Author: AIN Author

ಬೆಳಗಾವಿ:- ರಾಜ್ಯದಲ್ಲಿ 187 ಸ್ಥಳಗಳನ್ನು ಅಪಘಾತ ಮುಕ್ತ ಸ್ಥಳಗಳಾಗಿ ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂ ಕೃಷ್ಣಬೈರೇಗೌಡ ಹೇಳಿದ್ದಾರೆ. ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳಲ್ಲಿನ ಅಡಿಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ 187 ಕಪ್ಪು ಸ್ಥಳಗಳನ್ನು( ಅಪಘಾತ ವಲಯಗಳನ್ನು) ರೂ. 232 ಕೋಟಿ ಅಂದಾಜು ಮೊತ್ತದಲ್ಲಿ ಪಿ.ಆರ್.ಎ.ಎಂ.ಸಿ ವತಿಯಿಂದ ಅಭಿವೃದ್ದಿಪಡಿಸಿ ಅಪಘಾತ ಮುಕ್ತ ಸ್ಥಳಗಳನ್ನಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 182 ಕಪ್ಪುಸ್ಥಳಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ 5 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದುವರೆಗೆ ಸದರಿ ಕಪ್ಪು ಸ್ಥಳಗಳ ಅಭಿವೃದ್ದಿಗೆ ರೂ. 138.41 ಕೋಟಿ ವೆಚ್ಚ ಮಾಡಲಾಗಿದೆ ಎಂದರು. ಪಿ.ಆರ್.ಎ.ಎಂ.ಸಿ ವತಿಯಿಂದ ಹಾಗೂ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳ ಅಡಿಯಲ್ಲಿನ ವಿಭಾಗಗಳ ವತಿಯಿಂದ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿರುವ…

Read More

ಬೆಳಗಾವಿ:- ರಾಜ್ಯದಲ್ಲಿ 3 ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಹಿಂದಿನ ಶ್ರೇಣಿಗಳಲ್ಲಿ ಪ್ರಗತಿಯಲ್ಲಿದ್ದ ಮನೆಗಳನ್ನು ಒಳಗೊಂಡಂತೆ 2023-24 ನೇ ಆರ್ಥಿಕ ವರ್ಷದಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 28-11-2023 ಕ್ಕೆ 1,12,891 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು. ವಿಧಾನಪರಿಷತ್‌ನಲ್ಲಿ ಸದಸ್ಯ ಸುನೀಲ್ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ 18,92,756 ವಸತಿ ರಹಿತರು ಹಾಗೂ 7,13,950 ನಿವೇಶನ ರಹಿತರು ಕಂಡು ಬಂದಿರುವರು. ವಸತಿ ರಹಿತ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಗ್ರಾಪಂ/ನಗರ ಸ್ಥಳೀಯ ಸಂಸ್ಥೆಗಳಿಗೆ ಗುರಿ ಹಂಚಿಕೆ ಮಾಡಿ ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುತ್ತಿದೆ. 2020-21 ರಿಂದ 2022-23 ನೇ ಸಾಲಿನವರೆಗೆ ವಿವಿಧ ವಸತಿ…

Read More

ಬೆಂಗಳೂರು:- ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ದಿನಕ್ಕೆ ಸರಾಸರಿ 60 ರಿಂದ 70 ಮಂದಿ ಮೇಲೆ ಅಟ್ಯಾಕ್ ಮಾಡುತ್ತಿವೆ ಅಂತೆ ಪಾಲಿಕೆಯೇ ರಿಪೋರ್ಟ್ ಬಿಡುಗಡೆ ಮಾಡಿದೆ.ಇವರಲ್ಲೂ ಮಕ್ಕಳೇ ಅಧಿಕವಾಗಿರೋದು ಆತಂಕ ಹುಟ್ಟಿಸಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಬೀದಿನಾಯಿಗಳ ಹಾವಳಿ ಹೆಚ್ಚಾಗ್ತಿದೆ. ಬೀದಿನಾಯಿಗಳ ಹಾವಳಿಯಿಂದ ಎಷ್ಟೋ ಮಕ್ಕಳು ಬಲಿಯಾಗಿದ್ದಾರೆ. ಆದ್ರೂ ಬಿಬಿಎಂಪಿ ಈ ಬಗ್ಗೆ ತಲೆನೇ ಕೆಡೆಸಿಕೊಂಡಿಲ್ಲ. ನಗರದ ಪಾರ್ಕ್ ನಲ್ಲೂ ನಾಯಿ ಕಾಟ.. ಬೀದಿಯಲ್ಲೂ ಶ್ವಾನಗಳ ಹಾವಾಳಿ ಮಿತಿ ಮೀರಿದೆ. ಬೀದಿನಾಯಿಗಳ ಉಪಟಳಕ್ಕೆ ಈಗಾಗಲೇ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ ವೇಗ ಕಡಿಮೆ ಮಾಡಲು ಪಾಲಿಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ. ಆದ್ರೆ ಆ ಕೋಟಿ ಕೋಟಿ ಹಣ ಯಾರ ಜೇಬು ಸೇರುತ್ತಿದೆ ಅನ್ನೋ ಪ್ರಶ್ನೆ ಶುರುವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 59285 ಮಂದಿಗೆ ನಾಯಿ ಕಚ್ಚಿದೆ. ಇತ್ತೀಚಿಗೆ ಅಂತೂ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದು…

Read More

ʻಓ ನನ್ನ ಚೇತನʼ, ಇದೇ ಡಿ. 15ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಡಾ. ಬಿ. ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನು ಮೂನಿಪ್ಲಿಕ್ಸ್ ಸ್ಟುಡಿಯೋಸ್ ಕೆ.ಎ ಸುರೇಶ್ ಅವರ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ʼಓ ನನ್ನ ಚೇತನʼ ಸಿನಿಮಾವನ್ನು ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ರಿಲೀಸ್‌ ಮಾಡಿದ್ದಾರೆ. ಓ ನನ್ನ ಚೇತನ ಟ್ರೈಲರ್ ಲಾಂಚ್ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನು ನೆನೆದರು. ʻಶಾಂತಿ ಕ್ರಾಂತಿ’ ಸಿನಿಮಾದ ಸೆಟ್​ನಲ್ಲಿ ಮೂರು ಸಾವಿರ ಮಕ್ಕಳು ಇರುತ್ತಿದ್ದರು ಎಂದ ರವಿಚಂದ್ರನ್ ಅವರನ್ನೆಲ್ಲ ಹೇಗೆ ಸಂಭಾಳಿಸಿದ್ದರು ಎಂಬ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಕೊನೆಗೆ ಮೊಬೈಲ್ ನೋಡುವ ಮಕ್ಕಳು, ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ ಎಂದರು. ಓ ನನ್ನ ಚೇತನ ಅಪೂರ್ವ ಖ್ಯಾತಿಯ ನಟಿ ಅಪೂರ್ವ ಗೌಡ (ಆಶಾದೇವಿ) ನಿರ್ದೇಶನದ ಚೊಚ್ಚಲ ಚಿತ್ರ. ಅಲೆಮಾರಿ ಖ್ಯಾತಿಯ ಹರಿ…

Read More

ಬೆಂಗಳೂರು:- ಬೆಸ್ಕಾಂ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ. ಬೆಸ್ಕಾಂ ವ್ಯಾಪ್ತಿಯಲ್ಲಿ 26,022 ಅಪಾಯಕಾರಿ ತಾಣಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನವು ಬೆಂಗಳೂರಿನಲ್ಲೇ ಇವೆ. ಬೆಸ್ಕಾಂ ನವೆಂಬರ್ 21ರಿಂದ 30ರ ನಡುವೆ ಈ ಸಮೀಕ್ಷೆ ನಡೆಸಿದ್ದು, ಪತ್ತೆಯಾದ ಅಪಾಯಕಾರಿ ತಾಣಗಳ ಪೈಕಿ 8198 ತಾಣಗಳ ಲೋಪ ದೋಷಗಳನ್ನು ಸರಿಪಡಿಸಿ ಸುಧಾರಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಸಮೀಕ್ಷೆ ಪ್ರಕಾರ ಬೆಂಗಳೂರಿನ ನಾಲ್ಕು ವಲಯಗಳಲ್ಲಿ ಒಟ್ಟು 23,187 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದವು. ಈ ಪೈಕಿ 6396 ತಾಣಗಳ ಲೋಪ ದೋಷ ಸರಿಪಡಿಸಿ ಸುಧಾರಿಸಲಾಗಿದೆ. ಇನ್ನು 16791 ಅಪಾಯಕಾರಿ ತಾಣಗಳ ಲೋಪ ದೋಷ ಸರಿಪಡಿಸು ಸುಧಾರಿಸುವ ಕೆಲಸ ಬಾಕಿ ಇದೆ. ಅಪಾಯಕಾರಿ ತಾಣಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ 11,982 ತಾಣಗಳಿವೆ. ಉಳಿದಂತೆ ಬೆಂಗಳೂರು ಉತ್ತರದಲ್ಲಿ 1118, ಬೆಂಗಳೂರು ಪೂರ್ವದಲ್ಲಿ 2,206, ಬೆಂಗಳೂರು ಪಶ್ಚಿಮದಲ್ಲಿ 7,881 ತಾಣಗಳಿದ್ದವು. ಈ ಪೈಕಿ ಲೋಪ ದೋಷ ಸರಿಪಡಿಸಿದ ಬಳಿಕ ಬೆಂಗಳೂರು ದಕ್ಷಿಣದಲ್ಲಿ 10,277, ಬೆಂಗಳೂರು ಪೂರ್ವದಲ್ಲಿ 1,490, ಬೆಂಗಳೂರು…

Read More

ದಾವಣಗೆರೆ:- ರಸ್ತೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರಾಟ ಮಾಡುವ ಮೂಲಕ ಅತಿಥಿ ಉಪನ್ಯಾಸಕರು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಸರಿಯಾಗಿ ವೇತನ ನೀಡದ್ದರಿಂದ ರೋಸಿ ಹೋಗಿರುವ ಅಥಿತಿ ಉಪನ್ಯಾಸಕರು, ಇಂದು ದಾವಣಗೆರೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಡಿಸಿ ಕಚೇರಿ ಬಳಿಯ ಹಳೆ ಪಿ ಬಿ ರಸ್ತೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರಾಟ ಮಾಡಿ ಬೀದಿಗಿಳಿದು ಮಾರಾಟ ಮಾಡುವ ಮೂಲಕ ಅಥಿತಿ ಉಪನ್ಯಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 50 ಕ್ಕು ಹೆಚ್ಚು ಗೆಸ್ಟ್ ಲೆಕ್ಟರರ್ ನಿಂದ ಪ್ರತಿಭಟನೆ ನಡೆದಿದ್ದು, ನಾವು ಪಿಎಚ್ ಡಿ, ನೆಟ್, ಸೆಟ್ ಪರೀಕ್ಷೆ ಪಾಸ್ ಮಾಡಿ ಅಥಿತಿ ಉಪನ್ಯಾಸಕರಾಗಿದ್ದೇವೆ. ಆದ್ರೆ ಸರ್ಕಾರ ನಮ್ಮನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ನಮ್ಮನ್ನ ಖಾಯಂಗೊಳಿಸಿ, ಸರಿಯಾದ ವೇತನ ಕೊಡಿ ಎಂದು ಆಗ್ರಹ ಮಾಡಿದ್ದಾರೆ. ಅಥಿತಿ ಉಪನ್ಯಾಸಕರ ಮೇಲಿನ ಶೋಷಣೆ ನಿಲ್ಲಲಿ ಎಂದು ಅಥಿತಿ…

Read More

ಬಳ್ಳಾರಿ:- ಬೆಳಗಾವಿ ಅಧಿವೇಶನದಲ್ಲಿ ಮತ್ತೆ ಮುಂದುವರೆದ ಬಳ್ಳಾರಿ ರೆಡ್ಡಿ ವರ್ಸ್ಸ್ ರೆಡ್ಡಿ ಕಾಳಗ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಸಭೆ ಸಮಾರಂಭಗಳಲ್ಲಿ ಗಂಗಾವತಿ ಶಾಸಕ ಜನಾರ್ಧನ್ ರೆಡ್ಡಿ ಹಾಗೂ ನಗರ ಶಾಸಕ ಭರತ್ ರೆಡ್ಡಿ ಅವರ ನಡುವೆ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿದ್ದರು.ಇದೇ ಆರೋಪ-ಪ್ರತ್ಯಾರೋಪ ಬೆಳಗಾವಿ ಅಧಿವೇಶನದಲ್ಲಿ ಮುಂದುವರೆದಿದೆ. ಈ ಕುರಿತು ಜಿಲ್ಲೆಯ ಜನರು ಪ್ರತಿಕ್ರಿಯಿಸಿ ಬಳ್ಳಾರಿ ಅಭಿವೃದ್ದಿಯ ವಿಚಾರವಾಗಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ಮಾತು ಪ್ರಾರಂಭಿಸಿದ ಭರತ್ ರೆಡ್ಡಿ ಬಳ್ಳಾರಿ ಅಭಿವೃದಿಯ ಕುರಿತು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಜನಾರ್ಧನ ರೆಡ್ಡಿ ಅವರು ಬಳ್ಳಾರಿಯನ್ನು ಅಭಿವೃದ್ದಿ ಮಾಡಿರುವುದಕ್ಕಿಂತ, ಅಕ್ರಮ ಗಣಿಗಾರಿಕೆಯ ಮೂಲಕ ಸಂಪಾದಿಸಿಕೊಂಡು ಜಿಲ್ಲೆಗೆ ಕುಖ್ಯಾತಿಯನ್ನು ತಂದಿದ್ದಾರೆ.ಅಷ್ಟೇ ಅಲ್ಲದೇ ಅವರ ಬಳ್ಳಾರಿಯನ್ನು ರಿ ಪಬ್ಲಿಕ್ ಬಳ್ಳಾರಿ ಮಾಡ ಹೊರಟಿದ್ದರು. ಅದನ್ನು ತಪ್ಪಿಸಿ ಬಳ್ಳಾರಿಯನ್ನು, ಮತ್ತೆ ನೈಜಸ್ಥಿತಿಗೆ ತಂದವರು ಕಾಂಗ್ರೇಸ್ ಅವರು ಎಂದು ಕುರುಗೋಡು ಪಟ್ಟಣ ಪಂಚಾಯಿತಿಯ ಸದಸ್ಯರಾದ ಚನ್ನಪಟ್ನ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

Read More

ಬಳ್ಳಾರಿ: ವಿಚಿತ್ರ ರೂಪದ ಕುರಿಮರಿ ಜನನವಾಗಿರುವ ಘಟನೆ ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಘಟನೆ ಜರುಗಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿ ಇದಾಗಿದ್ದು, ಮರಿಯನ್ನು ನೋಡಲು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಸದ್ಯಕ್ಕೆ ಕುರಿಮರಿ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರೆ ಈ ರೀತಿಯ ವಿಚಿತ್ರ ಅಕಾರದ ಪ್ರಾಣಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Read More

ಬೆಂಗಳೂರು:- ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯ ವಿವಿಪುರಂ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಸ್ಲಾಂಪಾಷಾ (65)ಬಂಧಿತ ಆರೋಪಿ.. ತನ್ನ ಆಟೋದಿಂದ ಅಪಘಾತ ಎಸಗಿ ಆರೋಪಿ ಎಸ್ಕೇಪ್ ಆಗಿದ್ದ. ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯ ಚಾಲನೆ ಮಾಡಿ ಅಪಘಾತ ಸಂಭವಿಸಿತ್ತು. ಅಸ್ಲಾಂಪಾಷಾ ಎಸ್ಕೇಪ್ ಆಗಿದ್ದ ಆರೋಪಿ. ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ವಿವಿಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ:- ರಾಜ್ಯ ಬಿಜೆಪಿ ಬಗ್ಗೆ ಕೇಂದ್ರ ನಾಯಕರಿಗೆ ಬೇಸರ ಇರುವುದು ನಿಜ. ಯಾಕೆ ಬೇಸರ ಎಂದು ಕೇಳುತ್ತೇವೆ‌. ಕೇಂದ್ರದ ನಿಯಂತ್ರಣವಿಲ್ಲ ಎಂಬುವುದು ಸುಳ್ಳು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನಾಯಕರಿಗೆ ರಾಜ್ಯದ ನಾಯಕರು ಹೆದರುತ್ತಾರೆ ಎಂಬುವುದು ಸುಳ್ಳು. ರಾಜ್ಯದಲ್ಲಿ ಸಂಘಟಿತವಾಗಿರುವ ಪಕ್ಷವಾಗಿದೆ ನಮ್ಮದು ಎಂದರು. ಪಕ್ಷದಲ್ಲಿ ಒಂದಿಬ್ಬರು ತಮ್ಮ ವೈಯಕ್ತಿಕ ಅಸಮಧಾನ ವ್ಯಕ್ತಪಡಿಸಿದರೆ ಶಿಸ್ತು ಇಲ್ಲವಂತಲ್ಲ. ಒಂದು ಕೋಟಿ ಸದಸ್ಯರಿರುವ ಪಕ್ಷದಲ್ಲಿ ಒಂದಿಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ಕರೆದು ಮಾತನಾಡುತ್ತಾರೆ. ಎಲ್ಲವೂ ಸರಿಯಾಗುತ್ತದೆ‌. ಕೆಲವರ ವೈಯಕ್ತಿಕ ಹೇಳಿಕೆಗಳಿಗೆ ಪಕ್ಷವು ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಐಸಿಸ್ ನಂಟಿರುವ ಮೌಲ್ವಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ದಲಿತರು, ಹಿಂದುಳಿದವರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಸುಳ್ಳಿಗೆ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಇವರಿಗೆ ಕೊಡಬೇಕು. ಹಿಂದುಳಿದ, ದಲಿತರ ಬಗ್ಗೆ ಕಾಳಜಿಯಿದ್ದರೆ ಜಾತಿ ಗಣತಿ ಬಿಡುಗಡೆ ಮಾಡಬೇಕಿತ್ತು.…

Read More