Author: AIN Author

ಬೆಂಗಳೂರು:- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್​ಎಸ್​ಎಲ್​ಸಿ ಟೈಮ್ ಟೇಬಲ್​ ಸಹ ಬಿಡುಗಡೆ ಮಾಡಿದೆ. ಮಾರ್ಚ್​ 25ರಿಂದ ಏಪ್ರಿಲ್ 3ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಪರೀಕ್ಷಾ ವೇಳಾಪಟ್ಟಿ ಹೀಗಿದೆ ಮಾರ್ಚ್ 25ರ ಸೋಮವಾರ ಪ್ರಥಮ ಭಾಷೆ ಪರೀಕ್ಷೆ( ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್(NCERT). ಮಾರ್ಚ್​ 27ರಂದು ಸಮಾಜ ವಿಜ್ಞಾನ . ಮಾರ್ಚ್​ 30ರಂದು ವಿಜ್ಞಾನ, ರಾಜ್ಯಶಾಸ್ತ್ರ. ಏಪ್ರಿಲ್​​ 3ರಂದು ಅರ್ಥಶಾಸ್ತ್ರ ಪರೀಕ್ಷೆ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಓದುತ್ತಿರುವವರು ಹಾಗೂ ಖಾಸಗಿ ವಿದ್ಯಾರ್ಥಿಗಳು 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯನ್ನು ಮೂರು ಬಾರಿ ಬರೆಯಬಹುದು. ಈ ಹಿಂದೆ ಒಂದು ಬಾರಿ ವಾರ್ಷಿಕ ಪರೀಕ್ಷೆ ಬರೆದು, ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯಬೇಕಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳು ತಾವು ಪಾಸಾಗಲಿ, ಫೇಲಾಗಲಿ ಮೂರು ಬಾರಿ ಪರೀಕ್ಷೆ ಬರೆಯಬಹುದು. ಮೂರರಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಪರೀಕ್ಷೆಯನ್ನು…

Read More

ಬೆಂಗಳೂರು: ದಿವಸಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ‌ ಮಾಡುವ ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿ ಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಗೆ ತಿರುಗೇಟು ನೀಡಿರುವ ಅವರು, ಯುಪಿಎ 2004-2014 ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದರೆ. ಮೋದಿ ಅವಧಿಯಲ್ಲಿ 2014-2023 ಡಿಸೆಂಬರ್ ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂ. ಬಂದರೆ, ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ…

Read More

ಬೆಂಗಳೂರು:- ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಬಿಎಂಟಿಸಿಯು 7.37 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ 3,849 ಪ್ರಯಾಣಿಕರಿಂದ ಈ ಪ್ರಮಾಣದ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ಡಿಸೆಂಬರ್ ತಿಂಗಳಿನಲ್ಲಿ ಬಿಎಂಟಿಸಿಯ ತನಿಖಾ ತಂಡಗಳು 16,785 ಟ್ರಿಪ್‍ಗಳನ್ನು ತಪಾಸಣೆ ನಡೆಸಿ 3,502 ಟಿಕೆಟ್‍ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದು, ಅವರಿಂದ 7,02,340 ರೂ. ದಂಡ ವಸೂಲು ಮಾಡಲಾಗಿದೆ. ಅಲ್ಲದೆ, ಬಿಎಂಟಿಸಿಯ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಗೆ 34,700 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದೆ. ಬಿಎಂಟಿಸಿ ಬಸ್‍ಗಳಲ್ಲಿ ಅಧಿಕೃತ ಟಿಕೆಟ್, ದಿನದ ಪಾಸ್, ಮಾಸಿಕ ಪಾಸ್‍ಗಳನ್ನು ಪಡೆದು ಪ್ರಯಾಣಿಸುವುದರಿಂದ ಅನಗತ್ಯವಾಗಿ ದಂಡ ಕಟ್ಟುವುದನ್ನು ತಪ್ಪಿಸಬಹುದಾಗಿದೆ.

Read More

ಬೆಂಗಳೂರು:- ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಇನ್ನು ಎರಡು – ಮೂರು ದಿನಗಳ ಕಾಲ ಉಷ್ಣಾಂಶವು ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್‌ ವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಲ್ಲಿ ರಾತ್ರಿ ಚಳಿ ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ ಇರಲಿದೆ. ಸಂಜೆಯಾಗುತ್ತಿದ್ದಂತೆ ಗಾಳಿಯು ವೇಗವನ್ನು ಪಡೆದುಕೊಳ್ಳಲಿದೆ. ಅಲ್ಲದೆ, ರಾತ್ರಿ ವೇಳೆ ಚಳಿ ಚಳಿಯಾಗಲಿದೆ. ಬುಧವಾರ ಮುಂಜಾನೆ ಕೆಲವು ಕಡೆ ದಟ್ಟ ಮಂಜು ಆವರಿಸಿತ್ತು. ಗುರುವಾರ (ಜನವರಿ 18) ಸಹ ಹಲವು ಕಡೆ ಚಳಿ ಇರಲಿದೆ ಎಂದು ಹೇಳಲಾಗಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶ 16 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನಂತೆ ಚಳಿಯೂ ಹೆಚ್ಚು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ…

Read More

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. 169 ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 15, 2024 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಶೈಕ್ಷಣಿಕ ಅರ್ಹತೆ: ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 15, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: ಒಬಿಸಿ (NCL) ಅಭ್ಯರ್ಥಿಗಳು- 8 ವರ್ಷ SC/ST ಅಭ್ಯರ್ಥಿಗಳು- 10 ವರ್ಷ ವೇತನ: ಮಾಸಿಕ ₹ 21,700-69,100 ಉದ್ಯೋಗದ ಸ್ಥಳ: ಭಾರತದಲ್ಲಿ ಎಲ್ಲಿ ಬೇಕಾದರೂ ಅರ್ಜಿ ಶುಲ್ಕ: SC/ST/ಮಹಿಳಾ ಅಭ್ಯರ್ಥಿಗಳು:…

Read More

ನವದೆಹಲಿ:- ರಾಮಮಂದಿರ ಉದ್ಘಾಟನೆಗೂ ಮುನ್ನ ಮಾರುಕಟ್ಟೆಗೆ ರಾಮನ ನೋಟು ಲಗ್ಗೆ ಇಟ್ಟಿತಾ ಹೀಗೋಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ. 500 ನೋಟುಗಳಲ್ಲಿ ಗಾಂಧಿ ಆಕೃತಿಯ ಬದಲು ಶ್ರೀರಾಮನ ಚಿತ್ರ ಮುದ್ರಿಸಲಾಗುವುದು ಎಂಬ ಪ್ರಚಾರ ಜೋರಾಗಿದೆ. ಒಂದು ಬದಿಯಲ್ಲಿ ಶ್ರೀರಾಮನ ಭಾವಚಿತ್ರವನ್ನು ಅಚ್ಚು ಹಾಕಿದರೆ, ನೋಟಿನ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ದೇವಾಲಯದ ಮಾದರಿಯನ್ನು ಮುದ್ರಿಸಲಾಗಿದೆ. ಗಾಂಧೀಜಿ ಅವರ ಕನ್ನಡಕ ಬದಲು ಶ್ರೀರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗೆ ಮುದ್ರಿಸಿರುವ ನಫೋಟುಗಳ ಚಿತ್ರ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು. ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22ರಂದು ಈ ನೋಟು ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಚರ್ಚೆ ಶುರುವಾಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟುಗಳ ಸಕಲಿ…

Read More

ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ ಆದರೆ ನೀವು ಅದನ್ನು ವಿರುದ್ಧ ಪದಾರ್ಥಗಳೊಂದಿಗೆ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದರೆ ಮೊಟ್ಟೆಯೊಂದಿಗೆ ಯಾವ ಆಹಾರ ಸೇವಿಸಬಾರದು ಎಂಬುದನ್ನು ತಿಳಿಯೋಣ.. ಉಪಹಾರಕ್ಕೆ ಮೊಟ್ಟೆ ಹಾಗೂ ಬಾಳೆಹಣ್ಣು ಒಟ್ಟಿಗೆ ತಿನ್ನುವುದು ಹಾನಿಕಾರಕವಾಗಿದೆ. ಮೊಟ್ಟೆಯಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ, ಆದರೆ ಬಾಳೆಹಣ್ಣು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇವೆರಡನ್ನು ಒಟ್ಟಿಗೆ ತಿಂದರೆ ಹೊಟ್ಟೆ ಭಾರವಾಗುತ್ತದೆ ಮತ್ತು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಲು, ಮೊಸರು, ಚೀಸ್ ಅನ್ನು ಮೊಟ್ಟೆಗಳೊಂದಿಗೆ ಸೇವಿಸಬಾರದು. ಮೊಟ್ಟೆಯ ಜೊತೆಗೆ ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಹೆಚ್ಚುವರಿಯಾಗಿ, ಅವುಗಳನ್ನು ಸೇವಿಸುವುದರಿಂದ ನೀವು ಹೊಟ್ಟೆಯುಬ್ಬರವನ್ನು ಅನುಭವಿಸಬಹುದು, ಇದು ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಆಗುತ್ತದೆ. ಮೊಟ್ಟೆ ಮತ್ತು ಸಕ್ಕರೆ ಎರಡೂ ಆಹಾರ ಪದಾರ್ಥಗಳಲ್ಲಿರುವ ಅಮೈನೋ ಆಮ್ಲವು ರಕ್ತದಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಸಾಧ್ಯತೆಗಳಿರುವುದರಿಂದ ಈ ಎರಡು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಮೊಟ್ಟೆಗಳೊಂದಿಗೆ ಬಿಸಿ ಚಹಾವನ್ನು ಸೇವಿಸುತ್ತಾರೆ. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ…

Read More

ಸುಲಭವಾಗಿ ತಯಾರಿಸಬಹುದಾದ ಟಿಫಿನ್ ಗಳಲ್ಲಿ ಉಪ್ಪಿಟ್ಟು ಕೂಡ ಒಂದಾಗಿದೆ. ಇದನ್ನು ಬಹಳ ಕಡಿಮೆ ಸಮಯದಲ್ಲಿ ತಯಾರಿಸುವುದು. ಇನ್ನೂ ಈ ಉಪ್ಪಿಟ್ಟು ತಿನ್ನುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಉಪ್ಪಿಟ್ಟು ಮೂಳೆಗಳನ್ನು ಬಲಪಡಿಸುತ್ತದೆ. ಹೃದಯ ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಇದು ತುಂಬಾ ಉಪಯುಕ್ತವಾಗಿದೆ. ಉಪ್ಪಿಟ್ಟು ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಇದನ್ನು ಬಹಳ ಕಡಿಮೆ ಎಣ್ಣೆಯಿಂದ ತಯಾರಿಸುವುದರಿಂದ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ. ಉಪ್ಪಿಟ್ಟಿನಲ್ಲಿ ಕ್ಯಾರೆಟ್, ಬೀನ್ಸ್, ಬಟಾಣಿ ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದಕ್ಕಾಗಿಯೇ ಉಪ್ಪಿಟ್ಟು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಲಭವಾಗಿ ಸುಧಾರಿಸುತ್ತದೆ. ತೂಕ ಇಳಿಸಿಕೊಳ್ಳಲು ಉಪ್ಪಿಟ್ಟು ತುಂಬಾ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

Read More

ಉತ್ತರಪ್ರದೇಶ: ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು  ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಪಟಾಕಿ ಹೊತ್ತೊಯ್ಯುತ್ತಿದ್ದ ಟ್ರಕ್‌ ಅಗ್ನಿಗೆ ಆಹುತಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪೂರ್ವ ಕೊಟ್ವಾಲಿಯ ಖರ್ಗಿ ಖೇಡಾ ಗ್ರಾಮದ ಬಳಿ ಘಟನೆ ನಡೆದಿದೆ. ಸ್ಥಳೀಯರು ಇದನ್ನು ವೀಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಶ್ರೀರಾಮ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಸಂಭ್ರಮವನ್ನು ಕೊಂಡಾಡಲು ಟ್ರಕ್‌ವೊಂದರಲ್ಲಿ ಪಟಾಕಿ ಹೊತ್ತೊಯ್ಯಲಾ ಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಿಡಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಪಟಾಕಿಗೆ ಹೊತ್ತಿಕೊಂಡಿದೆ. ಇದರಿಂದ ಬೆಂಕಿ ತೀವ್ರತೆ ಹರಡುವ ತೀವ್ರತೆ ಹೆಚ್ಚಾಹಿ, ಟ್ರಕ್‌ ಸಂಪೂರ್ಣ ಭಸ್ಮವಾಗಿದೆ. ಈ ಘಟನೆಯನ್ನು ಸ್ಥಳೀಯರು ವೀಡಿಯೋ ಮಾಡಿದ್ದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Read More

ಕೊಪ್ಪಳ:  ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಮಾಡಲಾಯಿತು ಸಭೆಯಲ್ಲಿ ಹಿಂದಿನ ಸಬೆಯ ನಡವಳಿಯಂತೆ ಪ್ರಗತಿ ಕುರಿತು. ಬಾಲ್ಯವಿವಾಹ ತಡೆದು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಮತ್ತು ಪೋಷಣೆ ವ್ಯವಸ್ಥೆ ಕಲ್ಪಿಸಿದ ಕುರಿತು. ತಡೆದ ಬಾಲ್ಯವಿವಾಹ ಗಳ ಅನುಪಾಲನೆ. ಶಾಲೆಬಿಟ್ಟ ಮಕ್ಕಳ ಮನೆಬೇಟಿ ಮಾಡಿ ಮಕ್ಕಳ ನ್ನು ಮರಳಿ ಶಾಲೆಗೆ ಕರೆತರುವುದು .ತಾಯಿ ಕಾರ್ಡ್ ನೀಡುವಾಗ ವಯಸ್ಸಿನ ದಾಖಲಾತಿ ಪರಿಶೀಲನೆ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.ನೋಡಲ್ ಅಧಿಕಾರಿಗಳಾಗಿ ಕೊಪ್ಪಳ ಶಿಶುಅಭಿವೃದ್ದಿ ಯೋಜನಾಧಿಕಾರಿಗಳಾದ ಶ್ರೀಮತಿ ಜಯಶ್ರೀ ರವರು ಭಾಗವಹಿಸಿದ್ದರು. ಒಟ್ಟು 26 ಜನ ಬಾಗವಹಿಸಿದ್ದರು.

Read More