ಬೆಳಗಾವಿ:- ಇಬ್ಬರು ಮಹಾನುಭಾವರು ಸೇರಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಹಾಳುಗೆಡವಿದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಮಟ್ಟದ ಇಬ್ಬರು ಸಿಂಗ್‌ಗಳು, ಮಹಾನುಭಾವರು ಸೇರಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಹಾಳುಗೆಡವಿದರು ಎಂದರು. ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು. ‘ಪಕ್ಷ ಹಾಳು ಮಾಡಿದವರು ಯಾರು ಎಂಬ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ. ದೆಹಲಿಗೆ ಬರಲು ಕರೆ ಮಾಡುವುದಾಗಿ ಅವರು ಹೇಳಿದ್ದಾರೆ. ಕರೆ ಬಂದ ಕೂಡಲೇ ಹೋಗಿ ಎಲ್ಲವನ್ನೂ ವಿವರಿಸುತ್ತೇನೆ. ರಮೇಶ ಜಾರಕಿಹೊಳಿ ಅವರಿಗೆ ಕರೆ ಬರಬಹುದು. ಬಂದರೆ ಒಟ್ಟಿಗೆ ಹೋಗುತ್ತೇವೆ’ ಎಂದರು. ಅರವಿಂದ ಬೆಲ್ಲದ ಅವರನ್ನು ವಿರೋಧ ಪಕ್ಷದ ಉಪ ನಾಯಕರಾಗಿ ಮಾಡುತ್ತಾರಂತಲ್ಲ’ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ತೀರ್ಮಾನಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಪ್ರತಿಪಕ್ಷ ನಾಯಕರೇ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಉಪ ನಾಯಕನಿಗೆ ಏನು ಕೆಲಸ? ಉಪ ಸಭಾಧ್ಯಕ್ಷರ ಸ್ಥಾನವಿದ್ದಂತೆ. ಸಭಾಧ್ಯಕ್ಷರು ತಮ್ಮ ಜಾಗದಲ್ಲಿ ಕೂರಲು ಅವರಿಗೆ ಅವಕಾಶವನ್ನೇ…
Author: AIN Author
ಬೆಂಗಳೂರು:- ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟಿ ಕೋಟಿ ವಂಚಿಸಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಚೈತ್ರಾ ಬಿಡುಗಡೆ ಆಗಿದ್ದಾರೆ. ಚೈತ್ರಾ ಅವರಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಡಿಸೆಂಬರ್ 4ರಂದು ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಐದು ಕೋಟಿ ರೂ. ಹಣ ಪಡೆದು ಚೈತ್ರಾ ವಂಚಿಸಿದ್ದರು. ಈ ಬಗ್ಗೆ ಉದ್ಯಮಿ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಬಿ ಪೊಲೀಸರು ಪ್ರಕರಣದ ಆರೋಪಿಗಳಾದ ಹಿಂದೂಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಹಾಗೂ ಶ್ರೀಕಾಂತ್ ಅವರನ್ನು ಸೆಪ್ಟೆಂಬರ್ 13 ರಂದು ಬಂಧಿಸಿದ್ದರು.
ಮದ್ದೂರು:- ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಮೋದಿ ಕೊಟ್ಟ ಹಣವೇ ಕಾರಣ ಎಂದು ಶಾಸಕ ಕೆ.ಎಂ.ಉದಯ್ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಘಡ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಪ್ರಧಾನಿ ಮೋದಿ ಕೊಟ್ಟ ಹಣವೇ ಕಾರಣ ಎಂದು ಶಾಸಕ ಕೆ.ಎಂ.ಉದಯ್ ಆರೋಪಿಸಿದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ಕೈ ದುಡ್ಡು ಕಾರಣ ಎನ್ನುವುದು ಕುಮಾರಸ್ವಾಮಿ ಯಾವುದೇ ದಾಖಲೆ ನೀಡಿಲ್ಲ. ನಾವೂ ಕೂಡ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ಮೋದಿ ಕಳುಹಿಸಿದ ದುಡ್ಡು ಕಾರಣ ಎಂದು ಹೇಳುತ್ತೇವೆಂದು ದೂಷಿಸಿದರು. ಕರ್ನಾಟಕದಲ್ಲಿ ಜನಪರ ಯೋಜನೆಯನ್ನು ಹತ್ತಿರದಿಂದ ಗಮನಿಸಿದ ತೆಲಂಗಾಣ ಮತದಾರರು ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ ಬಡವರ ಪರವಾಗಿ ಆಡಳಿತ ನಡೆಸುತ್ತದೆ ಎನ್ನುವುದನ್ನು ಅರಿತ ಆ ರಾಜ್ಯದ ಮತದಾರರು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಅಲ್ಪಸಂಖ್ಯಾತರಿಂದ ಪಕ್ಷದ ಬಲವರ್ಧನೆಗೆ ಇನ್ನಷ್ಟು ಶಕ್ತಿ ಬಂದಿದೆ. ಮುಂದಿನ ಲೋಕಸಭಾ ಚುನಾವಣಎ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ…
ಬೆಂಗಳೂರು:- ಜಾತಿ ತಾರತಮ್ಯ ಆರೋಪಕ್ಕೆ ಸಂಬಂಧಿಸಿದಂತೆ ಗೂಳಿಹಟ್ಟಿ ಶೇಖರ್ ಆರೋಪದ ಬಗ್ಗೆ ಆರ್‌ಎಸ್‌ಎಸ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಆರ್‌ಎಸ್‌ಎಸ್ ಕಚೇರಿ ಬಗ್ಗೆ ಆಡಿಯೊ ಹೇಳಿಕೆಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿ ಹಾಗೂ ಸ್ಮಾರಕದ ಕಟ್ಟಡಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ತಿಳಿಸಿದ್ದಾರೆ. ನಾಗ್ಪುರದ ಆರ್‌ಎಸ್‌ಎಸ್ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಗೂಳಿಹಟ್ಟಿ ಶೇಖರ್, ಜಾತಿ ಕಾರಣಕ್ಕೆ ಹೆಡಗೇವಾರ್ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಿಸಲಾಗಿತ್ತು ಎಂದು ಆರೋಪಿಸಿದ್ದರು. ‘ನಾಗ್ಪುರದಲ್ಲಿ ಸಂಘದ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ, ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರ ಹಾಗೂ ಹುರುಳಿಲ್ಲದ ಆರೋಪ. ಆರ್‌ಎಸ್‌ಎಸ್ ಕಚೇರಿ, ಸ್ಮಾರಕ ಕಟ್ಟಡಗಳಿಗೆ ಎಲ್ಲ ಜಾತಿ, ವರ್ಗದ ಸಾವಿರಾರು ಜನ…
ಅಥಣಿ : ತಾಲೂಕಿನ ಅನಂತಪುರ ಗ್ರಾಮದಲ್ಲಿ ಬೆಳೆದ ೨೫ ಹೇಕ್ಟರ್ ಗು ಅಧಿಕ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಹಾನಿಯಾಗಿದೆ ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ದ್ರಾಕ್ಷಿ ಬೆಳೆ ಕೈಗೇಟುಕದ ಕಾರಣ ರೈತರು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಳು ರೋಗಬಾಧೆಗೆ ತುತ್ತಾಗಿ ದ್ರಾಕ್ಷಿ ಹಣ್ಣಿನಲ್ಲಿ ನೀರು ತುಂಬಿ ಒಡೆದು ನಾಶಗೊಳ್ಳುತ್ತಿದೆ. ನೀರಿಲ್ಲದೆ ಹತ್ತು ಎಕರೆ ಕಬ್ಬು ಒಣಗಿಸಿ ಸುಮಾರು ಆರು ಲಕ್ಷ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದೆ ಕಟಾವಿನ ಹಂತಕ್ಕೆ ಬಂದ ದ್ರಾಕ್ಷಿ ಬೆಳೆ ಈ ರೀತಿ ನಾಶವಾಗಿದೆ ಮುಂದೇನು ಅಂತಾ ತೋಚದಾಗಿದೆ ಎಂದು ರೈತರು ತಮ್ಮ ಅಲಳನ್ನ ತೋಡಿಕೊಂಡಿದ್ದಾರೆ.
ತಮಿಳುನಾಡು:- ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು – ಬಾಗಲೂರು ರಸ್ತೆಯ ಜೀಮಂಗಲಂ ಬಳಿ ಸರ್ಕಾರಿ ಬಸ್ ಹಾಗೂ ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡು ಬಸ್‌ಗಳ ಮುಂಭಾಗ ಛಿದ್ರಗೊಂಡಿದೆ. ಶಾಲಾ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದರೆ, ಸರ್ಕಾರಿ ಬಸ್‌ನಲ್ಲಿದ್ದ ಓರ್ವ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಬಸ್‌ನಲ್ಲಿ ಸಿಲುಕಿಕೊಂಡಿರುವ ಗಾಯಾಳುಗಳನ್ನು ಸ್ಥಳೀಯರು ಹೊರತೆಗೆಯುತ್ತಿದ್ದಾರೆ.
ಬೆಂಗಳೂರು:- ಮತದಾರರಿಗೆ ಉಚಿತ ಗ್ಯಾರಂಟಿ ಅಮಿಷ ನಿರ್ಬಂಧ ಕೋರಿ ಬೆಂಗಳೂರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಆಗಿದೆ. ರವಿ ಮುನಿಸ್ವಾಮಿ ಸೇರಿ ಮತ್ತಿತರರಿಂದ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಿಂದ ಮತದಾರರಿಗೆ ಅಮಿಷ ಒಡ್ಡಲಾಗುತ್ತಿದೆ. ಆಮಿಷ ಒಡ್ಡುವ ಅಭ್ಯರ್ಥಿಗಳ, ಪಕ್ಷಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜನರ ತೆರಿಗೆ ಹಣ ಅಧಿಕಾರದ ಲಾಲಾಸೆಗೆ ಬಳಸುತ್ತಿದ್ದಾರೆ. ದೇಶದ ಅಭಿವೃದ್ಧಿಗೆಗೆ ಇರುವ ಬೊಕ್ಕಸವನ್ನು ಅಮಿಷಕ್ಕೆ ಬಳಸಲಾಗುತ್ತಿದೆ. ಮತದಾರರಿಗೆ ಪ್ರಲೋಭನೆ ಒಡ್ಡಿ ಮತ ಕೇಳುವುದು ಸಂವಿಧಾನ ಬಾಹಿರ. ಹೀಗಾಗಿ ಸೂಕ್ತ ಮಾರ್ಗಸೂಚಿ ಹೊರಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡುವಂತೆ ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು:- ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಕೇವಲ 1,500 ರೂಪಾಯಿ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಜರುಗಿದೆ. ಸ್ನೇಹಿತನಿಗೆ ಹಣ ಕೊಡಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಾರ್ವೊಂದರಲ್ಲಿ ಗೋಪಾಲ್, ಶಶಿ ಹಾಗೂ ಕರಿಗೌಡ ಎಂಬುವವರು ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ ಅದೇ ಬಾರ್ಗೆ ಪ್ರದೀಪ್ ಎಂಬುವವರ ಜೊತೆ ಆರೋಪಿ ಗಿರೀಶ್ ಬಂದಿದ್ದಾರೆ. ಕರಿಗೌಡಗೆ 1,500 ರೂಪಾಯಿಯನ್ನು ಆರೋಪಿ ಗಿರೀಶ್ಗೆ ಕೊಡಬೇಕಿತ್ತು. ಅದರಂತೆ ಆತ ತನ್ನ ಹಣ ಕೇಳಿದಾಗ, ಗಿರೀಶ್ ಅವಾಜ್ ಹಾಕಿದ್ದ. ಬಳಿಕ ಮಧ್ಯಪ್ರವೇಶಿಸಿದ ಗೋಪಾಲ್ ಎಂಬಾತ, ಗಿರೀಶ್ಗೆ ಹೊಡೆದು ಹಣ ಕೊಡಿಸಿದ್ದ. ಇದಾದ ಬಳಿಕ ಗಿರೀಶ್, ಶಶಿಗೆ ಪೋನ್ ಮಾಡಿ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದ. ಆಮೇಲೆ ಗೋಪಾಲ್, ಕರೆಗೌಡ ಹಾಗೂ ಶಶಿಧರ್, ಗಿರೀಶ್ ಮನೆಗೆ ಹೋಗಿದ್ದರು. ಗಿರೀಶ್ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿ ಬಳಿಯಲ್ಲಿ ಮೂವರು ಹೇಳಿದ್ದರು. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಬೆನ್ನ ಹಿಂದೆ ಇಟ್ಟುಕೊಂಡಿದ್ದ ಗಿರೀಶ್, ಗೋಪಾಲ್ ಎದೆಗೆ ಚಾಕುವಿನಿಂದ ಚುಚ್ಚಿ…
ಬೆಂಗಳೂರು:- ಗೂಳಿಹಟ್ಟಿ ಶೇಖರ್ ಆಡಿಯೋ ವಿಚಾರವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸಂಘಟನೆ ಕುರಿತಾಗಿ ಗೂಳಿಹಟ್ಟಿ ಶೇಖರ್ ಮಾತಾಡಿರುವ ಹೇಳಿಕೆ ವೈರಲ್ ಆಗಿರುವುದು ಗಮನಸಿದ್ದೇನೆ. ಗೂಳಿಹಟ್ಟಿ ಶೇಖರ್ ಯಾವ ಮಾನಸಿಕ ಸ್ಥಿತಿಯಲ್ಲಿ..? ಯಾರಿಂದ ಪ್ರೇರಣೆಗೆ ಒಳಗಾಗಿ. ಯಾವ ಕಾಣದ ಕೈಳಗ ಒತ್ತಡಕ್ಕೆ ಒಳಗಾಗಿ ಹೇಳಿದ್ದಾರೆ ಗೊತ್ತಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿದ್ದು ತಪ್ಪು. ನಾನು ರಾಜಕೀಯಕ್ಕೆ ಬಂದಮೇಲೆ ರಾಷ್ಟ್ರೀಯ ಸಂಘಪರಿವಾರವನ್ನು ಹತ್ತಿರದಿಂದ ನೋಡಿದ್ದೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಲ್ಲರನ್ನೂ ಜೋಡಿಸುವುದು, ಸಂಪೂರ್ಣ ಹಿಂದೂ ಸಂಘಟನೆ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಸಂಘ ಭಾರತ ಮಾತೆಯ ಪೋಟೋ ಇಟ್ಟು ಪೂಜೆ ಮಾಡುತ್ತಾರೆ. ಯಾರಾದರೂ ಬಂದಾಗ ಜಾತಿ ಕೇಳುವುದು, ಇಂತಹ ಆಚರಣೆ ನನ್ನ ಅನುಭವಕ್ಕೆ ಬಂದಿಲ್ಲ. ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ದೇಶ ಕಟ್ಟಬೇಕು ಎಂದು ನಿರಂತರ ಹೋರಾಟ ಮಾಡುತ್ತಿರುವ ಸಂಘಟನೆ. ಸ್ವಯಂ ಸೇವಕರು ಯಾವುದೇ ಸನ್ಯಾಸಿಗೂ ಕಡಿಮೆ ಇಲ್ಲದೇ ಎಲ್ಲವನ್ನೂ ತ್ಯಾಗ ಮಾಡಿ…
ತುಮಕೂರು:- ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೆಲ ನಾಯಿ, ನರಿಗಳಿಂದ ಸಮಸ್ಯೆಯಾಗಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದರು. ಕೆಲವು ಸಂದರ್ಭಗಳಲ್ಲಿ ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ. ಮೇಲೆ ಆಕಾಶವಿದೆ ಎಂದು ತಿಳಿಯದೆ ಅತ್ತ ಕಡೆಗೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರೆಸಿಕೊಂಡು ಮುಂದೆ ಹೋಗುವ ಕೆಲಸ ಮಾಡುತ್ತೇನೆ’ ಎಂದರು. ‘ಬಿಜೆಪಿ ವರಿಷ್ಠರ ಭೇಟಿಗೆ ನ. 30ರಂದು ಸಮಯ ನೀಡಿದ್ದರು. ಅಂದು ಹೋಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಮುಂದೆ ಏನಾಗುವುದೊ ಗೊತ್ತಿಲ್ಲ. ಆಗಿರುವ ತಪ್ಪುಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸಲಿದೆ ಎಂಬುದು ಗೊತ್ತಿಲ್ಲ. ಕೆಲ ದಿನಗಳು ನೋಡುತ್ತೇನೆ. ಎಲ್ಲವನ್ನೂ ಜನರ ಮುಂದೆ ಹೇಳುತ್ತೇನೆ. ನಂತರ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.