ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ. ತಡರಾತ್ರಿ ಈ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್‌ಗೆ ತನ್ನ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಕರೆ ಮಾಡಿದ್ದರು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಕರೆಯನ್ನು ಸ್ವೀಕರಿಸದೇ ಹೋದಾಗ ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಿಂಗ್ ಮಕ್ಕಳಿಗೆ ಚುಚ್ಚು ಮದ್ದು ನೀಡಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ಅವರಿಬ್ಬರ ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ.…
Author: AIN Author
ಬೆಂಗಳೂರು:- ಮಿಚಾಂಗ್ ಚಂಡಮಾರುತದ ಹಿನ್ನೆಲೆ ಬೆಂಗಳೂರು ಸೇರಿ ಕರ್ನಾಟಕದ 21ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ,ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೆಂಗಳೂರು/ ಬೆಳಗಾವಿ:- ಡಿ.11ರವರೆಗೆ ಬಿ.ಇಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ ಸಚಿವರ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು. ‘ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಫಲಿತಾಂಶ ವಿಳಂಬ ಹಿನ್ನೆಲೆ ಬಿ.ಎಡ್. ಪ್ರವೇಶ ನೋಂದಣಿ ಕೊನೆಯ ದಿನ ಮುಕ್ತಾಯ ಆಗುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ಗಮನಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು. 2023-24ನೇ ಸಾಲಿಗೆ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಅದರಂತೆ ಆಸಕ್ತರು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ನ. 29 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ವಿಸ್ತರಣೆ ಮಾಡಲಾಗಿದೆ ಎಂದರು.
ಚಿನ್ನ, ಬೆಳ್ಳಿ ಖರೀದಿಸಬೇಕು ಎಂದುಕೊಂಡವರು ಸಿದ್ಧರಾಗಬಹುದು. ನಿನ್ನೆಗಿಂತ ಬಂಗಾರದ ಬೆಲೆ ಇಳಿಕೆಯಾಗಿದೆ. ಆಭರಣ ಪ್ರಿಯರು ಚಿನ್ನದ ದರ ಕುಸಿಯುತ್ತಿರುವುದನ್ನು ಕಂಡು ಸಂತಸ ಪಡುತ್ತಿದ್ದಾರೆ. ಚಿನಿವಾರ ಪೇಟೆಯಲ್ಲಿ ದರ ಏರಿಳಿತ ಉಂಟಾಗಲು ಕಾರಣಗಳು ಹಲವಿವೆ. ಇತ್ತೀಚಿಗೆ ದೇಶದ ಜಿಡಿಪಿ ದರದಲ್ಲಿ ಏರಿಕೆಯಾಗುತ್ತಿರುವುದು ಸಕಾರಾತ್ಮಕ ಸೂಚಕವಾಗಿದೆ. 1 ಗ್ರಾಂ ಚಿನ್ನದ ಬೆಲೆ ನಿನ್ನೆ 5,785 ಇದ್ದು ಇಂದು 5,745 ಇಳಿದಿದೆ, ಇದರ ಪ್ರಕಾರ 40 ರೂಪಾಯಿ ಇಳಿಕೆ ಆಗಿದೆ. 8 ಗ್ರಾಂ ಚಿನ್ನಕ್ಕೆ ನಿನ್ನೆ 46,280 ರೂ. ಇತ್ತು ಇಂದು 45,960 ರೂಗೆ ಇಳಿದಿದ್ದು 320 ರೂಪಾಯಿ ಕಡಿಮೆ ಆಗಿದೆ. 10 ಗ್ರಾಂ ಚಿನ್ನದ ಬೆಲೆ ಬುಧವಾರಕ್ಕಿಂದ ಇಂದು 400 ರೂ. ಕಡಿಮೆ ಆಗಿದೆ. ನಿನ್ನೆ 57,850 ಇದ್ದ ಚಿನ್ನದ ಬೆಲೆ ಇಂದು 57,450 ರೂಪಾಯಿಗೆ ಇಳಿದಿದೆ. ಹಾಗೇ 100 ಗ್ರಾಂ ಚಿನ್ನದ ಬೆಲೆ ನಿನ್ನೆ 5,78,500 ಹಾಗೂ ಇಂದು 5,74,500 ಇಳಿದಿದೆ. ಇದರ ಪ್ರಕಾರ ಒಂದು ದಿನದಲ್ಲಿ 4,000 ರೂ. ಕಡಿಮೆ ಆಗಿದೆ.…
ಇಸ್ಲಾಮಾಬಾದ್: ಭಾರತಕ್ಕೆ (India) ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು ಪಾಕಿಸ್ತಾನದಲ್ಲಿ (Pakistan) ಅನಾಮಿಕ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗುವುದು ಈಗ ಹೊಸದೆನಲ್ಲ. ಆದರೆ ಈಗ ಉಗ್ರನೊಬ್ಬ ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವುದು ಹೊಸದು. ಮುಂಬೈ ದಾಳಿಯ (Mumbai 26/11 Attacks) ಪ್ರಮುಖ ಸಂಚುಕೋರ, ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಸದಸ್ಯ ಸಾಜಿದ್ ಮಿರ್ (Sajid Mir) ವಿಷ ಆಹಾರ ಸೇವಿಸಿದ್ದು ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಸಾಜಿದ್ ಮಿರ್‌ನನ್ನು ಲಾಹೋರ್ ಜೈಲಿನಿಂದ ಡೇರಾ ಘಾಜಿ ಖಾನ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ವಿಷ ಆಹಾರ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಾಜಿದ್ ಮಿರ್‌ನನ್ನು ಪಾಕಿಸ್ತಾನ ಸೇನೆ ಏರ್‌ಲಿಫ್ಟ್ ಮಾಡಿ ಬಹವಾಲ್‌ಪುರದ ಸಿಎಂಎಚ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿಗೆ ದಾಖಲಿಸಲಾಗಿದೆ. ವಿಷ ಪ್ರಾಶನ ಪ್ರಕರಣ ವರದಿಯಾದ ಬೆನ್ನಲ್ಲೇ ಜೈಲಿನಲ್ಲಿದ್ದ ಅಡುಗೆ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಯಾರು ಈ ಸಾಜಿದ್ ಮಿರ್? ಸಾಜಿದ್ ಮಿರ್ ಪಾಕಿಸ್ತಾನ ಮೂಲದ…
ನನಗೆ ಎಲ್ಲಿಯವರೆಗೆ ನಡೆದಾಡಲು ಸಾಧ್ಯವೋ ಅಲ್ಲಿಯವರೆಗೆ ಐಪಿಎಲ್ನಲ್ಲಿ ಆಡುವೆ ಎಂದು ಆಸ್ಟ್ರೆಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ. ವೃತ್ತೀಜಿವನದ ಯಶಸ್ಸಿನಲ್ಲಿ ಐಪಿಎಲ್ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ನನಗೆ ಎಲ್ಲಿಯವರೆಗೆ ನಡೆದಾಡಲು ಸಾಧ್ಯವೋ ಅಲ್ಲಿಯವರೆಗೆ ಐಪಿಎಲ್ನಲ್ಲಿ ಆಡುವೆ ಎಂದರು. ಬಹುಶಃ ಐಪಿಎಲ್ ನಾನು ಜೀವನದಲ್ಲಿ ಆಡುವ ಕೊನೇ ಟೂರ್ನಿಯಾಗಿರುತ್ತದೆ. ನನಗೆ ಐಪಿಎಲ್ನಿಂದ ಭಾರಿ ಲಾಭವಾಗಿದೆ. ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರಂಥ ಆಟಗಾರರ ಜತೆಗೆ 2 ತಿಂಗಳ ಕಾಲ ಆಡುವ ಅವಕಾಶ ಕಲ್ಪಿಸಿದೆ. ಅವರೊಂದಿಗೆ ಮಾತನಾಡುತ್ತ, ಆಡುತ್ತ ಸಾಕಷ್ಟು ಕಲಿತಿರುವೆ’ ಎಂದು ಆರ್ಸಿಬಿ ಆಟಗಾರ ತಿಳಿಸಿದ್ದಾರೆ.
ಬೆಂಗಳೂರು: ಮನೆಯ ಎರಡನೇ ಯಜಮಾನರಿಗೂ ಅನ್ನ ಭಾಗ್ಯ ಹಣ ನೀಡುವ ಮೂಲಕ ಆಹಾರ ಇಲಾಖೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದೆ.ಈ ಕುರಿತ ಡೀಟೈಲ್ಸ್ ಇಲ್ಲಿದೆ. ಸರ್ಕಾರ ನೀಡಿರುವ ಯೋಜನೆಗಳಲ್ಲಿ ಒಂದಲ್ಲ ಒಂದು ಕೊರತೆಗಳಿದ್ದು,ಅನ್ನ ಭಾಗ್ಯ ಯೋಜನೆ ಬಗ್ಗೆ ಯು ಸಾಕಷ್ಟು ದೂರುಗಳು ಬಂದಿವೆ.ಅನ್ನ ಭಾಗ್ಯ ಯೋಜನೆ DBT ಪ್ರತಿ ತಿಂಗಳು 8 ರಿಂದ 10 ಸಾವಿರ ಜನರಿಗೆ ಸಿಗದೆ ದೂರುಗಳು ಹೆಚ್ಚಾಗುತ್ತಲೆ ಇತ್ತು. ಈ ಹಿಂದೆ ಕೇವಲ ಕೇವಲ ಕಾರ್ಡ್ ನ ಮೊದಲ ಯಜಮಾನರಿಗೆ DBTಮೂಲಕ ಹಣ ಹಾಕಲಾಗುತ್ತಿತ್ತು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಆದ್ರೀಗ ದೂರುಗಳು ಹೆಚ್ಚಾಗಿದ್ದರಿಂದ ಮನೆಯ ಎರಡನೇ ಯಜಮಾನರಿಗೂ ಹಣ ಹಾಕುವುದಾಗಿ ನಿರ್ಧರಿಸಲಾಗಿದೆ. ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದ್ದು, ಅಧಿಕೃತವಾಗಿ ಈ ತಿಂಗಳಿನಿಂದ ಜಾರಿ ಮಾಡಲಾಗುತ್ತದೆ.ಇದರಿಂದ ಸುಮಾರು 9ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿಗೆ ಇದರ ಲಾಭ ಸಿಗಲಿದೆ. ಒಟ್ಟಿನಲ್ಲಿ ಯೋಜನೆಗಳು ಘೋಷಣೆ ಆಗಿ ಜಾರಿಗೆ ಬಂದರು ಸರಿಯಾಗಿ ಸಮರ್ಪಕವಾಗಿ ನಿರ್ವಹಣೆ ಆಗದೆ ದೂರುಗಳ ಸರಮಾಲೆಯೆ ಕಾಣುತ್ತಿದ್ದು ಇನ್ನು ಮುಂದೆ…
ಸತತ 3ನೇ ಪಂದ್ಯದಲ್ಲೂ ‘ಸೂಪರ್ 10’ ಮೂಲಕ ಅಬ್ಬರಿಸಿದ ಯುವ ರೈಡರ್ ಸೋನು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್‌ಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದಾರೆ. ಮಂಗಳವಾರ ಯು ಮುಂಬಾ ವಿರುದ್ಧ ಜೈಂಟ್ಸ್‌ಗೆ 39-37 ಅಂಕಗಳಿಂದ ಜಯ ಲಭಿಸಿತು. ಆರಂಭದಲ್ಲಿ ಜೈಂಟ್ಸ್ ಮಿಂಚಿನ ಆಟವಾಡಿದರೂ, ಮೊದಲಾರ್ಧದ ವೇಳೆಗೆ ಮುಂಬಾ 18-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಪುಟಿದೆದ್ದ ಜೈಂಟ್ಸ್ ಅಂಕಗಳ ಅಂತರ ಹೆಚ್ಚಿಸುತ್ತಾ ಸಾಗಿದರೂ, ಒಂದು ಹಂತದಲ್ಲಿ ಇತ್ತಂಡಗಳು 36-36ರಲ್ಲಿ ಸಮಬಲ ಸಾಧಿಸಿದ್ದವು. ಈ ವೇಳೆ ಸೋನು ಒಂದೇ ರೈಡ್‌ನಲ್ಲಿ 3 ಅಂಕ ಪಡೆದು ಜೈಂಟ್ಸ್ ರೋಚಕ ಗೆಲುವಿಗೆ ಕಾರಣರಾದರು. ಸೋನು 16 ರೈಡ್‌ನಲ್ಲಿ 11 ಅಂಕ ಪಡೆದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ರಾಕೇಶ್ ಹಾಗೂ ರೋಹಿತ್ ಗುಲಿಯಾ ತಲಾ 7 ರೈಡ್ ಅಂಕ ಸಂಪಾದಿಸಿದರು. ಗುಮಾನ್ ಸಿಂಗ್ ಹಾಗೂ ಅಮೀರ್‌ಮೊಹಮದ್ ಝಫರ್‌ದಾನೆಶ್ ತಲಾ 10 ಅಂಕಗಳನ್ನು ಪಡೆದರೂ ಮುಂಬೈನ ಸತತ 2ನೇ ಜಯದ ಕನಸು ಕೈಗೂಡಲಿಲ್ಲ.
ಬೆಂಗಳೂರು:- ಎಲ್ಲ ಧರ್ಮದವರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮ್ಮ ಸರ್ಕಾರದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಯಾವುದನ್ನೂ ಇಂತಹ ಧರ್ಮಕ್ಕೆ ಅಂತ ಮಾಡಿಲ್ಲ. ಇಡೀ ರಾಜ್ಯದ ಎಲ್ಲ ಜಾತಿ, ಧರ್ಮದ ಜನರಿಗೂ ಅನುಷ್ಠಾನಗೊಳಿಸುತ್ತಿದ್ದೇವೆ. ಅದೇ ರೀತಿ ಮುಂದೆಯೂ ಕೆಲಸ ಮಾಡುತ್ತೇವೆ ಎಂದರು ಹುಬ್ಬಳ್ಳಿಯಲ್ಲಿ ತಾವು ನೀಡಿದ ಮುಸ್ಲಿಂ ಪರ ಹೇಳಿಕೆ ವಾಪಸ್ ಪಡೆಯುವಂತೆ ವಿಪಕ್ಷದವರು ಸದನದಲ್ಲಿ ಆಗ್ರಹಿಸಿದ್ದಾರೆ ಎಂಬ ಪ್ರಶ್ನೆಗೆ, ಮಾಧ್ಯಮದವರ ವಿರುದ್ಧವೇ ಗರಂ ಆದ ಮುಖ್ಯಮಂತ್ರಿಗಳು, ಎಲ್ಲಾ ನಿಮ್ಮಿಂದಲೇ ಆಗಿದ್ದು. ಎಲ್ಲ ನಿಮ್ಮಿಂದ ಉಂಟಾಗಿದ್ದು. ನಾನು ಮುಸ್ಲಿಮರೂ ಸೇರಿದಂತೆ ಎಲ್ಲ ಧರ್ಮದವರಿಗೂ ನಮ್ಮ ಸರ್ಕಾರ ರಕ್ಷಣೆ ನೀಡಲಿದೆ ಎಂದು ಹೇಳಿದ್ದೆ. ಅದನ್ನು ನೀವು ಬರೆದಿರಾ? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಮಾಡಿಲ್ಲ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎಲ್ಲ ಗ್ಯಾರಂಟಿಗಳನ್ನು ಇಡೀ ರಾಜ್ಯದ ಎಲ್ಲ ಧರ್ಮ, ಜಾತಿ ಜನರಿಗೂ ಜಾರಿಗೊಳಿಸಿದ್ದೇವೆ. ನಮ್ಮ…
ದಾವಣಗೆರೆ:- ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಪರವಾನಗಿ ಇಲ್ಲದೇ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾವಣಗೆರೆಯ ಆರ್ ಎಂ ಸಿ ಯಾರ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಭಾರತ್ ಕಾಲೋನಿ ನಿವಾಸಿ ಆಟೋ ಚಾಲಕ ಮಲ್ಲೇಶಪ್ಪ (50), ಬಾಷಾ ನಗರದ ಹೆಚ್ ಪಿ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಹೆಲ್ ರಜಾ (20) ಬಂಧಿತ ಆರೋಪಿಗಳು. ಬಂಧಿತರಿಂದ ಹೆಚ್ ಪಿ ಕಂಪೆನಿ ಹೆಸರಿನ 26 ತುಂಬಿದ ಸಿಲಿಂಡರ್ ಗಳು, 12 ಹೆಚ್ ಪಿ ಹೆಸರಿನ ಖಾಲಿ ಸಿಲಿಂಡರ್ ಗಳು, 3 ಸಣ್ಣ ಖಾಲಿ ಸಿಲಿಂಡರ್ ಗಳು, ಗ್ಯಾಸ್ ರೀಪಿಲ್ಲಿಂಗ್ ಕಡ್ಡಿ, ಗ್ಯಾಸ್ ರಿಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ತೂಕದ ಯಂತ್ರಗಳು ಹಾಗೂ ಒಂದು ಗೊಡ್ಸ್ ಆಪೆ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಪಾಳು ಬಿದ್ದಿರುವ ಕೆ. ಎಂ ಸಿ ಕಾಂಪೌಂಡ್ ಒಳಗಿನ ಸ್ಥಳದಲ್ಲಿ…