ಬೆಳಗಾವಿ:- ಸಿದ್ದರಾಮಯ್ಯ ನೀವೇ 5 ವರ್ಷ ಸಿಎಂ ಆಗಿರಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.
ನಿಮ್ಮ ಜೊತೆಗೆ ನಾವಿದ್ದೇವೆ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಹೇಳಿದ್ದಾರೆ.
ಮೊದಲಿನ ಸಿದ್ದರಾಮಯ್ಯ ಅಲ್ಲ ಅಂತ ಜನಸಾಮಾನ್ಯನಿಗೂ ಗೊತ್ತಾಗಿದೆ, ಅವರು ಮೊದಲಿನ ಹಾಗಿದ್ದರೆ ಆಡಳಿತ ಮತ್ತು ರಾಜ್ಯದ ಬರದ ಸ್ಥಿತಿ ಹೀಗಿರುತ್ತಿರಲಿಲ್ಲ. ಅವರು ಮಂಕಾಗಿರೋದ್ರಿಂದಲೇ ಸ್ಥಿತಿ ಬಿಗಡಾಯಿಸಿದೆ, ಸಿದ್ದರಾಮಯ್ಯ ಯಾರಿಗೂ, ಯಾವುದಕ್ಕೂ ಹೆದರುವ ಅಗತ್ಯವಿಲ್ಲ, ನಾವೆಲ್ಲ ಅವರೊಂದಿಗಿದ್ದೇವೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಸದಸದಲ್ಲಿಯೇ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಬಿಸಿದ್ದಾರೆ.
ಇನ್ನೂ ರಾಜ್ಯ ಕಾಂಗ್ರೆಸ್ ನಲ್ಲಿ ಬರೋಬ್ಬರಿ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಗ ಗದ್ದುಗೆಗಾಗಿ ಗುದ್ದಾಟ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಪದೇ ಪದೇ ಕೈ ಪಾಳಯದಲ್ಲಿ ಸಿಎಂ ಚರ್ಚೆ ಜಾಲ್ತಿಯಲ್ಲಿರುತ್ತದೆ.