪಿ ನೋಟಿಸ್ ಲಗತ್ತಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ತಂಗುದಾಣ, ಸ್ಕೈವಾಕ್‌ನಲ್ಲಿ ಜಾಹೀರಾತು ಪ್ರದರ್ಶನದ ನೆಲಬಾಡಿಗೆ, ಸೇವಾ ತೆರಿಗೆಗಳು ಸೇರಿದಂತೆ ₹100 ಕೋಟಿಗೂ ಅಧಿಕ ಬಾಕಿ ಇದೆ. ಏಜೆನ್ಸಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿತ್ತು. ಆದರೂ ವಸೂಲಿ ಆಗಿರಲಿಲ್ಲ. ಹೀಗಾಗಿ ಬಿಬಿಎಂಪಿ ಕೆಲವೆಡೆ ಜಾಹೀರಾತು ತೆರವು ಕಾರ್ಯಾಚರಣೆ ಕೈಗೊಂಡಿದೆ. ಬಸ್ ತಂಗುದಾಣಗಳ ಮೇಲೆ ನೋಟಿಸ್ ಅಂಟಿಸುತ್ತಿದೆ. ಯಾವುದೇ ರೀತಿಯ ಶುಲ್ಕ ಪಾವತಿಯಾಗದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೇಶ್ ಮೌದ್ಗೀಲ್ ಹೇಳಿದ್ದರು.