ಬೆಂಗಳೂರು:- ಬೆಸ್ಕಾಂ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ. ಬೆಸ್ಕಾಂ ವ್ಯಾಪ್ತಿಯಲ್ಲಿ 26,022 ಅಪಾಯಕಾರಿ ತಾಣಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನವು ಬೆಂಗಳೂರಿನಲ್ಲೇ ಇವೆ. ಬೆಸ್ಕಾಂ ನವೆಂಬರ್ 21ರಿಂದ 30ರ ನಡುವೆ ಈ ಸಮೀಕ್ಷೆ ನಡೆಸಿದ್ದು, ಪತ್ತೆಯಾದ ಅಪಾಯಕಾರಿ ತಾಣಗಳ ಪೈಕಿ 8198 ತಾಣಗಳ ಲೋಪ ದೋಷಗಳನ್ನು ಸರಿಪಡಿಸಿ ಸುಧಾರಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ಸಮೀಕ್ಷೆ ಪ್ರಕಾರ ಬೆಂಗಳೂರಿನ ನಾಲ್ಕು ವಲಯಗಳಲ್ಲಿ ಒಟ್ಟು 23,187 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದವು. ಈ ಪೈಕಿ 6396 ತಾಣಗಳ ಲೋಪ ದೋಷ ಸರಿಪಡಿಸಿ ಸುಧಾರಿಸಲಾಗಿದೆ. ಇನ್ನು 16791 ಅಪಾಯಕಾರಿ ತಾಣಗಳ ಲೋಪ ದೋಷ ಸರಿಪಡಿಸು ಸುಧಾರಿಸುವ ಕೆಲಸ ಬಾಕಿ ಇದೆ.
ಅಪಾಯಕಾರಿ ತಾಣಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ 11,982 ತಾಣಗಳಿವೆ. ಉಳಿದಂತೆ ಬೆಂಗಳೂರು ಉತ್ತರದಲ್ಲಿ 1118, ಬೆಂಗಳೂರು ಪೂರ್ವದಲ್ಲಿ 2,206, ಬೆಂಗಳೂರು ಪಶ್ಚಿಮದಲ್ಲಿ 7,881 ತಾಣಗಳಿದ್ದವು. ಈ ಪೈಕಿ ಲೋಪ ದೋಷ ಸರಿಪಡಿಸಿದ ಬಳಿಕ ಬೆಂಗಳೂರು ದಕ್ಷಿಣದಲ್ಲಿ 10,277, ಬೆಂಗಳೂರು ಪೂರ್ವದಲ್ಲಿ 1,490, ಬೆಂಗಳೂರು ಪಶ್ಚಿಮದಲ್ಲಿ 4,572 ಮತ್ತು ಬೆಂಗಳೂರು ಉತ್ತರದಲ್ಲಿ 452 ತಾಣಗಳ ಲೋಪ ದೋಷ ಸರಿಪಡಿಸಲು ಬಾಕಿ ಇವೆ.
ಬೆಂಗಳೂರು ಹೊರತುಪಡಿಸಿದ ಬೆಸ್ಕಾಂ ವ್ಯಾಪ್ತಿಯ ಕೋಲಾರದಲ್ಲಿ 2,080 ಮತ್ತು ದಾವಣಗೆರೆಯಲ್ಲಿ 460 ಅಪಾಯಕಾರಿ ತಾಣಗಳು ಕಂಡುಬಂದಿವೆ.
ಬೆಂಗಳೂರು ಗ್ರಾಮಾಂತರದಲ್ಲಿ 21 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದವು. ಇವುಗಳನ್ನು ಸರಿಪಡಿಸಲಾಗಿದೆ. ರಾಮನಗರದಲ್ಲಿ 175 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದು, ಈ ಪೈಕಿ 99 ತಾಣಗಳನ್ನು ಸರಿಪಡಿಸಲಾಗಿದೆ. ಇದೇ ರೀತಿ, ಕೋಲಾರದಲ್ಲಿ 2080 ತಾಣಗಳ ಪೈಕಿ 1555, ತುಮಕೂರಿನಲ್ಲಿ 99ರ ಪೈಕಿ 49 ತಾಣಗಳು, ದಾವಣಗೆರೆಯಲ್ಲಿ 460 ತಾಣಗಳ ಪೈಕಿ 78 ತಾಣಗಳನ್ನು ಸರಿಪಡಿಸಲಾಗಿದೆ. ಇದಾದ ಬಳಿಕ ರಾಮನರದಲ್ಲಿ 76, ಕೋಲಾರದಲ್ಲಿ 525, ತುಮಕೂರು 50, ದಾವಣಗೆರೆಯಲ್ಲಿ 382 ಅಪಾಯಕಾರಿ ತಾಣಗಳ ಸರಿಪಡಿಸುವಿಕೆ ನಡೆಯಬೇಕು ಎಂದು ಬೆಸ್ಕಾಂ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.