ಬೆಂಗಳೂರು:- ಎಲ್ಲ ಧರ್ಮದವರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮ ಸರ್ಕಾರದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಯಾವುದನ್ನೂ ಇಂತಹ ಧರ್ಮಕ್ಕೆ ಅಂತ ಮಾಡಿಲ್ಲ. ಇಡೀ ರಾಜ್ಯದ ಎಲ್ಲ ಜಾತಿ, ಧರ್ಮದ ಜನರಿಗೂ ಅನುಷ್ಠಾನಗೊಳಿಸುತ್ತಿದ್ದೇವೆ. ಅದೇ ರೀತಿ ಮುಂದೆಯೂ ಕೆಲಸ ಮಾಡುತ್ತೇವೆ ಎಂದರು
ಹುಬ್ಬಳ್ಳಿಯಲ್ಲಿ ತಾವು ನೀಡಿದ ಮುಸ್ಲಿಂ ಪರ ಹೇಳಿಕೆ ವಾಪಸ್ ಪಡೆಯುವಂತೆ ವಿಪಕ್ಷದವರು ಸದನದಲ್ಲಿ ಆಗ್ರಹಿಸಿದ್ದಾರೆ ಎಂಬ ಪ್ರಶ್ನೆಗೆ, ಮಾಧ್ಯಮದವರ ವಿರುದ್ಧವೇ ಗರಂ ಆದ ಮುಖ್ಯಮಂತ್ರಿಗಳು, ಎಲ್ಲಾ ನಿಮ್ಮಿಂದಲೇ ಆಗಿದ್ದು.
ಎಲ್ಲ ನಿಮ್ಮಿಂದ ಉಂಟಾಗಿದ್ದು. ನಾನು ಮುಸ್ಲಿಮರೂ ಸೇರಿದಂತೆ ಎಲ್ಲ ಧರ್ಮದವರಿಗೂ ನಮ್ಮ ಸರ್ಕಾರ ರಕ್ಷಣೆ ನೀಡಲಿದೆ ಎಂದು ಹೇಳಿದ್ದೆ. ಅದನ್ನು ನೀವು ಬರೆದಿರಾ? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಮಾಡಿಲ್ಲ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಎಲ್ಲ ಗ್ಯಾರಂಟಿಗಳನ್ನು ಇಡೀ ರಾಜ್ಯದ ಎಲ್ಲ ಧರ್ಮ, ಜಾತಿ ಜನರಿಗೂ ಜಾರಿಗೊಳಿಸಿದ್ದೇವೆ. ನಮ್ಮ ಮೇಲೆ ವಿಪಕ್ಷಗಳು ಸುಮ್ಮನೆ ಟೀಕೆ ಮಾಡ್ತವೆ. ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.