Author: AIN Author

ಕಲಬುರಗಿ: ಜಿಲ್ಲೆಯ ಗಾಣಗಾಪುರದಲ್ಲಿ ದತ್ತ ಜಯಂತಿ ಸಂಭ್ರಮ ಕಳೆಕಟ್ಟಿದೆ..ಗುರುದತ್ತನ ಸನ್ನಿಧಿಯಲ್ಲಿ ನಿನ್ನೆ ತೊಟ್ಟಿಲೊತ್ಸವ ಜರುಗಿದ್ದು ಇಂದು ಸಂಜೆ ರಥೋತ್ಸವ ನಡೆಯಲಿದೆ. ಹೀಗಾಗಿಬೆಳಿಗ್ಗೆಯಿಂದ ದತ್ತನ ಪಾದುಕೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರುತಿದ್ದು ಹೊಸ್ತಲ ಹುಣ್ಣಿಮೆಯ ಈ ಶುಭದಿನದಂದು ಸಂಜೆ ಅಪಾರ ಭಕ್ತರ ನಡುವೆ ಶೃದ್ಧಾ ಭಕ್ತಿಯ ರಥೋತ್ಸವ ಜರುಗಲಿದೆ.ಭೀಮಾ-ಅಮರ್ಜಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಗಾಣಗಾಪುರ ಪುಣ್ಯಕ್ಷೇತ್ರಕ್ಕೆ ಈಗಾಗಲೇ ದತ್ತ ಜಯಂತಿಯಲ್ಲಿ ಭಾಗಿಯಾಗಲು ರಾಜ್ಯ ಹೊರರಾಜ್ಯದ ಭಕ್ತಗಣ ಆಗಮಿಸಿ ಗುಡಿಯಲ್ಲಿ ಬೀಡುಬಿಟ್ಟಿದೆ..

Read More

ಬೆಂಗಳೂರು: ಫೆಬ್ರವರಿ 13 ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಶುರುವಾಗಲಿದ್ದು  ಅಂದೇ ರಾಜ್ಯ ಉದ್ದೇಶಿಸಿ ಭಾಷಣ ಮಾಡಲಿರುವ ರಾಜ್ಯಪಾಲ ಗೆಹ್ಲೋಟ್  ಫೆ,16 ರ ವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಫೆ 17ಕ್ಕೆ ಬಜೆಟ್ ಮಂಡನೆ  ಮಾಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ..? ಲೋಕದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರಕ್ಕೆ  ಠಕ್ಕರ್ ಕೊಡಲು ಸಿದ್ದತೆ ಹಲವು ಗ್ಯಾರಂಟಿಗಳ ನಡುವೆಯೂ ರಾಜ್ಯದ ಜನತೆಗೆ ಮತ್ತಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಜನವರಿ ತಿಂಗಳ ಎರಡನೇ ವಾರದಿಂದ ಇಲಾಖಾವಾರು ಸಭೆ ನಡೆಸಲಿರುವ ಮುಖ್ಯಮಂತ್ರಿ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದ ಕಾರಣ ಹೊರೆ ಇಲ್ಲದ , ತೆರಿಗೆ ರಹಿತ ಬಜೆಟ್ ಮಂಡನೆ ಸಾಧ್ಯತೆ

Read More

ಕಲಬುರಗಿ: ಬಿಸಿಲನಾಡು ಕಲಬುರಗಿಗೂ ಕಾಲಿಟ್ಟಿದೆ ಕೋವಿಡ್ ರೂಪಾಂತರಿ ವೈರಸ್.ಹೌದು ಕೊರೊನಾ ಟೆಸ್ಟ್ ಮೊದಲ ದಿನವೇ ಓರ್ವ ಬಾಲಕಿಯಲ್ಲಿ ವೈರಸ್ ಪತ್ತೆಯಾಗಿದೆ. ಮುಂಬೈನಿಂದ ಬಂದಿದ್ದ ಬಾಲಕಿ ಕ್ಷಯರೋಗ ಚಿಕಿತ್ಸೆಗಾಗಿ ಡಿ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು.ಬಾಲಕಿಗೆ ನಿರಂತರ ಜ್ವರ ಹಿನ್ನಲೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು.ಟೆಸ್ಟ್ ಬಳಿಕ ಕೊರೊನಾ ಸೊಂಕು ತಗುಲಿರೋದು ದೃಢಪಟ್ಟಿದೆ ಹೀಗಾಗಿ ಬಾಲಕಿಯ ಸಂಪರ್ಕಕ್ಕೆ ಬಂದವರನ್ನ ಐಸೋಲೇಷನ್ ಮಾಡಲು DHO ಸೂಚನೆ ನೀಡಿದ್ದಾರೆ.

Read More

ಯುವನಟ ಆದಿಕೇಶವ ರೆಡ್ಡಿ  ನಟನೆಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿದ  ಆತ್ಮ ತಲ್ಲಣ ಚಿತ್ರವು  ಇದೇ  ಶುಕ್ರವಾರ ಡಿ.29ರಂದು ರಾಜ್ಯಾದ್ಯಂತ  ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಯಿತು.  ಎಸ್.ಪಿ. ಕೃಷ್ಣ ಅವರು ಈ ಚಿತ್ರದ  ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆ ಶ್ರೀ ಯೋಗಮಾತಾ ಹುಲಿಯಮ್ಮದೇವಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ  ನಿರ್ಮಾಣ ಸಹ ಮಾಡಿದ್ದಾರೆ.  ಆದಿಕೇಶವರೆಡ್ಡಿ ಚಿತ್ರದ ನಾಯಕನಾಗಿದ್ದು, ನಾಯಕಿಯಾಗಿ ಲಾವಣ್ಯ ಅಭಿನಯಿಸಿದ್ದಾರೆ, ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಕೃಷ್ಣಪ್ಪ ನಾವು ಈ ಚಿತ್ರವನ್ನು ಶುರು ಮಾಡಿ ೩ ವರ್ಷಗಳಾಯಿತು, ಶೂಟಿಂಗ್ ಟೈಮಲ್ಲಿ  ಹಲವಾರು ಅವಘಡಗಳು ನಡೆದವು, ತೊಂದರೆಗಳು ಎದುರಾದವು, ೪೦ ದಿನಗಳ ಕಾಲ ಮೈಸೂರು, ಗೋಪಾಲಪುರದ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ಮಾಡಿದ್ದೇವೆ, ಒಂದಷ್ಟು ರಿಯಲ್ ಇನ್‌ಸಿಡೆಂಟ್ ಇಟ್ಟುಕೊಂಡು ಸಿನಿಮ್ಯಾಟಿಕ್ ಆಗಿ ಚಿತ್ರವನ್ನು ಮಾಡಿದ್ದೇವೆ. ಅತ್ಯಾಚಾರಕ್ಕೊಳಗಾದ ಹೆಣ್ಣಿನ ರಿವೆಂಜ್ ಕಥೆಯೇ ಆತ್ಮತಲ್ಲಣ. ಸಿನಿಮಾ ಬಿಡುಗಡೆಯ ಹಂತಕ್ಕೆ ಬರಲು ನಾಯಕನ  ಸಹಕಾರ ದೊಡ್ಡದು ಎಂದರು, ನಂತರ ನಾಯಕ…

Read More

ದೆಹಲಿ: ಕಳೆದ ವಾರ ಸಂಸತ್ತು ಅಂಗೀಕರಿಸಿದ ಮೂರು ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ (Criminal Laws) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೋಮವಾರ ಅಂಕಿತ ಹಾಕಿದ್ದಾರೆ. ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಾಯಿಸಿದ್ದು, ಮೂರು ಹೊಸ ಕಾನೂನುಗಳಾಗಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಅಂಗೀಕರಿಸಲಾಗಿತ್ತು ಸಂಸತ್ತಿನಲ್ಲಿ ಮೂರು ವಿಧೇಯಕಗಳ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷೆ ನೀಡುವ ಬದಲು ನ್ಯಾಯ ಒದಗಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದ್ದರು. ಆಗಸ್ಟ್‌ನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಗಳನ್ನು ಮೊದಲು ಮಂಡಿಸಲಾಗಿತ್ತು. ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಹಲವಾರು ಶಿಫಾರಸುಗಳನ್ನು ಮಾಡಿದ ನಂತರ, ಸರ್ಕಾರವು ಬಿಲ್‌ಗಳನ್ನು ಹಿಂಪಡೆಯಲು ನಿರ್ಧರಿಸಿತು. ಕಳೆದ ವಾರ ಅವುಗಳ ಮರುರೂಪಿಸಿದ ಆವೃತ್ತಿಗಳನ್ನು ಪರಿಚಯಿಸಿತ್ತು.

Read More

ಚೆನ್ನೈ: ಮಹಿಳಾ ಟೆಕ್ಕಿಯನ್ನು (Women Techie) ಮದುವೆಯಾಗಲು ಲಿಂಗ ಬದಲಾಯಿಸಿಕೊಂಡಿದ್ದ ಮಾಜಿ ಸಹಪಾಠಿ, ಆಕೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. 24 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ನಂದಿನಿ ಕೊಲೆಯಾದ ಯುವತಿ. ಆಕೆಯ ಹುಟ್ಟುಹಬ್ಬದ ಮುನ್ನಾದಿನ ಈ ಘಟನೆ ನಡೆದಿದೆ. ಚೆನ್ನೈನ (Chennai) ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಬಳಿಯ ತಲಂಬೂರ್‌ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ (26)ಯಿಂದ ಈ ಹತ್ಯೆ ನಡೆದಿದೆ. ನಂದಿನಿಗೆ ಹುಟ್ಟುಹಬ್ಬದ ಸರ್ಪ್ರೈಸ್‌ ನೀಡುವ ನೆಪದಲ್ಲಿದಲ್ಲಿ ಆರೋಪಿಯಿಂದ ಹತ್ಯೆ ನಡೆದಿದೆ. ಮಧುರೈ ಮೂಲದ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ನಂದಿನಿ ಚೆನ್ನೈನಲ್ಲಿ ಸಂಬಂಧಿಕರೊಂದಿಗೆ ನೆಲೆಸಿದ್ದಳು. ನಂದಿನಿ ಸಹಪಾಠಿಯಾಗಿದ್ದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡು ವೆಟ್ರಿಮಾರನ್ ಆಗಿದ್ದ. ಗೆಳತಿ ಮೇಲಿನ ಪ್ರೀತಿಯಿಂದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡಿದ್ದಳು. ನಂತರ ವೆಟ್ರಿಮಾರನ್‌ ಆಗಿ ಬದಲಾಗಿದ್ದ. ಚೆನ್ನೈನಲ್ಲಿ ಸ್ನೇಹಿತರಾಗಿದ್ದ ಇವರು ಒಟ್ಟಿಗೆ ವಾಸಿಸುತ್ತಿದ್ದರು. ಯಾವುದೇ ಲೈಂಗಿಕ ದೌರ್ಜನ್ಯದ ಸುಳಿವು…

Read More

ಚೆನ್ನೈ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುವ ಮೂಲಕ ಒಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅಂತೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಲು ಹಲವಾರು ಕಡೆಗಳಿಂದ ಭಕ್ತಿಪೂರ್ವಕ ಕಾಣಿಕೆಗಳನ್ನು ಕಳುಹಿಸಲಾಗುತ್ತಿದೆ. ಅಂತೆಯೇ ತಮಿಳುನಾಡಿನಿಂದ ಕೂಡ ಭಕ್ತಿಯ ಸಂಕೇತವಾಗಿ ಘಂಟೆಗಳನ್ನು ರವಾನಿಸಲಾಗಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ramamandir) ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನಿಂದ ಅಯೋಧ್ಯೆಗೆ 1,200 ಕೆಜಿ ತೂಕದ ಒಟ್ಟು 42 ಘಂಟೆಗಳನ್ನು ರವಾನಿಸಲಾಗಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಘಂಟೆಗಳನ್ನು ತಯಾರಿಸಲಾಗಿದೆ. ಬಳಿಕ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾಮಜನ್ಮಭೂಮಿಗೆ ಕಳುಹಿಸಿಕೊಡಲಾಗಿದೆ.‌ ಈ ಸಂಬಂಧ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಮಾಲೀಕ ಆರ್.ರಾಜೇಂದ್ರನ್ ಮಾತನಾಡಿ, ಒಂದು ಘಂಟೆ ಮಾಡಲು 1,200 ರೂ. ಆಗುತ್ತದೆ. ಆದರೆ ರಾಮಮಂದಿರಕ್ಕೆ ಕೇವಲ 600 ರೂ.ಗಳನ್ನು ಕಾರ್ಮಿಕ ಶುಲ್ಕವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಘಂಟೆಗಳ ತೂಕವು ಬದಲಾಗುತ್ತದೆ. ಐದು ಘಂಟೆಗಳು ತಲಾ 120 ಕೆ.ಜಿ ತೂಗಿದರೆ, ಆರು ಘಂಟೆಗಳು ತಲಾ 70 ಕೆ.ಜಿ ತೂಗುತ್ತವೆ.…

Read More

ಇಸ್ಲಾಮಾಬಾದ್: ಹಿಂದೂ ಯುವತಿಯೊಬ್ಬರು ಪಾಕಿಸ್ತಾನದಲ್ಲಿ (Pakistan) ನಡೆಯುವ 2024ರ ಸಾರ್ವತ್ರಿಕ ಚುನಾವಣೆಗೆ (General Election) ನಾಮಪತ್ರ ಸಲ್ಲಿಸಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. 2024ರ ಫೆಬ್ರವರಿ 8 ರಂದು 16 ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆಯಲಿವೆ. ಹೀಗಾಗಿ ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ ಸವೀರಾ ಪ್ರಕಾಶ್ ಅವರು PK-25 ರ ಜನರಲ್ ಸೀಟ್‍ಗೆ ಅಧಿಕೃತವಾಗಿ ನಾಮಪತ್ರ (Nomination) ಸಲ್ಲಿಸಿದ್ದಾರೆ. ಹಿಂದೂ ಸಮುದಾಯದ ಸದಸ್ಯೆಯಾಗಿರುವ ಸವೀರಾ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಟಿಕೆಟ್‍ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಪ್ರಕಾಶ್ ಅವರ ತಂದೆ ಓಂ ಪ್ರಕಾಶ್ (ನಿವೃತ್ತ ವೈದ್ಯ) ಅವರು ಕಳೆದ 35 ವರ್ಷಗಳಿಂದ ಪಿಪಿಪಿಯ ಅಪ್ಪಟ ಸದಸ್ಯರಾಗಿದ್ದಾರೆ. ಹೀಗಾಗಿ ತಂದೆಯ ಹಾದಿಯಲ್ಲೇ ಸಾಗಲು ಮಗಳು ನಿರ್ಧಾರ ಮಾಡಿದ್ದಾರೆ ಮುಂಬರುವ ಚುನಾವಣೆಗೆ ಸಾಮಾನ್ಯ ಸ್ಥಾನಕ್ಕೆ ಬುನರ್ ನಿಂದ ನಾಮಪತ್ರ ಸಲ್ಲಿಸಿರುವ ಮೊದಲ ಮಹಿಳೆ ಪ್ರಕಾಶ್ ಆಗಿದ್ದಾರೆ ಎಂದು ಸ್ಥಳೀಯ ರಾಜಕಾರಣಿ ಸಲೀಂ ಖಾನ್ ಹೇಳಿದ್ದಾರೆ.

Read More

ಟೆಲ್ ಅವೀವ್: ಒಂದೆಡೆ ಗಾಜಾದ ಮೇಲೆ ಇಸ್ರೇಲ್ (Israel) ವೈಮಾನಿಕ ದಾಳಿ (Airstrike) ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ (Hamas) ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಗಾಜಾದ ಮಾಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ ಗಾಜಾದ ಮೇಲೆ ಭಾನುವಾರ ರಾತ್ರಿ ಆರಂಭವಾದ ಇಸ್ರೇಲ್ ದಾಳಿ ಕ್ರಿಸ್‍ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್‍ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆಯೇ ಬೆಥ್ ಲೆಹೆಮ್‍ನಲ್ಲಿ (Bethlehem) ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು…

Read More

ಬೆತ್ಲೆಹೆಮ್‌ (ಪ್ಯಾಲೆಸ್ತೀನ್): ಜಗತ್ತಿನಾದ್ಯಂತ ಕ್ರಿಸ್ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜೀಸಸ್‌ (Jesus Christ) ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮವಿಲ್ಲ. ಕ್ರಿಸ್ಮಟ್‌ ಟ್ರೀ ಕೂಡ ಇಲ್ಲ. ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ. ಬೆತ್ಲೆಹೆಮ್‌ (Bethlehem) ಸಾಮಾನ್ಯವಾಗಿ ಕ್ರಿಸ್ಮಸ್‌ನಲ್ಲಿ ಅತ್ಯಂತ ಜನನಿಬಿಡವಾಗಿರುತ್ತದೆ. ಆದರೆ ಈ ವರ್ಷ ಯುದ್ಧದಿಂದಾಗಿ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಪಟ್ಟಣ ಪ್ರವಾಸಿಗರು ಮತ್ತು ಯಾತ್ರಿಕರಿಲ್ಲದೇ ಬಣಗುಡುತ್ತಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳು ಖಾಲಿ ಖಾಲಿಯಾಗಿವೆ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಯಿತು. ಇದಾದ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಹೆಚ್ಚಳವಾಗಿದೆ. ಹೀಗಾಗಿ ಬೆತ್ಲೆಹೆಮ್‌ಗೆ ವ್ಯಾಪಾರ ಮಾಲೀಕರು ಯಾರೂ ಬರುತ್ತಿಲ್ಲ. ಇದು ಪಟ್ಟಣಕ್ಕೆ (ಬೆತ್ಲೆಹೆಮ್‌) ಬಂದೊದಗಿದ ಅತ್ಯಂತ ಕೆಟ್ಟ ಕ್ರಿಸ್ಮಸ್‌ ದಿನವಾಗಿದೆ. ಬೆತ್ಲೆಹೆಮ್‌ ಅನ್ನು ಬಂದ್‌ ಮಾಡಲಾಗಿದೆ. ಕ್ರಿಸ್ಮಸ್…

Read More