ಬೆಂಗಳೂರು ಗ್ರಾಮಾಂತರ: ಇತ್ತೀಚಿಗೆ ಬೇರೆ ಮಕ್ಕಳನ್ನ ತಂದು ಭಿಕ್ಷಾಟನೆ ಮಾಡುವ ಬಗ್ಗೆ ಸಾಕಷ್ಟು ದೂರ ಕೇಳಿ ಬಂದಿತ್ತು ಅದಲ್ಲದೆ ತಮ್ಮದಲ್ಲದ ಮಕ್ಕಳನ್ನು ಕರೆತಂದು ಭಿಕ್ಷಾಟನೆ ಮಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಪೊಲೀಸರಾಗಲಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ದೂರು ನೀಡುವಂತೆ ಇನ್ಸ್ ಪೆಕ್ಟರ್ ಚಂದ್ರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೀದಿಬದಿ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಣ ಕಾರ್ಯಾಚರಣೆ ವಿಚಾರವಾಗಿ ಆನೇಕಲ್ ತಾಲೂಕಿನ ಸಂತೆ ಬೀದಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇನ್ನು ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇನ್ಸ್ ಪೆಕ್ಟರ್ ಚಂದ್ರಪ್ಪ ರಸ್ತೆಯಲ್ಲಿ ಭಿಕ್ಷೆಯನ್ನು ಬೇಡುವ ಮಕ್ಕಳು ಸಾಮಾನ್ಯವಾಗಿ ಅವರದ್ದಲ್ಲ ಯಾರದೋ ಮಕ್ಕಳನ್ನು ತಂದು ಸಂತೆಗಳಲ್ಲಿ ಬೀದಿಗಳಲ್ಲಿ ಭಿಕ್ಷಾಟನೆಯನ್ನು ಮಾಡುತ್ತಿದ್ದಾರೆ ಹಾಗಾಗಿ ಸಾರ್ವಜನಿಕರು ಈ ಬಗ್ಗೆ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ…
Author: AIN Author
ಬೆಳಗಾವಿ: ಕಾಂಗ್ರೆಸ್ನವರು ಬಿಜೆಪಿಯಿಂದ ಸಭ್ಯತೆ ಕಲಿಯುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಹೇಳಿದ್ದಾರೆ. ಕಾಂಗ್ರೆಸ್ನವರು ಸಭ್ಯತೆ ಕಲಿಯಲಿ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘‘ಇದೇನು ಮೊದಲಲ್ಲ. ಈ ರಾಷ್ಟ್ರದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ನಾವೆಲ್ಲರೂ ಅಪ್ಪಿ, ಒಪ್ಪಿ ಬಾಳುತ್ತಿದ್ದೇವೆ. ಆದರೆ, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದ ಆ ವ್ಯಕ್ತಿ ಸಂಸ್ಕಾರವಂತರಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟು ಜಾಣರು ಎಂದರೆ ಒಳ್ಳೆಯ ಮಗು ಹುಟ್ಟಿದರೆ ನಮ್ಮದು, ಕೆಟ್ಟ ಮುಗು ಹುಟ್ಟಿದರೆ ಬೀದಿಯದ್ದು ಎನ್ನುತ್ತಾರೆ‘‘ ಎಂದು ಲೇವಡಿ ಮಾಡಿದರು. ಟೀಕೆ ಮಾಡಲು ಇವರಿಗೆ ಒಳ್ಳೆಯ ಪದಗಳೇ ಸಿಗುವುದಿಲ್ಲ. ಹಿಂದೆ ಜೆ ಎಚ್ ಪಟೇಲರು ಸೇರಿ ಅನೇಕ ರಾಜಕಾರಣಿಗಳು ಬಹಳ ತೀಕ್ಷ್ಣವಾಗಿ ಟೀಕೆ ಮಾಡುತ್ತಿದ್ದರು. ಆದರೆ, ಬಿಜೆಪಿಯವರಿಗೆ ಪದಗಳು ಸಿಗುವುದಿಲ್ಲವೇ? ಈ ರೀತಿ ಮಾತಾಡುವುದು ಸಾರ್ವಜನಿಕವಾಗಿ ಒಳ್ಳೆಯದಲ್ಲ. ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಹಾಗಾದರೆ…
ಯಶ್ ಅವರ ಹುಟ್ಟು ಹಬ್ಬಕ್ಕಾಗಿ ರಾತ್ರಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಅವಘಡದಲ್ಲಿ ಪ್ರಾಣ ಬಿಟ್ಟಿರುವ ಅಭಿಮಾನಿಗಳ ಮನೆಗೆ ಯಶ್ ತಂಡದವರು ಭೇಟಿ ಕೊಟ್ಟು ಪರಿಹಾರ ಧನ ನೀಡಲಿದ್ದಾರೆ. ಇಂದು ಬೆಳಗ್ಗೆ ಯಶ್ ಟೀಮ್ ಆಯಾ ಕುಟುಂಬಗಳಿಗೆ ಭೇಟಿ ಮಾಡಿ, ಪರಿಹಾರದ ಧನವನ್ನು ಹಸ್ತಾಂತರ ಮಾಡಲಿದ್ದಾರೆ. ಒಂದು ಕಡೆ ಯಶ್ ಪರಿಹಾರವನ್ನು ನೀಡುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯವೊಂದನ್ನು ಮಾಡಿದ್ದಾರೆ. ಸರ್ಕಾರ ಘೋಷಿಸಿದ 2 ಲಕ್ಷ ರೂಪಾಯಿ ಪರಿಹಾರ ಸಾಕಾಗಲ್ಲ. ಹೀಗಾಗಿ ಮೂವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಲಕ್ಷ್ಮೇಶ್ವರ ಸೂರಣಗಿ (Suranagi Village) ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ 2 ಎಕರೆ ಜಮೀನು ನೀಡಬೇಕು. ಘಟನಾ ಸ್ಥಳದಲ್ಲಿ ಮೃತರ ಪುತ್ಥಳಿ ನಿರ್ಮಿಸಬೇಕು. ಮುಂದೆ ಇಂತಹ ಅವಘಡಗಳು ಸಂಭವಿಸಬಾರದು. ಅಲ್ಲದೆ ಈ ಮೂವರ ಪುತ್ಥಳಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂದು ಸೂರಣಗಿ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.…
ತುಮಕೂರು :- ಬಳಿಯ ಹೀರೆಹಳ್ಳಿ ಸಮೀಪ ರಾಯರಪಾಳ್ಯ ಗ್ರಾಮದ ನಿವಾಸಿ ಪ್ರತಾಪ್ ಅವರ ಇಟ್ಟಿಗೆ ಗೂಡಿನ ಒಳಗೆ ಅಡಗಿದ್ದ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ವಾರ್ಕೊ ಸಂಸ್ಥೆಯವರು ರಕ್ಷಣೆ ಮಾಡಿರುವುದು ನಡೆದಿದೆ. ಬೃಹತ್ ಗಾತ್ರದ ಹೆಬ್ಬಾವುನ್ನು ಕಂಡು ಭಯಭೀತರಾಗಿದ್ದ ಕೆಲಸದವರು ಮಾಲಿಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪ್ರತಾಪ್ ರವರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ತಿಳಿಸಿದ್ದು ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ, ಚೇತನ್ ಮತ್ತು ಸ್ಯಾಮ್ಯುಯೆಲ್ ರವರು ಸ್ಥಳಕ್ಕೆ ಆಗಮಿಸಿ ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯಾಧಿಕಾರಿ ಮಾರ್ಗದರ್ಶನದಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿಗೆ ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.
ಶ್ರೀ ರಾಮನ ಜಪಕ್ಕೆ ಕರೆ ಕೊಟ್ಟಿದ್ದ ಖ್ಯಾತ ಗಾಯಕಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಜ.22ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ವಿಡಿಯೋ ಸಂದೇಶ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತರು ಕೆ.ಎಸ್. ಚಿತ್ರಾ ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ. ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಅಪ್‌ಡೇಟ್ ಮಾಡಿದ್ದರು. ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದರು. ಜೊತೆಗೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಗಾಯಕಿ ಚಿತ್ರಾ ಅವರು ಕರೆ ನೀಡಿದ್ದರು. ಈ ವಿಡಿಯೋ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ…
ಹುಬ್ಬಳ್ಳಿ: ವಿದ್ಯಾರ್ಥಿಗಳು ವಿದ್ಯಾರ್ಥಿ ದಸೆಯಿಂದಲೇ ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಂಚಾರ ನಿಯಮ ಪಾಲನೆಯಿಂದ ಬದುಕಿಗೆ ಒಳಿತು ಎಂದು ರೋಟರಿಯನ್ ಪ್ರವೀಣ ಬನ್ಸಾಲಿ ಸಲಹೆ ನೀಡಿದರು. ನಗರದ ಅಂತಾರಾಷ್ಟ್ರೀಯ ರೋಟರಿ ರೋಟರಿ ಸರಸ್ವತಿ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ರೋಟರಿ ಕ್ಲಬ್ ಆಫ್ ಮಿಡ್ ಟೌನ್, ಯುವ ಭಾರತ ಸಂಘಟನೆ ಸಹಯೋಗದೊಂದಿಗೆ ಮಂಗಳವಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಕುರಿತು ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಶಾಲೆಯ ಅಧ್ಯಕ್ಷ ಹಾಗೂ ರೋಟರಿಯನ್ ಲಿಂಗರಾಜ ಪಾಟೀಲ್, ರೋಟರಿಯನ್ ಶಿವಪ್ರಸಾದ್ ಲಕಮನಹಳ್ಳಿ,ಎನ್. ಡಾ. ಶಿವಾನಂದ್, ಡಾ. ಮುದುಕನಗೌಡ, ಡಾ.ವಸಂತಪಾಟೀಲ್,ಪ್ರಾಂಶುಪಾಲರಾದ ಶ್ರೀಮತಿ. ಕೀರ್ತಿ ದೇಶಪಾಂಡೆ , ಇಂಟರ್ ಯಾಕ್ಟ್ ಕ್ಲಬ್ ಅಧ್ಯಕ್ಷೆ ಸಮಿತಾ ರೇವಣಕರ ಮತ್ತು ಅನುಕ್ಸಾ ರಾವ್, ಭರತ ಪ್ರದೀಪ್, ರೋಹನ್ ಹೆಬಸೂರು ಮುಂತಾದವರು ಉಪಸ್ಥಿತರಿದ್ದರು
ಬೆಂಗಳೂರು:- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಮಧ್ಯರಾತ್ರಿಯಿಂದಲೇ ಲಾರಿ ಸಂಘಟನೆಗಳು ಮುಷ್ಕರ ಕೈಗೊಳ್ಳಲಿದ್ದಾರೆ. ಮುಷ್ಕರ ಹಿನ್ನೆಲೆ 2 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆಕೊಟ್ಟಿವೆ.ಕರ್ನಾಟಕ ಲಾರಿ ಮಾಲೀಕರ ಸಂಘದಿಂದಲೂ ಮಷ್ಕರಕ್ಕೆ ಬೆಂಬಲ ಸಿಕ್ಕಿದೆ. ಇತ್ತ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಇನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅ್ಯಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೊಸ ಕಾನೂನು ಪ್ರಕಾರ, ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ, ಹಾಗೂ ನಮ್ಮ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾದ ಹಿನ್ನೆಲೆ, ಕಾನೂನು…
ಕಲಬುರ್ಗಿ:- ರಾಮ ಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಬೈಕ್ ಮೂಲಕವೇ ಅಯೋಧ್ಯೆಗೆ ಹೊರಟಿದ್ದಾರೆ ಕಲಬುರಗಿಯ ಮೂವರು ಯುವಕರು.. ಶಶಿ ಮಲ್ಲಿನಾಥ್ ಹಾಖು ಅಭಿಷೇಕ್ ಈ ಮೂವರು ಬೈಕ್ ಸವಾರಿ ಹಮ್ಮಿಕೊಂಡಿದ್ದು ಮೊನ್ನೆ ಸಂಕ್ರಾಂತಿಯಂದು ಕಲಬುರಗಿಯ ಶರಣನ ಗುಡಿಯಿಂದ ಪಯಣ ಶುರುಮಾಡಿದ್ದಾರೆ. ಹೌದು ಪ್ರಭು ಶ್ರೀರಾಮ ದರ್ಶನ ಪಡೆಯಲೇಬೇಕು ಮಂದಿರ ಉಧ್ಘಾಟನೆಯ ಸಂಭ್ರಮವನ್ನ ಕಣ್ತುಂಬಿಕೊಳ್ಳಬೇಕು ಅಂತ ಸಂಕಲ್ಪ ಮಾಡಿದೆ ಯುವಕರ ತಂಡ. ನಿತ್ಯವೂ ನೂರಾರು ಕಿಲೋಮೀಟರ್ ಜರ್ನಿ ಮಾಡಿ 19 ರಂದು ಅಯೋಧ್ಯೆ ತಲುಪುವ ಗುರಿ ಹೊಂದಿದೆ ಈ ಬೈಕ್ ಟೀಂ.ದಾರಿಯುದ್ದಕ್ಕೂ ಜೈ ಶ್ರೀರಾಮ ಘೋಷಣೆ ಸಮೇತ ಪುಣ್ಯಕ್ಷೇತ್ರಗಳ ದರ್ಶನ ಪಡೆಯೋದು ಯುವಕರ ದಿನಚರಿ ಅಂತೆ.
ಬೆಂಗಳೂರು: ಬೆಂಗಳೂರು ವಾಹನ ಸವಾರರೇ ಎಚ್ಚರ. ರಸ್ತೆಯ ಮೇಲಿನ ಜಲ್ಲಿ ಕಲ್ಲು ನಿಮ್ಮ ಜೀವಕ್ಕೆ ಕುತ್ತು ತರಬಹುದು ಜೋಕೆ. ಹೌದು, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳು ಜಲ್ಲಿ ಕಲ್ಲು ಹಾಕಿ ಹೋಗುತ್ತಾರೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿದ್ದಂತೆ ಗುಂಡಿಗಳಿಂದ ಜಲ್ಲಿ ಕಲ್ಲುಗಳು ಹೊರಗೆ ಬರುತ್ತವೆ. ರಸ್ತೆಯ ಮೇಲೆಲ್ಲಾ ಜಲ್ಲಿ ಕಲ್ಲು ಬಿದ್ದಿರುತ್ತವೆ. ಇದರಿಂದ ಬೈಕ್ ಸವಾರರು ತೊಂದರೆ ಅನುಭವಿಸುತ್ತಾರೆ. ಬಿಳೇಕಳ್ಳಿಯ ರಾಘವೇಂದ್ರ ಕಾಲೋನಿ, ಫರ್ಸ್ಟ್ ಕ್ರಾಸ್ ರಸ್ತೆಯಲ್ಲಿ ಜಲ್ಲಿ ಕಲ್ಲು ಬಿದ್ದಿದ್ದು, ಬೈಕ್ ಸವಾರರು ವೇಗವಾಗಿ ಬರುತ್ತಿರುವಾಗ ಸ್ಕಿಡ್ ಆಗಿ ಕೆಳಗೆ ಬೀಳುತ್ತಿದ್ದಾರೆ. ಗುಂಡಿ ಮುಚ್ಚುವ ಸಲುವಾಗಿ ರಸ್ತೆ ಮೇಲೆ ಜಲ್ಲಿ ಕಲ್ಲು ಹಾಕಲಾಗಿದೆ. ಜಲ್ಲಿ ಕಲ್ಲು ಮೇಲೆ ಬೈಕ್ ಬರುತ್ತಿದ್ದಂತೆ ಸ್ಕೀಡ್ ಆಗಿ ಸವಾರರು ರಸ್ತೆ ಮೇಲೆ ಬೀಳುತ್ತಿದ್ದಾರೆ. ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರು ಬೈಕ್ನಿಂದ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ಮತ್ತು…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ರಾಬರಿ ಮಾಡಿದ್ದ ಖತರ್ನಾಕ್ ಗ್ಯಾಂಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರು, ರುದ್ರೇಶ್, ಸಂದೀಪ್, ಪ್ರಭಾವತಿ, ರೇಣುಕಾ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಗುರು ಮತ್ತು ರೇಣುಕಾ ಇಬ್ಬರು ಪತಿ-ಪತ್ನಿ. ರೇಣುಕಾ ಹಣದ ಆಸೆಗೆ ಬಿದ್ದು ತನ್ನ ಸ್ನೇಹಿತೆ ಬಳಿಯೇ ಹಣ ದೋಚಲು ಸಂಚು ರೂಪಿಸಿ ಕೆಮಿಕಲ್ ಇದ್ದ ಕರ್ಚಿಫ್ ಮುಖಕ್ಕೆ ಇಟ್ಟು ಬಳಿಕ ಕೈ-ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಸದ್ಯ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮಾಡಿದ್ದ ಸಾಲ ತೀರಿಸಲು ಅಡ್ಡದಾರಿ ಹಿಡಿದಿದ್ದ ಪ್ರಭಾವತಿ ಎಂಬ ಮಹಿಳೆ ತನ್ನ ಗ್ಯಾಂಗ್ನೊಂದಿಗೆ ಜನವರಿ 14ರ ಬೆಳಗ್ಗೆ 9.20 ಗಂಟೆ ಸುಮಾರಿಗೆ ಕೊಡಿಗೆಹಳ್ಳಿ ಸಮೀಪದ ತಿಂಡ್ಲು ಸರ್ಕಲ್ನಲ್ಲಿ ಇರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಳು. ಅನುಶ್ರೀ ಎಂಬ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣ…