ವಿಜಯಪುರ:`ಹೆಸರಲ್ಲಿ ರಾಮ ಅಂತಿದ್ದರೆ ಸಾಲದು ಗುಣ ಇರಬೇಕಲ್ಲವೆ!? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಅವರು ನೀಡಿರುವ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಿಟಿ ರವಿ ಅವರನ್ನು ಮನೆಗೆ ಕಳುಹಿಸಿದ್ದಾರೆ. ಜನಪರ ಯೋಜನೆ ಕೊಟ್ಟಿದ್ದಾರೆ, ನುಡಿದಂತೆ ನಡೆದಿದ್ದಾರೆ. ಇನ್ನು ಏನು ಬೇಕಂತೆ ಎಂದು ಪ್ರಶ್ನಿಸಿದರು. ಸಿಟಿ ರವಿ ಐದು ವರ್ಷ ಸರ್ಕಾರ ಇತ್ತು. ಏನೂ ಮಾಡಲಿಲ್ಲ. ಬದಲಾಗಿ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿ ಲಕ್ಷಾಂತರ ಕೋಟಿ ಹೊರೆಯಿಟ್ಟು ದಿವಾಳಿ ಎಬ್ಬಿಸಿದ್ದರು. ಬಜೆಟ್ ಕಿಂತ ಎಲ್ಲಾ ಇಲಾಖೆಗಳಲ್ಲಿ 10 ಸಾವಿರ 20 ಸಾವಿರ ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಎಲ್ಲ ವ್ಯವಸ್ಥೆ ಹದಗೆಡಿಸಿದ್ದಾರೆ. ಇವರು ರಾಮರಾಜ್ಯ ಮಾಡೋಕೆ ಹೋಗ್ತಾರಾ!? ಎಂದರು. https://ainlivenews.com/stomach-ache-immediately-after-eating-so-try-this-home-remedy/ ಇದೇ ರಾಮರಾಜ್ಯದ ಕಲ್ಪನೆಯೇ? ಹಿಗ್ಗಾಮುಗ್ಗಾ. ಲೂಟಿ ಹೊಡೆಯೋದು ಇದೇ ನಿಮ್ಮ ರಾಮರಾಜ್ಯದ…
Author: AIN Author
ಬೆಂಗಳೂರು:- ಶೀಘ್ರವೇ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದು ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬುಧವಾರ ದಿಲ್ಲಿಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಮರುಚಾಲನೆ ದೊರೆಯಲಿದ್ದು, ಅಂತಿಮ ಪಟ್ಟಿ ಕೂಡ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದ್ದವು. ಆಕಾಂಕ್ಷಿಗಳು ಕೂಡ ದಿಲ್ಲಿಯತ್ತ ನೋಟ ಹರಿಸಿದ್ದರು. ಆದರೆ “ದಿಲ್ಲಿ ಭೇಟಿ’ ಕೇವಲ ಲೋಕಸಭಾ ಚುನಾವಣೆ ಚರ್ಚೆಗೆ ಸೀಮಿತವಾಯಿತು. ಇದು ಆಕಾಂಕ್ಷಿಗಳಲ್ಲಿ ತೀವ್ರ ಬೇಸರ ಉಂಟುಮಾಡಿದೆ. ಪ್ರತಿ ಬಾರಿ ದಿಲ್ಲಿಗೆ ಹೋದಾಗಲೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮೂಲಕ ಶಾಸಕರು, ಹಿರಿಯ ಕಾರ್ಯಕರ್ತರಲ್ಲಿ “ಅಧಿಕಾರ ಭಾಗ್ಯ’ ಸಿಗಬಹುದು ಎಂಬ ಆಸೆ ಮೊಳಕೆಯೊಡೆಯುತ್ತದೆ. ನಾಯಕರು ಮರಳುತ್ತಿದ್ದಂತೆ ನಿರಾಸೆಯ ಉತ್ತರ ಸಿಗುತ್ತದೆ. ಇದು ಆಕಾಂಕ್ಷಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಬೆಳಗಾವಿ ಅಧಿವೇಶನಕ್ಕೂ ಮೊದಲೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈಗ ಮತ್ತೂಂದು ಅಧಿವೇಶನ ಹತ್ತಿರ…
ಕಳೆದ ಬಾರಿ ಅಭಿಮಾನಿಗಳನ್ನು ಭೇಟಿಯಾಗದೆ ಕುಟುಂಬ ಸದಸ್ಯರೊಂದಿಗೆ ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಯಶ್ ಈ ವರ್ಷ ಪತ್ರ ಬರೆದಿದ್ದು, ” ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾ ಕಾಲ ನನ್ನ ಜತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟು ಹಬ್ಬದ ಉಡುಗೊರೆ. ನಿಮ್ಮ ಪ್ರೀತಿಯ ಯಶ್” ಎಂದು ಪೋಸ್ಟ್ ಮಾಡಿದ್ದಾರೆ. ಯಶ್ ಸದ್ಯ ”ಟಾಕ್ಸಿಕ್” ಚಿತ್ರದ ಕೆಲಸದಲ್ಲಿ ಬಹಳಷ್ಟು ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು ದೊಡ್ಡ ಬಜೆಟ್ ಯೋಜನೆಯಾಗಿದೆ. ಕರೀನಾ ಕಪೂರ್ ಖಾನ್ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ…
ನವದೆಹಲಿ: ಅದಾನಿ (Adani) ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲಿಂಗ್ ಪ್ರಕರಣದಲ್ಲಿ ಸೆಬಿ ಬದಲು ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬ ವಾದವನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ. ಈ ಪ್ರಕರಣದ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ. ಮೂರು ತಿಂಗಳ ಒಳಗಡೆ ಸೆಬಿ ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಕೋರ್ಟ್ ಸೂಚಿಸಿದೆ. ಸಿಜೆಐ ಡಿವೈ ಚಂದ್ರಚೂಡ್, ನ್ಯಾ.ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ನವೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ದಾನಿ ಕಂಪನಿಗಳು ತನ್ನ ಷೇರಿನ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿ (Hindenburg Research Report) ಬಳಿಕ ವಿವಿಧ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತವಾಗಿ ಸುಮಾರು 100 ಶತಕೋಟಿ ಡಾಲರ್ ಸಂಪತ್ತು ಕರಗಿತ್ತು. ಪ್ರಕರಣದ ತನಿಖೆ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಕೋರಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಹೇಳಿದ್ದೇನು? ಅದಾನಿ ವಿರುದ್ಧದ 22 ಆರೋಪಗಳ ಪೈಕಿ 20ರ…
ಬೆಂಗಳೂರು:- ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಪುಂಡಾಟ ನಡೆಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಅಲ್ಲದೇ ಹಿರಿಯರು ಎನ್ನುವುದನ್ನು ಲೆಕ್ಕಿಸದೇ ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ಮಾಡಿ ಕಾಲಲ್ಲಿ ಒದ್ದು ವಿಕೃತಿ ಮೆರೆಯಲಾಗಿದೆ. ಗಿರಿನಗರದ ಮೂಕಾಂಭಿಕನಗರದಲ್ಲಿ ಘಟನೆ ಜರುಗಿದೆ. ಘಟನೆ ನಂತರ ಆರೋಪಿ ಧರ್ಮ ತಲೆಮರೆಸಿಕೊಂಡಿದ್ದಾನೆ. ಸಿಂಗಾರ ವೇಲು ಎಂಬುವವರು ಗಿರಿನಗರದ ಮನೆ ಬಳಿ ಕಬಾಬ್ ತಿನ್ನುತ್ತಿದ್ರು. ಈ ವೇಳೆ ಎಂಟ್ರಿಕೊಟ್ಟಿದ್ದ ಆರೋಪಿ ಧರ್ಮ, ನೈಂಟಿ ಎಣ್ಣೆ ಕೊಡಿಸು ಅಂತ ಸಿಂಗಾರ ವೇಲುರಿಗೆ ಪೀಡಿಸಿದ್ದಾನೆ. ಕೊಡಿಸದಿದ್ದಾಗ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ಪರಿಣಾಮ ಸಿಂಗಾರ ವೇಲುರ ತುಟಿ ಹರಿದು ಹೋಗಿದೆ. ಸದ್ಯ ಆಸ್ಪತ್ರೆಯಲ್ಲಿ ಸಿಂಗಾರವೇಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ. ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 29 ರ ರಾತ್ರಿ 8:30 ರ ಸುಮಾರಿಗೆ ಘಟನೆ ಜರುಗಿದ್ದು, ಗಿರಿನಗರ ಪೊಲೀಸರಿಂದ ಆರೋಪಿ ಧರ್ಮನಿಗಾಗಿ ತಲಾಶ್ ನಡೆದಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬ, ನಿಮ್ಮಂತೆಯೇ ಪತ್ನಿ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ, ಸ್ವೀಟ್ ಆಗಿ ರಿಪ್ಲೈ ನೀಡಿದ್ದಾರೆ. ‘ಅನಿಮಲ್’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ನಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಈ ಖುಷಿಯ ನಡುವೆ ರಶ್ಮಿಕಾ ಮಂದಣ್ಣ ಅಭಿಮಾನಿಗೆ ಮದುವೆ ಬಗ್ಗೆ ರಿಯಾಕ್ಟ್ ಮಾಡಿರೋದು ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಯೊಬ್ಬ ರಶ್ಮಿಕಾ (Rashmika Mandanna) ಫೋಟೋ ಶೇರ್ ಮಾಡಿ, ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ ಎಂದು ಬರೆದುಕೊಂಡಿದ್ದಾರೆ. ಬಳಿಕ ಒಂದು ದಿನ ನಾನು ನಿಮ್ಮ ರೀತಿಯ ಪತ್ನಿಯನ್ನು ಪಡೆಯುತ್ತೇನೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ರಶ್ಮಿಕಾ ಗಮನಕ್ಕೂ ಬಂದಿದ್ದು, ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಹ್ಹಹಾ.. ನಾನು ಮದುವೆಯಾದಾಗ ನನ್ನ ಪತಿ ಕೂಡ ಹೀಗೆ ಭಾವಿಸುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಈ ಪೋಸ್ಟ್ ಸಖತ್ ವೈರಲ್…
ಬೆಳಗಾವಿ:- ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಸರ್ಕಾರಿ ಅರಣ್ಯದಲ್ಲಿ ಕಾಕತಿ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, 48 ವರ್ಷದ ಕಲ್ಲಪ್ಪ @ ಕಲ್ಯಾಣಿ ಮೋರೆ ಬಂಧಿತ ಆರೋಪಿ ಎನ್ನಲಾಗಿದೆ. ಸುಗಂಧಾ ಮೋರೆ (50) ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಮಹಿಳೆ ಎನ್ನಲಾಗಿದೆ. ಮಕ್ಕಳು ಅಂದ್ರೆ ತುಂಟಾಟ ಮಾಡೋದು. ತರಲೆ ಮಾಡೋದು ಸಹಜ. ಹಾಗಂತ ಮಕ್ಕಳು ದೊಡ್ಡ ತಪ್ಪೇನು ಮಾಡಿರಲಿಲ್ಲ. ಮನೆ ಮುಂದೆ ಇದ್ದ ಮಲ್ಲಿಗೆ ಹೂವನ್ನು ಕಿತ್ತು ಹಾಕಿದ್ರು. ಅಷ್ಟಕ್ಕೆ ಈ ವ್ಯಕ್ತಿ ಅಂಗನವಾಡಿ ಸಹಾಯಕಿ ಜೊತೆ ಜಗಳ ಮಾಡಿದ್ದಾನೆ. ಕೊನೆಗೆ ಮನೆಯಲ್ಲಿದ್ದ ಕುಡುಗೋಲಿನಿಂದ ಮಹಿಳೆ ಮೂಗಿಗೆ ಹೊಡೆದು ಬಿಟ್ಟಿದ್ದಾನೆ. ಕುಡುಗೋಲಿನಿಂದ ಬಿದ್ದ ಏಟಿಗೆ ಮಹಿಳೆ ಮೂಗು ಕಟ್ ಆಗಿ ರಕ್ತಸ್ರಾವವಾಗಿದೆ. ಪಾಪಿ ಅಟ್ಟಹಾಸಕ್ಕೆ ಇದೀಗ ಬಡಪಾಯಿ ಅಂಗನವಾಡಿ ಸಹಾಯಕಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾಳೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಈ ಘಟನೆ ನಡೆದಿತ್ತು.…
ಹುಬ್ಬಳ್ಳಿ: ಕುಕ್ಕರ್ ಬಾಂಬ್ ಸ್ಫೋಟಿಸಿದ ಭಯೋತ್ಪಾದಕರನ್ನು ಕಾಂಗ್ರೆಸ್ ನಾಯಕರು ಬ್ರದರ್ಸ್ ಎಂದು ಹೇಳುತ್ತಾರೆ, ರಾಮಭಕ್ತರನ್ನು ಅಪರಾಧಿ ಎನ್ನುತ್ತಾರೆ. ಆದರೆ ನೂರು ಸಿದ್ದರಾಮಯ್ಯ ಬಂದರೂ ರಾಮಭಕ್ತರು ಎದುರಿಸಲು ಸಿದ್ಧ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲೆಸೆದರು. ಅವರು ಮಾತನಾಡಿದರು. ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಮುಟ್ಟುವುದಿಲ್ಲ. https://ainlivenews.com/stomach-ache-immediately-after-eating-so-try-this-home-remedy/ ಆದರೆ ಪ್ರತಿ ದಿನ ಆಟೋರಿಕ್ಷಾ ಓಡಿಸುವ ಅಮಾಯಕನನ್ನು ತಲೆಮರೆಸಿಕೊಂಡಿದ್ದಾನೆಂದು ಬಂಧಿಸಿದ್ದಾರೆ. ಜೈ ಶ್ರೀರಾಮ್ ಎಂದರೆ ಜೈಲಿಗೆ ಹಾಕುತ್ತಾರೆ, ಜೈ ಟಿಪ್ಪು ಎಂದರೆ ಬಿಡುಗಡೆಗೊಳಿಸುತ್ತಾರೆ. ರಾಮಭಕ್ತರನ್ನು ವಿರೋಧಿಸಿದರೆ ಹಾಗೂ ಟಿಪ್ಪು ಸಂಸ್ಕೃತಿಯನ್ನು ವಿಜೃಂಭಿಸಿದರೆ ಕಾಂಗ್ರೆಸ್ ಸರ್ಕಾರ ಬಹಳ ಕಾಲ ಉಳಿಯುವುದಿಲ್ಲ. ಟಿಪ್ಪುವಿನ ಹಿಂದೆ ಹೋದವರ ಮನೆಗಳು ಸುಟ್ಟಂತೆಯೇ ಕಾಂಗ್ರೆಸ್ ಮನೆಯೂ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವರ್ಷ ಖಗೋಳದಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಎಷ್ಟು ಭಾರತದಲ್ಲಿ ಗೋಚರಿಸಲಿವೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ. 2024 ರಲ್ಲಿ ಒಂದು ಸಂಪೂರ್ಣ ಸೂರ್ಯಗ್ರಹಣ ಸೇರಿದಂತೆ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಯಾವೊಂದೂ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶದ ಉಜ್ಜಯಿನಿಯ ಜಿವಾಜಿ ವೀಕ್ಷಣಾಲಯದ ಹಿರಿಯ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ, 2024 ರಲ್ಲಿ ಗ್ರಹಣಗಳ ಸರಣಿಯು ಮಾರ್ಚ್ 25 ರಂದು ಪೆನಂಬ್ರಾಲ್ ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ. ನಾಲ್ಕು ಖಗೋಳ ಕುತೂಹಲಗಳು ಸಂಭವಿಸಿದರೂ, ಅದರಲ್ಲಿ ಒಂದು ಕೂಡ ಭಾರತದಲ್ಲಿ ನೋಡಲು ಸಾಧ್ಯವಿಲ್ಲ ಎಂದರು. ಮೊದಲ ಸೂರ್ಯಗ್ರಹಣ:ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಸರಳ ರೇಖೆಯಲ್ಲಿ ಒಟ್ಟಾಗಿ ಬಂದಾಗ ಪೆನಂಬ್ರಾಲ್ ಚಂದ್ರಗ್ರಹಣ ಸಂಭವಿಸುತ್ತದೆ. ವರ್ಷದ ಮೊದಲ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಈ ಖಗೋಳ ವಿಸ್ಮಯವು ಹಗಲಿನಲ್ಲಿ ನಡೆಯಲಿದೆ. ಹೀಗಾಗಿ ಕಣ್ಣಿಗೆ ಕಾಣುವುದಿಲ್ಲ. ಏಪ್ರಿಲ್ 8 ಮತ್ತು 9 ರ ಮಧ್ಯರಾತ್ರಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು…
ಬೆಂಗಳೂರು:- ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ದಿನಾಂಕ, ಹೆಸರು ಹಾಗೂ ಸಾಮಾನ್ಯ ಪದಗಳನ್ನು ಪಾಸ್‌ವರ್ಡ್‌ಗೆ ಬಳಸುವಾಗ ಯೋಚಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ನಿಯಮಿತವಾಗಿ ಬಳಸುವ ಪಾಸ್ ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸಿ. ಸೈಬರ್ ವಂಚನೆಗಳಿಗೆ ಒಂದೇ ರೀತಿಯ ಪಾಸ್ ವರ್ಡ್ ಬಳಕೆ ಸಹ ಪ್ರಮುಖ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.