Author: AIN Author

ಮೈಸೂರು: ರೋಟರಿ ಮೈಸೂರು, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್‌ಗಳ ಸಂಯುಕ್ತಾಶ್ರಯದಲ್ಲಿ ಜನರಲ್ಲಿ ಸುರಕ್ಷಿತ ವಾಹನ ಚಾಲನೆ ಅರಿವು ಮೂಡಿಸಲು ಇದೇ ನ. ೧೮ ರಂದು ಜೀವರಕ್ಷಾ ರಸ್ತೆ ಸುರಕ್ಷತೆ ಬೈಕಥಾನ್ ಆಯೋಜಿಸಿರುವುದಾಗಿ ರೋಟರಿ ಅಧ್ಯಕ್ಷ ಅರುಣ್ ಬೆಳವಾಡಿ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಅಂದು ಬೆಳಗೆ ಏಳಕ್ಕೆ ನಗರದ ಸಂತ ಜೋಸೆಫ್ ನರ್ಸಿಂಗ್ ಕಾಲೇಜು ಬಳಿ ರಸ್ತೆ ಸುರಕ್ಷತೆ ಕುರಿತ ಬೀದಿ ನಾಟಕ ಪ್ರದರ್ಶನವಿದೆ. ಬಳಿಕ ಅರಮನೆ ಮುಂಭಾಗದಿAದ ರ‍್ಯಾಲಿ ಆರಂಭವಾಗಿ ಚಿತ್ರದುರ್ಗದ ಮೂಲಕ ನ. ೧೯ ರಂದು ಹಂಪಿ ತಲುಪಲಿದೆ. https://ainlivenews.com/chief-minister-siddaramaiah-is-campaigned-as-an-experienced-politician-kota-srinivas-pujari/ ರಸ್ತೆ ಅಪಘಾತಗಳಲ್ಲಿನ ಶೇ. ೮೦ ರಷ್ಟು ಪ್ರಕರಣಗಳಲ್ಲಿ ತಲೆಗೆ ಪೆಟ್ಟು ಬಿದ್ದಿರುತ್ತದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದಿರುವುದು ಇದಕ್ಕೆ ಕಾರಣ. ಹೀಗಾಗಿ ಈ ಕುರಿತು ಹಾಗೂ ಇನ್ನಿತರ ಸುರಕ್ಷಿತ ರಸ್ತೆ ಪ್ರಯಾಣ ಕುರಿತಂತೆ ಈ ಬೈಕಥಾನ್ ಆಯೋಜಿಸಲಾಗಿದೆ ಎಂದರು. ಡಾ. ರೇಖಾ, ಡಾ. ದೀಪು, ರಾಜಾರಾಂ, ಜಸ್ವಂತ್ ಹಾಜರಿದ್ದರು.

Read More

ಬೆಂಗಳೂರು: ಬಿಎಸ್​ ಯಡಿಯೂರಪ್ಪ ಅವರು ತಮ್ಮ ಅಸ್ತಿತ್ವಕ್ಕಾಗಿ ಬರ ಅಧ್ಯಯನಕ್ಕೆ ಹೊರಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವ್ಯಂಗ್ಯ ಮಾಡಿದ್ದಾರೆ.  ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಯಾವ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದಾರೆ, ಮಾಹಿತಿ ಪಡೆದಿದ್ದಾರೆ. ಕೆಲವು ಕಡೆ ಕಾರಿನಿಂದ‌ ಕೆಳಗಡೆ ಇಳಿದಿಲ್ಲ. ಬಿಜೆಪಿ ಸಂಸದರು ಪಿಎಂ ಮನೆಯಲ್ಲಿರಲಿ, ಮನೆ ರೋಡ್​ಗೆ ಹೋಗಲು ಆಗಲ್ಲ. ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಜೋಡು ಜಮೀನ್ದಾರು ಇದ್ದಾರೆ. ಕೇಂದ್ರ ಸರ್ಕಾರ , ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ಇಲ್ಲ. ಜ್ಯದ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.

Read More

ಬೆಂಗಳೂರು: ಚುನಾವಣಾ ರಾಜಕಾರಣಕ್ಕೆ ನಿವೃತ್ತಿಗೆ  ಯಾರ ಒತ್ತಡವೂ ಇಲ್ಲ.ಇದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ನಿನ್ನೆ ರಾಷ್ಟ್ರೀಯ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ನವರು ಟ್ವೀಟ್ ಮಾಡಿದರು. ನನಗೆ ಎದೆ ಬಗೆದು ತೋರಿಸಲು ಆಗೋದಿಲ್ಲ. ನನಗೆ ಯಾವುದೇ ಒತ್ತಡ ಬಂದಿಲ್ಲ. ನಿವೃತ್ತಿ ವಿಚಾರವನ್ನು ನನ್ನ ಹೆಂಡತಿ ಮಕ್ಕಳು ಬಿಟ್ಟರೇ ಜೊತೆ ಬಿಟ್ಟರೇ ಯಾರೋದಿಂಗೂ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಅದಕ್ಕೆ ನನ್ನ ನಿಲುವು ಮನೆಯವರಿಗೆ ಬಿಟ್ಟರೇ ಯಾರಿಗೂ ಗೊತ್ತಿಲ್ಲ. ಸದಾನಂದ ಗೌಡರಿಗೆ ಸೀಟು ಕೊಡಲ್ಲ ಎಂದು ಹೈಕಮಾಂಡ್ ಹೇಳಿದೆ ಅಂತ ಸುದ್ದಿಯಾಗ್ತಿದೆ. ನಿವೃತ್ತಿ ಘೋಷಣೆ ಆದ ಮೇಲೆ ಹೈಕಮಾಂಡ್ ‌ನನ್ನನ್ನು ಸಂಪರ್ಕ ಮಾಡಿಲ್ಲ ಎಂದರು ನಾನು ಮತ್ತು ಬಿಎಸ್​  ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ. 2019ರಲ್ಲೇ ರಾಜಕೀಯ ನಿವೃತ್ತಿ…

Read More

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್​ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯಕ್ಕೆ ಹೊರಟಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಅಧ್ಯಯನ ಮುಗಿಸಿ ವರದಿ ಕೊಟ್ಟಿದೆ. ಕೇಂದ್ರ ವರದಿಯನ್ನು ಸ್ವೀಕರಿಸಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ​ಹೇಳಿದರು  ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ-  ಜೆಡಿಎಸ್ ಶಾಸಕರು ಅನುದಾನ ಕೊಡಿಸುವ ಕೆಲಸ ಮಾಡಲಿ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಹಾರ ಕೊಡಿಸುವ ಕೆಲಸ ಮಾಡಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಎರಡು ಗಿಡಗಳನ್ನು ನೋಡುವುದಲ್ಲ. ಕೇಂದ್ರ ಸರ್ಕಾರದ ಬಳಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ಕರ್ನಾಟಕಕ್ಕೆ ಕೇಂದ್ರ ಕೊಡಬೇಕಾದ ಅನುದಾನ ಕೊಡಲಿ ಅಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು.

Read More

ಬೀದರ್: ನಮ್ಮವರು ಯಾರೂ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ. ಪಾತಾಳಕ್ಕೆ ಹೋಗಿ ಯಾರಾದರೂ ಬೀಳ್ತಾರಾ ಎಂದು ಆಪರೇಷನ್ ಹಸ್ತದ ವಿಚಾರಕ್ಕೆ ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಈಗಾಗಾಲೇ ಮುಳುಗುವ ಹಡಗಾಗಿದ್ದು, ಮುಳುಗುವ ಹಡುಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ, ನಾವು ಆಹ್ವಾನ ಮಾಡಿದ್ರೆ ಬಿಜೆಪಿಗೆ ಬಿಜೆಪಿ, ಜೆಡಿಎಸ್ಗೆ ಜೆಡಿಎಸ್ ಕಿತ್ಕೊಂಡು ಬರುತ್ತೆ. ಆದರೆ ನಾವು ಹಾಗೇ ಮಾಡಲ್ಲ ಎಂದರು. ನಮ್ಮ ತತ್ವ ಸಿದ್ಧಾಂತಕ್ಕೆ ಯಾರು ಒಪ್ಪಿಗೆ ಕೊಡುತ್ತಾರೆ, ನಾಯಕತ್ವಕ್ಕೆ ಯಾರು ಒಪ್ಪಿಗೆ ಕೊಡುತ್ತರೋ ಅಂತವರನ್ನು ಪರಿಶೀಲನೆ ಮಾಡಿ ಸೇರಿಸುಕೊಳ್ಳುತ್ತೇವೆ ಎಂದ್ರು ಖಂಡ್ರೆ ಬಿಜೆಪಿಗೆ ಟಾಂಗ್ ನೀಡಿದರು. ಇನ್ನೂ ಆರ್ಡಿ ಪಾಟೀಲ್ ಎಸ್ಕೇಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖಂಡ್ರೆ ಸರ್ಕಾರ ಕಾನುನುಬದ್ಧವಾಗಿ ಕ್ರಮ ಕೈಗೊಳ್ಳಿ ಅಂತಾ ತನಿಖಾಧಿಕಾರಿಗಳಿಗೆ ಹೇಳುತ್ತೆನೆ ಎಂದು ಹೇಳಿದರು. ಯಾರನ್ನು ಬಂಧಿಸಬಾರದು ಎಂಬುದು ತನಿಖಾಧಿಕಾರಿ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಏನಾದ್ರೂ ಆಗಿದೆ ಅಂದ್ರೆ, https://ainlivenews.com/knee-pain-treatment-joint-pain-treatment/ ಪರಿಶೀಲನೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಿಕೊಂಡರು. ಇನ್ನೂ…

Read More

ಬೆಂಗಳೂರು: ರಾಜ್ಯಾದ್ಯಂತ ಇನ್ನೂ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ. ‌ ಬೆಂಗಳೂರು ನಗರದಲ್ಲಿ ಇಂದು (ನ.10,11) ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಮಳೆಯಾಗುವ ಸಂಭವವಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಕರ್ನಾಟಕದಲ್ಲಿ ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಕೈಕೊಟ್ಟಿದ್ದು, ಹಿಂಗಾರು ರೈತನ ಕೈಹಿಡಿದೆ. ಮಳೆಯಾಗುತ್ತಿರುವುದರಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಮಳೆಯಾಗುತ್ತಿರುವುರಿಂದ ರಾಜ್ಯದ ಕೆಲವು ನದಿಗಳಲ್ಲಿ ಒಳಹರಿವು ಕೊಂಚ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿಲ್ಲ. ಇದರಿಂದ ಪ್ರಮುಖ…

Read More

ಬೆಂಗಳೂರು: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ಸನ್ನಿಧಿಗೆ ವಿಧಾನ ಪರಿಷತ್ ಶಾಸಕರಾದ ಟಿ.ಎ,ಶರವಣ ಅವರು ಭೇಟಿ ನೀಡಿ ತಾಯಿಯ ದರ್ಶನ ಮಾಡಿದರು ಹಾಗೆ  ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಕೂಡ ಭೇಟಿ ನೀಡಿದರು. ದೇವಾಲಯಕ್ಕೆ ಭೇಟಿ ನೀಡಿದ ಟಿ.ಎ,ಶರವಣ ಅವರನ್ನು ದೇವಾಲಯದ ಆಡಳಿತ ಮಂಡಳಿ ಗೌರವಿಸಿದೆ.ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ದಿನದ ಇಪ್ಪನ್ಕಾಲ್ಕು ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಟಿ.ಎ,ಶರವಣ  ದಂಪತಿ ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಈ ವೇಳೆ ರಾಜ್ಯದಲ್ಲಿ ಸುಭಿಕ್ಷವಾಗಿ ಮಳೆಯಾಗಿ, ರೈತಾಪಿ ವರ್ಗದವರ ಬಾಳಲ್ಲಿ ಬೆಳಕು ಮೂಡಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬ ದೇಗುಲದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ.ಈ ಬಾರಿ 14 ದಿನಗಳ ಕಾಲ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹಾಗೆ ನವೆಂಬರ್‌ 7ರಂದು ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಕೂಡ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ್ದರು ಹಾಗೆ ಅದೇ ದಿನ ಸಿಎಂ ಸಿದ್ದರಾಮಯ್ಯ ಕೂಡ…

Read More

ಬೆಂಗಳೂರು: ಕರೆಂಟ್ ಶಾಕ್‌ನಿಂದ (Electrocuted) ದಿಢೀರ್ ನೂಕು ನುಗ್ಗಲು ಸೃಷ್ಟಿಯಾದ ಘಟನೆ ಹಾಸನಾಂಬೆ ದೇವಸ್ಥಾನದಲ್ಲಿ (Hasanamba Temple) ಬಳಿ ನಡೆದಿದೆ. ವರ್ಷಕ್ಕೆ ಒಂದು ಬಾರಿ ತೆರೆಯಲ್ಪಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್‌ 2 ರಿಂದ ತೆರೆದಿದ್ದು ಇಂದು ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು. https://ainlivenews.com/knee-pain-treatment-joint-pain-treatment/ ಮಧ್ಯಾಹ್ನ 1.30ರ ವೇಳೆ ಉಚಿತ ದರ್ಶನದ ಸಾಲಿ ಹಾಕಿದ್ದ ಬ್ಯಾರಿಕೇಡ್‌ನಲ್ಲಿ ವಿದ್ಯುತ್‌ ಪ್ರವಹಿಸಿದೆ. ಬ್ಯಾರಿಕೇಡ್‌ ವಿದ್ಯುತ್‌ ಪ್ರವಹಿಸಿದ್ದನ್ನು ಕಂಡು ಸಾಲಿನಲ್ಲಿದ್ದ ಭಕ್ತರು ಜೀವ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಎಂದು ಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. 20 ಮಂದಿಗೆ ಕರೆಂಟ್‌ ಶಾಕ್‌ ಹೊಡೆದಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

Read More

ಬೆಂಗಳೂರಿನ ಶ್ವಾನ‌ ಪ್ರಿಯರಿಗೆ ಬ್ಯಾಡ್ ನ್ಯೂಸ್  ಶ್ವಾನ ಪ್ರೀತಿಗೂ ಇನ್ಮುಂದೆ ಬರಲಿದೆ ಹೊಸ ರೂಲ್ಸ್  ಬೆಂಗಳೂರಿಗರೇ ಇನ್ಮುಂದೆ ಬೇಕಾ‌ ಬಿಟ್ಟಿ ಮನೆಯಲ್ಲಿ ಶ್ವಾನ ಸಾಕಾಂಗಿಲ್ಲ  ಮುದ್ದಿನ ಶ್ವಾನದ ಮಲಮೂತ್ರ ವಿಸರ್ಜನೆಗೆ ನಿಮಗಿಷ್ಟ ಬಂದಾಗ ಹೊರಗಡೆ ಕರೆದೊಯ್ಯಂಗಿಲ್ಲ ನಾಯಿ ಸಾಕುವ ವಿಚಾರವಾಗಿ ಬರಲಿದೆ ಹೊಸ ರೂಲ್ಸ್ ಬಿಬಿಎಂಪಿ ಪಶು ಸಂಗೋಪನೆ ಇಲಾಖೆಯಿಂದ ಪ್ರತ್ಯೇಕ‌ ಮಾರ್ಗ ಸೂಚಿ ಬಿಡುಗಡೆಗೆ ಪ್ಲಾನ್ ಹಾಗಿದ್ರೆ ಏನೇನ್ ಮಾರ್ಗಸೂಚಿ ಸಾಧ್ಯತೆ..? 1. ಒಂದು ಮನೆಯಲ್ಲಿ‌ ಗರಿಷ್ಠ ಎಷ್ಟು ನಾಯಿಗಳನ್ನ ಸಾಕಬಹುದು..? 2.ಮಲ ಮೂತ್ರ ವಿಸರ್ಜನೆಗೆ ಎಷ್ಟು ಗಂಟೆಗೆ ಮನೆಯಿಂದ‌ ಹೊರಗಡೆ ಕರೆದುಕೊಂಡು ಹೋಗಬೇಕು..? 3. ನೆರೆ ಹೊರೆಯವರಿಗೆ ತೊಂದ್ರೆಯಾಗದಂತೆ ಏನೇನ್‌ ಕ್ರಮ ತೆಗೆದುಕೊಳ್ಳಬೇಕು..? 4. ನಾಯಿ ಸಾಕಲು ಮತ್ತು ಮಾರಾಟ ಮಾಡಲು ಕಡ್ಡಾಯವಾಗಿ ಅನುಮತಿ 5. ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕಿಸಿರಬೇಕು  ಯಾಕೆ ಮಾರ್ಗಸೂಚಿ…? ನಗರದಲ್ಲಿ ಶ್ವಾನ ಸಾಕಾಣಿಕೆ ಸಂಖ್ಯೆ ದಿನೇ ದಿನೇ ಹೆಚ್ಚಳ ವಿವಿಧ ತಳಿಗಳ ನಾಯಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸಹ ಏರಿಕೆ…

Read More

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶಗಳಿಂದ ಚಿನ್ನಭಾರಣ ಕಳ್ಳಸಾಗಣೆ‌ ಮಾಡುತ್ತಿದ್ದ ಐದು ಜನ ಪ್ರಯಾಣಿಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 3ಕೋಟಿ 9 ಲಕ್ಷ ಮೌಲ್ಯದ 5ಕೆಜಿ 135 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಎರಡು ದಿನದಲ್ಲಿ ಕುವೈತ್, ದುಬೈ, ಶಾರ್ಜಾದಿಂದ ಬೆಂಗಳೂರಿಗೆ ಈ ಪ್ರಯಾಣಿಕರು ಬಂದಿದ್ದರು. ಮಾತ್ರೆ, ಒಳ ಉಡುಪು, ಮಹಿಳೆಯರ ಪರ್ಸ್ಗಳಲ್ಲಿ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Read More