ದಾವಣಗೆರೆ:- ಬಿಎಸ್ ವೈ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ ಆರೋಪ ವಿಚಾರವಾಗಿ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ರೇಣುಕಾಚಾರ್ಯ, ಬಿಎಸ್ ವೈ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಲು ಯತ್ನಾಳಗೆ ನೈತಿಕತೆ ಇಲ್ಲ. ಹಿಂದೆ ಇವರು ಜೆಡಿಎಸ್ ಗೆ ಹೋಗಿದ್ದರು. ಆಗ ಯಡಿಯೂರಪ್ಪರೇ ಬಿಜೆಪಿಗೆ ವಾಪಸ್ ಕರೆತಂದಿದ್ದರು. ಇವರು ಕೇಂದ್ರದಲ್ಲಿ ಮಂತ್ರಿಯಾಗಲು ಬಿಎಸ್ ವೈ ಸಹಕಾರವಿದೆ. ಇದನ್ನ ಯತ್ನಾಳ ಮರೆಯಬಾರದು. ಹೀಗಾಗಿ ಅವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರು ಈಗ ದೆಹಲಿಗೆ ಹೋಗಲು ಸಜ್ಜಾಗಿದ್ದಾರೆ, ಹೋಗಲಿ.
ನಮಗೇನು ದೆಹಲಿ ಗೊತ್ತಿಲ್ಲವಾ?. ನಮಗೆ ಏನು ಮಾಡಬೇಕು ಅಂತ ಗೊತ್ತಿದೆ. ನಾವು ಹೋಗಿ ಹೈ ಕಮಾಂಡ್ ಭೇಟಿ ಮಾಡುತ್ತೇವೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಬಲಿಷ್ಠವಾಗಿದೆ ಎಂದರು.
ಇನ್ನೂ ಅಲ್ಪ ಸಂಖ್ಯಾತರಿಗೆ ಸಿಎಂ 10 ಸಾವಿರ ಕೋಟಿ ಘೋಷಣೆ ವಿಚಾರವಾಗಿ ಮಾತನಾಡಿ, ಈ ರಾಜ್ಯವೇನು ನಿಮ್ಮದಾ ಸಿದ್ಧರಾಮಯ್ಯರ ಹೇಳಿಕೆಯಿಂದ ಹಿಂದಹ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯದಲ್ಲಿ ಬರದಿಂದ ರೈತರು ತತ್ತರಿಸಿದ್ದಾರೆ. ಸಿದ್ದರಾಮಯ್ಯ ರೈತರಿಗೆ ಪರಿಹಾರ ನೀಡುತ್ತಿಲ್ಲ. ಆದರೆ ಮುಸ್ಲಿಂರಿಗೆ ಸಾವಿರಾರು ಕೋಟಿ ಅನುದಾನ ಘೋಷಣೆ ಮಾಡುತ್ತಿದ್ದಾರೆ. ನಿಮಗೆ ಲೋಕಸಭೆ ಚುನಾವಣೆಯಲ್ಲಿ ಹಿಂದುಗಳು ತಕ್ಕ ಪಾಠ ಕಲಿಸಲಿದ್ದಾರೆ. ಲೋಕ ಚುನಾವಣೆಯಲ್ಲಿ ಗೆದ್ದರೆ ಪಾಕಿಸ್ತಾನಕ್ಕೆ ಹೋಗಿ ಆಡಳಿತ ನಡೆಸ್ತೀರಾ ?. ಸಿಎಂ ಎಲ್ಲರನ್ನ ಸಮಾನವಾಗಿ ಕಾಣಬೇಕು. ನಾವು ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ದಾವಣಗೆರೆಯಲ್ಲಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.