ಬೆಂಗಳೂರು: ಮುಂಬೈನಿಂದ ಸ್ಪೈಸ್ ಜೆಟ್-268 ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಪ್ರಯಾಣಿಕನೊರ್ವ ಟಾಯ್ಲೆಟ್ಗೆ ಅಂತ ಹೋಗಿದ್ದಾನೆ. ಈ ವೇಳೆ ಬಂದ್ ಆದ ಬಾಗಿಲು ಮತ್ತೆ ತೆಗೆದುಕೊಂಡಿಲ್ಲ. ಆದ್ದರಿಂದ ಪ್ರಯಾಣಿಕ ಗಂಟೆಗಟ್ಟಲೆ ಟಾಯ್ಲೆಟ್ನಲ್ಲೇ ಕುಳಿತು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾನೆ.
ಟಾಯ್ಲೆಟ್ನ ಬಾಗಿಲು ತೆರೆಯಲು ಸಾಧ್ಯವಾಗದೇ ಇದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ವಿಮಾನದ ಸಿಬ್ಬಂದಿ ಸಹ ಹೊರಗಿನಿಂದ ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲಾಗಿಲ್ಲ. ಕೊನೆಗೆ ಬೆಂಗಳೂರು ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಇಂಜಿನಿಯರ್ಗಳನ್ನ ಕರೆಸಿ ಡೋರ್ ಓಪನ್ ಮಾಡಿಸಿ ಪ್ರಯಾಣಿಕನನ್ನ ಹೊರಗೆ ಕರೆತರಲಾಯಿತು.
Recruitment: ನಿಮ್ಹಾನ್ಸ್’ನಲ್ಲಿ ಕೆಲಸ ಖಾಲಿ ಇದೆ..! ತಿಂಗಳಿಗೆ ₹ 90,000 ಸಂಬಳ – ಇಂದೇ ಕೊನೆ ದಿನಾಂಕ
ಇನ್ನೂ ಪ್ರಯಾಣಿಕನಿಗೆ ಸಣ್ಣದಾದ ಚೀಟಿ ಮೂಲಕ ಸರ್ ಬಾಗಿಲು ತೆರೆಯಲು ಸಾಕಷ್ಟು ಪ್ರಯತ್ನ ಮಾಡಿದ್ದು ಸಾಧ್ಯವಾಗಲಿಲ್ಲ, ದಯ ಮಾಡಿ ಆತಂಕಕ್ಕೆ ಒಳಗಾಗಬೇಡಿ, ಟಾಯ್ಲೆಟ್ನ ಕಮೋಡ್ ಮೇಲೆ ಕುಳಿತುಕೊಳ್ಳಿ, ಇಂಜಿನಿಯರ್ ಬಂದ ನಂತರ ನಂತರ ಡೋರ್ ತೆರೆಸಲಾಗವುದು, ಆತಂಕಕ್ಕೀಡಾಗಿ ಗಾಬರಿಗೊಳ್ಳಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ. ಈ ಸಂಬಂಧ ಸ್ಪೈಸ್ ಜೆಟ್ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.