ಬೆಂಗಳೂರು: ಚುನಾವಣಾ ರಾಜಕಾರಣಕ್ಕೆ ನಿವೃತ್ತಿಗೆ ಯಾರ ಒತ್ತಡವೂ ಇಲ್ಲ.ಇದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಾಸ್ತವವಾಗಿ ನಿನ್ನೆ ರಾಷ್ಟ್ರೀಯ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ನವರು ಟ್ವೀಟ್ ಮಾಡಿದರು. ನನಗೆ ಎದೆ ಬಗೆದು ತೋರಿಸಲು ಆಗೋದಿಲ್ಲ. ನನಗೆ ಯಾವುದೇ ಒತ್ತಡ ಬಂದಿಲ್ಲ.
ನಿವೃತ್ತಿ ವಿಚಾರವನ್ನು ನನ್ನ ಹೆಂಡತಿ ಮಕ್ಕಳು ಬಿಟ್ಟರೇ ಜೊತೆ ಬಿಟ್ಟರೇ ಯಾರೋದಿಂಗೂ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಅದಕ್ಕೆ ನನ್ನ ನಿಲುವು ಮನೆಯವರಿಗೆ ಬಿಟ್ಟರೇ ಯಾರಿಗೂ ಗೊತ್ತಿಲ್ಲ. ಸದಾನಂದ ಗೌಡರಿಗೆ ಸೀಟು ಕೊಡಲ್ಲ ಎಂದು ಹೈಕಮಾಂಡ್ ಹೇಳಿದೆ ಅಂತ ಸುದ್ದಿಯಾಗ್ತಿದೆ. ನಿವೃತ್ತಿ ಘೋಷಣೆ ಆದ ಮೇಲೆ ಹೈಕಮಾಂಡ್ ನನ್ನನ್ನು ಸಂಪರ್ಕ ಮಾಡಿಲ್ಲ ಎಂದರು
ನಾನು ಮತ್ತು ಬಿಎಸ್ ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ. 2019ರಲ್ಲೇ ರಾಜಕೀಯ ನಿವೃತ್ತಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ.
ಸಾಯುವವರೆಗೆ ನಾನೇ ಇರಬೇಕು ಎನ್ನುವಂತಾಗಬಾರದು. ಬಿಜೆಪಿಗೆ ಹಿರಿತನದ ಕೊರತೆ ಕಾಡುತ್ತದೆ ಎಂದು ಅನ್ನಿಸುವುದಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.