Author: AIN Author

ಟೆಲ್‌ ಅವೀವ್‌: ಹಮಾಸ್ (Hamas) ಆಳ್ವಿಕೆಯಲ್ಲಿರುವ ಗಾಜಾ ಪಟ್ಟಿಯಲ್ಲಿ 34 ವರ್ಷದ ಭಾರತೀಯ ಮೂಲದ ಇಸ್ರೇಲಿ ಯೋಧ (Indian-Origin Soldier) ಹುತಾತ್ಮರಾಗಿದ್ದಾರೆ. ಇವರು ಭಾರತದ ಮಹಾರಾಷ್ಟ್ರ ಮೂಲದವರು. ಮಾಸ್ಟರ್ ಸಾರ್ಜೆಂಟ್. (ರೆಸ್.) ಅಶ್ಡೋಡ್‌ನ ಗಿಲ್ ಡೇನಿಯಲ್ಸ್ ಗಾಜಾದಲ್ಲಿ ಹತ್ಯೆಯಾದರು. ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಿನ ಮಿಲಿಟರಿ ಸ್ಮಶಾನದಲ್ಲಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾಪಟ್ಟಿಯಲ್ಲಿ ನಡೆದ ಹೋರಾಟದಲ್ಲಿ ಹತ್ಯೆಯಾದ ಇಬ್ಬರು ಸೈನಿಕರಲ್ಲಿ ಗಿಲ್‌ ಕೂಡ ಒಬ್ಬರು ಎಂದು ಇಸ್ರೇಲ್‌ ರಕ್ಷಣಾ ಪಡೆ ದೃಢಪಡಿಸಿದೆ. ‘ಈ ಕೆಟ್ಟ ಮತ್ತು ಕ್ರೂರ ಯುದ್ಧದಲ್ಲಿ ಇಸ್ರೇಲ್ ಅನೇಕ ಸೈನಿಕರನ್ನು ಕಳೆದುಕೊಂಡಿದೆ. ಇಡೀ ಇಸ್ರೇಲ್ ರಾಷ್ಟ್ರದ ಗೌರವಕ್ಕಾಗಿ ಹೋರಾಡಲು ನಿಂತ ತನ್ನ ಅತ್ಯುತ್ತಮ ಪುತ್ರರು. https://ainlivenews.com/i-welcome-the-judgment-of-honble-supreme-court-amit-shah/ ನಾವು ಇನ್ನೊಬ್ಬ IDF (ಇಸ್ರೇಲ್ ರಕ್ಷಣಾ ಪಡೆಗಳು) ಸೈನಿಕನ ಸಾವಿಗೆ ಶೋಕಿಸುತ್ತೇವೆ’ ಭಾರತೀಯ ಯಹೂದಿ ಹೆರಿಟೇಜ್ ಸೆಂಟರ್ ಸಂತಾಪ ಸೂಚಿಸಿದೆ. ಯುದ್ಧ ಪ್ರಾರಂಭವಾದ ಕೂಡಲೇ ಗಿಲ್ ಅಕ್ಟೋಬರ್ 10 ರಂದು ಮೀಸಲು ಪ್ರದೇಶಕ್ಕೆ ಹೋಗಿದ್ದರು. ಗಿಲ್, ಹೀಬ್ರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್…

Read More

ಹೊಂಬಾಳೆ ಫಿಲ್ಮ್ಸ್ (Hombale Films) ಮತ್ತು ಯಶ್ (Yash) ನಡುವೆ ಸಂಬಂಧ ಹಳಸಿದೆ ಎಂದೆಲ್ಲ ರೂಮರ್ ಹರಿಬಿಡಲಾಗಿತ್ತು. ಯಶ್ ಮತ್ತು ಹೊಂಬಾಳೆ ಸಂಸ್ಥೆಯು ಬಾಂಧವ್ಯ ಚೆನ್ನಾಗಿದ್ದರೂ, ಅದಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿತ್ತು. ಅಂತವರಿಗೆ ಸರಿಯಾದ ರೀತಿಯಲ್ಲಿ ಚಾಟಿ ಏಟು ಬೀಸಿದ್ದಾರೆ ಯಶ್ ಮತ್ತು ಹೊಂಬಾಳೆ ಸಂಸ್ಥೆ. ತಮ್ಮ ನಡುವೆ ಉತ್ತಮ ಬಾಂಧವ್ಯ ಇರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಚುರ ಪಡಿಸಿದೆ. ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ಗೆ ಶುಭ ಕೋರಿ ಹೊಂಬಾಳೆ ಫಿ‍ಲ್ಮ್ಸ್ ಎಕ್ಸ್ (ಟ್ವೀಟ್) ಮಾಡಿದ್ದರೆ, ಪ್ರತಿಯಾಗಿ ಯಶ್ ಕೂಡ ಕಾಂತಾರ ಚಾಪ್ಟರ್ 1  (Kantara Chapter 1) ಮತ್ತು ಸಲಾರ್ ಸಿನಿಮಾ ಕುರಿತಾಗಿ ಅಭಿನಂದನೆ ತಿಳಿಸಿದ್ದಾರೆ. ಎರಡೂ ಸಿನಿಮಾಗಳಿಗಾಗಿ ತಾವು ಕಾಯುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳಿಗೆ ಸಖತ್ ಉತ್ತರವನ್ನೇ ಕೊಟ್ಟಿದ್ದಾರೆ. ಬಹುನಿರೀಕ್ಷಿತ ಸಲಾರ್ ಸಿನಿಮಾವನ್ನು ಕೇವಲ ಯಶ್ ಮಾತ್ರ ಕಾಯುತ್ತಿಲ್ಲ, ಕೋಟ್ಯಂತರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಈ ನಡುವೆ…

Read More

ಸಾವಿರಾರು ವರ್ಷಗಳಿಂದ ಅಗಸೆ ಬೀಜವನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಅಗಸೆ ಬೀಜಗಳನ್ನು ಇಂಗ್ಲೀಶ್ ನಲ್ಲಿ Flax Seeds ಎಂದು ಕರೆಯುತ್ತಾರೆ.  ಅಗಸೆ ಬೀಜವು ಬೀಜ, ಎಣ್ಣೆ, ಪುಡಿ, ಮಾತ್ರೆಗಳು, ಕ್ಯಾಪ್ಸುಲ್ ಗಳು ಮತ್ತು ಹಿಟ್ಟಿನ ರೂಪದಲ್ಲಿ ಲಭ್ಯವಿದೆ. ಇದನ್ನು ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳನ್ನು ತಡೆಗಟ್ಟುವುದಕ್ಕಾಗಿ ಜನರು ತಮ್ಮ ಆಹಾರದಲ್ಲಿ ಬಳಸುತ್ತಾರೆ.‌ ಅಗಸೇ ಬೀಜದ ಆಯುರ್ವೇದಿಯ ಗುಣಗಳು: ಇದು ರುಚಿಯಲ್ಲಿ ಸಿಹಿ ಮತ್ತು ಕಹಿ, ಲೋಳೆ (ಸ್ನಿಗ್ಧ) ಮತ್ತು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗಿರುತ್ತದೆ, ಇದೇ ಶಕ್ತಿಯಲ್ಲಿ ಅದು ಬಿಸಿಯಾಗಿರುತ್ತದೆ, ಆದ್ದರಿಂದ ನರ ಶೂಲೆ, ಪಾರ್ಶ್ವವಾಯು, ಸಂಧಿವಾತದಂತಹ ವಾತ ಅಸ್ವಸ್ಥತೆಗಳಿಗೆ ಇದು ಬಹಳ ಉಪಯುಕ್ತವಾಗಿದೆ ಬ್ಲಡ್ ಶುಗರ್ ಲೆವಲ್ ನಿಯಂತ್ರಣದಲ್ಲಿ ಇಡಲು ನೆರವು: ಮಧುಮೇಹ ಸಮಸ್ಯೆ ಇರುವವರಿಗೆ, ಅವರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಗಸೆ ಬೀಜಗಳು ಸಹಾಯಕವಾಗಿವೆ. ಇದರಲ್ಲಿರುವ ಕರಗುವ ಫೈಬರ್ ನಿಮ್ಮ ಹಸಿವನ್ನು ದೂರವಿಡಲು ಸಹಾಯ ಮಾಡುತ್ತದೆ, ಆದ್ದರಿಂದ…

Read More

ಬೆಂಗಳೂರು:- ಅಪಾಯಕಾರಿ ಮರಗಳ ತೆರವು ಸಂಬಂಧ ಅಧಿಕಾರಿಗಳು ಮಾರ್ಗಸೂಚಿ ಪಾಲನೆ ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಗೆ ಬಿಬಿಎಂಪಿ ಮಾಹಿತಿ ನೀಡಿದೆ. ನಮ್ಮ ಮನೆಯ ಬಳಿ ಇರುವ ಮರ ಯಾವುದೇ ಸಮಯದಲ್ಲಾದರೂ ಬೀಳುವಂತಹ ಸ್ಥಿತಿಯಲ್ಲಿದೆ. ಆದರೂ, ಅಧಿಕಾರಿಗಳು ಅದನ್ನು ತೆರವುಗೊಳಿಸುತ್ತಿಲ್ಲ’ ಎಂದು ಆಕ್ಷೇಪಿಸಿ ನಗರದ ಡಾ.ವಿ.ಎಲ್‌. ನಂದೀಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಎಲ್ಲಾ ವೃಕ್ಷ ಅಧಿಕಾರಿಗಳು ಮತ್ತು ಡಿಸಿಎಫ್‌ಗಳು ಈ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ, ಮರವನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಗೆ ತಗುಲಿದ್ದ ವೆಚ್ಚವನ್ನು ಮರ ಇದ್ದ ನಿವೇಶನದ ಮಾಲೀಕರಿಂದ ವಸೂಲು ಮಾಡಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ‘ಈ ವ್ಯಾಜ್ಯದ ಮೂಲ ಕಾರಣ ಅಪಾಯಕಾರಿ ಮರ. ಈಗಾಗಲೇ ಪಾಲಿಕೆ ನ್ಯಾಯಾಲಯದ ಸೂಚನೆಯಂತೆ ಆ ಮರವನ್ನು ತೆರವುಗೊಳಿಸಿದೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಲೇವಾರಿ…

Read More

ಕರುನಾಡ ಸಂಭ್ರಮಕ್ಕೆ (Karunada Sambharam) ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 14ರಿಂದ 17ರವರೆಗೆ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್ ಫುಲ್ ನಿಂದ ಕರುನಾಡ ಸಂಭ್ರಮ ಕೂಡಿರಲಿದೆ. ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ವರುಣ್ ಸ್ಟುಡಿಯೋಸ್, ರಾಜ್ ಇವೆಂಟ್ಸ್ ಜೊತೆಗೂಡಿ ಕಾರ್ಯಕ್ರಮದ  ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ರಮೇಶ್ ಅರವಿಂದ್ (Ramesh Aravind) ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು (award) ನೀಡಲಾಗುತ್ತದೆ. ಕರುನಾಡ ಸಂಭ್ರಮ ಅಂದ್ರೇನೆ ಕಲರ್ ಫುಲ್ ಕಾರ್ಯಕ್ರಮ, ಚಂದನವನದ ತಾರೆಗಳ ಸಮಾಗಮ, ಸ್ಟಾರ್ ಗಾಯಕರ ಹಾಡು, ನಟ, ನಟಿಯರ ಡಾನ್ಸ್. ಈ ಬಾರಿಯೂ ಈ ಸಂಭ್ರಮ ಇನ್ನಷ್ಟು ರಂಗಿನಿಂದ…

Read More

ಬೆಂಗಳೂರು: ಆ್ಯಂಬುಲೆನ್ಸ್​ಗಳು ಅದೆಷ್ಟೋ ಜನರ ಪಾಲಿಗೆ ಮರುಜನ್ಮ ನೀಡಿದೆ. ಆ್ಯಂಬುಲೆನ್ಸ್ ಚಾಲಕರು ಪರರ ಪ್ರಾಣಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಉಸಿರು ಹೋಗುವ ಜೀವಗಳಿಗೆ ಮರುಜನ್ಮ ಸಿಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿರುವ ಟ್ರಾಫಿಕ್ ರೋಗಿಗಳ ಜೀವಕ್ಕೆ ಆಪತ್ತು ತರ್ತಿದೆ. ಸೈರನ್​​​ ಎಷ್ಟೇ ಕೂಗಿದ್ರು ಟ್ರಾಫಿಕ್ ಜಾಮ್ ಮಾತ್ರ ಕಮ್ಮಿಯಾಗುತ್ತಿಲ್ಲ. ಹೀಗಾಗಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಉಪಾಯ ಕಂಡುಕೊಳ್ಳುತ್ತಿದ್ದಾರೆ. ನೂತನ ಆ್ಯಪ್‌ ಸಿದ್ಧಪಡಿಸುತ್ತಿದ್ದಾರೆ ಇದಕ್ಕೆ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲು ಆ್ಯಂಬುಲೆನ್ಸ್‌ಗಳು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿಬೇಕು. ಅದನ್ನು ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸಿ ಅವರು ಟ್ರಾಫಿಕ್ ಇಲ್ಲದ ರಸ್ತೆಯನ್ನು ಸೂಚಿಸುತ್ತಾರೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ. ಆ್ಯಂಬುಲೆನ್ಸ್‌ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಲಾಗುತ್ತೆ. ಅಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಈ ಬಗ್ಗೆ…

Read More

ಹೊಸ ವರ್ಷ ಸಮೀಪದಲ್ಲಿರುವ ಈ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಆಭರಣ ಖರೀದಿಸುವ ಯೋಚನೆ ಇದ್ದವರು ಈಗಲೇ ಖರೀದಿಸುವುದು ಉತ್ತಮ. ಹೊಸ ವರ್ಷದಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇರಬಹುದು. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,675 ಇದೆ. ನಿನ್ನೆ 5,795 ರೂ. ಇದ್ದು, ಇಂದು 20 ರೂ. ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 45,400 ರೂ. ನೀಡಬೇಕು. ನಿನ್ನೆ 45,560 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 160 ರೂ. ಕಡಿಮೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 56,750 ಇದ್ದರೆ, ನಿನ್ನೆ 56,950 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 5,67,500 ರೂ. ಇದೆ. ನಿನ್ನೆ 5,69,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 2,000 ರೂ. ಕಡಿಮೆಯಾಗಿದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24…

Read More

ನವದೆಹಲಿ:- ಜಾತಿಗಣತಿ ವಿರೋಧಕ್ಕೆ ಎಲ್ಲ ಮೇಲ್ವರ್ಗದವರು ಒಂದಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆ ಮೇಲಿನ ಚರ್ಚೆಯ ಸಮಯದಲ್ಲಿ, ‘ಮೇಲ್ವರ್ಗದವರೆಲ್ಲಾ ಒಟ್ಟಾಗಿ ಜಾತಿ ಸಮೀಕ್ಷೆ ವರದಿಯನ್ನು ತಡೆಯುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು. ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಎಲ್ಲಾ ಮೇಲ್ವರ್ಗದವರು ಒಟ್ಟಾಗಿ ವಿರೋಧ ಮಾಡುತ್ತಿದ್ದಾರೆ ಎಂದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ಈ ವೇಳೆ ಎದ್ದು ನಿಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ‘ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಅವರು ಸಹ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬಾರದು ಎಂಬ ನಿವೇದನಾ ಪತ್ರಕ್ಕೆ ಈ ಹಿಂದೆ ಸಹಿ ಹಾಕಿದ್ದರು. ಜೊತೆಗೆ ಜಾತಿ ಗಣತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರೆ ನಾವು ವಿರೋಧಿಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದರು’ ಎಂದು ತಿರುಗೇಟು ನೀಡಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಖರ್ಗೆ, ‘ನಮ್ಮ ಉಪಮುಖ್ಯಮಂತ್ರಿಯೂ ಇದನ್ನು ವಿರೋಧಿಸಿದ್ದಾರೆ. ನೀವು ಇದನ್ನು ವಿರೋಧಿಸುತ್ತಲೇ…

Read More

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Road Transport and Highways Ministry) 2025ರ ಅಕ್ಟೋಬರ್ 1ರ ಬಳಿಕ ನಿರ್ಮಾಣವಾಗುವ ಎಲ್ಲಾ ಹೊಸ ಟ್ರಕ್​ಗಳಲ್ಲಿ (Truck) ಚಾಲಕರಿಗೆ ಎಸಿ (AC Cabin) ಕ್ಯಾಬಿನ್​ಗಳನ್ನು ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದೆ ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ಎಲ್ಲಾ ವಾಹನಗಳಿಗೆ (Vehicles) ಎನ್2 ಮತ್ತು ಎನ್3 ವರ್ಗದ ಕ್ಯಾಬಿನ್ ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಹೇಳಿದೆ. ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಟ್ರಕ್‌ ಚಾಲಕರ (Driver) ಹಿತದೃಷ್ಟಿಯಿಂದ ಎಸಿ ಕ್ಯಾಬಿನ್‌ ಕಡ್ಡಾಯಗೊಳಿಸಲಾಗುತ್ತದೆ. ಟ್ರಕ್ ಡ್ರೈವರ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಹವಾನಿಯಂತ್ರಿತ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್‌ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದರು. ನಮ್ಮ ಚಾಲಕರು 43% -47% ರಷ್ಟು ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಆಗ ಚಾಲಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಬೇಕು. ನಾನು…

Read More

ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ನಾವದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯಿಂದ ಎಂತೆಂತಹ ರುಚಿಕರವಾದ ಅಡುಗೆಗಳನ್ನು ಮಾಡಬಹುದು ಎಂಬುದು ನಿಮಗೆ ತಿಳಿದಿದೆಯಾ? ಕಲ್ಲಂಗಡಿ ಸಿಪ್ಪೆಯ ರಾಯಿತಾ ಮಾಡುವುದು ಹೇಗೆಂದು ನಾವು ಇತ್ತೀಚೆಗಷ್ಟೇ ಹೇಳಿಕೊಟ್ಟಿದ್ದೇವೆ. ಇಂದು ನಾವು ಕಲ್ಲಂಗಡಿ ಸಿಪ್ಪೆ ಬಳಸಿಕೊಂಡು ದೋಸೆ (Watermelon Rind Dosa) ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೇ ಈ ರೀತಿ ಡಿಫರೆಂಟ್ ರೆಸಿಪಿಗಳನ್ನು ಟ್ರೈ ಮಾಡಿ. ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ – 4 ಕಪ್ ಕಲ್ಲಂಗಡಿ ಸಿಪ್ಪೆ – 2 ಕಪ್ ಉದ್ದಿನಬೇಳೆ – ಅರ್ಧ ಕಪ್ ಮೆಂತ್ಯ – 2 ಟೀಸ್ಪೂನ್ ಮಂಡಕ್ಕಿ – 2 ಕಪ್ ತೆಂಗಿನ ತುರಿ – ಅರ್ಧ ಕಪ್ ಉಪ್ಪು – ರುಚಿಗೆ ತಕ್ಕಷ್ಟು ಎಣ್ಣೆ – ದೋಸೆ ಮಾಡಲು ಬೇಕಾಗುವಷ್ಟು ಮಾಡುವ ವಿಧಾನ: * ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು, ಅದರ ಹಸಿರು ಪದರವನ್ನು…

Read More