ಮಂಗಳೂರು:- ದೇಶದ ಸಂಪತ್ತಿನಲ್ಲಿ ದೇಶದ್ರೋಹಿಗಳಿಗೆ ಅಧಿಕಾರವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಭಾರತದಲ್ಲೇ ಇದ್ದು, ದೇಶಕ್ಕೆ ದ್ರೋಹ ಬಗೆಯುವ ಮಾನಸಿಕತೆ ಹೊಂದಿರುವವರಿಗೆ ಈ ದೇಶದ ಸಂಪತ್ತಿನಲ್ಲಿ ಅಧಿಕಾರ ಇಲ್ಲ. ಅದೇನಿದ್ದರೂ ಭಾರತೀಯ ಮಾನಸಿಕತೆಯವರಿಗೆ ಸೇರಿದ್ದು’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಕ್ರಿಯಿಸಿದರು. ದೇಶದ ಸಂಪತ್ತು ಮುಸ್ಲಿಮರಿಗೆ ಸೇರಿದ್ದು ಎನ್ನುವ ಬದಲು ಭಾರತೀಯರಿಗೆ ಅಥವಾ ಬಡವರಿಗೆ ಸೇರಿದ್ದು ಎಂದು ಸಿದ್ದರಾಮಯ್ಯ ಹೇಳಬಹುದಿತ್ತು. ಓಲೈಕೆ ರಾಜಕಾರಣಕ್ಕಾಗಿ ನೀಡಿರುವ ಈ ಹೇಳಿಕೆ ಅಪಾಯಕಾರಿ. ಇದನ್ನು ಖಂಡಿಸುತ್ತೇನೆ. ಇಂತಹ ಮಾನಸಿಕತೆಯೇ ದೇಶ ವಿಭಜನೆಗೆ ಕಾರಣವಾಗಿದೆ ಎನ್ನುವುದನ್ನೇ ಕಾಂಗ್ರೆಸ್ ಮರೆಯಬಾರದು. ಇದು ಕೋಮುವಾದಿ ರಾಜಕಾರಣದ ಪ್ರತ್ಯಕ್ಷ ದರ್ಶನ. ಕಾಂಗ್ರೆಸ್ ಪಕ್ಷವೇ ನಿಜವಾದ ಕೋಮುವಾದಿ ಪಕ್ಷ’ ಎಂದರು. ‘ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಐಎಸ್‌ಐ ಏಜೆಂಟ್‌ಗಳೂ ಭಾಗವಹಿಸಿದ್ದರು’ ಎಂದು ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಮಾಡಿರುವ…
Author: AIN Author
ಬೆಳಗಾವಿ:- ಮ್ಯೂಸಿಯಂ ಪ್ರವೇಶ ನಿರಾಕರಣೆ ಕುರಿತು ಗೂಳಿಹಟ್ಟಿ ಹೇಳಿಕೆ ವಿಚಾರವಾಗಿ ಆರ್ಎಸ್ಎಸ್ಗೆ ಸಚಿವ ಖರ್ಗೆ ಸವಾಲ್ ಹಾಕಿದ್ದಾರೆ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದ ಬಗ್ಗೆ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ಆರ್ಎಸ್ಎಸ್ ಸರಸಂಘಚಾಲಕರಾಗಿ ದಲಿತರನ್ನು ನೇಮಕ ಮಾಡಲಿ” ಎಂದು ಸವಾಲು ಹಾಕಿದ್ದಾರೆ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್ಗೆ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೇವಾರ್ ಮ್ಯೂಸಿಯಂಗೆ ಹೋದಾಗ ದಲಿತ ಎಂಬ ಕಾರಣಕ್ಕೆ ಪ್ರವೇಶ ಕೊಟ್ಟಿಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಈ ನಿಯಮ ಬಿಜೆಪಿಯ ದಲಿತ ನಾಯಕರಿಗೂ ಅನ್ವಯ ಆಗುತ್ತಾ? ಎಂದು ಕೇಳಿದ್ದಾರೆ. ಹಿಂದುತ್ವದಲ್ಲಿ ಆರ್ಎಸ್ಎಸ್ ತತ್ವದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ, ಬಡವರಿಗೆ ಜಾಗ ಇಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ದಲಿತ ಸಮುದಾಯದ ಗೂಳಿಹಟ್ಟಿ ಅವರಿಗೆ…
ಶಿವಮೊಗ್ಗ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ. 10 ಸಾವಿರ ಕೋಟಿ ಕೊಡುತ್ತೇನೆ ಎಂದು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. ಶಿವಮೊಗ್ಗದಲ್ಲಿಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಪರ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಅವಕಾಶ ಆಗುತ್ತದೆ. ಈ ರೀತಿಯ ಮಾತುಗಳನ್ನು ಮುಖ್ಯಮಂತ್ರಿ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧಿಪತಿಗಳು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಏನಾದರೂ ಮಾತನಾಡಬೇಕಾದರೆ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂಬುದು ನನ್ನ ಸಲಹೆ ಎಂದರು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೆಸರಿನಲ್ಲಿ ನೂರಕ್ಕೆ ನೂರು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ. ಓಲೈಕೆ ರಾಜಕಾರಣದಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಅದು ಸಾಧ್ಯವಿಲ್ಲ. ಬಿಜೆಪಿ ಪರವಾದ, ಮೋದಿ ಪರವಾದ ವಾತಾವರಣದಿಂದ ನಾವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಲ್ಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ, ಡಿಸೆಂಬರ್ 06 :ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದು ಗುಂಡಿ ಮುಚ್ಚಲಾಗಲಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಬ್ರಾಂಡ್ ಬೆಂಗಳೂರು ಕುರಿತಂತೆ ಬಿಜೆಪಿ ಸರಿಯಾಗಿ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ ನಾವು ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು ಉಚ್ಚ ನ್ಯಾಯಾಲಯ ಅವರಿಗೆ ಗುಂಡಿ ಮುಚ್ಚಿಲ್ಲ ಎಂದು ಛೀಮಾರಿ ಹಾಕಿದೆ. ಅವರಿಗೆ ಬೆಂಗಳೂರಿನ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದರು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಉತ್ತರ ಕರ್ನಾಟಕದಲ್ಲಿ ಸದನ ನಡೆಯುತ್ತಿದ್ದು ಸಚಿವರು ತೆಲಂಗಾಣದಲ್ಲಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ.ಮುಖ್ಯ ಮಂತ್ರಿಗಳು ಎಲ್ಲರೂ ಅಲ್ಲಿಲ್ಲ, ಒಂದಿಬ್ಬರು ಹೋಗಿದ್ದಾರೆ ರಾಜಕೀಯವನ್ನೂ ಮಾಡಬೇಕಲ್ಲ ಎಂದರು. ಜಮೀರ್ ಅಹ್ಮದ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರು ಬರಬೇಕಷ್ಟೇ. ಬಹುತೇಕ ಜನ ವಾಪಸ್ಸು ಬಂದಿದ್ದಾರೆ ಎಂದರು. ಅಭಿವೃದ್ಧಿ ಭಾಷಣವಿಲ್ಲ ಸಿದ್ದರಾಮಯ್ಯ ಕೇವಲ ಓಲೈಕೆ ಭಾಷಣ ಮಾಡುತ್ತಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ…
ಹುಬ್ಬಳ್ಳಿ: ಚಲಿಸುತ್ತಿದ್ದ BRTS ಚಿಗರಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಂಡು ಬಂದಿದ್ದು, ಕೂಡಲೆ ನೋಡಿದ ಚಾಲಕನ ಸಮಯಪ್ರಜ್ಞೆಯಿಂದ ಚಿಗರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳದಿದೆ. ಹೌದು,,, ಹುಬ್ಬಳ್ಳಿಯ ಎ.ಪಿ.ಎಂ.ಸಿ. ನಿಲುಗಡೆ ಬಿಆರ್‌ಟಿಎಸ್ ಬಸ್ಸಿನಲ್ಲಿ ಬೆಂಕಿ ಕಂಡು ಬಂದಿರುವ ಘಟನೆ ನಡೆದಿದೆ. ಬಸ್ ನಂ. KA-25 / F-3472. ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಬಸ್ ಇದಾಗಿದ್ದು, ಬಸ್ ಚಾಲಕ ಕೂಡಲೆ ಪ್ರಯಾಣಿಕರನ್ನು ಇಳಿಸಿ, ಬಸ್ ಬದಿಗೆ ಹಚ್ಚಿ ಬೆಂಕಿ ನಂಧಿಸಲು ಯತ್ನಿಸಿದ್ದಾರೆ.
ಹುಬ್ಬಳ್ಳಿ: ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ, ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂತಹ ವಿಚಾರ ದೊಡ್ಡದು ಮಾಡುವಂತದ್ದಲ್ಲವೇ ಅಲ್ಲಾ. ನನಗೆ ಅರ್ಥನೇ ಆಗ್ತೀಲ್ಲ. ಅವರು ಹೇಳಿದ ಹೇಳಿಕೆ ನಾನು ನೋಡಿದ್ದೀನಿ. ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಹೇಳಿದ್ದಾರೆ. ಬೇರೆ ಬೇರೆ ಸಮಾಜಕ್ಕೆ ಹೋದಾಗ ಅವರವರ ಹಿತರಕ್ಷಣೆ ಮಾಡುತ್ತೀನಿ ಅಂತ ಹೇಳೋದು ಸಹಜ. ಇಲ್ಲ ನಿಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಅಂತ ಹೇಳ್ತಾರೇನು? ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಅದನ್ನು ಬಿಟ್ಟು ಬಿಡಿ, ಸಿದ್ದರಾಮಯ್ಯ ಅವರೇ ಸಮರ್ಥರಿದ್ದಾರೆ. ಅವರೇ ಅದರಲ್ಲಿ ಉತ್ತರ ಕೊಡ್ತಾರೆ ಎಂದರು. ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರ, ಅದರ ಬಗ್ಗೆ ಚರ್ಚೆ ಆಗಲೇಬೇಕು. ವಿರೋಧ ಪಕ್ಷದವರ ಮೇಲೆ ಕೂಡ ಸಾಕಷ್ಟು ಜವಾಬ್ದಾರಿ ಇದೆ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ದ್ವನಿ ಎತ್ತಿದರೆ ಖಂಡಿತವಾಗಿ…
ದೊಡ್ಡಬಳ್ಳಾಪುರ : ಉಸಿರಾಟದ ಸಮಸ್ಯೆಯಿಂದ 1 ವರ್ಷ ಹೆಣ್ಣು ಮಗು ಸಾವನ್ನಪ್ಪಿದೆ, ಸತ್ತ ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂದು ತಿಳಿಯದೆ, ಮಗುವಿನ ಶವವನ್ನ ಚರಂಡಿಯಲ್ಲಿ ಇಟ್ಟು ಹೆತ್ತವರು ಪರಾರಿಯಾಗಿದ್ರು. ಮಗುವಿನ ಕೈಗೆ ಕಟ್ಟಿದ ತಾಯತದ ಸಹಾಯದಿಂದ ಹೆತ್ತವರನ್ನ ಪತ್ತೆ ಮಾಡಲಾಗಿದ್ದು,ನಂತರ ಮಗುವಿನ ಶವ ಸಂಸ್ಕಾರ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಸ್ತೆ ಬದಿಯ ಚರಂಡಿಯಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿತ್ತು, ಆದರೆ ಮೃತ ಮಗುವಿನ ವಾರಸ್ಥಾರರು ಯಾರೆಂದು ತಿಳಿದಿರಲಿಲ್ಲ, ಅನಾರೋಗ್ಯದಿಂದ ಸಾವನ್ನಪಿದ ಮಗುವನ್ನ ಇಟ್ಟು ಹೋಗಿದ್ದಾರೆಂದು ತಿಳಿಯಲಾಗಿತ್ತು, ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆಯನ್ನ ನಡೆಸುತ್ತಾರೆ, ಉತ್ತರ ಭಾರತೀಯರ ಮಗುವೆಂದು ಪ್ರಾರಂಭದಲ್ಲಿ ಮಾಹಿತಿ ತಿಳಿಯುತ್ತದೆ, ಜೊತೆಗೆ ಮಗುವಿನ ಕೈಯಲ್ಲಿ ಸಿಕ್ಕ ತಾಯತ ಮೃತ ಮಗು ಉತ್ತರ ಭಾರತೀಯರ ಮಗುವೆಂದು ಖಚಿತವಾಗಿತು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಉತ್ತರ ಭಾರತದಿಂದ ಬಂದ ಕಾರ್ಮಿಕರು ಇದ್ದಾರೆ, ಇದೇ ಸುಳಿವಿನ ಮೇಲೆ ಪೊಲೀಸರು ಮಗುವಿನ ಪೋಟೋ ಇಟ್ಕೊಂಡ್…
ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಮಾಂಟೆಸ್ಸರಿ ವಿಭಾಗದ ಪ್ರೀ ನರ್ಸರಿ, ಎಲ್ ಕೆಜಿ, ಯುಕೆಜಿ, ಪೋಷಕರಿಗೆ ಬೆಳದಿಂಗಳ ಕೈತುತ್ತು(ಮೂನ್ ಲೈಟ್ ಡಿನ್ನರ್) ಕಾರ್ಯಕ್ರಮವನ್ನ ಶನಿವಾರ ಸಂಜೆ ಏರ್ಪಡಿಸಲಾಗಿತ್ತು. ಪೋಷಕರಿಗೆ ವರ್ಣರಂಜಿತ ರಂಗೋಲಿ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಇದರ ಜೊತೆ ಬೆಂಕಿ ಇಲ್ಲದೆ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಪೋಷಕರು ಭಾಗವಹಿಸಿ ವಿಧವಿಧವಾದ ರುಚಿಕರ, ಆರೋಗ್ಯಕರವಾದ ತಿಂಡಿ ತಿನಿಸುಗಳನ್ನ ತಯಾರಿಸಿದರು. ಸಂಜೆಯ ವೇಳೆಗೆ ಮಗುವಿನ ಜಪತೆ ಅಜ್ಜ ಅಜ್ಜಿಯರ ರ್ಯಾಂಪ್ ವಾಕ್, ನೃತ್ಯ ಬಹಳ ಎಲ್ಲರ ಗಮನ ಸೆಳೆಯುವಂತೆ ನೆರವೇರಿತು. ನಂತರ ವಿದ್ಯಾರ್ಥಿಯ ತಂದೆ-ತಾಯಿ ಜೊತೆಗೂಡಿ ನೃತ್ಯ ಪ್ರದರ್ಶನ ಬಹಳ ಅದ್ಧೂರಿಯಾಗಿ ನಡೆಯಿತು. ಇನ್ನೂ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ಮೂನ್ ಲೈಟ್ ಡಿನ್ನರ್ ಕಾರ್ಯಕ್ರಮ. ತಾಯಿ ತನ್ನ ಮಗು ಊಟ ಮಾಡಲು ಹಠ ಮಾಡಿದಾಗ ಬೆಳದಿಂಗಳಲ್ಲಿ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಾಳೆ. ಅದರ ನೆನಪಿಗಾಗಿ ಇಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ…
ಬೀದರ್ (ಡಿ.06): ವಿಶ್ವದಲ್ಲೇ ಎಲ್ಲಾ ಸಂವಿಧಾನಗಳಿಗಿಂತ ಶ್ರೇಷ್ಠ ಸಂವಿಧಾನ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ರಚಿಸಿದ ಹಿಂದುಸ್ತಾನ್ (ಭಾರತ) ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಸಂವಿಧಾನ ಶಿಲ್ಪಿ, ಮಹಾನ್ ಚೇತನ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೀದರ್ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಎಲ್ಲರೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಿಕೊಂಡು ಹೋಗಬೇಕಾಗಿದೆ. ಬಾಬಾ ಸಾಹೇಬರು ಆ ಕಾಲದಲ್ಲಿ ಓದಿ, ಬರೆದು ವಿದೇಶಗಳಿಗೆ ಹೋಗಿ ಪದವಿ ಗಳಿಸಿ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಅವರೇ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲೇ ನಾವೆಲ್ಲರೂ ಸಾಗಬೇಕಾಗಿದೆ ಎಂದು…
ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ (Nigeria) ಸೇನೆಯ ಡ್ರೋನ್ ದಾಳಿ ಗುರಿ ತಪ್ಪಿ, 85 ಮಂದಿ ನಾಗರಿಕರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಕಡುನಾ ರಾಜ್ಯದ ತುಡುನ್ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಗುರಿ ತಪ್ಪಿದ್ದು, ನಾಗರಿಕರ ಸಾವಿಗೆ ಕಾರಣವಾಗಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ ದಾಳಿಯಲ್ಲಿ ಕನಿಷ್ಠ 66 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದಾರೆ. ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು…