ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುಂಡೂರು ಎಂಬಲ್ಲಿ ರಾಮಮಂದಿರ ಮಂತ್ರಾಕ್ಷತೆ ವಿತರಣಾ ಸಂಚಾಲಕನ ಮೇಲೆ ಹಲ್ಲೆ ನಡೆದಿದೆ ಸಂತೋಷ್ ಮೇಲೆ ಸ್ಥಳೀಯ ನಿವಾಸಿ ಧನಂಜಯ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದಾರೆ ಆರೋಪಿಸಲಾಗಿದೆ. ಗಲಾಟೆ ತಡೆಯಲು ಬಂದ ಸಂತೋಷ್ ತಾಯಿ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಂತೋಷ್ ಅವರು ಮನೆ ಮನೆಗೆ ಅಕ್ಷತೆ ಹಂಚುವುದಕ್ಕೆ ಒಂದು ಗುಂಪು ವಿರೋಧವ್ಯಕ್ತಪಡಿಸಿತ್ತು. ಇದೇ ದ್ವೇಷದಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Author: AIN Author
ಧಾರವಾಡ- ಅಯೋಧ್ಯ ಪ್ರಭ ಶ್ರೀರಾಮನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾನಕ್ಕೆ ದಿನಗಳು ಸಮೀಪಿಸುತ್ತಿದ್ದು, ರಾಮ ಭಕ್ತರು ವಿವಿಧ ಕಡೆಗಳಿಂದ ತೆರಳುತ್ತಿದ್ದು, ಅದೇ ರೀತಿ ಧಾರವಾಡ ಹುಬ್ಬಳ್ಳಿಯ ಯುವಕರು ಈಗ ಬೈಕ್ ಮೂಲಕ ಅಯೋಧ್ಯಗೆ ಇಂದು ತೆರಳಿದರು. ಇದೇ ಜನವರಿ 22 ರಂದು ನಡೆಯಲಿರೋ ಅಯೋಧ್ಯ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಉದ್ದೇಶದಿಂದ ಧಾರವಾಡ ಹುಬ್ಬಳ್ಳಿಯ ನಾಲ್ವರು ಯುವಕರು ಬೈಕ ಮೂಲಕ ಪ್ರಾಯಣ ಬೆಳಿಸಿದರು. ಒಂದು ರಾಯಲ್ಡ ಎನಿಪೀಲ್ಡ್, ಮತ್ತೊಂದು ಬೆನಾಲಿ ಬೈಕ್ ಮೂಲಕ ದರ್ಶನ್ ಪವಾರ, ದರ್ಶನ್ ಭಾವೆ, ಬಾಲರಾಜ ದೊಡಮನಿ, ಲಕ್ಷ್ಮಣ ಹಂಚಿನಮನಿ ಯುವಕರು ತೆರಳುತ್ತಿದ್ದು, 2000 ಸಾವಿರ ಕಿಲೋಮೀಟರ್ ಬೈಕ್ ಪ್ರಯಾಣಕ್ಕೆ ಸಾರ್ವಜನಿಕರು ಜೈ ಶ್ರೀರಾಮಘೋಷಣೆ ಕೂಗುವ ಮೂಲಕ ಬೀಳ್ಕೊಟ್ಟರು. ಇನ್ನೂ ನಾಲ್ವರು ಯುವಕರು ನಾಲ್ಕು ದಿನದಲ್ಲಿ ಅಯೋಧ್ಯ ತಲುಪುವ ಯೋಜನೆ ಹೊಂದಿದ್ದು, ಇಂದು ಧಾರವಾಡದಿಂದ ತಮ್ಮ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸೇರಿದಂತೆ ಸ್ನೇಹಿತರು ಯುವಕರಿಗೆ ಆಲ್ದ ಬೇಸ್ಟ್ ಹೇಳಿ ಶುಭ ಹಾರೈಸಿದರು.
ಗದಗ: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಟಿಕೇಟ್ ಆಕಾಂಕ್ಷಿಗಳು ಸಹ ಇದೀಗ ಫುಲ್ ಆ್ಯಕ್ಟಿವ್ ಆಗಿದ್ದು ತಮಗೇ ಟಿಕೆಟ್ ನೀಡುವಂತೆ ವರಿಷ್ಠರ ಗಮನ ಸೆಳೀತಿದ್ದಾರೆ. ಗದಗ ನಗರದ ಪತ್ರಿಕಾ ಭವನದಲ್ಲಿ ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಆರ್ ಎಂ ಕುಬೇರಪ್ಪ ಸುದ್ದಿಗೋಷ್ಠಿ ನಡೆಸಿ ನಾನು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಎರಡು ತಿಂಗಳಿನಿಂದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ನಾಯಕರಿಗೆ ಭೇಟಿ ಮಾಡಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. 8ತಾಲೂಕಿನ ಶಾಸಕರಿಗೆ ವಯಕ್ತಿಕವಾಗಿ ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ಜಿ. ಪಂ, ತಾ. ಪಂ, ಗ್ರಾಂ. ಪಂ, ಬ್ಲಾಕ್ ಕಾಂಗ್ರೆಸ್ ಸದಸ್ಯರಿಗೆ ಸುಮಾರು 10ಸಾವಿರ ಪತ್ರಗಳನ್ನು ಬರೆದಿದ್ದೇನೆ. ಜೊತೆಗೆ ಎಐಸಿಸಿ ಮುಖಂಡರಿಗೂ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೇನೆ ಅಂದ್ರು.
ಬೆಂಗಳೂರು: ಬಿಎಂಟಿಸಿ, ಕಿಲ್ಲರ್ ಬಿಎಂಟಿಸಿ ಎಂಬೆಲ್ಲಾ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದೆ. ಆದರೆ ಬಿಎಂಟಿಸಿ ಪ್ರಕಾರ ಸಂಸ್ಥೆಯ ಚಾಲಕರ ನಿರ್ಲಕ್ಷ್ಯ ಮಾತ್ರವೇ ಇದಕ್ಕೆಲ್ಲ ಕಾರಣ ಅಲ್ಲವಂತೆ. ಹಾಗಾದ್ರೆ ಆಗ್ತಿರೋ ಅಪಘಾತ ಪ್ರಕರಣಗಳಲ್ಲಿ ಬಿಎಂಟಿಸಿ ಪಾತ್ರ ಏನು..? ಬೈಕ್ ಸವಾರರು ಯಾಕೆ ಕಾರಣ? ಅವರ ಸಬೂಬು ಏನು ಅಂತೀರಾ..? ಈ ಸ್ಟೋರಿ ನೋಡಿ.. ಇತ್ತೀಚೆಗೆ ಮೇಲಿಂದ ಮೇಲೆ ವರದಿಯಾಗುತ್ತಿರುವ ಬಿಎಂಟಿಸಿ ಬಸ್‌ಗಳ ಅಪಘಾತಗಳು ಸಂಸ್ಥೆಯನ್ನ ಮುಜುಗರಕ್ಕೀಡು ಮಾಡಿದೆ. ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಪ್ರಯಾಣಿಕರು ಸಾವನ್ನಪ್ಪುತ್ತಿದ್ದು, ಇದಕ್ಕೆ ಚಾಲಕರ ನಿರ್ಲಕ್ಷ್ಯದ ಚಾಲನೆಯೇ ಕಾರಣ, ಕಿಲ್ಲರ್ ಬಿಎಂಟಿಸಿ ಅಂತಾ ಆಕ್ರೋಶವೂ ವ್ಯಕ್ತವಾಗಿದೆ.ಆದರೆ ಬಿಎಂಟಿಸಿ ಇದು ನಮ್ಮ ತಪ್ಪಲ್ಲ ಬೈಕ್ ಸವಾರರ ರ್ಯಾಷ್ ಡ್ರೈವಿಂಗ್ ಕಾರಣ ಅಂತ ಸಿಸಿಟಿವಿ ರಿಲೀಸ್ ಮಾಡಿ ಸಾಕ್ಷಿ ಸಮೇತ ವಾದ ಮಾಡ್ತಿದೆ..ಅವುಗಳನ್ನ ಒಂದೊಂದಾಗಿ ತೊರಿಸ್ತಿವಿ ನೋಡಿ.. https://ainlivenews.com/we-have-no-objection-if-priyanka-gandhi-contests-from-koppal-raghavendra-hitnal/ ಸಾಕ್ಷಿ 1 ದಿನಾಂಕ: 5 ಜನವರಿ 2024 ಸ್ಥಳ: ಮರತ್ತಹಳ್ಳಿ ಬ್ರಿಡ್ಜ್ ಏಕಾಏಕಿ ಬಿದ್ದ ಬೈಕ್ ಸವಾರ..ಚಾಲಕನ ಮೇಲೆ ಹರಿದ ಬಿಎಂಟಿಸಿ ಬಸ್ —– GFX…
ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿಯವರು ಸ್ಪರ್ಧೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ, ನಾವು ಸ್ವಾಗತಿಸುತ್ತೇವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿಯವರು ಕೊಪ್ಪಳದಿಂದ ಸ್ಪರ್ಧೆ ಮಾಡುವ ಸುದ್ದಿ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿಯವರು ಕೊಪ್ಪಳಕ್ಕೆ ಬರುವುದಾದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇವೆ. ಇಲ್ಲಿಂದ ಅವರು ಸ್ಪರ್ಧಿಸಿದರೆ ಹೆಚ್ಚು ಅಂತರದಿಂದ ಗೆಲ್ಲಿಸುತ್ತೇವೆ ಎಂದಿದ್ದಾರೆ. ಸಹೋದರ ಹಾಗೂ ಕಳೆದ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ರಾಜಶೇಖರ್ ಹಿಟ್ನಾಳ್ ಜೊತೆ ಬಂದು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಾರಿಯೂ ಸಹೋದರ ರಾಜಶೇಖರ್ ಹಿಟ್ನಾಳ್‍ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ನನ್ನ ಸಹೋದರನಿಗೂ ಟಿಕೆಟ್ ಕೇಳಿದ್ದೇನೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಬೆಂಗಳೂರು : ದೇಶದಲ್ಲಿ 25 ಕೋಟಿ ಜನರು ಬಡತನಮುಕ್ತರಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗರೀಬಿ ಹಠಾವೋ ಎಂದಿದ್ದು ಕಾಂಗ್ರೆಸ್. ಆದರೆ, ಅದನ್ನು ಸಾಧಿಸಿ, ಬಡತನ ನಿರ್ಮೂಲನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಇದಲ್ಲವೇ ಅಚ್ಛೆದಿನ್? ಎಂದು ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಕಳೆದ 9 ವರ್ಷದಲ್ಲಿ ಭಾರತದ ಬಡತನ ಸಂಖ್ಯೆ ಕುಸಿತ, ಇದು ನೀತಿ ಆಯೋಗದ ವರದಿ. 2013-14ರ ವೇಳೆಗೆ ಭಾರತದಲ್ಲಿ ಶೇ.29.17 ರಷ್ಟಿದ್ದ ಬಡನತ ಸಂಖ್ಯೆ ಅನುಪಾತ 2022-23ರ ವೇಳೆ ಶೇಕಡಾ 11.28ಕ್ಕೆ ಕುಸಿತ ಕಂಡಿದೆ. 9 ವರ್ಷದಲ್ಲಿ 24.82 ಕೋಟಿ ಮಂದಿ ಬಡತನದಿಂದ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ. 2013 ರಿಂದ 2023ರ ಅವಧಿಯಲ್ಲಿ ಒಟ್ಟು 24.8 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿ ಆಯೋಗ ಸಿದ್ಧಪಡಿಸಿದ ಬಹು ಆಯಾಮ ಅಳತೆ ಆಧಾರದಲ್ಲಿ ನಡೆದ ಅಧ್ಯಯನದಲ್ಲಿ ಈ…
ಸಿಂಪಲ್ ಆಗಿ ಎರಡು ಪೊಂಗಲ್ ಒಮ್ಮೆಗೆ ಮಾಡುವುದು ಹೇಗೆ ಇಲ್ಲಿದೆ ನೋಡಿ ತಯಾರಿಸುವ ವಿಧಾನ.. ಬೇಕಾಗುವ ಪದಾರ್ಥಗಳು: ಸಿಹಿಪೊಂಗಲ್ ಗೆ ಹೆಸರು ಬೇಳೆ- ಒಂದು ಕಪ್, ಅಕ್ಕಿ- ಒಂದು ಕಪ್, ತುಪ್ಪ- ಎರಡು ಚಮಚ, ಅಲ್ಪ ಪ್ರಮಾಣದಲ್ಲಿ ಗೋಡಂಬಿ, ದ್ರಾಕ್ಷಿ, ಖಾರಾಪೊಂಗಲ್ ಗೆ ಹಸಿಶುಂಠಿ, ಕೊತ್ತಂಬರಿ, ಕರಿಬೇವು, ಅರಿಶಿನ, ಕೊಬ್ಬರಿ, ಉಪ್ಪು, ಜೀರಿಗೆ, ಹಸಿಮೆಣಸು. ಮಾಡುವ ವಿಧಾನ: ಹೆಸರು ಬೇಳೆಯನ್ನು ಚೆನ್ನಾಗಿ ಹುರಿದು ಬಳಿಕ ಅಕ್ಕಿಯನ್ನು ಹಾಕಿ ಸ್ವಲ್ಪ ಬಾಡಿಸಿ ಬಳಿಕ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಹಾಕಿ ಕುಕ್ಕರ್‌ನಲ್ಲಿ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಒಂದು ವಿಶಲ್ ಕೂಗಿಸಿದರೆ ಪೊಂಗಲ್ ರೆಡಿಯಾಗಲಿದೆ. ಇಲ್ಲಿ ಹೆಸರುಬೇಳೆ ಮತ್ತು ಅಕ್ಕಿಯ ಜೊತೆಯಲ್ಲಿ ಬೆಲ್ಲದ ನೀರನ್ನು ಸೋಸಿ ಹಾಕಿ ಅದಕ್ಕೆ ಕೊಬ್ಬರಿ, ದ್ರಾಕ್ಷಿ, ಕೇಸರಿಯನ್ನು ತುಪ್ಪದಲ್ಲಿ ಹುರಿದು ಹಾಕಿ ಬೇಯಿಸಿದರೆ ಸಿಹಿಪೊಂಗಲ್ ತಯಾರಾಗಲಿದೆ. ಇನ್ನು ಖಾರಾಪೊಂಗಲ್ ಗೆ ಹೆಸರುಬೇಳೆ ಮತ್ತು ಅಕ್ಕಿಯ ಜೊತೆಗೆ ಹಸಿಶುಂಠಿ, ಕೊತ್ತಂಬರಿ, ಕರಿಬೇವು, ಅರಿಶಿನ,…
ಮಂಗಳೂರು:- ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬೆಂಗಳೂರು ಮೂಲದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿ ಜೋಡಿಯನ್ನು ತಡೆದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಜೋಡಿಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು: ಸಂಸದ ಅನಂತ್‌ಕುಮಾರ್ ಹೆಗಡೆ ಬಂಧನ ಮಾಡಬೇಕಾ, ಬೇಡ್ವಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಸಂಸದರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಸದರ ಮೇಲೆ ಎಫ್‌ಐಆರ್ ಆಗಿದೆ. ಪೊಲೀಸರು ಸಾಕ್ಷ್ಯ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅದಾದ ಮೇಲೆ ಮುಂದಿನ ಕ್ರಮ ಏನು ಆಗಬೇಕೋ ಅದು ಕಾನೂನು ರೀತಿ ಆಗುತ್ತದೆ. ಅವರನ್ನು ಅರೆಸ್ಟ್ ಮಾಡಬೇಕಾ, ಮಾಡಬಾರದಾ ಎಂದು ಸ್ಥಳೀಯ ಪೊಲೀಸರು ನಿರ್ಧಾರ ಮಾಡುತ್ತಾರೆ ಎಂದರು. ನಾವು ಗೃಹ ಇಲಾಖೆಯಿಂದ ಯಾವುದೇ ಡೈರೆಕ್ಷನ್ ಕೊಡೋದಿಲ್ಲ. ಅವರನ್ನು ಅರೆಸ್ಟ್ ಮಾಡಿ, ಬಿಡಿ ಅಂತ ನಾನು ಯಾವತ್ತೂ ಯಾರಿಗೂ ಹೇಳಿಲ್ಲ. ಹೇಳೋದು ಇಲ್ಲ. ಸ್ಥಳೀಯ ಪೋಲೀಸರು ಯಾವ ಸೆಕ್ಷನ್ ಹಾಕಬೇಕೋ ಆ ಸೆಕ್ಷನ್ ಹಾಕಿದ್ದಾರೆ. ಆ ಸೆಕ್ಷನ್‌ನಲ್ಲಿ ಅರೆಸ್ಟ್ ಮಾಡಬೇಕು ಎಂದು ಇದ್ದರೆ ಅರೆಸ್ಟ್ ಮಾಡುತ್ತಾರೆ ಎಂದು ತಿಳಿಸಿದರು
ಕಲಬುರಗಿ : ಬಿಜೆಪಿಯನ್ನ ಮತ್ತಷ್ಟು ಬಲಪಡಿಸಲು ನಿರ್ಧರಿಸಿರುವ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದೀಗ ಕಲಬುರಗಿಯ ಜಿಲ್ಲಾ ಘಟಕಕ್ಕೆ ಜೋಡೆತ್ತುಗಳನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನಗರ ಘಟಕಕ್ಕೆ ಚಂದು ಪಾಟೀಲ್ ಹಾಗು ಗ್ರಾಮಾಂತರ ಘಟಕಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ ನೇಮಕವಾಗಿದ್ದಾರೆ..ಈಗಾಗಲೇ ರದ್ದೇವಾಡಗಿ ಒಂದು ಬಾರಿ ಅಧ್ಯಕ್ಷರಾಗಿ ಇದೀಗ ಎರಡನೇ ಬಾರಿಗೂ ಆಯ್ಕೆಯಾಗಿ ಜಾಕ್ ಪಾಟ್ ಹೊಡೆದಿದ್ದಾರೆ. ಇಬ್ಬರೂ ಮುಖಂಡರು ಒಟ್ಟಾಗಿ ಕಾರ್ಯಕರ್ತರ ಜೊತೆ ಶ್ರಮಿಸಿ ಲೋಕ ಸಮರ ಗೆಲ್ಲಲು ಮುಂದಾಗಿ ಅಂತ ಬಿವೈವಿ ಕಿವಿಮಾತು ಹೇಳಿದ್ದಾರೆ…