ಕಲಬುರ್ಗಿ:- ರಾಮ ಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಬೈಕ್ ಮೂಲಕವೇ ಅಯೋಧ್ಯೆಗೆ ಹೊರಟಿದ್ದಾರೆ ಕಲಬುರಗಿಯ ಮೂವರು ಯುವಕರು.. ಶಶಿ ಮಲ್ಲಿನಾಥ್ ಹಾಖು ಅಭಿಷೇಕ್ ಈ ಮೂವರು ಬೈಕ್ ಸವಾರಿ ಹಮ್ಮಿಕೊಂಡಿದ್ದು ಮೊನ್ನೆ ಸಂಕ್ರಾಂತಿಯಂದು ಕಲಬುರಗಿಯ ಶರಣನ ಗುಡಿಯಿಂದ ಪಯಣ ಶುರುಮಾಡಿದ್ದಾರೆ.
ಹೌದು ಪ್ರಭು ಶ್ರೀರಾಮ ದರ್ಶನ ಪಡೆಯಲೇಬೇಕು ಮಂದಿರ ಉಧ್ಘಾಟನೆಯ ಸಂಭ್ರಮವನ್ನ ಕಣ್ತುಂಬಿಕೊಳ್ಳಬೇಕು ಅಂತ ಸಂಕಲ್ಪ ಮಾಡಿದೆ ಯುವಕರ ತಂಡ.
ನಿತ್ಯವೂ ನೂರಾರು ಕಿಲೋಮೀಟರ್ ಜರ್ನಿ ಮಾಡಿ 19 ರಂದು ಅಯೋಧ್ಯೆ ತಲುಪುವ ಗುರಿ ಹೊಂದಿದೆ ಈ ಬೈಕ್ ಟೀಂ.ದಾರಿಯುದ್ದಕ್ಕೂ ಜೈ ಶ್ರೀರಾಮ ಘೋಷಣೆ ಸಮೇತ ಪುಣ್ಯಕ್ಷೇತ್ರಗಳ ದರ್ಶನ ಪಡೆಯೋದು ಯುವಕರ ದಿನಚರಿ ಅಂತೆ.