ಕಲಬುರಗಿ:- ಪ್ರಯಾಣಿಕರ ಅನುಕೂಲ ನಿಟ್ಟಿನಲ್ಲಿ ಸೊಲ್ಲಾಪುರ-ಮುಂಬೈ ಹಾಗು ಮುಂಬೈ ಸೊಲ್ಲಾಪುರ ವಂದೇ ಭಾರತ್ ರೈಲನ್ನು ಕಲಬುರಗಿವರೆಗೆ ವಿಸ್ತರಣೆ ಮಾಡಿ ಅಂತ ಸಂಸದ ಡಾ.ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿಂದು ವಿಷಯ ಪ್ರಸ್ತಾಪಿಸಿದ ಜಾಧವ್ ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಹೀಗಾಗಿ ನೂರಾರು ಪ್ರಯಾಣಿಕರು ದಿನನಿತ್ಯವೂ ಹತ್ತು ಹಲವು ಕೆಲಸಗಳಿಗಾಗಿ ಮುಂಬೈಗೆ ಹೋಗ್ತಾರೆ.ಅದಕ್ಕಾಗಿ ವಂದೇ ಭಾರತ್ ರೈಲಿನ ಅವಶ್ಯಕತೆಯಿದೆ ಅಂದ್ರು.
ಇದೇವೇಳೆ ಬೆಂಗಳೂರಿಗೆ ಹೋಗಲು ಕಲಬುರಗಿಯಿಂದಲೇ ಒಂದು ಹೊಸ ರೈಲು ಆರಂಭಿಸುವಂತೆ ಸಹ ಮನವಿ ಮಾಡಿದ್ರು..