ಹುಬ್ಬಳ್ಳಿ: ನಾವು ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಬಹಳ ಚೆನ್ನಾಗಿ ಏನಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು. ನಗರದಲ್ಲಿ ಭಾನುವಾರ ತಮ್ಮನ್ನ ಭೇಟಿಯಾದ ಸುದ್ದಿಗಾರರ ಅವರು ಮಾತನಾಡಿದರು, ಸಿದ್ದರಾಮಯ್ಯಾ ನವರುಪಕ್ಷಕ್ಕೆ ಬಂದಿರೋದು 2006 ರಲ್ಲಿ ಅಷ್ಟೇನೂ ಪರಿಚಯ ಇಲ್ಲ ಎಂದ ಅಬರು, ಯಾವ ಕಾರಣಕ್ಕೆ ನಾವ ಅಧಿಕಾರಕ್ಕೆ ಬಂದಿದೀವಿ, ಅದನ್ನು ಈಡೇರಿಸಬೇಕು ಅದು ಆಗಿಲ್ಲ ಅಂದ್ರೆ ನಾನು ಪ್ರಶ್ನೆ ಮಾಡ್ತೀನಿಹನಿಮೂನ ಪಿರೇಢ್ ಮೂಗಿಲಿ ನೋಡೋಣ ಏನೇ ಆಗಲಿ ಏನಾಗತ್ತೆ ಅನ್ನೋದ ಕಾದು ನೋಡಬೇಕು ಎಂದರು.
ಇನ್ನು ಈಡಿಗ ಸಮಾಜದ ಸಮಾವೇಶ ಮಾಡ್ತೀದಾರೆ ಆದರೆ ನಾನು ಹುಬ್ಬಳ್ಳಿ ಅಲ್ಲಿ ಇದೀನಿ ಅವರಿಗೆ ಒಳ್ಳೆದಾಗಲಿ ಎಂದ ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ.ಸರಕಾರದ ಗಮನ ಸೆಳೆಯಲು, ಸಮಾಜದ ಹಿತ ಕಾಪಾಡಲು ಸಂಘ ಇತ್ತು. ಆದ್ರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನ ಮಾಡಿದಾರೆ.. 50 ಲಕ್ಷ ಜನ ಸಂಖ್ಯೆ ಇದಾರೆ ಅಂತಾ ಹೇಳತೀದಾರೆ. ಇವರು ಸಂಘದ ಹಿತಾಸಕ್ತಿ ಕಾಪಾಡಬಹುದು,ಆದ್ರೆ ಇದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ ಆಗಿದೆ ಇದರಿಂದ ಒಳ್ಳೆದಾಗಲ್ಲ.
ಬಿಲ್ಲವ ಸಮುದಾಯಕ್ಕೆ ಜಾಗ ಕೊಟ್ಟಿದ್ರು. ಅದನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಗೆ ಕೊಟ್ಟಿದ್ದಾರೆ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಹಣ ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನ ಮಾಡಿದಾರೆ ಅನ್ನೋದ ಹೇಳಬೇಕ..ರಾಜಕೀಯ ಪ್ರೇರಿತ ಸಮಾವೇಶ ಕ್ಕೆ ನಾವ ಭಾಗಿಯಾಗಲ್ಲ ಎಂದರು. ಇನ್ನು ಪ್ರಣಾವನಂದ ಸ್ವಾಮಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹಾರೈಕೆ ಮಾಡಿದ ಅವರುರಾಜಕೀಯ ಕುತಂತ್ರದಿಂದ ಅಂತಾ ಹೇಳದಿನಿ..ನೀವ ಅದನ್ನು ಹೇಗಾದರೂ ಅರ್ಥೈಸಿ ನಾನು ರಾಜಕೀಯ ಕುತಂತ್ರಕ್ಕೆ ಬಗ್ಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.