ಹುಬ್ಬಳ್ಳಿ: ವಿದ್ಯಾರ್ಥಿಗಳು ವಿದ್ಯಾರ್ಥಿ ದಸೆಯಿಂದಲೇ ಸಂಚಾರ ನಿಯಮಗಳನ್ನು ಪಾಲಿಸಬೇಕು.
ಸಂಚಾರ ನಿಯಮ ಪಾಲನೆಯಿಂದ ಬದುಕಿಗೆ ಒಳಿತು ಎಂದು ರೋಟರಿಯನ್ ಪ್ರವೀಣ ಬನ್ಸಾಲಿ ಸಲಹೆ ನೀಡಿದರು.
ನಗರದ ಅಂತಾರಾಷ್ಟ್ರೀಯ ರೋಟರಿ ರೋಟರಿ ಸರಸ್ವತಿ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ರೋಟರಿ ಕ್ಲಬ್ ಆಫ್ ಮಿಡ್ ಟೌನ್, ಯುವ ಭಾರತ ಸಂಘಟನೆ ಸಹಯೋಗದೊಂದಿಗೆ ಮಂಗಳವಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ
ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಕುರಿತು ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಶಾಲೆಯ ಅಧ್ಯಕ್ಷ ಹಾಗೂ ರೋಟರಿಯನ್ ಲಿಂಗರಾಜ ಪಾಟೀಲ್, ರೋಟರಿಯನ್ ಶಿವಪ್ರಸಾದ್ ಲಕಮನಹಳ್ಳಿ,ಎನ್. ಡಾ. ಶಿವಾನಂದ್, ಡಾ. ಮುದುಕನಗೌಡ, ಡಾ.ವಸಂತಪಾಟೀಲ್,ಪ್ರಾಂಶುಪಾಲರಾದ ಶ್ರೀಮತಿ. ಕೀರ್ತಿ ದೇಶಪಾಂಡೆ , ಇಂಟರ್ ಯಾಕ್ಟ್ ಕ್ಲಬ್ ಅಧ್ಯಕ್ಷೆ
ಸಮಿತಾ ರೇವಣಕರ ಮತ್ತು ಅನುಕ್ಸಾ ರಾವ್, ಭರತ ಪ್ರದೀಪ್, ರೋಹನ್ ಹೆಬಸೂರು ಮುಂತಾದವರು ಉಪಸ್ಥಿತರಿದ್ದರು