ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಆತಿಥ್ಯದಲ್ಲಿ ಆಯೋಜನೆಗೊಂಡಿರುವ 2024ರ ಟಿ20-ಐ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂರ್ಜೇಕರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಕ್ರಿಕೆಟ್ ದಿಗ್ಗಜರಿಗೆ ಚುಟುಕು ವಿಶ್ವಕಪ್ ಆಡುವ ಅರ್ಹತೆ ಇದೆ ಎಂದು ಬಿಸಿಸಿಐ ಸೆಲೆಕ್ಟರ್ಸ್ ಗೆ ಅನ್ನಿಸಿದರೆ ಆಯ್ಕೆ ಮಾಡಲಿ ಎಂದು ಹೇಳಿದ್ದಾರೆ.
ವೈಟ್ ಬಾಲ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಅತ್ಯಂತ ಹಿರಿಯ ಆಟಗಾರರಾಗಿದ್ದು, ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ಲೋಕದ ಈ ಇಬ್ಬರು ದಿಗ್ಗಜರು ಟೀಮ್ ಇಂಡಿಯಾವನ್ನು ಹಲವು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿದ್ದೇವೆ.
ಪ್ರಸಕ್ತ ಸಾಕಷ್ಟು ಯಂಗ್ ಪ್ಲೇಯರ್ ಗಳಿಗಿಂತ ತಾನೇ ಉತ್ತಮ ಬ್ಯಾಟರ್ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ದಾರೆ. ರೋಹಿತ್ ಶರ್ಮಾ ಟಿ20 ಸ್ವರೂಪದ ನಾಯಕ ಹಾಗೂ ಬ್ಯಾಟರ್ ಆಗಿದ್ದಾರೆ. ಆದರೆ ಇವರಿಗೆ ಆಲ್ ರೌಂಡರ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇಬ್ಬರಲ್ಲೂ ಸಾಕಷ್ಟು ಪೈಪೋಟಿ ಇದ್ದು, ಬಿಸಿಸಿಐ ಸೆಲೆಕ್ಟರ್ಸ್ ಗಳು ಅರ್ಹತೆಯನ್ನು ಮಾನದಂಡವಾಗಿಸಿಕೊಳ್ಳಬೇಕು. ಏಕೆಂದರೆ ಅನುಭವಿ ಆಟಗಾರರ ನಿಲುವು ಮತ್ತು ಅನುಭವದಿಂದ ಏನು ಪ್ರಯೋಜನ ಪಡೆಯಬಹುದು ಎಂಬುದನ್ನು ಗಮನಿಸಿದ್ದೇವೆ,” ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
“ಜೀವನದಲ್ಲಿ ಏನು ರಹಸ್ಯ ಅಡಗಿದೆ ಎಂಬುದನ್ನು ಯಾರು ಬಲ್ಲರು? ನಾಳೆ ಏನು ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ. ನಾವು ಸಾಕಷ್ಟು ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದೇವೆ, ಆದರೆ ಟ್ರೋಫಿ ಗೆಲ್ಲುವಲ್ಲಿ ಎಡವಿದ್ದೇವೆ,” ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ತಿಳಿಸಿದ್ದಾರೆ.