ಬಿಗ್‌ಬಾಸ್ ಮನೆಯ ರಕ್ಕಸ-ಗಂಧರ್ವರ ಟಾಸ್ಕ್‌ನ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿಜಾಹೀರಾಗಿದೆ. ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು. ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ. ರಕ್ಕಸರಾಗಿದ್ದವರು ಗಂಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗಂಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ. ವರ್ತೂರು ತಂಡದ ಸದಸ್ಯರು ನಿನ್ನೆಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ. ಕಾರ್ತಿಕ್ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ. ರಕ್ಕಸರಾಗಿದ್ದಾಗ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತಂಡ ಟಾರ್ಗೆಟ್ ಮಾಡಿಕೊಂಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವಂತಿದೆ. ಬದಲಾದ ಈ ಆಯಾಮದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋತು ಶರಣಾಗುತ್ತಾರೆ?ಬಿಗ್‌ಬಾಸ್ ಕನ್ನಡ 24 ಗಂಟೆ…
Author: AIN Author
ಬೆಂಗಳೂರು: ನಂದಿ ಗಿರಿಧಾಮಕ್ಕೆ ಡಿಸೆಂಬರ್ 11 ರಿಂದ ವಿದ್ಯುತ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವ ಹಿಸುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ವಿದ್ಯುದ್ದೀಕರಣವು ಮಾರ್ಚ್ 2022 ರಲ್ಲಿ ಪೂರ್ಣಗೊಂಡಿತು, ಆದರೆ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಹಲವು ಕಾರಣಗಳಿಂದ ವಿಳಂಬ ಮಾಡಿದೆ. ಪ್ರಸ್ತುತ, 06387/06388 ಕೆಎಸ್ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ ಮತ್ತು 16549/16550 ಕೆಎಸ್ಆರ್ ಬೆಂಗಳೂರು – ಕೋಲಾರ- ಕೆಎಸ್ಆರ್ ಬೆಂಗಳೂರು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ. ನಂದಿ ನಿಲ್ದಾಣದಿಂದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿ.ಮೀ ದೂರವಿದೆ. ಹೆಚ್ಚುವರಿ 15-18 ಕಿಮೀ. ಕ್ರಮಿಸಬೇಕಾಗುತ್ತದೆ. ನಂದಿ ರೈಲು ನಿಲ್ದಾಣದಿಂದ ಈ ಸ್ಥಳಗಳಿಗೆ ಬಹು-ಮಾದರಿ…
ಬೆಂಗಳೂರು: ಭ್ರೂಣ ಲಿಂಗ ಪತ್ತೆ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲಾ ಸ್ಕ್ಯಾನಿಂಗ್ಸೆಂಟರ್ಗಳ ಮಾಹಿತಿ ಸಂಗ್ರಹಕ್ಕೆ ಪ್ಲಾನ್ ಮಾಡಲಾಗಿದೆ. ಡಿಸೆಂಬರ್ 30ರೊಳಗೆ ರಾಜ್ಯದ DHO, CHOಗಳಿಗೆ ಮಾಹಿತಿ ಸಂಗ್ರಹಕ್ಕೆ ಡೆಡ್ಲೈನ್ ನೀಡಲಾಗಿದೆ. 6 ಸಾವಿರ ಸ್ಕ್ಯಾನಿಂಗ್ ಸೆಂಟರ್ಗಳು, https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಕ್ಲಿನಿಕ್ಗಳ ತಪಾಸಣೆಗೆ ಸೂಚನೆ ನೀಡಲಾಗಿದೆ. ಪೋಷಕರು, ತಾಯಿ ಹೊರತು ಯಾರು ಇದ್ದರು ಅನ್ನೋದರ ಬಗ್ಗೆ ಸ್ಕ್ಯಾನಿಂಗ್ ಸೆಂಟರ್ಗಳ ಸಿಸಿಟಿವಿ ಮೂಲಕ ಪರಿಶೀಲನೆಗೂ ಸೂಚಿಸಲಾಗಿದೆ. ಸದ್ಯ ಇಲಾಖೆ ನಿರ್ಧಾರದಿಂದ ಭ್ರೂಣ ಲಿಂಗ ಪತ್ತೆ ಮಾಡಿದವರಿಗೆ ನಡುಕ ಶುರುವಾಗಿದೆ.
ಬೆಂಗಳೂರು:- ಕಳೆದ ಹತ್ತು ವರ್ಷಗಳಿಂದ ಜಾಹೀರಾತು ಶುಲ್ಕ ಕಟ್ಟದೇ ಬಿಬಿಎಂಪಿಗೆ ವಂಚನೆ ಮಾಡಿದ ಜಾಹೀರಾತುಗಳ ಮೇಲೆ ಬಿಬಿಎಂಪಿ ನೋಟಿಸ್ ಲಗತ್ತಿಸುತ್ತಿದೆ. ಜಾಹೀರಾತು ಶುಲ್ಕ ಪಾವತಿಸದ ಮೇಲ್ಸೇತುವೆ, ಸ್ಕೈವಾಕ್, ಬಸ್ ತಂಗುದಾಣಗಳಲ್ಲಿನ ಜಾಹೀರಾತುಗಳ ಮೇಲೆ ಬಿಬಿಎಂಪಿ ನೋಟಿಸ್ ಲಗತ್ತಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ತಂಗುದಾಣ, ಸ್ಕೈವಾಕ್‌ನಲ್ಲಿ ಜಾಹೀರಾತು ಪ್ರದರ್ಶನದ ನೆಲಬಾಡಿಗೆ, ಸೇವಾ ತೆರಿಗೆಗಳು ಸೇರಿದಂತೆ ₹100 ಕೋಟಿಗೂ ಅಧಿಕ ಬಾಕಿ ಇದೆ. ಏಜೆನ್ಸಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿತ್ತು. ಆದರೂ ವಸೂಲಿ ಆಗಿರಲಿಲ್ಲ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಹೀಗಾಗಿ ಬಿಬಿಎಂಪಿ ಕೆಲವೆಡೆ ಜಾಹೀರಾತು ತೆರವು ಕಾರ್ಯಾಚರಣೆ ಕೈಗೊಂಡಿದೆ. ಬಸ್ ತಂಗುದಾಣಗಳ ಮೇಲೆ ನೋಟಿಸ್ ಅಂಟಿಸುತ್ತಿದೆ. ಯಾವುದೇ ರೀತಿಯ ಶುಲ್ಕ ಪಾವತಿಯಾಗದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೇಶ್ ಮೌದ್ಗೀಲ್ ಹೇಳಿದ್ದರು.
ರಾಷ್ಟ್ರದ ಭವಿಷ್ಯ ಯುವಸಮೂಹದ ಕೈಯಲ್ಲಿದ್ದು, ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು. ವಿಜಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವ ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಉಳಿಸಲು ನೀವೆಲ್ಲರೂ ನಿಮ್ಮ ಶಕ್ತಿಯನ್ನು ಉಪಯೋಗಿಸಬೇಕು. ಬದಲಾವಣೆ ತರುವ ಶಕ್ತಿ ಯುವ ಸಮೂಹದಲ್ಲಿ ಮಾತ್ರವಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಲು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಅರ್ಜಿ ಸಲ್ಲಿಸಬಹುದು. ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಿದ್ದಾರೆ. ಜೊತೆಗೆ Voter Help Line App ಮೂಲಕ ಸ್ವಯಂಪ್ರೇರಿತವಾಗಿ ನೋಂದಣಿಯಾಗಬಹುದೆಂದು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ದೊಡ್ಡ ವಿಷಯವಲ್ಲ, ಸೇರ್ಪಡೆಯಾದ ಬಳಿಕ ಪ್ರತಿ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತವನ್ನು ತಪ್ಪದೆ…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನ್ಯೂಮೋನಿಯಾ ಆತಂಕ ಹೆಚ್ಚಾಗಿದೆ. ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿದೆ. ಜೊತೆಗೆ 1-15 ವರ್ಷದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ. ಪ್ರತಿ ದಿನ ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3ರಿಂದ14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದೆ. ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಎದುರಾಗಿದ್ದು ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಸಿಲಿಕಾನ್ ಸಿಟಿಯ ಆಸ್ಪತ್ರೆಗಳ ಸ್ಥಿತಿ…
ಸಾಮಾನ್ಯವಾಗಿ ನೇರಳೆ ಹಣ್ಣು ಮಳೆಗಾಲದ ಆರಂಭದಲ್ಲಿ ದೊರೆಯುತ್ತವೆ. ಇದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ. ನೇರಳೆ ಹಣ್ಣಿಗೆ ಕೆಲವೊಂದು ರೋಗಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಮಧುಮೇಹಿಗಳಿಗೆ ಉಪಯುಕ್ತ ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ. ರಕ್ತವನ್ನು ಶುದ್ಧೀಕರಿಸುತ್ತದೆ ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ನೇರಳೆ ಹಣ್ಣು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಕೂಡಾ ಸಹಾಯಕಾರಿಯಾಗಿದೆ. ನೇರಳೆ ಹಣ್ಣಿನೊಂದಿಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ತೂಕವನ್ನು ನಿಯಂತ್ರಣದಲ್ಲಿಡುತ್ತದೆ…
ಬೆಂಗಳೂರು: ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ತೆಗೆದುಕಜೊಂಡಿದ್ದಾರೆ.. ಬೆದರಿಕೆಯ ಇ ಮೇಲ್ ಪತ್ರ ಮೂಲ ಬೇದಿಸಲು ಪೊಲೀಸರು ಇದೀಗಾ ಕೇಂದ್ರ ತನಿಖಾ ಸಂಸ್ಥೆ ಮೊರೆ ಹೋಗಿದ್ದಾರೆ. ಸದ್ಯಕ್ಕೆ ದುಷ್ಕರ್ಮಿಗಳು ನಕಲಿ ಇ ಮೇಲ್ ಬಳಸಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದ್ದೆ. ಇ ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಸ್ಟೋರಿ ಹೇಳ್ತೀವಿ ನೋಡಿ. ಸಿಲಿಕಾನ್ ಸಿಟಿಯ ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಇದೀಗಾ ಪೊಲೀಸರು ತನಿಖೆ ವೇಳೆ ಮತ್ತೋಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ… ನಕಲಿ ಐಡಿ ಕ್ರಿಯೆಟ್ ಮಾಡಿ ಎಲ್ಲಾ ಖಾಸಗಿ ಶಾಲೆಗಳಿಗೆ ಇ ಮೇಲ್ ಮಾಡಿರುವುದು ಸೈಬರ್ ಕ್ರೈ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರೋಪಿಗಳು ವಿದೇಶದಲ್ಲಿರುವ ಶಾಲೆಗಳಿಗೂ ಇದೇ ರೀತಿಯ ಇ ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿರುವುದು ಗೊತ್ತಾಗಿದೆ.. ಹಾಗಾಗಿ ಸಿಬಿಐ ಇಂಟರ್ ಪೋಲ್ ಮುಖಾಂತರ ಅಲ್ಲಿನ ತನಿಖೆ ಮಾಹಿತಿ…
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಎಸ್ ಸಿ ಘಟಕದ ವತಿಯಿಂದ ವಿಶ್ವ ರತ್ನ ವಿಶ್ವಮಾನವ ಭಾರತ ರತ್ನ ಬಾಬಾ ಸಾಹೇಬ್ ಡಾಕ್ಟರ್ ಬಿ, ಆರ್, ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನದಂದು ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಎಸ್ ಸಿ ಘಟಕದ ವತಿಯಿಂದ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ, ಬಸವರಾಜ ಬೆಣಕಲ್, ಬಮ್ಮಾಪುರ ಬ್ಲಾಕ್ ಅಧ್ಯಕ್ಷರಾದ ಪಕ್ಕಣ್ಣ ದೊಡ್ಡಮನಿ, ಇಂದ್ರಾನಗರ ಬ್ಲಾಕ್ ಅಧ್ಯಕ್ಷರಾದ, ಮಹೇಶ್ ಅಂಜಿಗಿ, ವಿದ್ಯಾನಗರ ಬ್ಲಾಕ್, ಉಣಕಲ್ ಬ್ಲಾಕ್ ಅಧ್ಯಕ್ಷರುಗಳು ಸೋಮಣ್ಣ ಅಂಜಿಗಿ ಹಾಗೂ ಪಕ್ಷದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕನ್ನಡ ರಾಜ್ಯೋತ್ಸವ ಹಾಗೂ ಡಾ ಪುನೀತ್ ರಾಜ್‍ಕುಮಾರ್ ರವರ ಸವಿ ನೆನಪಿನಲ್ಲಿ ಕೆಆರ್ ಪುರ ಕ್ಷೇತ್ರದ್ಯಾಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಬಾಬು ಅವರು ತಿಳಿಸಿದರು. ಕ್ಷೇತ್ರದ ಹೊರಮಾವು ವಾಡ್೯ನ ಶಾಲೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯ ಸಹಕಾರದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ , ಕಿವಿ, ಮೂಗು ಹಾಗೂ ನೇತ್ರ ತಪಾಸಣಾ ಶಿಭಿರ ನಡೆಸಿ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು. ಪುನೀತ್ ರಾಜ್‌ಕುಮಾರ್ ಅವರ ಸವಿ ನೆನಪಿನಲ್ಲಿ ಕಳೆದ ಎರಡು ವರ್ಷದಿಂದ ಈ ಶಿಬಿರ ಆಯೋಜನೆ ಮಾಡುತ್ತಿದ್ದು, ಕ್ಷೇತ್ರದ 11 ವಾರ್ಡ್ನಲ್ಲಿ 11 ಜಾಗದಲ್ಲಿ ಪ್ರತೀ ವಾರ ಈ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪಣತೊಟ್ಟಿದ್ದು,ರಾಜ್ಯ ಸರ್ಕಾರದ ಹಲವು ಮಹತ್ತರ ಯೋಜನೆಗಳಿಂದ ಜನತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಹೇಳಿದರು. ಕೆ.ಆರ್.ಪುರ ಕ್ಷೇತ್ರದಲ್ಲಿ ಮುಂದಿನ ಬಾರಿ ಕಾಂಗ್ರೆಸ್…