ಬೆಂಗಳೂರು: ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಡಾ.ಯತೀಂದ್ರ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ಪಾಪ ಅನ್ನಿಸುತ್ತಿದೆ S.M.ಕೃಷ್ಣ ಬಳಿಕ ಮತ್ತೊಮ್ಮೆ ಅವಕಾಶ ಬಂದಿದೆ ಎಂದು ಹೇಳಿದ್ದರು ಚುನಾವಣೆಗೂ ಮುನ್ನ ಡಿಕೆಶಿ ಒಕ್ಕಲಿಗ ಸಮುದಾಯಕ್ಕೆ ಹೇಳಿದ್ದರು ಎಂದು ಟೀಕೆ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ಕಟ್ಟಿ ಬಂಡವಾಳವನ್ನೂ ಹಾಕಿದ್ರು ಅಧಿಕಾರ ಬಂದಮೇಲೆ ಹಠ ಹಿಡಿದು ಸಿದ್ದರಾಮಯ್ಯ ಸಿಎಂ ಆದ್ರು ಕುರ್ಚಿಯಲ್ಲಿ ಕೂತ ಕೂಡಲೇ ಪೂರ್ಣಾವಧಿ ಸಿಎಂ ಆಗುವ ಫ್ಲ್ಯಾನ್. ಎಂ.ಬಿ.ಪಾಟೀಲ್, ಸತೀಶ್, ರಾಜಣ್ಣ ಮೂಲಕ ಮೊದಲು ಹೇಳಿಸಿದ್ರು ಈಗ ಮಗನಿಂದ ಪೂರ್ಣಾವಧಿ ಸಿಎಂ ಎಂದು ಹೇಳಿಕೆ ಕೊಟ್ಟಿದ್ದಾರೆ ಮಗನ ಮೂಲಕ ಡಿ.ಕೆ.ಶಿವಕುಮಾರ್ಗೆ ಸಂದೇಶ ರವಾನಿಸಿದ್ದಾರೆ ಎಂದು ಪ್ರತಾಪ್ ಸಿಂಹಾ ಟಾಂಗ್ ನೀಡಿದ್ದಾರೆ.
ಸ್ವಜಾತಿಯವರು, ಮುಸ್ಲಿಮರು ಕೈಹಿಡಿದರೆಂದು ಯತೀಂದ್ರ ಹೇಳಿದ್ದಾರೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಮತಹಾಕಿದ್ದು ಒಕ್ಕಲಿಗರಲ್ವಾ? ವರುಣ ಕ್ಷೇತ್ರದಲ್ಲಿ ಲಿಂಗಾಯತರು ತಾನೇ ನಿಮಗೆ ಮತ ಹಾಕಿದ್ದು ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ವಿರೋಧಿ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆಂದು ಒಕ್ಕಲಿಗರು ಮತ ಹಾಕಿದ್ರು ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುವ ಪ್ರಯತ್ನ ಮಾಡ್ತಾರ ಸ್ವಜಾತಿ, ಮುಸ್ಲಿಮರ ಮೇಲೆ ಮಾತ್ರ ಸಿಎಂ ಸಿದ್ದರಾಮಯ್ಯಗೆ ಪ್ರೀತಿ ಎಂದು ಸಿಎಂ ವಿರುದ್ಧ BJP ಸಂಸದ ಪ್ರತಾನ್ ಸಿಂಹ ವಾಗ್ದಾಳಿ ನಡೆಸಿದರು.