ಬೆಂಗಳೂರು: ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಡಾ.ಯತೀಂದ್ರ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ಪಾಪ ಅನ್ನಿಸುತ್ತಿದೆ S.M.ಕೃಷ್ಣ ಬಳಿಕ ಮತ್ತೊಮ್ಮೆ ಅವಕಾಶ ಬಂದಿದೆ ಎಂದು ಹೇಳಿದ್ದರು ಚುನಾವಣೆಗೂ ಮುನ್ನ ಡಿಕೆಶಿ ಒಕ್ಕಲಿಗ ಸಮುದಾಯಕ್ಕೆ ಹೇಳಿದ್ದರು ಎಂದು ಟೀಕೆ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ಕಟ್ಟಿ ಬಂಡವಾಳವನ್ನೂ ಹಾಕಿದ್ರು ಅಧಿಕಾರ ಬಂದಮೇಲೆ ಹಠ ಹಿಡಿದು ಸಿದ್ದರಾಮಯ್ಯ ಸಿಎಂ ಆದ್ರು ಕುರ್ಚಿಯಲ್ಲಿ ಕೂತ ಕೂಡಲೇ ಪೂರ್ಣಾವಧಿ ಸಿಎಂ ಆಗುವ ಫ್ಲ್ಯಾನ್. ಎಂ.ಬಿ.ಪಾಟೀಲ್, ಸತೀಶ್, ರಾಜಣ್ಣ ಮೂಲಕ ಮೊದಲು ಹೇಳಿಸಿದ್ರು ಈಗ ಮಗನಿಂದ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ಕೊಟ್ಟಿದ್ದಾರೆ ಮಗನ ಮೂಲಕ ಡಿ.ಕೆ.ಶಿವಕುಮಾರ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಪ್ರತಾಪ್ ಸಿಂಹಾ ಟಾಂಗ್ ನೀಡಿದ್ದಾರೆ. ಸ್ವಜಾತಿಯವರು, ಮುಸ್ಲಿಮರು ಕೈಹಿಡಿದರೆಂದು ಯತೀಂದ್ರ ಹೇಳಿದ್ದಾರೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಮತಹಾಕಿದ್ದು ಒಕ್ಕಲಿಗರಲ್ವಾ? ವರುಣ ಕ್ಷೇತ್ರದಲ್ಲಿ ಲಿಂಗಾಯತರು ತಾನೇ ನಿಮಗೆ ಮತ ಹಾಕಿದ್ದು ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ವಿರೋಧಿ…
Author: AIN Author
ಬೆಂಗಳೂರು: ಮುಂಬೈನಿಂದ ಸ್ಪೈಸ್ ಜೆಟ್-268 ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಪ್ರಯಾಣಿಕನೊರ್ವ ಟಾಯ್ಲೆಟ್‌ಗೆ ಅಂತ ಹೋಗಿದ್ದಾನೆ. ಈ ವೇಳೆ ಬಂದ್ ಆದ ಬಾಗಿಲು ಮತ್ತೆ ತೆಗೆದುಕೊಂಡಿಲ್ಲ. ಆದ್ದರಿಂದ ಪ್ರಯಾಣಿಕ ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲೇ ಕುಳಿತು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾನೆ. ಟಾಯ್ಲೆಟ್‌ನ ಬಾಗಿಲು ತೆರೆಯಲು ಸಾಧ್ಯವಾಗದೇ ಇದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ವಿಮಾನದ ಸಿಬ್ಬಂದಿ ಸಹ ಹೊರಗಿನಿಂದ ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲಾಗಿಲ್ಲ. ಕೊನೆಗೆ ಬೆಂಗಳೂರು ಏರ್ಪೋರ್ಟ್‍ನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಇಂಜಿನಿಯರ್‌ಗಳನ್ನ ಕರೆಸಿ ಡೋರ್ ಓಪನ್ ಮಾಡಿಸಿ ಪ್ರಯಾಣಿಕನನ್ನ ಹೊರಗೆ ಕರೆತರಲಾಯಿತು. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಇನ್ನೂ ಪ್ರಯಾಣಿಕನಿಗೆ ಸಣ್ಣದಾದ ಚೀಟಿ ಮೂಲಕ ಸರ್ ಬಾಗಿಲು ತೆರೆಯಲು ಸಾಕಷ್ಟು ಪ್ರಯತ್ನ ಮಾಡಿದ್ದು ಸಾಧ್ಯವಾಗಲಿಲ್ಲ, ದಯ ಮಾಡಿ ಆತಂಕಕ್ಕೆ ಒಳಗಾಗಬೇಡಿ, ಟಾಯ್ಲೆಟ್‌ನ ಕಮೋಡ್ ಮೇಲೆ ಕುಳಿತುಕೊಳ್ಳಿ, ಇಂಜಿನಿಯರ್ ಬಂದ ನಂತರ ನಂತರ ಡೋರ್ ತೆರೆಸಲಾಗವುದು, ಆತಂಕಕ್ಕೀಡಾಗಿ ಗಾಬರಿಗೊಳ್ಳಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ. ಈ ಸಂಬಂಧ ಸ್ಪೈಸ್ ಜೆಟ್ ಸಂಸ್ಥೆ…
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಅಫ್ಘಾನಿಸ್ತಾನ್ ವಿರುದ್ದ ಮೂರನೇ ಪಂದ್ಯ ಜರುಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಂ ಇಂಡಿಯಾ ಇದೆ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಅಫ್ಘಾನಿಸ್ತಾನ್ ತಂಡವು ಕೊನೆಯ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ವೈಟ್ ವಾಶ್ ತಪ್ಪಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಬೆಂಗಳೂರು ಮೈದಾನದಲ್ಲಿ ಇಂದು ರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅಫ್ಘಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಭಾರತ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ, ಇಂದೋರ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿತು. ಇದೀಗ ಮೂರನೇ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ.
ಗದಗ: ಮೂವರು ಯಶ್ ಅಭಿಮಾನಿಗಳ ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಟೀಮ್ ಕಡೆಯಿಂದ ಪರಿಹಾರ ವಿತರಣೆ ಮಾಡಲಾಗಿದೆ. ಮೃತ ಯುವಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿದೆ. ಹೌದು ನಟ ಯಶ್ ಅವರ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಇಂದು ದುರಂತ ಸಂಭವಿಸಿದ್ದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮನೆ ಮಕ್ಕಳನ್ನು ಕಳೆದುಕೊಂಡಿರುವ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ, ಪರಿಹಾರ ಹಣದ ಚೆಕ್ ವಿತರಿಸಿದ್ದಾರೆ. ಪರಿಹಾರದ ಧನವಾಗಿ 5 ಲಕ್ಷ ರೂ. ನೀಡಲಾಗಿದೆ.
ಬೆಂಗಳೂರು: ನಾಳೆಯಿಂದ ಲಾಲ್ಬಾಗ್ನಲ್ಲಿ 215ನೇ ಫಲಪುಪ್ಪ ಪ್ರದರ್ಶನ ಆರಂಭವಾಗಲಿದ್ದು ಜ.18 ರಿಂದ ಜ.28 ರ ವರೆಗೆ ನಡೆಯಲಿದೆ. ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ತೋಟಗಾರಿಕೆ ಇಲಾಖೆಯಿಂದ ಸಸ್ಯಕಾಶಿ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ “ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ 215 ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಿದ್ದು, ಜ.18ರಿಂದ 28ರವರೆಗೆ ಒಟ್ಟು 11ದಿನಗಳ ಕಾಲ ನಡೆಯಲಿದೆ. ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯು ಎಕ್ಸಾಟಿಕ್ ಆರ್ಕಿಡ್ಸ್ ಗಳಾದ ಪೆಲನಾಪ್ಪಿಸ್, ಡೆಂಡೋಬಿಯಂ, ವಾಂಡಾ, ಮೊಕಾರಾ ಸೇರಿದಂತೆ 20 ಬಗೆಯ ಆಕರ್ಷಕ ಮಿನಿಯೇಚರ್ ಆಂಥೋರಿಯಂ ಹಾಗೂ ವಿವಿಧ ಬಗೆಯ ಎಕ್ಸಾಟಿಕ್ ಹೂವುಗಳಿಂದ ಕಲಾಕೃತಿಗಳನ್ನು ಅಲಂಕರಿಸಲಾಗಿದ್ದು, ವಿಶ್ವಗುರು ಬಸವಣ್ಣ ಅವರ ಪುತ್ಥಳಿಯು ಗಾಜಿನಮನೆಯ ಪ್ರವೇಶದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಕವಾಗಿರುವ ಅನುಭವ ಮಂಟಪದ ಪ್ರತಿರೂಪವು ಗಾಜಿನ ಮನೆಯ ಕೇಂದ್ರಭಾಗದಲ್ಲಿ ತಲೆ ಎತ್ತಲಿದೆ.
ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನಿಗಮ ಮಂಡಳಿಗಳ ನೇಮಕಾತಿಗೆ ಕೊನೆಗೂ ಕಾಯಕಲ್ಪ ದೊರೆಯುವ ನಿರೀಕ್ಷೆಯಿದ್ದು, 36 ಮಂದಿ ಶಾಸಕರಿಗೆ, 24 ಕಾರ್ಯಕರ್ತರೂ ಸೇರಿದಂತೆ ಒಟ್ಟು 70 ಕ್ಕೂ ಹೆಚ್ಚು ಜನರಿಗೆ ಅಧ್ಯಕ್ಷ ಸ್ಥಾನ ಘೋಷಣೆಯಾಗುವ ಸಾಧ್ಯತೆಗಳಿವೆ. ಸುಮಾರು ಕಳೆದೆರಡು ತಿಂಗಳಿನಿಂದಲೂ ನಿಗಮ ಮಂಡಳಿಯ ನೇಮಕಾತಿ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಲೇ ಇವೆ. ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಇನ್ನೂ ವಿಳಂಬ ಮಾಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ನಿಟ್ಟಿನಲ್ಲಿ ಅಂತಿಮ ತೀರ್ಮಾನಗಳಾಗಿವೆ. ಕಾಂಗ್ರೆಸ್ ನಾಯಕರು ಕಳುಹಿಸಿದ್ದ ಪಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಕಿತ ಹಾಕಿದ್ದಾರೆ. ಇಂದು ಸಂಜೆಯೊಳಗೆ ಪಟ್ಟಿ ಪ್ರಕಟವಾಗಲಿದೆ ಎಂಬ ಮಾಹಿತಿಗಳಿವೆ. 2-3ಕ್ಕಿಂತಲೂ ಹೆಚ್ಚು ಬಾರಿ ಗೆಲುವು ಸಾಸಿದ ಶಾಸಕರನ್ನು ಅದರಲ್ಲೂ ಹಿರಿಯರನ್ನು ನಿಗಮ ಮಂಡಳಿಗಳಿಗೆ ಪರಿಗಣಿಸಲಾಗಿದೆ. ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಎಡವಟ್ಟು ಮಾಡಿಕೊಂಡು ಚಾಮರಾಜನಗರದ ಪುಟ್ಟರಂಗಶೆಟ್ಟಿ, ಕಳೆದ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್…
ಗದಗ: ರೈತರ ನಿದ್ದೆಗೆಡಿಸಿದ್ದ ಟ್ರಾಕ್ಟರ್ ಟ್ರೇಲರ್ ಕಳ್ಳತನ ಪ್ರಕರಣಗಳನ್ನು ಭೇಧಿಸೋ ಮೂಲಕ ಗದಗ ಜಿಲ್ಲೆಯ ಮುಂಡರಗಿ ಪೊಲೀಸರು ಇದೀಗ ರೈತಾಪಿ ವರ್ಗದ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಳ್ಳತನವಾಗಿದ್ದ ಟ್ರಾಕ್ಟರ್ ಟ್ರೇಲರ್ ಗಳನ್ನ ಪತ್ತೆ ಹಚ್ವೋ ಮೂಲಕ ರೈತರನ್ನ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಮುಂಡರಗಿ ತಾಲೂಕಿನ ಡಂಬಳ, ಮೇವುಂಡಿ ಮತ್ತು ಕಲಕೇರಿ ಗ್ರಾಮಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಅನ್ನದಾತನ ಟ್ರೇಲರ್ ಗಳನ್ನ ಕದ್ದಿದ್ದರು ಆ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ವು. ಗದಗ ಎಸ್ಪಿ ಬಿ ಎಸ್ ನೇಮಗೌಡ ವೀಶೇಷ ತಂಡ ರಚನೆ ಮಾಡಿದ್ರು. ಇದೀಗ ಮುಂಡರಗಿ ಪೊಲೀಸರು ಪ್ರಕರಣ ಭೇಧಿಸಿದ್ದು ರೈತರೆಲ್ಲಾ ಸೇರಿಕೊಂಡು ಪೊಲೀಸರಿಗೆ ಸನ್ಮಾನ ಮಾಡೋ ಮೂಲಕ ಅಭಿನಂದಿಸಿದ್ದಾರೆ.
ಕಲಬುರಗಿ: ನನ್ನ ಹೆಸರಲ್ಲೇ ಲಕ್ಷ್ಮಣ ಇದೆ ನಾನು ರಾಮ ಮಂದಿರಕ್ಕೆ ಹೋಗ್ತೀನಿ ಅಂತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಸವದಿ, ನಾನು ಅಯೋಧ್ಯೆಗೆ ಹೋಗ್ತೀನಿ ಆದ್ರೆ ರಾಮ ಮಂದಿರ ಉದ್ಘಾಟನೆ ದಿನ ಹೋಗಲ್ಲ ಬದಲಾಗಿ 22 ರ ನಂತ್ರ ಒಮ್ಮೆ ಹೋಗಿ ಬರ್ತೀನಿ..ಹೀಗಾಗಿ ಹೋಗಬಾರದು ಅಂತೇನಿಲ್ಲ ಅಂದ್ರು.ನನ್ನ ಹೆಸರಲ್ಲೇ ಲಕ್ಷ್ಮಣ ಇದೆ ರಾಮನ ಹತ್ರ ಹೋಗ್ತೀನಿ ಅಂತ ಮುಗುಳ್ನಕ್ಕರು.
ಟೆಲ್ ಅವೀವ್: ದಕ್ಷಿಣ ಲೆಬನಾನ್‌ನಲ್ಲಿ (South Lebanon) ಇಸ್ರೇಲ್ (Isreal) ಸೈನಿಕರು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಗಣ್ಯ ರಾದ್ವಾನ್ ಪಡೆಯ ಹಿರಿಯ ಕಮಾಂಡರ್ ಒಬ್ಬ ಸಾವನ್ನಪ್ಪಿರುವುದಾಗಿ ಭದ್ರತಾ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಮೃತನನ್ನು ವಿಸ್ಸಾಮ್ ಅಲ್-ತವಿಲ್ (Wissam al-Tawil) ಎಂದು ಗುರುತಿಸಲಾಗಿದೆ. ಈತ ರಾದ್ವಾನ್ ಪಡೆಯೊಳಗಿನ ಘಟಕದ ಉಪ ಮುಖ್ಯಸ್ಥ ಎನ್ನಲಾಗಿದೆ. ಲೆಬನಾನಿನ ಮಜ್ದಾಲ್ ಸೆಲ್ಮ್ ಗ್ರಾಮದ ಮೇಲಿನ ದಾಳಿಯಲ್ಲಿ ವಿಸ್ಸಾಮ್ ಕಾರಿಗೆ ಡಿಕ್ಕಿ ಹೊಡೆದಾಗ ವಿಸ್ಸಾಮ್ ಮತ್ತು ಇನ್ನೊಬ್ಬ ಹೆಜ್ಬೊಲ್ಲಾ ಹೋರಾಟಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಈ ಮೂಲಕ ಸದ್ಯದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯಗಳು ಹೆಚ್ಚಿದೆ ಎಂದು ಭದ್ರತಾ ಮೂಲವೊಂದು ಆತಂಕ ವ್ಯಕ್ತಪಡಿಸಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ದಕ್ಷಿಣ ಲೆಬನಾನ್‌ನಲ್ಲಿ 130 ಕ್ಕೂ ಹೆಚ್ಚು ಹೆಜ್ಬೊಲ್ಲಾ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ. ಇತ್ತ ಸಿರಿಯಾದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಲೆಬನಾನ್‌ನ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸದಂತೆ ಕಳೆದ ವಾರ ಹೆಜ್ಬೊಲ್ಲಾಹ್‌ನ ಪ್ರಧಾನ…
ಬೆಂಗಳೂರು: ಬಡವರು ತಮ್ಮ ಕನಸಿನ ಮನೆ ನಿರ್ಮಿಸಿಕೊಂಡು ಬದುಕಿಗೊಂದು ಶಾಶ್ವತ ಸೂರು ಸಿಗಲಿ ಎಂಬ ಸರ್ಕಾರದ ಆಶಯದಂತೆ ರಾಜ್ಯ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಜನರಿಗೆ ಅನುಕೂಲವಾಗಿವಂತೆ ಸಹ ಮಾಡಿ ಕೊಟ್ಟಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ ಚಿಕ್ಕ ಪುಟ್ಟ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವವರಿಗೆ ಮೂಲಭೂತ ಸೌಕರ್ಯ ಸಿಗಬೇಕು ಎಂಬ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ನೀಡಲು ಸರಕಾರ ಒಂದು ಯೋಜನೆಯನ್ನು ಸಹ ರೂಪಿಸಿಕೊಂಡಿದೆ. ಹೌದು ಅದೇನೆಂದರೆ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ 527 ಎಕರೆ ಪ್ರದೇಶವನ್ನು ಈಗಾಗಲೇ ಸರಕಾರವು ಮನೆ ಕಟ್ಟಲು ಯೋಗ್ಯವಾದ ಜಾಗವನ್ನು ನಿಗದಿ ಮಾಡಿ ಬಡವರಿಗೆ ಹಂಚಲು ನಿರ್ಧರಿಸಿದೆ. ರಾಜೀವ್‌ಗಾಂಧಿ ವಸತಿ ನಿಗಮ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ. ನೀವು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಆಹ್ವಾನ ಮಾಡಬಹುದು. ಅರ್ಜಿಯನ್ನು…