Author: AIN Author

ನವದೆಹಲಿ: ಆಳವಾದ ಕಂದಕಕ್ಕೆ ಬಸ್ಸೊಂದು ಬಿದ್ದ ಪರಿಣಾಮ ಕನಿಷ್ಠ 38 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಭಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘಟನೆಯ ಕುರಿತು ಸಂತಾಪ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಸಂಭವಿಸಿದ ಬಸ್ ಅಪಘಾತ ದುಃಖಕರವಾಗಿದೆ. https://ainlivenews.com/joint_pain_suprem_ray_treatment_reiki/ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪಿಎಂಒ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ 50,000 ರೂ. ನೆರವು ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

Read More

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ವಿಜಯ ಶಕೆ ಆರಂಭವಾಗಿದೆ. ಬಿಜೆಪಿಯ ಯುವ ಅಧ್ಯಕ್ಷ ವಿಜಯೇಂದ್ರ (BY Vijayendra) ಮುಂದೆ ಸಾಲು ಸಾಲು ಸವಾಲುಗಳಿವೆ. ಲೋಕಸಭೆ ಚುನಾವಣಾ (Lok Sabha Election) ಟಾಸ್ಕ್ ರೀಚ್ ಆಗಲು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯ ತಂತ್ರಗಳನ್ನು ಹೆಣೆದಿದ್ದಾರೆ.. https://ainlivenews.com/joint_pain_suprem_ray_treatment_reiki/ ವಿಜಯೇಂದ್ರ ಎದುರು ಮುಳ್ಳಿನ ಹಾದಿ ಇದ್ದು ಸದ್ಯ ಈಗ ಬಿಜೆಪಿ (BJP) ಮನೆ ಸಮಸ್ಯೆಗಳ ಗೂಡಾಗಿದೆ. ಪಕ್ಷದ ಹೀನಾಯ ಸೋಲು, ಬಣ ಸಂಘರ್ಷ, ಒಗ್ಗಟ್ಟಿಲ್ಲ, ನಾಯಕತ್ವದ ಕೊರತೆ, ಸೊರಗಿದ ಪಕ್ಷ ಸಂಘಟನೆ ಇಂಥಹ ಸಂದರ್ಭದಲ್ಲಿ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ. ಸವಾಲುಗಳೇನು? – ಹೈಕಮಾಂಡ್ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವುದು. ವರಿಷ್ಠರು, ದೆಹಲಿ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು – ಕಿರಿಯ, ಹಿರಿಯ ನಾಯಕರ ವಿಶ್ವಾಸ ಪಡೆದು ಒಟ್ಟಿಗೆ ಕರೆದೊಯ್ಯುವುದು. ಹಿರಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಹಕಾರ ಕೋರುವುದು – ಪಕ್ಷದಲ್ಲಿ ಬಣ ಸಂಘರ್ಷಕ್ಕೆ ತೆರೆ ಎಳೆಯುವುದು. ಸೋಲಿನಿಂದ ಕಂಗೆಟ್ಟ ಪಕ್ಷಕ್ಕೆ ಚೇತರಿಕೆ, ಟಾನಿಕ್ ಕೊಡುವುದು…

Read More

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದ್ದು ತಮ್ಮ ಶೋಕಿ ಜೀವನ ನಡೆಸಲು  ದ್ವಿಚಕ್ರ ವಾಹನ, ಚಿನ್ನಾಭರಣ ಕದಿಯುತ್ತಿದ್ದ ಖತರ್ನಾಕ್‌ ಕಿಲಾಡಿಯ ಬಂಧನವಾಗಿದೆ. https://ainlivenews.com/joint_pain_suprem_ray_treatment_reiki/ ಶರತ್‌ ಕುಮಾರ್‌ @ ನಂದು ಬಂಧಿತ ಆರೋಪಿಯಾಗಿದ್ದು  ಶೋಕಿಕಾಗಿ ಕಳ್ಳತನ ಮಾಡುತ್ತಿದ್ದ ಹಾಗೆ ಬೈಕ್‌ ಸ್ಪೇರ್‌ ಪಾರ್ಟ್ಗಳನ್ನ ಬಿಚ್ಚಿ ಬೇರೆಯವರಿಗೆ ಮಾರುತ್ತಿದ್ದ ಖತರ್ನಾಕ್‌ ಆಸಾಮಿಯಾಗಿದ್ದನು. ಹಲಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ಕದ್ದಿದ್ದ ಆರೋಪಿ ಕಾರ್ಯಾಚರಣೆ ನಡೆಸಿ ಶರತ್‌ ಬಂಧಿಸಿದ ಹಲಸೂರು ಪೊಲೀಸರುಆರೋಪಿಯ ಮೇಲೆ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಪತ್ತೆ ಬಂಧಿತನಿಂದ 5 ಲಕ್ಷ ಬೆಲೆಬಾಳುವ 8 ದ್ವಿಚಕ್ರವಾಹನ,21 ಗ್ರಾಂ ತೂಕದ ಚಿನ್ನಾಭರಣ ಸೀಜ್‌

Read More

 ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಸುತ್ತೂರು ಶಾಖಾ ಮಠ ಕ್ಕೆ ಭೇಟಿ ನೀಡಿ ಶ್ರೀಗಳ ಜೊತೆ ಮಾತನಾಡಿದರು. ಆನಂತರ ಮಾಧ್ಯಮಗಳ ಜೊತೆ   ಸಿಎಂ ಸಿದ್ದರಾಮಯ್ಯ  ಮಾತನಾಡಿ, ಸ್ವಾಮೀಜಿಗಳು ಊಟಕ್ಕೆ‌ ಕರೆದಿದ್ರು ಅದಕ್ಕೆ‌ ಬಂದಿದ್ದೆ ಸ್ವಾಮೀಜಿಗಳ ಜೊತೆ ರಾಜಕೀಯ ಮಾತನ್ನಾಡೋಕೆ ಆಗುತ್ತಾ ? ಎಂದು ಪ್ರಶ್ನೆ ಮಾಡಿದರು. ಪ್ರತಾಪ್ ಸಿಂಹ ಬರಿ ಸುಳ್ಳು ಹೇಳೋದಷ್ಟೇ ಅವರಿಗೆ ಏನೂ ಗೊತ್ತಿಲ್ಲ ಮೈಸೂರು ದಶಪಥ ರಸ್ತೆಯನ್ನ ನಾನೇ ಮಾಡಿದ್ದು ಅಂತ ಹೇಳ್ತಾರೆ ವಿಜಯೇಂದ್ರ ಬಗ್ಗೆ ಯತ್ನಾಳ್ ಏನ್ ಹೇಳಿದ್ದಾರೆ ಅನ್ನೋದಕ್ಕೆ ಯಡಿಯೂರಪ್ಪ ಉತ್ತರ ಕೊಡಲಿ ಎಂದು ಹೇಳಿ ಹೋದರು.

Read More

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕಾರ ಮಾಡಿದರು. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್​ ಅವರು ವಿಜಯೇಂದ್ರಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಹಿರಿಯ ಬಿಜೆಪಿ ನಾಯಕರೆಲ್ಲರೂ ಉಪಸ್ಥಿತರಿದ್ದು ಎಸ್.ಟಿ .ಸೋಮಶೇಖರ್‌ ಮಾತ್ರ ಗೈರಾಗಿದ್ದರು. https://ainlivenews.com/joint_pain_suprem_ray_treatment_reiki/ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್‌, ಪೊಲೀಸ್ ಠಾಣೆ ಉದ್ಘಾಟನೆಗೆ ಮೊದಲೇ ಪ್ಲ್ಯಾನ್ ಆಗಿತ್ತು. ನನ್ನ ಕ್ಷೇತ್ರದ್ದೇ ಕಾರ್ಯಕ್ರಮ ಇದ್ದಿದ್ದರಿಂದ ನನಗೆ ಹೋಗಲು ಆಗಲಿಲ್ಲ. ನಮ್ಮ ಕ್ಷೇತ್ರಕ್ಕೆ ಇಂದು ಗೃಹ ಸಚಿವರು ಬರುತ್ತಿದ್ದಾರೆ. ಸಚಿವರ ಕಾರ್ಯಕ್ರಮ ಮುಗಿದ ಬಳಿಕ ನಾನು ಪಕ್ಷದ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಸಷ್ಟಪಡಿಸಿದರು.

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮನೆಗೆ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರಕ್ರಿಯೆ ನೀಡಿದ್ದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. https://ainlivenews.com/joint_pain_suprem_ray_treatment_reiki/ ಮಾಜಿ ಸಿಎಂ ಕುಮಾರಸ್ವಾಮಿ ಬರೀ ಸುಳ್ಳು ಹೇಳಿಕೆ ನೀಡುತ್ತಾರೆ, ಅದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗೆ ತಪ್ಪು ಮಾಡಿರುವ ಕಾರಣ ಹೆಚ್​ಡಿಕೆ ವಿರುದ್ಧ ಎಫ್​ಐಆರ್ ದಾಖಲಾಗಿದೆ. ತಪ್ಪು ಆಗಿದೆ ನನಗೆ ಪಶ್ಚಾತ್ತಾಪ ಆಗಿದೆ ಎಂದರೆ ಅದು ಶಿಕ್ಷೆಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

Read More

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ‘ಅಕ್ರಮ ನಡೆದಿದೆ’ ಎಂಬ ಕುರಿತಂತೆ ರಾಜ್ಯ ಸರ್ಕಾರ ರಚಿಸಿದ ತನಿಖಾ ತಂಡದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ . https://ainlivenews.com/joint_pain_suprem_ray_treatment_reiki/ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ 2019-20ರಿಂದ 2022-23ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ₹2 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸಲು ಐಎಎಸ್‌ ಅಧಿಕಾರಿ ಆದಿತ್ಯ ಆಮ್ಲನ್‌ ಬಿಸ್ವಾಸ್‌ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಸದ್ಯ 230ಕ್ಕೂ ಹೆಚ್ಚಿನ ಕಾಮಗಾರಿಗಳ ದಾಖಲೆಗಳ ಪರಿಶೀಲನೆಯನ್ನು ನಡೆಸಿದ್ದು, ತನಿಖಾ ತಂಡದ ಪರಿಶೋಧನೆ ವೇಳೆ ಕಾಮಗಾರಿ ಅನುಷ್ಠಾನದಲ್ಲಿ ಹಲವು ಲೋಪಗಳು, ಅಕ್ರಮಗಳು ಪತ್ತೆಯಾಗಿದೆ. ಈ ವಿಚಾರವನ್ನು ಕಳೆದ ನ.7ರಂದು ನಡೆದ ತನಿಖಾ ತಂಡದ ಪರಿಶೀಲನಾ ಸಭೆಯಲ್ಲಿ ಸ್ವತಃ ಆದಿತ್ಯ ಆಮ್ಲನ್‌ ಬಿಸ್ವಾಸ್ ಅವರೇ ತಿಳಿಸಿದ್ದು, ಶೀಘ್ರದಲ್ಲೆ ಕೆಲ ಕಾಮಗಾರಿಗಳ ಕುರಿತಂತೆ ಮಧ್ಯಂತರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ…

Read More

ಬೆಂಗಳೂರು: ಲಕ್ಷ್ಮೀ ಪೂಜೆಗೆ ಇಟ್ಟಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು  ಕಳ್ಳರು ಎಗರಿಸಿದ ಘಟನೆ ಆರ್‌ಆರ್‌ ನಗರದಲ್ಲಿ ನಡೆದಿದೆ. https://ainlivenews.com/joint_pain_suprem_ray_treatment_reiki/ ಜವರೇಗೌಡ ನಗರದ ಅಪಾರ್ಟ್‌ಮೆಂಟ್‌ನ ಪ್ರೀತಿ ಎಂಬವರ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಪೂಜೆಗೆ ಇಟ್ಟಿದ್ದ ಒಂದು ಜೊತೆ ಬಳೆ, ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಚಿನ್ನದ ಮಾಂಗಲ್ಯ ಸರ, ಎರಡು ಜೊತೆ ಚಿನ್ನದ ಕಿವಿ ಓಲೆ ಚಿನ್ನ ಹಾಗೂ ವಜ್ರದ ಓಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ. ಆಭರಣ ಕಳ್ಳತನದಿಂದ ಮನೆ ಮಂದಿ ಕಂಗಾಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Read More

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್- ಶ್ರೀನಿ ಜೋಡಿಯ ‘ಘೋಸ್ಟ್’ (Ghost Film) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಘೋಸ್ಟ್ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ ಶಿವರಾಜ್‌ಕುಮಾರ್ (Shivarajkumar) ‘ಘೋಸ್ಟ್’ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಅದು ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ ಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಕೊಟ್ಟಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್…

Read More

ನವದೆಹಲಿ: ಆಳವಾದ ಕಂದಕಕ್ಕೆ ಬಸ್ಸೊಂದು ಬಿದ್ದ ಪರಿಣಾಮ ಕನಿಷ್ಠ 38 ಜನರು ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅಸ್ಸಾರ್ ಪ್ರದೇಶದಲ್ಲಿ ನಡೆದಿದೆ. ದೋಡಾ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನಡೆದ ಎರಡನೇ ರಸ್ತೆ ಅಪಘಾತ ಇದಾಗಿದೆ. ಬಸ್ ಬಟೋಟ್-ಕಿಶ್ತ್ವಾರ್ ರಾಷ್ಟ್ರೀಯ ಹೆದ್ದಾರಿಯ ಟ್ರುಂಗಲ್-ಅಸ್ಸಾರ್ ಬಳಿ ಸ್ಕಿಡ್ ಆಗಿ 300 ಅಡಿ ಕೆಳಗೆ ಬಿದ್ದಿದೆ ಎನ್ನಲಾಗಿದೆ. ಬಸ್ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕೆಲವು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. https://ainlivenews.com/joint_pain_suprem_ray_treatment_reiki/ ದೋಡಾದ ಅಸ್ಸಾರ್‌ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಂತ್ರಸ್ತ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಡಿವಿ ಕಾಮ್ ಮತ್ತು…

Read More