ಹಾಸನ: ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಆದಮೇಲೆ ಅರ್ಜಿ ಹಾಕಂಡು ಹೋಗಿದ್ದಾರೆ. ಇಲ್ಲ ನಾನು ಐವತ್ತು, ಅರವತ್ತು ಜನ ಕರೆದುಕೊಂಡು ಬಂದುಬಿಡುತ್ತೇನೆ ಏನು ತೊಂದರೆ ಆಗುವುದು ಬೇಡ ಅಂತ ಹೋಗಿದ್ದಾರೆ.
ಐವತ್ತು, ಅರವತ್ತು ಜನ ಕರೆದುಕೊಂಡು ಸಣ್ಣಪುಟ್ಟವರಿಂದ ಹೋಗಲು ಆಗುತ್ತಾ? ಮೊನ್ನೆ ಯಾರೋ ಮಾಹಿತಿ ಹೇಳುತ್ತಿದ್ದರು. ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದು ಬಿಡುತ್ತೇನೆ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆಸ್ಪೋಟಕ ಮಾಹಿತಿ ಬಚ್ಚಿಟ್ಟಿದ್ದಾರೆ.
ಬೆಂಗಳೂರು: ಡೆಂಗ್ಯೂ ಆರ್ಭಟ, ಕಳೆದ 1 ತಿಂಗಳಲ್ಲಿ ದಾಖಲೆ ಮಟ್ಟದ ಕೇಸ್ ಪತ್ತೆ
ಲೋಕಸಭಾ ಚುನಾವಣೆ ಕಳೆದ ಮೇಲೆ ಮಹಾರಾಷ್ಟ್ರದಲ್ಲಿ ಆಯ್ತು ಅಲ್ವಾ ಅದೇ ರೀತಿ ಇಲ್ಲಿ ಯಾರು ಹುಟ್ಕತರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಎನ್ನುವುದೇ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗುತ್ತಾರೆ ಅಷ್ಟೇ. ಇವತ್ತು ಇಲ್ಲಿ ಇರುತ್ತಾರೆ. ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ ಎಂದರು.