ಚಾಮರಾಜನಗರ:- ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ರಥೋತ್ಸವ ಚಿಕ್ಕಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಂಗಳವಾರ ನೆರವೇರಿತು. ರಥೋತ್ಸವ ಹಿನ್ನೆಲೆಯಲ್ಲಿ ವಿವಿಧ ಬಗೆಯ ಹೂಗಳಿಂದ ತೇರನ್ನು ಸಿಂಗರಿಸಲಾಗಿತ್ತು, ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಎಂಬ ಜಯ ಘೋಷದೊಂದಿಗೆ ತೇರನ್ನು ಎಳೆದರು. ಮಹಾ ರಥೋತ್ಸವದಲ್ಲಿ ಪ್ರಮುಖವಾಗಿ ಶಂಖ,ಜಾಗಟೆಯ ನೀನಾದ ಮೊಳಗಿದವು. ಸಾವಿರಾರು ಭಕ್ತರು ಮನೆ ಗೋಡೆಗಳ ಮೇಲೆ ಕುಳಿತು ರಥೋತ್ಸವ ವೀಕ್ಷಣೆ ಮಾಡಿದರು.ಬೆಳಗ್ಗೆ 11:50ಕ್ಕೆ ರಥಾರೋಹನ ಮಾಡಲಾಯಿತು. 11:53 ಕ್ಕೆ ಗರುಡ ಹಾರಾಡಿತು. ನಂತರ 12:25 ಕ್ಕೆ ತೇರನ್ನು ಎಳೆಯಲಾಯಿತು. ದೇವಸ್ಥಾನಕ್ಕೆ ಸುತ್ತು ಹಾಕಿದ ತೇರು ಬಳಿಕ ಸ್ವಸ್ಥಾನದಲ್ಲಿ ಬಂದು ಸೇರಿತ್ತು, ರಥೋತ್ಸವಕ್ಕೆ ಆಗಮಿಸಿದ ನವ ಜೋಡಿಗಳು ಹಾಗೂ ಭಕ್ತರು ತೆರಿಗೆ ಹಣ್ಣು,ದವನ ಎಸೆದು ಹರಕೆ ತೀರಿಸಿದರು.ಅಲ್ಲದೆ ಹೊಸ ವರ್ಷದ ಮೊದಲ ರಥೋತ್ಸವ ಹಿನ್ನೆಲೆಯಲ್ಲಿ ಈ ಭಾಗದ ರೈತರು ತಾವು ಬೆಳೆದ ಧಾನ್ಯಗಳನ್ನು ತೆರಿಗೆ ಎಸೆದು ದೇವರಿಗೆ ಸಮರ್ಪಿಸಿದರು.ಆ ಮೂಲಕ ಮುಂದಿನ ಇಳುವರಿ ವೃದ್ಧಿಸುವಂತೆ…
Author: AIN Author
ಬೆಂಗಳೂರು:- 545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇದೇ ಜನವರಿ 23 ರಂದು 545 ಪಿಎಸ್‌ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ ಮಾಡಿದೆ ಇನ್ನೂ ಅಭ್ಯರ್ಥಿಗಳು, ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಕಮ್ಮಿ ಇರುವ ಪ್ಯಾಂಟ್ ಗಳು ಬಳಸಲು ಸೂಚನೆ ನೀಡಲಾಗಿದೆ. ಅಲ್ಲದೇ ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ ಗಳಿಗೆ ಅನುಮತಿ ಇಲ್ಲ. ಮಾರ್ಗಸೂಚಿ ಹೀಗಿದೆ:- ಶರ್ಟ್ ಅಥವಾ ಪ್ಯಾಂಟ್ ಗಳಿಗೆ ಜಿಪ್ ಪ್ಯಾಕೆಟ್ ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರಬಾರದು. ಪರೀಕ್ಷಾ ಹಾಲ್ ಗೆ ಶೂ ಹಾಕಿಕೊಂಡು ಹೋಗುವುದು ನಿಷೇಧಿಸಲಾಗಿದ್ದು, ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ ನೀಡಲಾಗಿದೆ. ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್ ಗೆ ಪ್ರವೇಶವಿಲ್ಲ. ಯಾವುದೇ ರೀತಿಯಾದ ಅಹಾರ,…
ಹಾಸನ:- ಪುಂಡಾನೆಗಳ ಸೆರೆ ಕಾರ್ಯಾಚರಣೆ ಹಾಸನದಲ್ಲಿ ಮುಂದುವರಿದಿದೆ. ನಿನ್ನೆ ತಣ್ಣೀರ್ ಹೆಸರಿನ ಮತ್ತೊಂದು ಬೃಹತ್ ಗಾತ್ರದ ಬಲಿಷ್ಠ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಂಟು ಸಾಕಾನೆಗಳ ಟೀಂ ಮತ್ತೊಂದು ಪುಂಡಾನೆಯನ್ನು ಖೆಡ್ಡಾಕ್ಕೆ ಕೆಡವಿದ್ದು ಆಪರೇಷನ್ ಪುಂಡಾನೆ ಕಾರ್ಯಾಚರಣೆ ಮುಂದುವರೆದಿದೆ. ಡಿಸೆಂಬರ್ 4 ರಂದು ದಸರಾ ಆನೆ ಅರ್ಜುನನ ಸಾವಿನ ಬಳಿಕ ಸ್ಥಗಿತವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ ವಾಗಿದೆ. ಮಂಗಳವಾರ ಬೇಲೂರು ತಾಲ್ಲೂಕಿನ ಸಿಂಗರವಳ್ಳಿ ಗ್ರಾಮದಲ್ಲಿ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಒಂದು ವರ್ಷದಿಂದ ಆಲೂರು ಬೇಲೂರು ಭಾಗದಲ್ಲಿ ಓಡಾಡುತ್ತಾ ಆತಂಕ ಸೃಷ್ಟಿ ಮಾಡಿದ್ದ ಒಂಟಿ ಸಲಗವನ್ನು ಅಧಿಕಾರಿಗಳು ಆಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಕಿರುತೆರೆ ಜನಪ್ರಿಯ ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸೀರಿಯಲ್ ನಾಯಕಿ ಸಂಜನಾ ಬುರ್ಲಿ (Sanjana Burli) ಇದೀಗ ಲವ್ ರೀಸೆಟ್ ಅಂತ ಹೊಸ ಲವ್ ಸ್ಟೋರಿ ಹೇಳಲು ಸಜ್ಜಾಗಿದ್ದಾರೆ. ಸದ್ಯ ಸಂಕ್ರಾಂತಿ ಹಬ್ಬದಂದು (ಜ.15) ‘ಲವ್ ರೀಸೆಟ್’ (Love Reset) ಚಿತ್ರದ ಟ್ರೈಲರ್ ಮೂಲಕ ನಟಿ ಸದ್ದು ಮಾಡುತ್ತಿದ್ದಾರೆ ಸಂಜನಾ ಬುರ್ಲಿ ಮತ್ತು ಪವನ್ ಕುಮಾರ್ (Pavan Kumar) ನಟಿಸಿರುವ ‘ಲವ್ ರೀಸೆಟ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಸ್ನೇಹ ಪಾತ್ರ ಮರೆಸುವಷ್ಟು ಡಿಫರೆಂಟ್ ರೋಲ್‌ನಲ್ಲಿ ಸಂಜನಾ ನಟಿಸಿದ್ದು, ಟ್ರೈಲರ್ ಝಲಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಸಿಗುತ್ತಿದೆ. ಇದೀಗ ಬಿಟ್ಟಿರುವ ಟ್ರೈಲರ್ ತುಣುಕಿನಲ್ಲಿ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಆ್ಯಕ್ಟೀವ್ ಇರುವ ನಟಿ ಸಂಜನಾಗೆ ‘ಲವ್ ರೀಸೆಟ್’ ಚಿತ್ರದ ಕಥೆ ಹೇಳಿದಾಗ, ಸ್ಟೋರಿ ಲೈನ್ ವಿಭಿನ್ನ ಎಂದೆನಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಪ್ರೇಮ ಕಥೆ ಹೇಳಲು ನಟಿ…
ಬೆಂಗಳೂರು:- ಸಿಎಂ ಕಾರ್ಯದರ್ಶಿಯ ಪಿಎ ಎಂದು ಮಹಿಳಾ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ನಗರದ ವಿಧಾನಸೌಧ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋಪಾಲಸ್ವಾಮಿ ಬಂಧಿತ ಆರೋಪಿ. ಆರೋಪಿ ಮುಖ್ಯಮಂತ್ರಿ ಕಾರ್ಯದರ್ಶಿ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನು. ಈತ ಡಿಜಿ ಕಚೇರಿ, ಕಮಿಷನರ್ ಕಚೇರಿಯಿಂದ ಕರೆ ಮಾಡ್ತಿದ್ದೇನೆಂದು ಹೇಳಿ ಕಂದಾಯ ಇಲಾಖೆಯ ಮಹಿಳಾ ಅಧಿಕಾರಿಗಳ ಬಗ್ಗೆ ವಿವರ ಕಲೆ ಹಾಕುತ್ತಿದ್ದ. ಈತನ ನಿಜ ಬಣ್ಣ ತಿಳಿದು, ಓರ್ವ ಅಧಿಕಾರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಅಸಲಿ ಸತ್ಯ ಗೊತ್ತಾಗಿದೆ.
ಹಾಸನ:- 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುತ್ತದೆ. ಇದರಲ್ಲಿ ಹೆಚ್ಚು ಸ್ಥಾನ ಗೆದ್ದರೆ ಅಡೆತಡೆ ಇಲ್ಲದೆ 5 ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೇಳಿದ್ದಾರೆ. ಚುನಾವಣೆಗೂ ಮೊದಲು 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಅವುಗಳನ್ನು ಜಾರಿಗೊಳಿಸಲಾಗಿದೆ. ಬಡವರು, ಶೋಷತರಿಗಾಗಿ ಕೆಲಸ ಮಾಡುವ ಹಂಬಲ ಕಾಂಗ್ರೆಸ್ಗೆ ಇದೆ. ಹಾಗಾಗಿ ನೀವೆಲ್ಲರೂ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು ಎಂದು ಯತೀಂದ್ರ ಕರೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ನೈತಿಕವಾಗಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬೆಂಬಲ ಸಿಗಲಿದೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಖರ್ಚು ಆಗುತ್ತದೆ. ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣವನ್ನು ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು.…
ಗಂಗಾವತಿ:- ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ 46 ವರ್ಷದ ಮುರ್ತುಜಾ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಮೂಲಕ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ತಿಂಗಳಿಗೆ ಎರಡ್ಮೂರು ಅಪಘಾತವಾಗುತ್ತವೆ. ರಸ್ತೆಗೆ ಸ್ಪೀಡ್ ಬ್ರೇಕರ್ ಹಾಕುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದ ಗ್ರಾಮಸ್ಥರು ಒಂದು ಗಂಟೆಗಳ ಕಾಲ ರಸ್ತೆ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಟೆನ್ನಿಸ್ ಲೋಕದ ದಿಗ್ಗಜ ನೊವಾಕ್ ಜೊಕೊವಿಕ್ ಅವರು ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿಯನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರು ನನ್ನ ಬಗ್ಗೆ ಆಡುವ ಮಾತುಗಳನ್ನು ಕೇಳಲು ತುಂಬಾ ಸಂತೋಷವಾಗುತ್ತದೆ ಎಂದ ಸರ್ಬಿಯಾದ ತಾರೆ, ಕ್ರಿಕೆಟ್ ಲೋಕದ ಸ್ಟಾರ್ ಆಟಗಾರನ ಸಾಧನೆಗಳನ್ನು ಕೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ. “ನನಗೆ ವಿರಾಟ್ ಕೊಹ್ಲಿಯನ್ನು ನೇರವಾಗಿ ಭೇಟಿ ಆಗಬೇಕು ಎಂದು ತುಂಬಾ ಅನಿಸುತ್ತದೆ. ಕಳೆದ 10 ರಿಂದ 11 ವರ್ಷಗಳಲ್ಲಿ ನಾನು ಭಾರತಕ್ಕೆ ಒಮ್ಮೆ ಮಾತ್ರ ಭೇಟಿ ನೀಡಿದ್ದೇನೆ. ನವದೆಹಲಿಯಲ್ಲಿ 2 ದಿನಗಳ ಕಾಲ ನಡೆದಿದ್ದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ. ಅದು ನಾನು ಭಾರತದಲ್ಲಿ ಕಳೆದ ಸುದೀರ್ಘ ಸಮಯವಾಗಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕಲೆ ಹಾಗೂ ಸಂಸ್ಕೃತಿ ಹೊಂದಿರುವ ದೇಶಕ್ಕೆ ಶೀಘ್ರವೇ ಭೇಟಿ ನೀಡಲು ಬಯಸಿದ್ದೇನೆ,” ಎಂದು ಹೇಳಿದ್ದಾರೆ. ನನಗೆ ಭಾರತದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರ ಜೊತೆಗೆ ವೈಯಕ್ತಿಕವಾಗಿ ವಿಶೇಷ…
ದಾವಣಗೆರೆ:- ಟ್ರ್ಯಾಕ್ಟರ್‌ಗೆ ಮಾರುತಿ ಓಮಿನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕಿನ ಗುಳ್ಳೇಹಳ್ಳಿ ಗ್ರಾಮದ ಬಳಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ. 64 ವರ್ಷದ ರುದ್ರೇಶಪ್ಪ, 62 ವರ್ಷದ ಮಲ್ಲಿಕಾರ್ಜುನ್ ಹಾಗೂ 80 ವರ್ಷದ ಗಂಗಮ್ಮ ಮೃತ ದುರ್ದೈವಿಗಳು. ರತ್ನಮ್ಮ ಅವರಿಗೆ ತೀವ್ರ ಗಾಯಗಳಾಗಿವೆ. ಇವರು ವಾಹನದಲ್ಲಿ ಸಂತೇಬೆನ್ನೂರು ಕಡೆಯಿಂದ ಚನ್ನಗಿರಿ ಕಡೆಗೆ ಬರುತ್ತಿದ್ದರು. ಈ ವೇಳೆ ರಾಜ್ಯ ಹೆದ್ದಾರಿಯಲ್ಲಿ ಭತ್ತದ ಹುಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಹೊಡೆತದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಟೀಮ್ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಆಡಿದ 95 ಪಂದ್ಯಗಳಿಂದ ಒಟ್ಟು 490 ವಿಕೆಟ್‌ಗಳನ್ನು ಪಡೆಯುವ ಮೂಲಕ ದಿಗ್ಗಜ ಬೌಲರ್ ಆಗಿ ಬೆಳೆದುನಿಂತಿದ್ದಾರೆ. ಆದರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಂಥದ್ದೇ ಛಾಪು ಮೂಡಿಸುವಲ್ಲಿ ಅಶ್ವಿನ್ ವಿಫಲರಾಗಿದ್ದಾರೆ. 37 ವರ್ಷದ ಅನುಭವಿ ಆಟಗಾರ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು. ಲೀಗ್ ಹಂತದಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಡಿದ್ದ ಅಶ್ವಿನ್ 34 ರನ್ ಕೊಟ್ಟು 1 ವಿಕೆಟ್ ಪಡೆದಿದ್ದರು. ಬಳಿಕ ಅವರನ್ನು ಯಾವುದೇ ಪಂದ್ಯಕ್ಕೆ ಆಯ್ಕೆ ಮಾಡಲಾಗಲಿಲ್ಲ. “ಅಶ್ವಿನ್ ಒಬ್ಬ ದಿಗ್ಗಜ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೂ ಅವರು ಒಡಿಐ ಮತ್ತು ಟಿ20-ಐ ಕ್ರಿಕೆಟ್ ಆಡಲು ನಾಲಾಯಕ್ ಅವರ ಬ್ಯಾಟಿಂಗ್ ಮೂಲಕ ಕೊಡುಗೆ ಏನಿದೆ? ಒಬ್ಬ ಫೀಲ್ಡರ್ ಆಗಿ ಅವರು ಎಷ್ಟು ಪರಿಣಾಮಕಾರಿ? ಟೆಸ್ಟ್ ತಂಡದಲ್ಲಿ ಖಂಡಿತಾ…