Author: AIN Author

ಪೀಣ್ಯ ದಾಸರಹಳ್ಳಿ‌:- ಬೆಂಗಳೂರು ಹೊರಹೊಲಯದ ದಾಸರಹಳ್ಳಿ‌ ಸಮಿಪದ ಸೋಲದೇವನಹಳ್ಳಿ ಬೆಸ್ಕಾಂ N9 ವತಿಯಿಂದ ಸುರಕ್ಷತಾ ಕಾರ್ಯಗಾರ ಜಾಥವನ್ನು ಅಯೋಜಿಸಲಾಗಿತ್ತು ಬೆಸ್ಕಾಂ ಸೋಲದೇವನಹಳ್ಳಿ N9 ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಜಾಥ ಕಾರ್ಯಕ್ರಮಕ್ಕೆ ಜೀತೆಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಾಥ ಕಾರ್ಯಕ್ರಮವನ್ನು ಬಾಗಲಗುಂಟೆ ಸೋಲದೇವನಹಳ್ಳಿ ಚಿಕ್ಕಬಾಣಾವಾರ ಅಚಾರ್ಯ ಕಾಲೇಜ್ ರಸ್ತೆ ಇನ್ನೂ ಮುಂತಾದ ಕಡೆ ಜಾಥ ಮಾಡಿದ್ದರು. “ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಬೆಸ್ಕಾಂ ನೌಕರರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು” ಸುರಕ್ಷತೆಯ ನಮ್ಮ ಆದ್ಯತೆ ಸುರಕ್ಷತೆಯ ನಮ್ಮ ದ್ಯೆಯ ದೋರಣೆ ಸುರಕ್ಷಿತವಾಗಿ ಸಾರ್ವಜನಿಕರು ಮತ್ತು ನಮ್ಮ ಎಲ್ಲ ಸಿಬ್ಬಂದಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರನ್ನು ಸುರಕ್ಷಿತವಾಗಿ ಇಡಲು ಸುರಕ್ಷತಾ ಕಾರ್ಯಗಾರವನ್ನ ಹಮ್ಮಿಕೊಂಡಿದ್ದೇವೆ, ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಒಗ್ಗೂಡಿಸಿ ಸಾರ್ವಜನಿಕರಿಗೆ ಕೆಲವು ವಿಷಯಗಳನ್ನ ತಲುಪಿಸಲು ಅವರಿಗೆ ಅರಿವು ಮೂಡಿಸುವ ಮತ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವ ಕೆಲವೊಂದು ವಿಚಾರಗಳನ್ನ…

Read More

ಕಲಬುರ್ಗಿ:- ಕಲಬುರಗಿಯನ್ನೇ ಬೆಚ್ಚಿ ಬೀಳಿಸಿದ್ದ ವಕೀಲ ಈರಣ್ಣ ಗೌಡ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮೂವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ. ಮಲ್ಲಿನಾಥ್ ಭಾಗಣ್ಣ ಮತ್ತು ಅವ್ವಣ್ಣಪ್ಪ ಬಂಧಿತರು. ಮೂವರು ಆರೋಪಿಗಳಲ್ಲದೇ ತಲೆಮರೆಸಿಕೊಂಡಿರುವ ಇನ್ನೊರ್ವ ಪ್ರಮುಖ ಆರೋಪಿಗಾಗಿ ತಲಾಷ್ ಮುಂದುವರೆದಿದೆ. ನಿನ್ನೆ ಹಾಡುಹಗಲೇ ಸಾಲಿನಿಂದ ಅಪಾರ್ಟ್‌ಮೆಂಟ್ ಬಳಿ ಈರಣ್ಣನ ಕೊಲೆಯಾಗಿತ್ತು. ಆರೋಪಿಗಳು ಮಾರಕಾಸ್ತ್ರ ಹಿಡಿದು ಬೆನ್ನಟ್ಟುವ ದೃಶ್ಯ CCTV ಯಲ್ಲಿ ರೆಕಾರ್ಡ್ ಆಗಿತ್ತು.ಪ್ರಕರಣ ದಾಖಲಿಸಿಕೊಂಡ ವಿವಿ ಠಾಣೆ ಪೋಲೀಸರು 24 ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ್ದಾರೆ..

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸುಗ್ಗಿ ಸಂಕ್ರಾಂತಿ ವೇಳೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ. ಆರಂಭದಿಂದಲೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪ್ಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ. ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಕೇವಲ ರೈಸ್‌ ಬಾತ್‌ ಅಥವಾ ಅನ್ನ, ಸಾಂಬರ್‌, ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್‌ ಪದಾರ್ಥದ ಊಟ ಬೇಡ, ಮುದ್ದೆ, ಚಪ್ಪಾತಿ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರ ಮತ್ತು ಬಿಬಿಎಂಪಿ ಗಮನಕ್ಕೆ ಬಂದಿತ್ತು. ಹಾಗಾಗಿ, ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಲಾಗಿದೆ. ಇಂದಿರಾ ಕ್ಯಾಂಟೀನ್‌ ಗ್ರಾಹಕರ ಸಂಖ್ಯೆಯಲ್ಲಿ ಗೋಲ್‌ ಮಾಲ್‌…

Read More

ಬೆಂಗಳೂರು:- ನಗರದಲ್ಲಿ ಕಳೆದ ಎರಡು ವಾರಗಳಿಂದ ಸರಣಿ ಕಳ್ಳತನ ನಡೆಯುತ್ತಿದೆ. ಕುಮಾರಪಾರ್ಕ್ ಸುತ್ತ ಮುತ್ತ ರಸ್ತೆಗಳಲ್ಲಿ ಸರಣಿ ‌ಕಳ್ಳತನ ನಡೆಯುತ್ತಿದ್ದು, ಖದೀಮರು ಸಿಲಿಂಡರ್, ಬೈಕ್ ಬ್ಯಾಟರಿ, ಬೈಕ್ ಕದ್ದಿದ್ದಾರೆ. ಮನೆ ಮುಂದೆ ಇಟ್ಟಿದ್ದ ಕಸದ ಡಬ್ಬಗಳನ್ನು ಬಿಡದೇ ಕಳ್ಳರು ಕೃತ್ಯ ಎಸಗಿದ್ದಾರೆ. ಕಳ್ಳರಿಂದ ನಿವಾಸಿಗಳು ಭಯ ಭೀತರಾಗಿದ್ದಾರೆ. ಶೇಷಾದ್ರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ದಾಖಲಾಗಿದೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ನಿವಾಸಿಗಳು ದೂರು ನೀಡಿದ್ದಾರೆ.

Read More

ಬೆಂಗಳೂರು :- ಸೋಷಿಯಲ್‌ ಮೀಡಿಯಾದಲ್ಲಿ ಹವಾ ಇಟ್ಟ ದಾಸ ಕಿಂಗ್‌ ಮೇಕರ್‌ ನನ್ನು ಅರೆಸ್ಟ್ ಮಾಡಲಾಗಿದೆ. ದೊಡ್ಡ ದೊಡ್ಡವರ ಜತೆ ಫೋಟೊ ಹೊಡೆಸಿಕೊಳ್ಳೋದು, ಸಾಕಷ್ಟು ಜನ ಫಾಲೋವರ್ಸ್‌ ನಡುವೆ ತಾನೊಬ್ಬ ದೊಡ್ಡ ಮನುಷ್ಯ ಅಂದುಕೊಂಡಿದ್ದ ದಾಸನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ಜಗಳದಲ್ಲಿ ಮೂಗು ತೂರಿಸಲು ಹೋಗಿ ಆತ ಈಗ ಕಂಬಿ ಎಣಿಸುತ್ತಿದ್ದಾನೆ. ಬೇರೆಯವರ ಪ್ರಾಪರ್ಟಿ ಗಲಾಟೆಗೆ ಮಧ್ಯ ಪ್ರವೇಶ ಮಾಡಿದ್ದಲ್ಲದೆ ತನ್ನ ಯುವಕರನ್ನು ಕಳುಹಿಸಿಕೊಟ್ಟ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಮಹಿಳೆ ಹಾಗೂ ಒಬ್ಬ ವ್ಯಕ್ತಿ ನಡುವೆ ಜಾಗದ ಗಲಾಟೆ ಇತ್ತು. ಆ ವ್ಯಕ್ತಿ ಇದನ್ನು ಇತ್ಯರ್ಥ ಮಾಡಿಕೊಡುವಂತೆ ದಾಸನ ಮೊರೆ ಹೊಕ್ಕಿದ್ದ. ದಾಸ ಮೊದಲೇ ಮಂಗನಿಗೆ ಕಳ್ಳು ಕುಡಿಸಿದಂತಾಗಿದೆ. ಅವನು ತನ್ನ ಹುಡುಗರನ್ನು ಕರೆದು ʻಆ ಮಹಿಳೆಯನ್ನು ನೋಡ್ಕೊಳ್ರೊʼ ಎಂದು ಆದೇಶ ಕೊಟ್ಟಿದ್ದಾನೆ. ಆ ಹುಡುಗರು ನೇರವಾಗಿ ಹೋಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಮತ್ತು ಹಲ್ಲೆ ಕೂಡಾ ಮಾಡಿದ್ದಾರೆ. ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಬಂದು ಅಟ್ಯಾಕ್‌ ಮಾಡಿದ್ದಾರೆ ಎಂದು ಪೊಲೀಸರಿಗೆ…

Read More

ದಾವಣಗೆರೆ:- ಬಿಎಸ್ ವೈ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ ಆರೋಪ ವಿಚಾರವಾಗಿ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ರೇಣುಕಾಚಾರ್ಯ, ಬಿಎಸ್ ವೈ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಲು ಯತ್ನಾಳಗೆ ನೈತಿಕತೆ ಇಲ್ಲ. ಹಿಂದೆ ಇವರು ಜೆಡಿಎಸ್ ಗೆ ಹೋಗಿದ್ದರು. ಆಗ ಯಡಿಯೂರಪ್ಪರೇ ಬಿಜೆಪಿಗೆ ವಾಪಸ್ ಕರೆತಂದಿದ್ದರು. ಇವರು ಕೇಂದ್ರದಲ್ಲಿ ಮಂತ್ರಿಯಾಗಲು ಬಿಎಸ್ ವೈ ಸಹಕಾರವಿದೆ. ಇದನ್ನ ಯತ್ನಾಳ ಮರೆಯಬಾರದು. ಹೀಗಾಗಿ ಅವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರು ಈಗ ದೆಹಲಿಗೆ ಹೋಗಲು ಸಜ್ಜಾಗಿದ್ದಾರೆ, ಹೋಗಲಿ. ನಮಗೇನು ದೆಹಲಿ ಗೊತ್ತಿಲ್ಲವಾ?. ನಮಗೆ ಏನು ಮಾಡಬೇಕು ಅಂತ ಗೊತ್ತಿದೆ. ನಾವು ಹೋಗಿ ಹೈ ಕಮಾಂಡ್ ಭೇಟಿ ಮಾಡುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಬಲಿಷ್ಠವಾಗಿದೆ ಎಂದರು. ಇನ್ನೂ ಅಲ್ಪ ಸಂಖ್ಯಾತರಿಗೆ ಸಿಎಂ 10 ಸಾವಿರ ಕೋಟಿ ಘೋಷಣೆ ವಿಚಾರವಾಗಿ ಮಾತನಾಡಿ, ಈ ರಾಜ್ಯವೇನು ನಿಮ್ಮದಾ ಸಿದ್ಧರಾಮಯ್ಯರ ಹೇಳಿಕೆಯಿಂದ ಹಿಂದಹ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯದಲ್ಲಿ ಬರದಿಂದ ರೈತರು ತತ್ತರಿಸಿದ್ದಾರೆ. ಸಿದ್ದರಾಮಯ್ಯ…

Read More

ಬಳ್ಳಾರಿ:- ಬಳ್ಳಾರಿಯ ಅಂಧ್ರ ಗಡಿಭಾಗದ ಕನ್ನಡ ಶಾಲೆಗಳಿಗೆ ಹೊಸ ಅಪತ್ತು ಎದುರಾಗಿದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್’ಸಿ ಪರೀಕ್ಷೆ ನಡೆಸುವಂತೆ ಆಂಧ್ರ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕುತ್ತಾಗಿ ಪರಿಣಾಮ ಉಂಟಾಗಲಿದೆ. ಸರ್ಕಾರದ ಈ ದಿಢೀರ್‌ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಪ್ರತಿವರ್ಷ ನವಂಬರ್‌ ತಿಂಗಳು ಬಂತೆಂದರೆ ಸಾಕು ಕನ್ನಡ ಕಲರವ ಎಲ್ಲೆಡೆ ರಾರಾಜಿಸುತ್ತದೆ. ಗಡಿಭಾಗದಲ್ಲಿರುವ ಕನ್ನಡ ಶಾಲೆಗಳು ನಾನಾ ಸಂಕಷ್ಟಕ್ಕೆ ಸಿಲುಕಿ ಉಸಿರುಗಟ್ಟುವ ವಾತಾವರಣ ಉಂಟಾಗಿದೆ. ಆಂಧ್ರದ ಅನಂತಪುರ, ಕರ್ನೂಲ್‌ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳ ಕನ್ನಡಾಭ್ಯಾಸ ಮಾಡುತ್ತಿದ್ದು, ಆಂಧ್ರ ಸರ್ಕಾರದ ಆದೇಶದಿಂದಾಗಿ 9ನೇ ತರಗತಿಯ ಮಕ್ಕಳು ಇಂಗ್ಲೀಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕು. ಪ್ರಥಮ ಭಾಷೆಯಾಗಿ ತೆಲುಗು, ತೃತೀಯ ಭಾಷೆಯಾಗಿ ಹಿಂದಿ ಕಲಿಕೆಗಷ್ಟೇ ಅವಕಾಶ ನೀಡಲಾಗಿದೆ. ಕನ್ನಡ ಕಲಿಕೆಗೆ ಅವಕಾಶವೇ ಇಲ್ಲದಂತಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 11, ಅನಂತಪುರ ಜಿಲ್ಲೆಯಲ್ಲಿ 3 ಕನ್ನಡ ಮಾಧ್ಯಮದ ಪ್ರೌಢಶಾಲೆಗಳಿವೆ. ಎರಡೂ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ ಸುಮಾರು 5…

Read More

ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಕೇಟಿಂಗ್ ಸ್ಪರ್ಧೆಯು ಇತ್ತೀಚೆಗೆ ಬೆಂಗೂರಿನಲ್ಲಿ ಆಯೋಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಬಾಲಕಿ ಸೌಜನ್ಯ ಶೇಷಗಿರಿ ಕ್ವಾಡ್ ವಿಭಾಗದಲ್ಲಿ ರಿಂಕ್ 500+ಡಿ -(ಚಿನ್ನದ)ಪದಕ, ರೋಡ್ -3000-(ಚಿನ್ನದ) ಪದಕ, ಯಾಸ್ಮೀನ್ ತಹಶೀಲ್ದಾರ್ ಇನ್ಲೈನ್ ವಿಭಾಗದಲ್ಲಿ road 1ಲಾಪ್ -(ಬೆಳ್ಳಿಯ)ಪದಕ , ರಿಂಕ 500+ಡಿ – (ಕಂಚಿನ) ಪದಕ ಪಡೆದು ಈ ಮಕ್ಕಳು ರಾಂಚಿಲಿ ನಡೆಯಲಿರುವ 67ನೇ ನೇಷನಲ್ ಸ್ಕೂಲ್ ಗೇಮ್ಸಗೆ ಆಯ್ಕೆ ಆಗಿದ್ದಾರೆ . ಈ ಮಕ್ಕಲಿಗೆ ಅಕ್ಷಯ್ ಸೂರ್ಯವಂಶಯವರು ತರಬೇತಿ ನೀಡಿದ್ದಾರೆ. ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು , ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ .

Read More

ತಮಿಳುನಾಡು:- ಇಲ್ಲಿನ ಹೊಸೂರು ಬಳಿ 70 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಇಂದು ಬೆಳಗ್ಗೆ ಕೆಲಮಂಗಲಂ ಮತ್ತು ರಾಯಕೋಟೆ ರಸ್ತೆಯನ್ನು ಗಜಪಡೆ ಕ್ರಾಸ್ ಮಾಡಿದೆ. ರಾಯಕೋಟೆ ಸಮೀಪದ ಹನುಮಂತಪುರಂ ಬಳಿ ಗಜಪಡೆ ಬೀಡುಬಿಟ್ಟಿದೆ. ಶಾನಮಾವು ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದು, ಅನಗತ್ಯವಾಗಿ ಹೊಲಗದ್ದೆಗಳಿಗೆ ಓಡಾಟ ಜೊತೆಗೆ ಅರಣ್ಯ ಪ್ರವೇಶಿಸದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ತಿಂಗಳು ನೂರಕ್ಕೂ ಹೆಚ್ಚು ಕಾಡಾನೆಗಳು ಕರ್ನಾಟಕದ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ತೊರೆದಿದ್ದವು. ಜವಳಗಿರಿ ಅರಣ್ಯದ ಮೂಲಕ 70 ಕಾಡಾನೆಗಳು ತಮಿಳುನಾಡಿನ ಹೊಸೂರು ಅರಣ್ಯ ಪ್ರದೇಶ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ರೈತರ ಹೊಲಗದ್ದೆಗಳಿಗೆ ಲಗ್ಗೆಯಿಡದಂತೆ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿದ್ದರು. ಇಂದು ಸಂಜೆ ರಾಯಕೋಟೆ ಅಥವಾ ಡೆಂಕಣಿಕೋಟೆ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆ ಸಿದ್ದತೆ ನಡೆಸಿದೆ.

Read More

Yash19 ಟೈಟಲ್ ರಿವೀಲ್, ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದೆ. ಯಶ್ ಅವರ ಸಿನಿಮಾದ ಅಪ್ಡೇಟ್​ಗಾಗಿ ಕಾಯುತ್ತಿದ್ದ ಜನರಿಗೆ ಸೂಪರ್ ಆಗಿರುವ ಟೀಸರ್ ಸಿಕ್ಕಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾ 10-4-2025 ರಂದು ರಿಲೀಸ್ ಆಗಲಿದೆ. ಸಿನಿಮಾವನ್ನು ಯಶ್ ಅವರು ತುಂಬಾ ತಡವಾಗಿ ಅನೌನ್ಸ್ ಮಾಡಿದ್ದರೂ ಈ ಒಂದು ಹಂತದಲ್ಲಿಯೇ ಸಿನಿಮಾದ ಟೈಟಲ್, ಸಿನಿಮಾದ ಫಸ್ಟ್ ಟೀಸರ್, ಸಿನಿಮಾ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಿರುವುದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ. ಟಾಕ್ಸಿಕ್​ ಟೀಸರ್ ಒಂದು ಜೋಕರ್ ಚಿತ್ರದೊಂದಿಗೆ ಶುರುವಾಗುತ್ತದೆ. ಆ ನಂತರ ಕೆವಿನ್ ಪ್ರೊಡಕ್ಷನ್, ಮಾನ್​​ಸ್ಟರ್ ಕ್ರಿಯೇಷನ್ಸ್ ಲುಕ್ ಸಿಗುತ್ತದೆ. ಆ ನಂತರ ಗೀತು ಮೋಹನ್​ದಾಸ್ ಹೆಸರು ಬರುತ್ತದೆ. ಆಮೇಲೆ ಯಶ್ ಅವರ ಲುಕ್ ಕಾಣಸಿಗುತ್ತದೆ. ಯಶ್ ಕೈಯಲ್ಲಿ ಗನ್ ಹಿಡಿದಿರುವುದನ್ನು ಕಾಣಬಹುದು. ನಂತರ ಯಶ್ ಕ್ಯಾಪ್ ಧರಿಸಿ ಸ್ಮೋಕ್ ಮಾಡುತ್ತಾ ಕಾಣಿಸಿಕೊಳ್ಳಯತ್ತಾರೆ. ಯಶ್ ಸಿನಿಮಾದ ಟೀಸರ್​ನ ಬ್ಯಾಗ್ರೌಂಡ್ ಮ್ಯೂಸಿಕ್ ನಿಜಕ್ಕೂ ಸೂಪರ್ ಆಗಿದೆ.

Read More