ರಾಮನಗರ:– ಜಿಲ್ಲೆಯ ಕನಕಪುರ ತಾಲೂಕಿನ ನೇರಳೆ ಹಳ್ಳಿ ದೊಡ್ಡಿ ಎಂಬ ಗ್ರಾಮದಲ್ಲಿ ನಾಡ ಬಾಂಬ್ ಸ್ಫೋಟಗೊಂಡಿದ್ದು, ವ್ಯಕ್ತಿಯ ಕೈ ಚಿದ್ರ ಚಿತ್ರವಾಗಿದೆ.
ಗ್ರಾಮದ ನಂಜೇಶ್ ಎಂಬುವವರ ಅಕ್ಕಿ ಗಿರಣಿಯ ಬಳಿ ಕಾಡು ಹಂದಿ ಬೇಟೆಗೆಂದು ಎರಡು ನಾಡ ಬಾಂಬುಗಳು ಇಡಲಾಗಿತ್ತು. ಯಾರೋ ಮಾಟ ಮಂತ್ರಕ್ಕೆ ಇಟ್ಟಿರುವ ತೆಂಗಿನ ಕಾಯಿ ಎಂದು ಭಾವಿಸಿ ನಾಡ ಬಾಂಬನ್ನು ಅದೇ ಗ್ರಾಮದ ನಿವಾಸಿ ನೌಸದ್ ಪಾಷಾ ಜಜ್ಜಿದ್ದರು. ನಾಡ ಬಾಂಬ್ ಸಿಡಿದ ರಭಸಕ್ಕೆ ನೌಶದ್ ಪಾಷಾರವರ ಬಲಗೈ ಸಂಪೂರ್ಣ ಚಿದ್ರ ಚಿದ್ರವಾಗಿದೆ.
ಸ್ಪೋಟದ ಶಬ್ದವನ್ನು ಗ್ರಹಿಸಿ ಸ್ಥಳಕ್ಕೆ ಆಗಮಿಸಿ ನೌಷದ್ ಪಾಷಾ ರವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸ್ಥಳೀಯ ಗ್ರಾಮಸ್ಥರು ದಾಖಲಿಸಿದ್ದಾರೆ. ನಾಡ ಬಾಂಬ್ ಸ್ಪೋಟಕ್ಕೆ ನೇರಳೆಹಳ್ಳಿ ದೊಡ್ಡಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.