Author: AIN Author

ಬೆಂಗಳೂರು:- ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇಂದು ಅವರ ಕುಟುಂಬಕ್ಕೆ ಪರಿಹಾರದ ಚೆಕ್​ ಹಸ್ತಾಂತರಿಸಲಾಗುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪ್ರಾಂಜಲ್‌ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಾಗ ಅದಕ್ಕೆ ನಮನ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರಿಹಾರ ಧನ ಘೋಷಣೆ ಮಾಡಿದ್ದರು. ಸದ್ಯ ಆದೇಶ ಹೊರಡಿಸಲಾಗಿದ್ದು, ಇಂದು ಪರಿಹಾರದ ಚೆಕ್​ ಹಸ್ತಾಂತರಿಸಲಾಗುತ್ತದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್​ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ,…

Read More

ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಆತಿಥ್ಯದಲ್ಲಿ ಆಯೋಜನೆಗೊಂಡಿರುವ 2024ರ ಟಿ20-ಐ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂರ್ಜೇಕರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಕ್ರಿಕೆಟ್ ದಿಗ್ಗಜರಿಗೆ ಚುಟುಕು ವಿಶ್ವಕಪ್ ಆಡುವ ಅರ್ಹತೆ ಇದೆ ಎಂದು ಬಿಸಿಸಿಐ ಸೆಲೆಕ್ಟರ್ಸ್ ಗೆ ಅನ್ನಿಸಿದರೆ ಆಯ್ಕೆ ಮಾಡಲಿ ಎಂದು ಹೇಳಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಅತ್ಯಂತ ಹಿರಿಯ ಆಟಗಾರರಾಗಿದ್ದು, ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ಲೋಕದ ಈ ಇಬ್ಬರು ದಿಗ್ಗಜರು ಟೀಮ್ ಇಂಡಿಯಾವನ್ನು ಹಲವು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿದ್ದೇವೆ. ಪ್ರಸಕ್ತ ಸಾಕಷ್ಟು ಯಂಗ್ ಪ್ಲೇಯರ್ ಗಳಿಗಿಂತ ತಾನೇ ಉತ್ತಮ ಬ್ಯಾಟರ್ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ದಾರೆ. ರೋಹಿತ್ ಶರ್ಮಾ…

Read More

ಇಷ್ಟು ದಿನ ತೆರೆಮೆರೆಯಲ್ಲಿ ತಮ್ಮ ಹೊಸ ಸಿನಿಮಾದ ಕೆಲಸ ಮಾಡುತ್ತಿದ್ದ ಯಶ್, ನಿನ್ನೆಯಿಂದ ಅಭಿಮಾನಿಗಳಿಗೆ ದಿನಕ್ಕೊಂದು ಹೊಸ ಸುದ್ದಿ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದವರು, ಇಂದು ತಮ್ಮ ಹೊಸ ಸಿನಿಮಾದ ಟೈಟಲ್ (Title) ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 8ರಂದು ಮುಂಜಾನೆ 9.55ಕ್ಕೆ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವುದಾ ತಿಳಿಸಿದ್ದಾರೆ. ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್‘ ಎಂಬ ಬರಹದ ಫೋಟೋವನ್ನ ನಿನ್ನೆ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದರು. ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್ 19 (Yash 19) ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ ‘ಯಶ್ 19′ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ.

Read More

ಶಿವಮೊಗ್ಗ:- ಜಿಲ್ಲೆ ಎನ್.ಆರ್​.ಪುರ ತಾಲೂಕಿನ ಹಾಳ್​ ಕರಗುಂದ ಗ್ರಾಮದಲ್ಲಿ ನಾಯಿ ಬೊಗಳುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಪಕ್ಕದ ಮನೆ ವ್ಯಕ್ತಿ ಮೇಲೆ ದಂಪತಿ ಆಯಸಿಡ್​ ಎರಚಿರುವಂತಹ ಘಟನೆ ಜರುಗಿದೆ. ಜೇಮ್ಸ್​, ಮರಿಯಮ್ಮರಿಂದ ಸುಂದರ್ ರಾಜ್ ಮೇಲೆ ಆಯಸಿಡ್​​ ದಾಳಿ ಮಾಡಿದ್ದು, ಸುಂದರ್​ರಾಜ್ ಕಣ್ಣು, ಮುಖಕ್ಕೆ ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರ ಸಾಕು ನಾಯಿ ಬೊಗಳಿದ್ದಕ್ಕೆ ಗಾಯಾಳು ಸುಂದರ್​ ರಾಜ್ ಬೈಯ್ದಿದ್ದ. ನಾಯಿ ಹೆಸರಿನಲ್ಲಿ ಜೇಮ್ಸ್​, ಮರಿಯಮ್ಮಗೆ ಬೈಯ್ಯುತ್ತಿದ್ದ ಎಂದು ಆರೋಪ ಮಾಡಲಾಗಿದೆ. ಸಿಟ್ಟಿಗೆದ್ದು ಸುಂದರಾಜ್​ ಮೇಲೆ ದಂಪತಿ ಆಯಸಿಡ್​ ದಾಳಿ ಮಾಡಿದ್ದಾರೆ. ಸದ್ಯ ದಂಪತಿ ವಿರುದ್ಧ ಎನ್​.ಆರ್​.ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಬೆಂಗಳೂರು:- ನೆಲಮಂಗಲದವರೆಗೆ ಮೆಟ್ರೋ ಸಂರ್ಪಕ ವಿಸ್ತರಿಸುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೆಲಮಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಬೇಡಿಕೆ ಇದೆ. ನೆಲಮಂಗಲ ಸುತ್ತಮುತ್ತಲ ಪ್ರದೇಶಗಳ ಕೆರೆಗಳನ್ನು ತುಂಬುವ ವೃಷಭಾವತಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಮೆಟ್ರೋ ಸಂಪರ್ಕವನ್ನು ನೆಲಮಂಗಲದವರೆಗೂ ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸಲಿದೆ. ನೆಲಮಂಗಲದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಿನ ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿಯಾಗಿ ಎಲ್ಲ ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವುದು ನಮ್ಮ ಗುರಿಯಾಗಿದೆ. ಬಡವರಿಗೆ ಅಕ್ಕಿ, ಉಚಿತ ವಿದ್ಯುತ್, ಶಕ್ತಿ ಯೋಜನೆ,ಗೃಹಲಕ್ಷ್ಮಿ ಯೋಜನೆಗಳು ಯಾವುದೇ ಜಾತಿಧರ್ಮಕ್ಕೆ ಸೀಮಿತವಾಗಿಲ್ಲ. 1.14 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ಬರುವ ದುಡ್ಡು, ಅವರ ಇತರೆ ಅವಶ್ಯಕತೆಗಳನ್ನು ಪೂರೈಸಿ, ಆರ್ಥಿಕತೆ…

Read More

ಬೆಂಗಳೂರು:- ವಕೀಲರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ. ಪೊಲೀಸ್‌ ಅಧಿಕಾರಿಗೆ ಜೀವ ಬೆದರಿಕೆ ಒಡ್ಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ವಕೀಲರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಇದೇ ವೇಳೆ ವಕೀಲ ಎನ್‌.ಟಿ.ಪ್ರೀತಮ್‌ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರತಿದೂರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಟೌನ್‌ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್‌ ರೆಡ್ಡಿ ಮತ್ತು ಕೆ.ಎನ್‌.ಫಣೀಂದ್ರ ವಾದ ಮಂಡಿಸಿದರು. ಕರ್ನಾಟಕ ವಕೀಲರ ಪರಿಷತ್‌ ಪರವಾಗಿ ಹಿರಿಯ ವಕೀಲ ಎಸ್‌. ಬಸವರಾಜು ಹಾಜರಿದ್ದರು.

Read More

ಅಮೆರಿಕದ ಆರ್ಥಿಕತೆ ಕಳೆ ಹೆಚ್ಚತೊಡಗುತ್ತಿದ್ದಂತೆಯೇ ಚಿನ್ನ ಮತ್ತು ಷೇರುಗಳಿಗೆ ಬೇಡಿಕೆ ಹೆಚ್ಚಿದೆ. ಚಿನ್ನದ ಬೆಲೆ ತೀವ್ರಗತಿಯಲ್ಲಿ ಮೇಲೇರುತ್ತಿದೆ. ಚಿನ್ನದ ಬೆಲೆ ಗ್ರಾಮ್​ಗೆ 40 ರೂನಷ್ಟು ಏರಿದೆ. ಕಳೆದ ಕೆಲ ತಿಂಗಳಿಂದ ಚಿನ್ನದ ಬೆಲೆ ಏರಿಕೆ ಕಾಣದ ಮಲೇಷ್ಯಾದಲ್ಲೂ ದಿಢೀರ್ ಬೆಲೆ ಏರಿಕೆ ಆಗಿದೆ. ಸಿಂಗಾಪುರದಲ್ಲಿ ಭಾರತಕ್ಕಿಂತಲೂ ಚಿನ್ನ ದುಬಾರಿ ಆಗಿ ಹೋಗಿದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಭಾರತದ ಮಟ್ಟಕ್ಕೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 64,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,900 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 5ಕ್ಕೆ): 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,850 ರೂ…

Read More

ಚೆನ್ನೈ: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಲಾಡ್ಜ್ ಒಂದರಲ್ಲಿ ಆಕೆಯ ಪ್ರೇಮಿಯೇ ಕೊಲೆಗೈದು ಬಳಿಕ ಮೃತದೇಹದ ಫೋಟೋವನ್ನು ಆಕೆಯ ವಾಟ್ಸಪ್ ಸ್ಟೇಟಸ್‍ಗೆ ಹಾಕಿದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ. ಮೃತದೇಹದ ಫೋಟೋವನ್ನು ಆರೋಪಿ ಆಕೆಯ ಸ್ಟೇಟಸ್‍ಗೆ ಹಾಕುತ್ತಿದ್ದಂತೆ ನೋಡಿದ ಸ್ನೇಹಿತರು ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಲಾಡ್ಜ್‌ನ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಯುವತಿಯನ್ನು ಕೇರಳದ ಕೊಲ್ಲಂನ ಫೌಸಿಯಾ (20) ಎಂದು ಗುರುತಿಸಲಾಗಿದೆ. ಆಶಿಕ್ (20) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಫೌಸಿಯಾ ಕ್ರೋಮ್‍ಪೇಟೆಯ ಕಾಲೇಜೊಂದರಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ನ್ಯೂ ಕಾಲೋನಿಯ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. https://ainlivenews.com/dialysis-problem-not-caused-by-our-government-dinesh-gundurao/ ತನಿಖೆ ವೇಳೆ ಫೌಸಿಯಾ ಹಾಗೂ ಆಶಿಕ್ ಐದು ವರ್ಷಗಳಿಂದ ಸಂಬಂಧ ಹೊಂದಿದ್ದು, ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಇವರಿಗೆ ಅಪ್ರಾಪ್ತ ವಯಸ್ಸಿನಲ್ಲೇ ಮಗು ಜನಿಸಿದ್ದು, ಮಗುವನ್ನು ಚಿಕ್ಕಮಗಳೂರಿನಲ್ಲಿ ದತ್ತು ನೀಡಿದ್ದರು. ಆಶಿಕ್ ಜೊತೆ ಇನ್ನೊಬ್ಬ ಮಹಿಳೆಯ ಫೋಟೋ ಇದ್ದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ…

Read More

ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಮಾಡುವ ಹಾಗೆ ನಾನೂ ಕೂಡ ಇಡ್ಲಿ ಮಾಡಬೇಕು. ಯಾಕೋ ನಾನ್ ಮಾಡೋ ಇಡ್ಲಿ ಕೆಲವೊಮ್ಮೆ ಗಟ್ಟಿ ಆಗಿ ಬಿಡುತ್ತವೆ. ಮಲ್ಲಿಗೆ ಥರ ಬರೋದೇ ಇಲ್ಲ ಎನ್ನುವವರೇ ಹೆಚ್ಚು. ನೀವು ಮಾಡೋ ಇಡ್ಲಿ ಮೃದುವಾಗಿ, ಉದುರುದುರಾಗಿ ಬರಬೇಕಾ? ಹಾಗಾದರೆ ನಾವು ಹೇಳುವಂತೆ ಒಮ್ಮೆ ಮಾಡಿ ನೋಡಿ. ಬೇಕಾಗಿರುವ ಸಾಮಗ್ರಿಗಳು: * ರವೆ – 1 ಕಪ್ * ಮೊಸರು – 1 ಕಪ್ * ರುಚಿಗೆ ತಕ್ಕಷ್ಟು ಉಪ್ಪು * ಅಡುಗೆ ಎಣ್ಣೆ – 2 ಚಮಚ * ಬೇಕಿಂಗ್ ಸೋಡಾ – ಸ್ವಲ್ಪ ಮಾಡುವ ವಿಧಾನ: * ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ರವೆಗೆ ಸೇರಿಸಿ ಅವೆರಡನ್ನು ಹದವಾಗಿ ಮಿಕ್ಸ್ ಮಾಡಿಕೊಳ್ಳಬೇಕು. * ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಬೇಕು. * ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ ಸ್ಟೀಮರ್‌ನಲ್ಲಿ ನೀರನ್ನು…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ಬಂಗಾಳ ಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಕರ್ನಾಟಕದಲ್ಲಿಯೂ ಮಳೆಯಾಗಲಿದ್ದು, ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣದಿಂದ ತೀವ್ರ ಪ್ರಮಾಣದಲ್ಲಿ ಮಳೆಯಾಗಬಹುದಾಗಿದ್ದು, ಬಹುಭಾಗ ಮೋಡ ಕವಿದ ವಾತಾವರಣ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಅಲ್ಪ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ ಹಾಗೂ ಬೀದರ್, ರಾಯಚೂರಿನ ಒಂದೆರಡು ಕಡೆ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹೆಚ್ಚಿರಲಿದ್ದು, ಅಲ್ಪದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಇದೆ ಎಂದು ಹವಾಮಾನ…

Read More