ಕಲಬುರಗಿ: ಜಿಲ್ಲೆಯ ಗಾಣಗಾಪುರದಲ್ಲಿ ದತ್ತ ಜಯಂತಿ ಸಂಭ್ರಮ ಕಳೆಕಟ್ಟಿದೆ..ಗುರುದತ್ತನ ಸನ್ನಿಧಿಯಲ್ಲಿ ನಿನ್ನೆ ತೊಟ್ಟಿಲೊತ್ಸವ ಜರುಗಿದ್ದು ಇಂದು ಸಂಜೆ ರಥೋತ್ಸವ ನಡೆಯಲಿದೆ.
ಹೀಗಾಗಿಬೆಳಿಗ್ಗೆಯಿಂದ ದತ್ತನ ಪಾದುಕೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರುತಿದ್ದು ಹೊಸ್ತಲ ಹುಣ್ಣಿಮೆಯ ಈ ಶುಭದಿನದಂದು ಸಂಜೆ ಅಪಾರ ಭಕ್ತರ ನಡುವೆ ಶೃದ್ಧಾ ಭಕ್ತಿಯ ರಥೋತ್ಸವ ಜರುಗಲಿದೆ.ಭೀಮಾ-ಅಮರ್ಜಾ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಗಾಣಗಾಪುರ ಪುಣ್ಯಕ್ಷೇತ್ರಕ್ಕೆ ಈಗಾಗಲೇ ದತ್ತ ಜಯಂತಿಯಲ್ಲಿ ಭಾಗಿಯಾಗಲು ರಾಜ್ಯ ಹೊರರಾಜ್ಯದ ಭಕ್ತಗಣ ಆಗಮಿಸಿ ಗುಡಿಯಲ್ಲಿ ಬೀಡುಬಿಟ್ಟಿದೆ..