Author: AIN Author

ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ – ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) – ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರ: ಬಾಗಲಕೋಟೆ – ರೂ. 102.62 ಬೆಂಗಳೂರು – ರೂ. 101.94 ಬೆಂಗಳೂರು ಗ್ರಾಮಾಂತರ – ರೂ. 101.58 ಬೆಳಗಾವಿ – ರೂ. 101.76 ಬಳ್ಳಾರಿ – ರೂ. 103.90 ಬೀದರ್ – ರೂ. 102.28 ವಿಜಯಪುರ – ರೂ. 102.06 ಚಾಮರಾಜನಗರ – ರೂ. 102.06 ಚಿಕ್ಕಬಳ್ಳಾಪುರ – ರೂ. 102.39 ಚಿಕ್ಕಮಗಳೂರು – ರೂ. 102.90…

Read More

ಬೆಂಗಳೂರು, ಡಿಸೆಂಬರ್ 10 : ಐವತ್ತು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.ಎಸ್. ನಿಜಲಿಂಗಪ್ಪನವರು ರಾಜ್ಯ ಕರ್ನಾಟಕವೆಂದು ನಾಮಕರಣವಾದ ನಂತರದ ಮೊದಲ ಮುಖ್ಯಮಂತ್ರಿ. https://ainlivenews.com/dengue-outbreak-record-level-cases-detected-in-last-1-month/ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಭಾವೆಯವರ ಆದರ್ಶಗಳಿಂದ ಪ್ರೇರಿತರಾಗಿದ್ದರು. ನಿಜಲಿಂಗಪ್ಪನವರು ಕರ್ನಾಟಕದ ಏಕೀಕರಣದಲ್ಲಿ ಭಾಗಿಯಾಗಿದ್ದರು. ಅವರ ಅವಧಿಯಲ್ಲಿ ರೈತರ ಒಳಿತಿಗಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವಿಭಾಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

Read More

ಹುಬ್ಬಳ್ಳಿ: ನಾವು ಮುಖ್ಯಮಂತ್ರಿ  ಸಿದ್ದರಾಮಯ್ಯರ ಜೊತೆ ಬಹಳ ಚೆನ್ನಾಗಿ ಏನಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು. ನಗರದಲ್ಲಿ ಭಾನುವಾರ ತಮ್ಮನ್ನ ಭೇಟಿಯಾದ ಸುದ್ದಿಗಾರರ ಅವರು ಮಾತನಾಡಿದರು, ಸಿದ್ದರಾಮಯ್ಯಾ ನವರುಪಕ್ಷಕ್ಕೆ ಬಂದಿರೋದು 2006 ರಲ್ಲಿ ಅಷ್ಟೇನೂ ಪರಿಚಯ ಇಲ್ಲ ಎಂದ ಅಬರು, ಯಾವ ಕಾರಣಕ್ಕೆ ನಾವ ಅಧಿಕಾರಕ್ಕೆ ಬಂದಿದೀವಿ, ಅದನ್ನು ಈಡೇರಿಸಬೇಕು ಅದು ಆಗಿಲ್ಲ ಅಂದ್ರೆ ನಾನು ಪ್ರಶ್ನೆ ಮಾಡ್ತೀನಿಹನಿಮೂನ ಪಿರೇಢ್ ಮೂಗಿಲಿ ನೋಡೋಣ ಏನೇ ಆಗಲಿ ಏನಾಗತ್ತೆ ಅನ್ನೋದ ಕಾದು ನೋಡಬೇಕು ಎಂದರು. ಇನ್ನು ಈಡಿಗ ಸಮಾಜದ  ಸಮಾವೇಶ ಮಾಡ್ತೀದಾರೆ ಆದರೆ  ನಾನು ಹುಬ್ಬಳ್ಳಿ ಅಲ್ಲಿ ಇದೀನಿ ಅವರಿಗೆ ಒಳ್ಳೆದಾಗಲಿ ಎಂದ ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ.ಸರಕಾರದ ಗಮನ ಸೆಳೆಯಲು, ಸಮಾಜದ ಹಿತ ಕಾಪಾಡಲು ಸಂಘ ಇತ್ತು. ಆದ್ರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನ ಮಾಡಿದಾರೆ.. 50 ಲಕ್ಷ ಜನ ಸಂಖ್ಯೆ ಇದಾರೆ ಅಂತಾ…

Read More

ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಗೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಕಾರ್ಯಕರ್ತರನ್ನ ಸ್ವಪಕ್ಷದಲ್ಲೇ ಉಳಿಸಿಕೊಳ್ಳಲು ಜಿಲ್ಲಾ ಜೆಡಿಎಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಮರ್ಥ ನಾಯಕನಿಲ್ಲದೇ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಗುಡ್ ಬೈ‌ ಹೇಳಿ ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರೆ. ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ದಿನದಿಂದ ದಿನಕ್ಕೆ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆಯುತ್ತಿರುವ ಹಿನ್ನೆಲೆ ಜಿಲ್ಲಾ ಜೆಡಿಎಸ್ ನಾಯಕರಿಗೆ ತಲೆನೋವು ಶುರುವಾಗಿದೆ. ಕಾರ್ಯಕರ್ತರನ್ನ ಒಗ್ಗೂಡಿಸುವಲ್ಲಿ ಜಿಲ್ಲಾ ಜೆಡಿಎಸ್ ನಾಯಕರು ವಿಫಲವಾಗಿದ್ದು, ತುಮಕೂರು ಗ್ರಾಮಾಂತರ ಜೆಡಿಎಸ್ ಸಭೆಗೆ ಬಾರದೆ ನಿರಾಸೆ ತೋರಿಸಿದ ಕಾರ್ಯಕರ್ತರು..

Read More

ಹಾಸನ: ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಆದಮೇಲೆ ಅರ್ಜಿ ಹಾಕಂಡು ಹೋಗಿದ್ದಾರೆ. ಇಲ್ಲ ನಾನು ಐವತ್ತು, ಅರವತ್ತು ಜನ ಕರೆದುಕೊಂಡು ಬಂದುಬಿಡುತ್ತೇನೆ ಏನು ತೊಂದರೆ ಆಗುವುದು ಬೇಡ ಅಂತ ಹೋಗಿದ್ದಾರೆ. ಐವತ್ತು, ಅರವತ್ತು ಜನ ಕರೆದುಕೊಂಡು ಸಣ್ಣಪುಟ್ಟವರಿಂದ ಹೋಗಲು ಆಗುತ್ತಾ? ಮೊನ್ನೆ ಯಾರೋ ಮಾಹಿತಿ ಹೇಳುತ್ತಿದ್ದರು. ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದು ಬಿಡುತ್ತೇನೆ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆಸ್ಪೋಟಕ ಮಾಹಿತಿ ಬಚ್ಚಿಟ್ಟಿದ್ದಾರೆ. https://ainlivenews.com/dengue-outbreak-record-level-cases-detected-in-last-1-month/ ಲೋಕಸಭಾ ಚುನಾವಣೆ ಕಳೆದ ಮೇಲೆ ಮಹಾರಾಷ್ಟ್ರದಲ್ಲಿ ಆಯ್ತು ಅಲ್ವಾ ಅದೇ ರೀತಿ ಇಲ್ಲಿ ಯಾರು ಹುಟ್ಕತರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಎನ್ನುವುದೇ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗುತ್ತಾರೆ ಅಷ್ಟೇ. ಇವತ್ತು ಇಲ್ಲಿ ಇರುತ್ತಾರೆ. ಅನುಕೂಲ ಆಗಬೇಕಾದರೆ ಇನ್ನೊಂದು…

Read More

ಮಡಿಕೇರಿ: ಮಗಳನ್ನು (Daughter) ಉಸಿರುಗಟ್ಟಿಸಿ ಕೊಂದು ತಂದೆ-ತಾಯಿ ನೇಣಿಗೆ ಕೊರಳೊಡ್ಡಿದ ಘಟನೆ ಮಡಿಕೇರಿ (Madiekri) ತಾಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್‌ವೊಂದರಲ್ಲಿ (Resort) ನಡೆದಿದೆ. ಮೂಲತಃ ಕೇರಳ (Kerala) ರಾಜ್ಯದ ಕೊಲ್ಲಂ ನಿವಾಸಿ ವಿನೋದ್ ಬಾಬುಸೇನಾನ್ (41), ಪತ್ನಿ ಝುಬಿ ಅಬ್ರಹಾಂ (37) ಹಾಗೂ ಪುತ್ರಿ ಜೋಹನ್ (11) ಮೃತ ದುರ್ದೈವಿಗಳು. ಶುಕ್ರವಾರ ಸಂಜೆ 6 ಗಂಟೆಗೆ ಕ್ರೇಟಾ ಕಾರ್‌ನಲ್ಲಿ ಮಡಿಕೇರಿ ಸಮೀಪದ ಬಿಳಿಗೇರಿಯ ರೆಸಾರ್ಟ್‌ಗೆ ಆಗಮಿಸಿ ಪ್ರತ್ಯೇಕ ಕಾಟೇಜ್ ಪಡೆದ ಕುಟುಂಬ ಕೆಲ ಹೊತ್ತು ವಿಶ್ರಮಿಸಿ ರೆಸಾರ್ಟ್‌ನಲ್ಲಿ ಕಾಲಕಳೆದಿದ್ದಾರೆ.  ಮೂವರು ರೆಸಾರ್ಟ್‌ಗೆ  ಬರುವ ಸಮಯದಲ್ಲಿ ಲವಲವಿಕೆಯಿಂದ ಇದ್ದರು. ರಾತ್ರಿ ಊಟ ಮಾಡಿ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಕೇರಂ ಆಡಿದ್ದಾರೆ. ನಂತರ ರಾತ್ರಿ ಕೊಠಡಿ ಸೇರಿದ ಕುಟುಂಬ ಶನಿವಾರ ಬೆಳಗ್ಗೆ 10 ಗಂಟೆಗೆ ಚೆಕ್ ಔಟ್ ಆಗುವುದಾಗಿ ತಿಳಿಸಿದ ಮೇರೆಗೆ ರೂಂ ಬಾಯ್ ಬೆಳಗ್ಗೆ 10 ಗಂಟೆಗೆ ಬಾಗಿಲು ತಟ್ಟಿದ್ದು, ಯಾರು ಪ್ರತಿಕ್ರಿಯೆ ನೀಡಲಿಲ್ಲ.  https://ainlivenews.com/dengue-outbreak-record-level-cases-detected-in-last-1-month/ ಕುಟುಂಬ ಹೊರ ತೆರಳಿರಬಹುದು ಎಂದು…

Read More

10ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ 4ನೇ ಸೋಲು ಅನುಭವಿಸಿದೆ. ನಗರದ ಕಂಠೀರವ ಸ್ಟೇಡಿಯನಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ದದ ಪಂದ್ಯದಲ್ಲಿ 0-4 ಅಂಕಗಳಿಂದ ಪರಾಭವಗೊಂಡಿತು. ಬಿಎಫ್‌ಸಿ ಸದ್ಯ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದು 7 ಅಂಕಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಸಿಟಿ ಎಫ್‌ಸಿ 6 ಪಂದ್ಯಗಳಲ್ಲಿ 4ನೇ ಜಯದೊಂದಿಗೆ 14 ಅಂಕ ಸಂಪಾದಿಸಿದೆ.

Read More

ಬೆಂಗಳೂರು: ಕನ್ನಡ ಚಿತ್ರರಂಗದ ಕಲಾಸರಸ್ವತಿ ಲೀಲಮ್ಮ ಇನ್ನು ನೆನಪಷ್ಟೇ ಅಮ್ಮನ ಕಳೆದುಕೊಂಡ ಆಘಾತದಿಂದ ಪುತ್ರ ವಿನೋದ್ ರಾಜ್ ಇನ್ನೂ ಹೊರಬಂದಿಲ್ಲಇವತ್ತು ಲೀಲಾವತಿ (Leelavathi) ಅವರ ಹಾಲು ತುಪ್ಪದ (Haalu-Tuppa) ಕಾರ್ಯ ನೆರವೇರಿಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಹಾಲುತುಪ್ಪದ ಕಾರ್ಯ ನಡೆಯಲಿದೆ. ಬಳಿಕ 11 ದಿನದ ಕಾರ್ಯ ಮಾಡಲು ನಿರ್ಧಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಷ್ಟೇ ಭಾಗಿಯಾಗುತ್ತಾರೆ. ಮಧ್ಯಾಹ್ನ 12 ಗಂಟೆಯ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.  https://ainlivenews.com/dengue-outbreak-record-level-cases-detected-in-last-1-month/ ಶನಿವಾರ ಸಂಜೆ ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಬಳಿ ಲೀಲಾವತಿ ಅವರ ಫಾರ್ಮ್ ಹೌಸ್‌ನಲ್ಲಿರುವ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ (Vinod Raj) ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು.

Read More

ನೋಡುಗರಿಗೆ ಪರಿಶುದ್ಧ ಮನೋರಂಜನೆಯ ರಸದೌತಣ ಉಣಬಡಿಸಲು ಹೊಸತಂಡವೊಂದು ಸಿದ್ದವಾಗಿದೆ. ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ” ಬ್ಯಾಕ್ ಬೆಂಚರ್ಸ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡೊಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಕುಲ್ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆನ್ ಲೈನ್ ಮೂಲಕ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ‌ ಎಂದು ಮಾತನಾಡಿದ ನಿರ್ದೇಶಕ ಬಿ.ಆರ್ ರಾಜಶೇಖರ್, “ಬ್ಯಾಕ್ ಬೆಂಚರ್ಸ್” ಚಿತ್ರದಲ್ಲಿ ಮನೋರಂಜನೆ ಪ್ರಮುಖಾಂಶ. ಎಲ್ಲರಿಗೂ ಕಾಲೇಜು ದಿನಗಳನ್ನು ನೆನಪಿಸುವ ಚಿತ್ರವಿದು. ನಮ್ಮ ಚಿತ್ರದಲ್ಲಿ ಬೇರೆ ಏನು ಇಲ್ಲ.. ಮನೋರಂಜನೆಯೇ ಎಲ್ಲಾ.. ಮೂವತ್ತೈದು ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಸಾಕಷ್ಟು ಹೊಸ…

Read More

ಬೆಂಗಳೂರು:- ರಾಷ್ಟ್ರೀಯ ಹೆದ್ದಾರಿ 44 ರ ರಸ್ತೆ ಬದಿಯಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆ ಹಿನ್ನೀರಿನ ಹೊಂಡದಲ್ಲಿ ಕಾರು ಮುಳುಗಿ ನಾಲ್ಕುಜನ ವಿದ್ಯಾರ್ಥಿಗಳು ಜಲಸಮಾಧಿಯಾಗಿರೋದು ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಯಿಂದ ನಗರದ ಕೆಳಗಿನ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಅಂಜನೇಯ ಸ್ವಾಮಿ ದೇವಾಲಯದ ಮುಂಬಾಗದಲ್ಲಿ ಹೌದು ನೆನ್ನೆ ಸಂಜೆ ಕಾಫಿ ಕುಡ್ಕೊಂಡು ಬರೋಣ ಅಂತ ಸ್ವಿಫ್ಟ್ ಕಾರಿನಲ್ಲಿ ಜಾಲಿ ರೈಡ್ ಗೆ ಹೋಗೋಣ ಅಂತ ನಾಲ್ಕು ಜನ ಸ್ನೇಹಿತರು ಹೊರಟಿದ್ದರು, ಜಾಲಿ ರೈಡ್ ವೇಳೆ ಅತಿವೇಗದಿಂದ ಚಲಾಯಿಸಿಕೊಂಡು ಬರುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ನೀರಿನ ಹೊಂಡಕ್ಕೆ ಹಾರಿಬಿದ್ದ ಕಾರು ನೀರಿನಲ್ಲಿ ಮುಳುಗಿದೆ. ಏನೋ ಸದ್ದು ಬಂತಲ್ಲ ಅಂತ ಹಿಂಬದಿಯಿಂದ ಬರುತ್ತಿದ್ದ ಆಂಬುಲೆನ್ಸ್ ಚಾಲಕ ಇಳಿದು ನೋಡಿದ್ದಾನೆ ಅಷ್ಟರಲ್ಲಿ ಕಾರು ನೀರಿನಲ್ಲಿ ಉಲ್ಟಾ ಮುಳುಗಿ ನಾಲ್ಕೂ ಜನ ಜಲಸಮಾಧಿಯಾಗಿದ್ರು. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಹಾಗು ಸ್ಥಳೀಯರು ಮುಳುಗಿದ್ದ ಕಾರನ್ನ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ.. ಇನ್ನು ಘಟನೆಯಲ್ಲಿ ಮೃತಪಟ್ಟವರೆಲ್ಲಾ ಯಲಹಂಕದ ಪ್ರತಿಷ್ಠಿತ ರೇವಾ ಕಾಲೇಜಿನ…

Read More