ಬೆಂಗಳೂರು:- ಸೈಬರ್ ವಂಚಕರು ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರಿನಲ್ಲಿ ಬಿಎಂಟಿಸಿ ಮುಖ್ಯ ಲೆಕ್ಕಪತ್ರ ಅಧಿಕಾರಿಯ ಅಧಿಕೃತ ಇಮೇಲ್ ಐಡಿಗೆ ಇಮೇಲ್ ಕಳುಹಿಸಿದ್ದಾರೆ. ಆರ್‌ಟಿಜಿಎಸ್ ಮೂಲಕ 9.7 ಲಕ್ಷ ರೂಪಾಯಿಗಳನ್ನು ತುರ್ತು ಪಾವತಿ ಮಾಡುವಂತೆ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಖಾತೆ ಅಧಿಕಾರಿ-ಆರ್ಥಿಕ ಸಲಹೆಗಾರ (ಸಿಎಒ-ಎಫ್‌ಎ) 47 ವರ್ಷದ ಅಬ್ದುಲ್ ಖುದ್ದೂಸ್ ಬಿ ಗೆ ಈ ಇಮೇಲ್ ಬಂದಿದೆ. ಸೆಂಟ್ರಲ್ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅಬ್ದುಲ್ ಖುದ್ದೂಸ್ ಬಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಪ್ರಕಾರ, ಶನಿವಾರ ಸಂಜೆ 4.13 ಕ್ಕೆ, ಅವರ ಅಧಿಕೃತ ಇಮೇಲ್ ಐಡಿ – [email protected] ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೆಸರಿನಲ್ಲಿ ಇಮೇಲ್ ಐಡಿ [email protected] ನಿಂದ ಇಮೇಲ್ ಕಳುಹಿಸಲಾಗಿದೆ. ಇಮೇಲ್ ಒಂದು ಸಾಲನ್ನು ಮಾತ್ರ ಹೊಂದಿದೆ. “ತುರ್ತು ಆರ್‌ಟಿಜಿಎಸ್ ಪಾವತಿ ಮೂಲಕ 9.7 ಲಕ್ಷ ರೂಪಾಯಿ ಕಳುಹಿಸಿ” ಎಂದು…
Author: AIN Author
ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಐಟೆಲ್ P55 5G ಮೊಬೈಲ್ ಶೇ. 26% ರಷ್ಟು ನೇರ ಡಿಸ್ಕೌಂಟ್ ಹೊಂದಿದೆ. ಈ ಫೋನಿನ 128GB ROM ಸ್ಟೋರೇಜ್ ವೇರಿಯಂಟ್ 9,999ರೂ. ಗಳ ಬೆಲೆಯಲ್ಲಿ ಲಭ್ಯ. ಹಾಗೆಯೇ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಬ್ಯಾಂಕ್ ಡಿಸ್ಕೌಂಟ್ ಪಡೆದುಕೊಂಡರೆ, ಇನ್ನಷ್ಟು ಆಫರ್ ಬೆಲೆಗೆ ಫೋನ್ ಖರೀದಿಸಲು ಅವಕಾಶ ಇದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಹಾಗೆಯೇ ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ಅಲ್ಲದೇ ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನುಳಿದಂತೆ ಐಟೆಲ್ P55 5G ಮೊಬೈಲ್‌ನ ಇತರೆ ಫೀಚರ್ಸ್ ಯಾವುವು ಎಂಬುದನ್ನು ತಿಳಿಯೋಣ ಬನ್ನಿರಿ. ಐಟೆಲ್ P55 5G ಫೋನ್ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್…
ತಮಿಳಿನ ಬಿಗ್ ಬಾಸ್ ಕೂಡ ಮುಗಿದಿದೆ. ಈ ಬಾರಿ ಬಿಗ್ ಬಾಸ್ ಟೈಟಲ್ (Winner) ಗೆದ್ದಿರುವ ಅರ್ಚನಾ ರವಿಚಂದ್ರನ್ (Archana Ravichandran) ಹೊಸ ಇತಿಹಾಸವನ್ನು ಬರೆದಿದ್ದಾರೆ. ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದವರು, ತಮಿಳು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟೈಟಲ್ ವಿನ್ ಆಗಿದ್ದಾರೆ. ಅರ್ಚನಾ ತಮಿಳು ಬಿಗ್ ಬಾಸ್ ಗೆದ್ದಿದ್ದರೆ, ಮೊದಲ ರನ್ನರ್ ಅಪ್ ಆಗಿ ಮಣಿಚಂದ್ರನ್ ಹೊರ ಹೊಮ್ಮಿದ್ದಾರೆ. ಅರ್ಚನಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರೀ ಮೊತ್ತದ ಹಣವೇ ಅವರ ಗೆಲುವಿಗೆ ಸಾಕ್ಷಿಯಾಗಿದೆ. ವಾರಕ್ಕೆ ಅವರು ಎರಡೂವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. 77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಚನಾ, ಟಫ್ ಕಂಟೆಸ್ಟೆಂಟ್ ಆಗಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.
ಈ ಒಂದು ಕೆಲ್ಸ ಮಾಡಿದ್ರೆ ನಿಮ್ಮ ಖಾತೆಗೆ ಬಂದು ಬೀಳಲಿದೆ 50 ಸಾವಿರ ರೂ.! ಇಂಥಾ ಅವಕಾಶ ಮತ್ತೆ ಸಿಗಲ್ಲ. ಇದು ಹೇಗೆ ಯಾವ ರೀತಿ ಎಂದು ತಿಳಿಯಲು ಸುದ್ದಿ ಪೂರ್ತಿ ಓದಿ. ನೀವು 50 ಸಾವಿರ ರೂ. ಗೆಲ್ಲಬೇಕೆಂದರೆ, ಈ ಸ್ಪರ್ಧೆಯ ಬಗ್ಗೆ ನೀವು ತಿಳಿದಿರಬೇಕು. ರಾಷ್ಟ್ರೀಯ ಮಹಿಳಾ ಆಯೋಗವು MyGov ವೆಬ್‌ಸೈಟ್‌ನಲ್ಲಿ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳಾ ಸಬಲೀಕರಣದ ಲೋಗೋವನ್ನು ವಿನ್ಯಾಸಗೊಳಿಸಬೇಕಿದೆ. ರಾಷ್ಟ್ರೀಯ ಮಹಿಳಾ ಆಯೋಗವು MyGov ಸಹಭಾಗಿತ್ವದಲ್ಲಿ ಲೋಗೋ ವಿನ್ಯಾಸ ಸ್ಪರ್ಧೆಗೆ ಸೃಜನಶೀಲ ಮನಸ್ಸುಗಳು ಮತ್ತು ಉತ್ಸಾಹಿಗಳನ್ನು ಆಹ್ವಾನಿಸಿದೆ. ಹೊಸ ಅಸ್ಮಿತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮಹಿಳಾ ಆಯೋಗವನ್ನು ಪರಿಣಾಮಕಾರಿಯಾಗಿ ಲೋಗೋದಲ್ಲಿ ಚಿತ್ರಿಸಬೇಕಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಮಹಿಳಾ ಆಯೋಗದ ಹೋರಾಟವನ್ನೂ ಲೋಗೋ ಪ್ರತಿಬಿಂಬಿಸಬೇಕಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು JPEG, PNG, BMP, TIFF, SVG ಫಾರ್ಮ್ಯಾಟ್‌ನಲ್ಲಿ ಲೋಗೋದ ಹೆಚ್ಚಿನ ರೆಸಲ್ಯೂಶನ್ (600 dpi) ಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಹಾಗೆಯೇ…
ಮೊಟ್ಟೆಯನ್ನು ಚಳಿಗಾಲದಲ್ಲಿ ಸೇವಿಸಬಹುದೇ? ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದೇ? ಮೊಟ್ಟೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಕೆಟ್ಟ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗುತ್ತದೆ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಅದು ಉತ್ತಮ ಕೊಲೆಸ್ಟ್ರಾಲ್ ಆಗಿದೆ. ಇದು ಹೃದಯದ ರಕ್ತನಾಳಗಳನ್ನು ರಕ್ಷಿಸುತ್ತದೆ. ಆದರೆ ಮೊಟ್ಟೆಯಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿದೆ. ಇದು ತೂಕ ಹೆಚ್ಚಳ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ನಿಮಗೆ ಹೃದ್ರೋಗ ಸಮಸ್ಯೆ ಕಾಡಬಹುದು. ಹಾಗಾಗಿ ಹೃದ್ರೋಗಿಗಳು ವಾರದಲ್ಲಿ 2-3 ಮೊಟ್ಟೆಗಳನ್ನು ಸೇವಿಸಿದರೆ ಒಳ್ಳೆಯದು. ಅಲ್ಲದೇ ಮಧುಮೇಹಗಳು ಕೂಡ ದಿನಕ್ಕೆ 1 ಮೊಟ್ಟೆಯನ್ನು ಸೇವುಸುವುದು ಉತ್ತಮ ಎನ್ನಲಾಗುತ್ತದೆ.
ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಗವಿಗಂಗಾಧರೇಶ್ವರನಿಗೆ ಸೂರ್ಯದೇವ ಸ್ಪರ್ಶಿಸಿದ ಈ ವಿದ್ಯಾಮಾನ ಕಣ್ತುಂಬಿಕೊಳ್ಳಲು ಭಕ್ತಗಣ ಸಾಕ್ಷಿಯಾಯಿತು. ಮೊದಲು ದೇವರ ಅಭಿಷೇಕಕ್ಕೆ ಪೂರ್ಣಕುಂಭ ಕಳಸದೊಂದಿಗೆ ದೇವಸ್ಥಾನಕ್ಕೆ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಆಗಮಿಸಿದರು. ಸೂರ್ಯ ರಶ್ಮಿ ಸ್ಪರ್ಶ ವೇಳೆ ಗವಿಗಂಗಾದರೇಶ್ವರನಿಗೆ ಪೂರ್ಣಕುಂಭ ಅಭಿಷೇಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯ ಪ್ರವೇಶ ಮಾಡಿದ ಸೂರ್ಯ ರಶ್ಮಿ ನಂದಿಯನ್ನ ಸ್ಪರ್ಶಿಸಿದ. ದಕ್ಷಿಣಯಾನದಿಂದ ಉತ್ತರಯಾನ ಪಥ ಬದಲಾವಣೆ ಮಾಡಲಿರೋ ಸೂರ್ಯ ಗರ್ಭ ಗುಡಿಯ ಮುಂಭಾಗದಲ್ಲಿರೋ ಸ್ಪಟಿಕ ಲಿಂಗಕ್ಕೆ ಸ್ಪರ್ಶಿಸಿ ಶಿವಲಿಂಗ ಪೀಠದ ಸ್ಪರ್ಶ ಮಾಡಿದ. ಬಳಿಕ ಸೂರ್ಯದೇವ ಈಶ್ವರನ ಪಾದ ಸ್ಪರ್ಶ ಮಾಡಿದನು. ಸೂರ್ಯ ರಶ್ಮಿ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡರು. ಲಿಂಗಭಾಗದಲ್ಲಿ 18 ಸೆಕೆಂಡ್ ಸೂರ್ಯರಶ್ಮಿ ಬಿದ್ದಿದೆ. ಇದರ ಮೇಲೆ ಹೊಸ ವರ್ಷದ ಭವಿಷ್ಯ ಇರಲಿದೆ ಅನ್ನೋದು ನಂಬಿಕೆ.
ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಕೆ ನೀಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಅನಂತ್ ಕುಮಾರ್ ಹೆಗ್ಡೆ ಅವನೊಬ್ಬ ಹುಚ್ಚ ಎಂದು ಏರು ಧ್ವನಿಯಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಕಿಡಿಕಾರಿದ್ದಾರೆ. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗಷ್ಟೇ ಸಿಎಂ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದ ಅನಂತಕುಮಾರ್ ಹೆಗಡೆ ಬಗ್ಗೆ ಮಾತಾಡಿದರು. ಅನಂತ ಕುಮಾರ್ ಒಬ್ಬ ಹುಚ್ಚ. ಹುಚ್ಚರ ಬಗ್ಗೆ ಯಾರಾದರೂ ಮಾತಾಡ್ತಾರಾ?. ಅವನ ಬಗ್ಗೆ ಮಾತಾಡಲ್ಲ. ಅವನ ಬಗ್ಗೆ ಮಾತಾಡಿ ದೊಡ್ಡವನನ್ನಾಗಿಸಿದಂತೆ ಆಗುತ್ತದೆ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ಮಾತಾಡ್ತಾನಲ್ಲ, ಅವನು ಮನುಷ್ಯನಾ ಎಂದು ಅನಂತ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದರು. ಮುನಿಸ್ವಾಮಿ ವಿರುದ್ದವೂ ಕಿಡಿ: ಕಾಂಗ್ರೆಸ್ ಸರ್ಕಾರ ಹಿಂಧೂ ಧರ್ಮ, ಶ್ರೀರಾಮನ ವಿರೋಧಿ ಎಂಬ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಹಳಷ್ಟು ಜನ ಹಿಂದೂಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ.…
ದಾವಣಗೆರೆ: ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ಮೋದಿ ಕರೆ ಹಿನ್ನಲೆಯಲ್ಲಿ ಇಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ದೇಗುಲಗಳ ಸ್ವಚ್ಛತೆಗಿಳಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು ನೀರು ಹಾಕಿ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು. ರೇಣುಕಾಚಾರ್ಯ ಸ್ವಚ್ಛತಾ ಕಾರ್ಯಕ್ಕೆ ಹೊನ್ನಾಳಿ ತಾಲೂಕು ಬಿಜೆಪಿ ಅಧ್ಯಕ್ಷ ಸೇರಿದಂತೆ ಕಾರ್ಯಕರ್ತರ ಸಾಥ್. ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಮನೆಮನೆಗೆ ಮಂತ್ರಾಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರ ಮತ್ತು ಕರ ಪತ್ರ ವಿತರಣೆ.ಮಂತ್ರಾಕ್ಷತೆ ನೀಡಿ ಪೂಜೆ ಸಲ್ಲಿಸುವಂತೆ ಜನರಲ್ಲಿ ಬಿಜೆಪಿ ಕಾರ್ಯಕರ್ತರ ಮನವಿ. ಹೊನ್ನಾಳಿ ತಾಲೂಕಿನ ಕೊಡತಾಳ್ ತಾಂಡ, ಮಾಚಗೊಂಡನಹಳ್ಳಿ ಹಾಗೂ ಮಾಚಗೊಂಡನಹಳ್ಳಿ ತಾಂಡದಲ್ಲಿ ಮಂತ್ರಾಕ್ಷತೆ ವಿತರಣೆ.
ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಕೊಟ್ಟಿರೋ ವಿವಾದಾತ್ಮಕ ಹೇಳಿಕೆಯ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ. ಹೆಗಡೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಇಬ್ಬರು ಟಾಂಗ್ ಕೊಟ್ಟಿದ್ದಾರೆ, ಇತ್ತ ಸ್ವಕ್ಷದ ನಾಯಕರೇ ಹೆಗಡೆ ವಿರುದ್ಧ ತಿರುಗಿಬಿದ್ದಿದ್ದು ಅವರ ಹೇಳಿಕೆಗು ಪಕ್ಷಕ್ಕು ಯಾವುದೆ ಸಂಬಂಧ ಇಲ್ಲ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರರೇ ಕೆಂಡಕಾರಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷ್ ಹೆಗಡೆ ಪರ ನಿಂತಿರೋದು ಕುತೂಹಲ ಕೆರಳಿಸ್ತಿದೆ…. ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ರನ್ನ ಏಕವಚನದಲ್ಲಿ ಬೈದು ನಿಂದಿಸಿದ ವಿಚಾರ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡಿತಿದೆ. ಕಳೆದ 2 ದಿನಗಳಿಂದ ಕಾಂಗ್ರೆಸ್ ನ ಎಲ್ಲಾ ನಾಯಕರು ಹೆಗಡೆ ವಿರುದ್ಧ ಕೆಂಡಕಾರ್ತ ಆಕ್ರೋಶ ಹೊರಹಾಕ್ತಿದ್ರು. ಈಶ್ವರಪ್ಪ ಬಿಟ್ರೆ ಬೇರ್ಯಾವ ಬಿಜೆಪಿ ನಾಯಕರು ಹೆಗಡೆ ಬೆಂಬಲಕ್ಕೆ ನಿಂತಿರಲಿಲ್ಲ. ಇದೀಗ ಹೆಗಡೆ ವಿರುದ್ದ ಕಾಂಗ್ರೆಸ್ ನವರು ಸೇರಿದಂತೆ ಸ್ವಪಕ್ಷದ ನಾಯಕರೇ ತಿರುಗಿಬಿದ್ದಿದ್ದು ಆಕ್ರೋಶ ಹೊರಹಾಕ್ತಿದ್ದಾರೆ. ಈ ಮಧ್ಯೆ ಕೇಂದ್ ಸಚಿವ ಪ್ರಹ್ಲಾದ್…
ಹಾವೇರಿ: ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಾಮೂಹಿಕ ಅತ್ಯಾಚಾರ ಪ್ರಕರಣ: ಅರ್ಜಿ ಪರಿಗಣಿಸಲಾಗುವುದು ಘಟನೆ ನಡೆದು ಒಂದು ತಿಂಗಳು ಆದರೂ ಸರ್ಕಾರದ ಪರವಾಗಿ ಯಾರೂ ಸಾಂತ್ವನ ಹೇಳಿಲ್ಲ ಏನೆಂಬ ಪ್ರಶ್ನೆಗೆ ಉತ್ತರಿಗೆ ಈಗ ತಾನೇ ಅರ್ಜಿ ಕೊಟ್ಟಿದ್ದಾರೆ ಅದನ್ನು ಪರಿಗಣಿಸಲಾಗುವುದು ಎಂದರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾರನ್ನೂ ಕಾನೂನು ಕೈಗೆತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು. ಉಳಿದಂತೆ ನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡುತ್ತಾರೆ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದರೆ ಮಾತ್ರ ಕ್ರಮ ಇಲ್ಲದಿದ್ದರೆ ಇಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಮಾತನಾಡದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದರು.…