Author: AIN Author

ಬೆಂಗಳೂರು:- ನಗರದಲ್ಲಿ ಸುಲಿಗೆ ಮಾಡ್ತಿದ್ದ ನಾಲ್ವರು ಆರೋಪಿಗಳನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1ಲಕ್ಷದ 50ಸಾವಿರ ಮೌಲ್ಯದ ಮೊಬೈಲ್ ಗಳು ಜಪ್ತಿ ಮಾಡಿದ್ದಾರೆ. ಬೆಳ್ಳಿ ಚೈನ್, ನಗದು ಹಣ, ಬೈಕ್ ಮತ್ತು ಮಾರಕಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಉಸ್ಕಾನ್ ಪಾಷ, ಸೂರ್ಯ, ಇರ್ಫಾನ್, ಜೀವ ಬಂಧಿತ ಆರೋಪಿಗಳು.. ಆರೋಪಿಗಳು ಒಂಟಿಯಾಗಿ ಓಡಾಡೋರನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದರು. ಚಾಕು ತೋರಿಸಿ ಸಾರ್ವಜನಿಕರ ಬಳಿ ಹಣ, ಮೊಬೈಲ್, ಚಿನ್ನಾಭರಣ ದೋಚ್ತಿದ್ರು.. ಪುಲಕೇಶಿ ನಗರ, ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಮನಗರ:- ಜಿಲ್ಲೆಯ ಕನಕಪುರ ತಾಲೂಕಿನ ನೇರಳೆ ಹಳ್ಳಿ ದೊಡ್ಡಿ ಎಂಬ ಗ್ರಾಮದಲ್ಲಿ ನಾಡ ಬಾಂಬ್ ಸ್ಫೋಟಗೊಂಡಿದ್ದು, ವ್ಯಕ್ತಿಯ ಕೈ ಚಿದ್ರ ಚಿತ್ರವಾಗಿದೆ. ಗ್ರಾಮದ ನಂಜೇಶ್ ಎಂಬುವವರ ಅಕ್ಕಿ ಗಿರಣಿಯ ಬಳಿ ಕಾಡು ಹಂದಿ ಬೇಟೆಗೆಂದು ಎರಡು ನಾಡ ಬಾಂಬುಗಳು ಇಡಲಾಗಿತ್ತು. ಯಾರೋ ಮಾಟ ಮಂತ್ರಕ್ಕೆ ಇಟ್ಟಿರುವ ತೆಂಗಿನ ಕಾಯಿ ಎಂದು ಭಾವಿಸಿ ನಾಡ ಬಾಂಬನ್ನು ಅದೇ ಗ್ರಾಮದ ನಿವಾಸಿ ನೌಸದ್ ಪಾಷಾ ಜಜ್ಜಿದ್ದರು. ನಾಡ ಬಾಂಬ್ ಸಿಡಿದ ರಭಸಕ್ಕೆ ನೌಶದ್ ಪಾಷಾರವರ ಬಲಗೈ ಸಂಪೂರ್ಣ ಚಿದ್ರ ಚಿದ್ರವಾಗಿದೆ. ಸ್ಪೋಟದ ಶಬ್ದವನ್ನು ಗ್ರಹಿಸಿ ಸ್ಥಳಕ್ಕೆ ಆಗಮಿಸಿ ನೌಷದ್ ಪಾಷಾ ರವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸ್ಥಳೀಯ ಗ್ರಾಮಸ್ಥರು ದಾಖಲಿಸಿದ್ದಾರೆ. ನಾಡ ಬಾಂಬ್ ಸ್ಪೋಟಕ್ಕೆ ನೇರಳೆಹಳ್ಳಿ ದೊಡ್ಡಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಹಜ್ ಸಯ್ಯದ್ ತಾಜುದ್ದೀನ್ ಖಾದ್ರಿ ಅಲ್ ಜಿಲಾನಿ, ಗುಲ್ಬರ್ಗಾ ಷರೀಫ್ ನ ಹಜರತ್ ಕ್ವಾಜಾ ಬಂದನವಾಜ್ ದರ್ಗಾದ ಖುಸ್ರೂ ಹುಸೇನ್ ಸಾಬ್ ಖಿಲಾಬಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾವೇಷದ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ‌ ಅಹಮದ್, ಶಾಸಕರಾದ ಪ್ರಸಾದ್ ಅಬ್ಬಯ್ಯ ಸೇರಿ ಹಲವಾರು ಶಾಸಕರು ಮತ್ತು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಬೆಂಗಳೂರು:- ಬೆಂಗಳೂರು ಗಿರಿನಗರ ಬಾಬು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾಗಿರುವುದು ತಿಳಿದು ಬಂದಿದೆ. ತಾವಾಯ್ತು, ತಮ್ಮ ಕುಟುಂಬವಾಯ್ತು ಎಂದು ನೆಮ್ಮದಿಯಿಂದ ಜೀವನ ಮಾಡಿಕೊಂಡಿದ್ದ ಸಿದ್ದರಾಜುವಿನ ಸುಂದರ ಪತ್ನಿಯ ಮೇಲೆ ಕಣ್ಣು ಹಾಕಿದ ಕಾಮುಕ ವೆಂಕಟೇಶ್‌ ಬಾಬುನನ್ನು ಅಟ್ಟಾಡಿಸಿ ಹೊಡೆದು ಕೊಲೆಗೈದು ಜೈಲು ಸೇರಿದ್ದಾನೆ. ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಗಿರಿನಗರದ ವೆಂಕಟೇಶಬಾಬು ಎಂಟ್ರಿ ಕೊಟ್ಟು ಇಡೀ ಸಂಸಾರವನ್ನೇ ಛಿದ್ರ ಮಾಡಿದನಲ್ಲ ಎಂಬ ರೋಷ ಸಿದ್ದರಾಜುಗೆ ಉಕ್ಕುತ್ತಿತ್ತು. ಆದರೂ, ತನ್ನ ಹೆಂಡತಿಯೇ ಸರಿಯಾಗಿಲ್ಲ ಎಂದು ಕೈ ಕೈ ಹಿಸುಕಿಕೊಂಡು ಸುಮ್ಮನಾಗಿದ್ದನು. ಇನ್ನು ತನ್ನ ಗಂಡ ಬಿಟ್ಟು ಹೋಗಿರುವುದೇ ತನಗೆ ಲಾಭವಾಗಿದೆ ಎಂದು ವೆಂಕಟೇಶ್ ಬಾಬು ಜೊತೆಗೆ ಸಿದ್ದರಾಜು ಪತ್ನಿ ಮಾತನಾಡುತ್ತಾ ಸಲುಗೆಯಿಂದ ಇದ್ದಳು. ಆಗ ಅಲ್ಲಿಗೆ ಬಂದ ಸಿದ್ದರಾಜು ತನ್ನ ಪತ್ನಿ ವೆಂಕಟೇಶನ ಜೊತೆಗೆ ಮಾತನಾಡೊದನ್ನ ನೋಡಿ ಕೋಪಗೊಂಡಿದ್ದಾನೆ. ಈ ವೇಳೆ ರಸ್ತೆಯಲ್ಲಿಯೇ ವೆಂಕಟೇಶನೊಂದಿಗೆ ಜಗಳ ಮಾಡಿ ಆರಂಭಿಸಿದ್ದಾನೆ. ನಂತರ, ವೆಂಕಟೇಶನನ್ನು ಅಟ್ಟಾಡಿಸಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.…

Read More

ಬೆಳಗಾವಿ:- ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಬೆಂಬಲಿಗರ ವಿರುದ್ಧ ರಮೇಶ್​ ಜಾರಕಿಹೊಳಿ ಆಪ್ತನಿಗೆ ಚಾಕು ಇರಿದಿರುವ ಆರೋಪ ಕೇಳಿ ಬಂದಿದೆ. ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಚನ್ನರಾಜ ಹಟ್ಟಿಹೊಳಿ ಅವರ ಐದಾರು ಜನ ಬೆಂಬಲಿಗರು ಏಕಾಏಕಿ ಬಂದು ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೃಥ್ವಿ ಸಿಂಗ್ ರಮೇಶ ಜಾರಕಿಹೊಳಿ ಆಪ್ತ. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಎಂ.ಬಿ.ಜೀರಲಿ ಸೇರಿ ಮತ್ತಿತರರು ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದರು. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

ದಾವಣಗೆರೆ:- ನಗರ ಹೊರಭಾಗದ ರಾ.ಹೆದ್ದಾರಿ 48 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲಿಯೇ ಇಬ್ಬರ ಸಾವು, ಏಳು ಜನರಿಗೆ ಗಂಭೀರ ಗಾಯವಾಗಿದೆ. ಕಾರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದೆ. ಓವರ್ ಟೇಕ್ ಮಾಡುತ್ತಿದ್ಧಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ. ಅರುಣಕುಮಾರ್ ಶೆಟ್ಟರ್ ಹಾಗೂ ವಿಜಯಕ್ಕ ಶೆಟ್ಟರ್ ಮೃತ ದುರ್ದೈವಿಗಳು. ಇನ್ನುಳಿದಂತೆ ಚಾಲಕ ಸೇರಿ ಏಳು ಜನರು ಗಂಭೀರ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲಕ ಶೆಟ್ಟರ್ ಕುಟುಂಬದ ಸದಸ್ಯರು, ತುಮಕೂರಿನಿಂದ ಮದುವೆ ಮುಗಿಸಿಕೊಂಡು ರಾಣೆಬೆನ್ಣೂರಿಗೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆ ಹೊರಭಾಗದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ:- ಬಿಜೆಪಿ ಎಸ್‌ಸಿ ಮೋರ್ಚಾ ಸದಸ್ಯ ಪೃಥ್ವಿ ಸಿಂಗ್ ಎನ್ನುವವರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.ದುರುದ್ದೇಶಪೂರ್ವಕವಾಗಿ ಆತ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್‌ ಹಾಕಿದ್ದು ಸೆರೆಯಾಗಿದೆ. ಆದರೆ ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರುದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಿ ಎಂದು ಆಗ್ರಹಿಸಿದ್ದಾರೆ.

Read More

ಕಲಬುರಗಿ:- ಪ್ರಯಾಣಿಕರ ಅನುಕೂಲ ನಿಟ್ಟಿನಲ್ಲಿ ಸೊಲ್ಲಾಪುರ-ಮುಂಬೈ ಹಾಗು ಮುಂಬೈ ಸೊಲ್ಲಾಪುರ ವಂದೇ ಭಾರತ್ ರೈಲನ್ನು ಕಲಬುರಗಿವರೆಗೆ ವಿಸ್ತರಣೆ ಮಾಡಿ ಅಂತ ಸಂಸದ ಡಾ.ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ಜಾಧವ್ ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹೀಗಾಗಿ ನೂರಾರು ಪ್ರಯಾಣಿಕರು ದಿನನಿತ್ಯವೂ ಹತ್ತು ಹಲವು ಕೆಲಸಗಳಿಗಾಗಿ ಮುಂಬೈಗೆ ಹೋಗ್ತಾರೆ.ಅದಕ್ಕಾಗಿ ವಂದೇ ಭಾರತ್ ರೈಲಿನ ಅವಶ್ಯಕತೆಯಿದೆ ಅಂದ್ರು. ಇದೇವೇಳೆ ಬೆಂಗಳೂರಿಗೆ ಹೋಗಲು ಕಲಬುರಗಿಯಿಂದಲೇ ಒಂದು ಹೊಸ ರೈಲು ಆರಂಭಿಸುವಂತೆ ಸಹ ಮನವಿ ಮಾಡಿದ್ರು..

Read More

ಬೆಂಗಳೂರು:- ಶಾಲೆ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಣೆ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದ್ದು, ಜನವರಿಯಿಂದ ಶಾಲೆ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ವಿತರಣೆಯಾಗಲಿದೆ ಎಂದರು. ಇದೇ ಮೊದಲ ಬಾರಿಗೆ ಶಾಲೆಗಳಿಗೆ ತೆರಳಿ ನ್ಯಾಪ್ಕಿನ್ ಗಳನ್ನ ವಿತರಿಸಲು ನಿರ್ಧರಿಸಲಾಗಿದೆ ಎಂದರು. ಶುಚಿ ಒಂದು ಮಹತ್ವವಾದ ಯೋಜನೆ. ಹೆಣ್ಣುಮಕ್ಕಳಿಗೆ ಇದು ಅತ್ಯಗತ್ಯವಾಗಿದೆ.‌ ಆದರೆ ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗೆ ಯೋಜನೆ ಸ್ಥಗಿತವಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿದ್ದೇವೆ. ಈಗಾಗಲೇ ನಾಲ್ಕು ವಿಭಾಗವಾರು ಟೆಂಡರ್ ಆಹ್ವಾನಿ ಬಹುತೇಕ ಪ್ರಕ್ರಿಯೇ ಪೂರ್ಣಗೊಳಿಸಲಾಗಿದೆ.‌ 10 ವರ್ಷದಿಂದ 18 ವರಗಷದ ಒಳಗಿನ ಸುಮಾರು 19 ಲಕ್ಷ ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ವಿತರಿಸಲು ಯೋಜಿಸಲಾಗಿದೆ. ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್ ಮಕ್ಕಳಿಗು ನ್ಯಾಪ್ಕಿನ್ ಗಳನ್ನ ವಿತರಿಸಲಾಗುವುದು. ಈ ಮೊದಲು ಸರ್ಕಾರಿ ಆಸ್ಪತ್ರೆಯ ಮೂಲಕ ನ್ಯಾಪ್ಕಿನ್…

Read More

ಬೆಳಗಾವಿ/ ಬೆಂಗಳೂರು:- ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಳೆ ಹೆಚ್ಚಾಗುತ್ತಿರುವುದರಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತಿದ್ದು, ಕಳೆ ತೆರವು ಮಾಡಿ ವನ್ಯಜೀವಿಗಳ ಸಂಚಾರ ಮತ್ತು ಆಹಾರ ಲಭ್ಯತೆ ಹೆಚ್ಚಿಸಲು ಬೇಕಾದ ಎಲ್ಲ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ಅದೇ ರೀತಿ ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಶಾಶ್ವತ ಪರಿಹಾರವಾಗಿದ್ದು, ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬಂಡೀಪುರ, ನಾಗರಹೋಳೆ, ಬನ್ನೇರುಘಟ್ಟ ಅರಣ್ಯದಲ್ಲಿ ಕಳೆಯದ್ದು ದೊಡ್ಡ ಸಮಸ್ಯೆ ಇದೆ. ಲಂಟಾನ ನಮ್ಮ ಕಳೆಯಲ್ಲ. ವಿದೇಶದಿಂದ ಬಂದಿದೆ. ಸುಟ್ಟರೂ ಮತ್ತೆ ಬೆಳೆಯುತ್ತಿದೆ. ಈ ಬಗ್ಗೆ ಸಂಶೋಧನೆ ಆಗಿದೆ. ಭೂಮಿಯ ಕೆಳಗೆ ನಾಲ್ಕು ಇಂಚು ಒಳಗಿನಿಂದ ತೆಗೆದುಹಾಕಬೇಕು ಎಂದು ವರದಿ ಕೊಟ್ಟಿದ್ದಾರೆ. ಅರಣ್ಯದಲ್ಲಿ ಶೇ.40-50 ರಷ್ಟು ಕಳೆ ಇರುವ ಕಾರಣ ವನ್ಯಜೀವಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.…

Read More