ತಮಿಳಿನ ಬಿಗ್ ಬಾಸ್ ಕೂಡ ಮುಗಿದಿದೆ. ಈ ಬಾರಿ ಬಿಗ್ ಬಾಸ್ ಟೈಟಲ್ (Winner) ಗೆದ್ದಿರುವ ಅರ್ಚನಾ ರವಿಚಂದ್ರನ್ (Archana Ravichandran) ಹೊಸ ಇತಿಹಾಸವನ್ನು ಬರೆದಿದ್ದಾರೆ. ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದವರು, ತಮಿಳು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟೈಟಲ್ ವಿನ್ ಆಗಿದ್ದಾರೆ.
ಅರ್ಚನಾ ತಮಿಳು ಬಿಗ್ ಬಾಸ್ ಗೆದ್ದಿದ್ದರೆ, ಮೊದಲ ರನ್ನರ್ ಅಪ್ ಆಗಿ ಮಣಿಚಂದ್ರನ್ ಹೊರ ಹೊಮ್ಮಿದ್ದಾರೆ. ಅರ್ಚನಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರೀ ಮೊತ್ತದ ಹಣವೇ ಅವರ ಗೆಲುವಿಗೆ ಸಾಕ್ಷಿಯಾಗಿದೆ. ವಾರಕ್ಕೆ ಅವರು ಎರಡೂವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.
77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಚನಾ, ಟಫ್ ಕಂಟೆಸ್ಟೆಂಟ್ ಆಗಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.