Author: AIN Author

ಹಾಸನ :- ಬ್ಲಾಕ್​ಮೇಲ್​ ರಾಜಕಾರಣಕ್ಕೆ ಹೆದರುವವನು ನಾನಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ. ಕಳೆದ 40 ವರ್ಷಗಳಿಂದ ನಾನು ರಾಜಕಾರಣ ‌ಮಾಡುತ್ತಿದ್ದೇನೆ. ಬ್ಲಾಕ್​ಮೇಲ್​ಗೆ ನಾನು ಹೆದರುವುದಿಲ್ಲ ಎಂದರು. ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ. ಬೇರೆಯವರಿಗೆ ಏನು ಬೇಕಾದರೂ ಬ್ಲಾಕ್​ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್​ಮೇಲ್​ಗೆ ಹೆದರಲ್ಲ. ಆರೋಪ ಹಾಗೂ ಅಪಪ್ರಚಾರಕ್ಕೆ ಕಾನೂನು ರೀತಿ‌ ಉತ್ತರ ಕೊಡುವೆ. ಬೇರೆಯವರ ಬಳಿ ಬ್ಲಾಕ್​ಮೇಲ್​ ಮಾಡಿ‌ ಯಶಸ್ವಿ ಆಗಿರಬಹುದು. ಅಂಥದೆಲ್ಲಾ ನನ್ನ ಬಳಿ ಆಗಲ್ಲ ಎಂದು ದೇವರಾಜೇಗೌಡ ವಿರುದ್ಧ ಕಿಡಿಕಾರಿದ್ದಾರೆ ಅವರು 3 ಬಿಟ್ಟಿರುವವರು, ಅಂಥವರನ್ನು ಮನೆ ಬಾಗಿಲಿಗೂ ಸೇರಿಸಲ್ಲ. ದೇವೇಗೌಡರನ್ನು ಎದುರಿಸಲಾಗದವರು ಇಂತವರನ್ನು ಬಿಡುತ್ತಾರೆ ಎಂದು ಪರೋಕ್ಷವಾಗಿ ‌ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧನಿದ್ದೇನೆ. ನಾವು ಭ್ರಷ್ಟಾಚಾರ ಮಾಡಿದ್ದರೆ‌ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ಅದನ್ನು ಅವರು ತೋರಿಸಲಿ. ಆಮೇಲೆ‌…

Read More

ದೇವನಹಳ್ಳಿ :- ಬೆಂಗಳೂರು, ಹೈದರಾಬಾದ್​ ಏರ್​ಪೋರ್ಟ್​ಗಳಲ್ಲಿ ದುಬೈಗೆ ಹೊರಟಿದ್ದ ನಾಲ್ವರು ಪ್ರಯಾಣಿಕರ ತಪಾಸಣೆ ವೇಳೆ 13 ಕೋಟಿ ರೂ. ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ಜಪ್ತಿ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್ ಏರ್‌ಪೋರ್ಟ್​ನಿಂದ ವಿಮಾನದಲ್ಲಿ ದುಬೈಗೆ ಸಾಗಿಸಲು ಯತ್ನಿಸಿದ್ದ ನಾಲ್ವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ. ಕೆಐಎಬಿನಲ್ಲಿ​ 7.77 ಕೋಟಿ ರೂ. ಮೌಲ್ಯದ ವಜ್ರ, 4.62 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆ‌ಯಾಗಿದ್ದರೆ, ಹೈದರಾಬಾದ್​ ಏರ್​ಪೋರ್ಟ್​ನಲ್ಲಿ 6.03 ಕೋಟಿ ರೂ. ಮೌಲ್ಯದ ವಜ್ರಗಳು, 9.83 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಚಾಕೊಲೇಟ್‌ ಮತ್ತು ವೈಪರ್‌ಗಳ ರೂಪದಲ್ಲಿ ವಜ್ರಗಳನ್ನು ಇಟ್ಟು ಸೀಲ್ ಮಾಡಿ ಸಾಗಿಸುತ್ತಿದ್ದರು. ಸದ್ಯ ವಶಕ್ಕೆ ಪಡೆದ ನಾಲ್ವರನ್ನು ಡಿಆರ್​​ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪೇಸ್ಟ್ ಹಾಗೂ ಕಟ್ ಪೀಸ್ ಮಾದರಿಯಲ್ಲಿ ಚಿನ್ನವನ್ನ ವುಡ್ ಟ್ರೇ ಹಾಗೂ ಚಾಕುವಿನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಏರ್‌ಪೋರ್ಟ್‌ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 19 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 298…

Read More

ಇಂದು ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. 4-5 ದಿನಗಳಿಂದಲೂ ಇಳಿಕೆ ಕಂಡ ಚಿನ್ನದ ದರ ಶನಿವಾರ ದಿಢೀರನೆ ಹೆಚ್ಚಾಗಿತ್ತು. ಇಂದೂ ಕೂಡ ಏರಿಕೆ ಕ್ರಮದಲ್ಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ.. 22 ಕ್ಯಾರೆಟ್‌ ಚಿನ್ನದ ದರ 1 gram: ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ 5,770 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 30 ರೂ. ಏರಿಕೆಯಾಗಿದೆ. 8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ನಿನ್ನೆ 46,160 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 240 ರೂ. ಜಾಸ್ತಿಯಾಗಿದೆ. 10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ನಿನ್ನೆ 57,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಏರಿಕೆಯಾಗಿದೆ. 100…

Read More

ಬೆಂಗಳೂರು:- ನಾವು ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ನುಡಿದಂತೆ ನಡೆಯುತ್ತಿದ್ದೇವೆ. ವಚನ ಪಾಲನೆಯ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಈಗ ಪ್ರಜೆಗಳಾದ ನಿಮ್ಮ ಸರದಿ. ಗ್ಯಾರಂಟಿ ಯೋಜನೆಗಳ ಒಂದು ಪೈಸೆಯನ್ನೂ ದುರುಪಯೋಗ ಮಾಡಲಾರೆ ಎಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಿದೆ ಎಂದರು. ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಹೇಳಿದ್ದಾರೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ, ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.

Read More

ಲಂಡನ್: ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ. ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ ಇಬ್ಬರು ಸಹ ವಯಸ್ಸಿನ ಭೇದ ಮರೆತು ಪ್ರೇಮದ ಬಲೆಯಲ್ಲಿ ಸಿಲುಕಿದ ಜೋಡಿಗಳು. ಮಾರ್ಟಿನಾ  ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಆ ವೇಳೆ ಆಕೆ 11 ವರ್ಷದ ಹಾಗು 3 ವರ್ಷದ ಎರಡು ಗಂಡು ಮಕ್ಕಳನ್ನು ಹೊಂದಿದ್ದಳು. https://ainlivenews.com/a-kannada-song-is-playing-in-ayodhya/ ಫೇಸ್‍ಬುಕ್‍ನಲ್ಲಿ ಲವ್: ಪತಿಯ ವಿಚ್ಚೇದನ ಬಳಿಕ ಮಾರ್ಟಿನಾನಗೆ ಫೇಸ್‍ಬುಕ್‍ನಲ್ಲಿ ಜ್ಯಾಕ್‍ನ ಪರಿಚಯವಾಗಿದೆ. ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಚಾಟಿಂಗ್ ಮಾಡುತ್ತ ಸ್ನೇಹಿತರಾಗಿದ್ದಾರೆ. ಒಂದು ದಿನ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸಕ್ಕಾಗಿ ಜ್ಯಾಕ್‍ಗೆ ಸಹಾಯ ಕೇಳಿ ಮನೆಗೆ ಬರುವಂತೆ ಹೇಳಿದ್ಳು. ಅಂದು ಇಬ್ಬರೂ ಮೊದಲ ಭೇಟಿಯಾಗಿದ್ದಾರೆ. ಮುಂದೆ ಮಾರ್ಟಿನಾ ಮತ್ತು ಜ್ಯಾಕ್ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ಬದಲಾಗಿತ್ತು. ಮನೆಯಲ್ಲಿ ವಿರೋಧ: ಇಬ್ಬರ ಪ್ರೀತಿ ಐದು…

Read More

ನಮ್ಮ ಅಡುಗೆಮನೆಯಲ್ಲಿರುವ ಒಂದು ಸರಳ ಖನಿಜವಾದ ಉಪ್ಪು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ವಾಸ್ತು ಶಾಸ್ತ್ರವು ಅನೇಕ ಆಶ್ಚರ್ಯಗಳಿಂದ ತುಂಬಿದೆ ಮತ್ತು ಅಂತಹ ಆಶ್ಚರ್ಯಗಳಲ್ಲಿ ಒಂದು ವಾಸ್ತುವಿನಲ್ಲಿ ಉಪ್ಪಿನ ಬಳಕೆಯಾಗಿದೆ. ಉಪ್ಪು ಹೀರಿಕೊಳ್ಳುವ ಮತ್ತು ಒಣಗಿಸುವ ಗುಣವನ್ನು ಹೊಂದಿದೆ. ಸರಿಯಾದ ರೀತಿಯಲ್ಲಿ ಬಳಸಿದರೆ ಉಪ್ಪು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳಬಹುದು. ಉಪ್ಪಿನ ಅತಿಯಾದ ಬಳಕೆಯು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಎಚ್ಚರವೂ ಇರಬೇಕು. ಹೌದು, ವಾಸ್ತು ದೋಷಗಳನ್ನು ನಿವಾರಿಸಲು ಉಪ್ಪನ್ನು ವಿವಿಧ ರೀತಿಯಲ್ಲಿ ಬಳಸಲು ಸಲಹೆ ನೀಡಲಾಗುತ್ತದೆ. ಉಪ್ಪನ್ನು ಪರಿಸರ ಶುದ್ಧಿಕಾರಕ ಎಂದು ಕರೆಯಲಾಗುತ್ತದೆ. ಹೀರಿಕೊಳ್ಳುವ ಗುಣದಿಂದಾಗಿ ಇದು ನಮ್ಮ ಸುತ್ತಮುತ್ತಲಿನ ಋಣಾತ್ಮಕ ಕ್ಷೇತ್ರವನ್ನು ತೆಗೆದುಹಾಕುತ್ತದೆ. ಇದು ನಿಮ್ಮ ಮನೆ, ಆತ್ಮ ಮತ್ತು ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಧನಾತ್ಮಕ ಜೀವನವನ್ನು ನಡೆಸಲು ನಿಮಗೆ ಅನುವು ಮಾಡಿಕೊಡುತ್ತದೆ. ಜೀವನದಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಲು ಉಪ್ಪಿನ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ ನೀವು ದಣಿವು, ಖಿನ್ನತೆ ಮತ್ತು…

Read More

ಭಾನುವಾರ- ರಾಶಿ ಭವಿಷ್ಯ ಜನವರಿ-14,2024 ಸೂರ್ಯೋದಯ: 06:53, ಸೂರ್ಯಾಸ್ತ : 05:56 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಶುಕ್ಲ ಪಕ್ಷ, ದಕ್ಷಿಣಾಯಣ , ಹೇಮಂತ ಋತು, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:3 0ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಭಿಜಿತ್ ಮುಹುರ್ತ: ಮ.12:02 ನಿಂದ ಮ.12:47 ತನಕ ಮೇಷ ರಾಶಿ: ಭೂಮಿ ಖರೀದಿ ಮತ್ತು ವಾಹನ ಖರೀದಿಗಾಗಿ ಹಣ ಹೂಡಿಕೆ ಮಾಡುತ್ತೀರಿ, ಮಕ್ಕಳಿಂದ ಸಂಜೆಯೊಳಗೆ ಸಿಹಿ ಸುದ್ದಿ, ಸಂಗಾತಿ ಜೊತೆಗೆ ಸಂತಸದ ಕ್ಷಣಗಳು ಕಾಣುವ ಹಂಬಲ, ವ್ಯಾಪಾರ ವ್ಯವಹಾರ ನಿಧಾನಗತಿಯಲ್ಲಿ ಚೇತರಿಕೆ, ಗೃಹ ನಿರ್ಮಾಣಕ್ಕಾಗಿ ಮತ್ತು ಹಣಕಾಸಿಗಾಗಿ ಅಲೆದಾಟ, ರಸಗೊಬ್ಬರ ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ಧನಲಾಭ, ವೈದ್ಯಕೀಯ ಕ್ಷೇತ್ರದ ನೌಕರರಿಗೆ ಬಿಡುವಿಲ್ಲದ ಕೆಲಸದ ಒತ್ತಡ, ಸ್ವಯಂ ಉದ್ಯೋಗ ವ್ಯವಹಾರಗಳಲ್ಲಿ ಚೇತರಿಕೆ ಕಾಣುವಿರಿ, ನಿಮ್ಮ ಪ್ರಯತ್ನದಲ್ಲಿ ಧನಲಾಭವಾಗುವ ಸಾಧ್ಯತೆ, ತಪ್ಪು ತೀರ್ಮಾನಗಳಿಂದ ಪ್ರೇಮಿಗಳಲ್ಲಿ ವೈಮನಸ್ಸು…

Read More

ಬೆಂಗಳೂರು: ಹೈಕಮಾಂಡ್ ಹೇಳಿದರೆ ಮಾತ್ರ ರಾಮ ಮಂದಿರಕ್ಕೆ ಹೋಗುತ್ತೇವೆ ಎಂಬ ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿ, ರಾಮಮಂದಿರದ ಬಗ್ಗೆ ಒಳ್ಳೆಯ ಮಾತನಾಡದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಎಂದು ವ್ಯಂಗ್ಯವಾಡಿದ್ದಾರೆ. ರಾಮಮಂದಿರದ ಬಗ್ಗೆ ಒಳ್ಳೆಯ ಮಾತಾಡಿದರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಕುರ್ಚಿಗೆ ಕುತ್ತು ಬರುವ ಭಯ. ಒಟ್ಟಿನಲ್ಲಿ ಎಡಬಿಡಂಗಿ ಕಾಂಗ್ರೆಸ್‌ ನಾಯಕರ ಪಾಡು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ಕಾಲೆಳೆದಿದ್ದಾರೆ. ಪರಮೇಶ್ವರ್‌ ಹೇಳಿದ್ದೇನು? ಹೈಕಮಾಂಡ್ ಈಗಾಗಲೇ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗಬಾರದು ಎಂಬ ನಿಲುವು ತೆಗೆದುಕೊಂಡಿದೆ. ಒಂದು ವೇಳೆ ಜನವರಿ 22 ನಂತರ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾವು ಹೋಗುತ್ತೇವೆ. ಎಲ್ಲವನ್ನೂ ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಅವರು ಹೋಗುವುದು ಬೇಡ ಎಂದು ಹೇಳಿದಾಗ ನಾವು ಅದರ ವಿರುದ್ದ ನಿಲುವು ‌ತೆಗೆದುಕೊಳ್ಳಲು ಆಗುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ…

Read More

ಮಂಡ್ಯ :- ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆಯೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮದ್ದೂರು ಪಟ್ಟಣ ಸಮೀಪದ ಶಿಂಷಾ ನದಿ ಎಲಿವೇಟೆಡ್ ರಸ್ತೆ ( ಮೇಲು ಸೇತುವೆ ಮೇಲೆ )ಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡು ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಐಸಿಐಸಿಐ ಬ್ಯಾಂಕ್ ( ಹೋಂ ಫೈನಾನ್ಸ್ ವಿಭಾಗ ) ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಂಕರ್, ಮಹದೇವು ಹಾಗೂ ಕಿಶೋರ್ ಮೂವರು ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದ ಅವರು ಶನಿವಾರ ಬೆಳಗಿನ ಜಾವ 4.30 ರ ಸಮಯದಲ್ಲಿ ಬೊಲೆರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಅವರು ಮದ್ದೂರು ಪಟ್ಟಣದ ಎಲಿವೇಟೆಡ್ ರಸ್ತೆಯಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಶಿಂಷಾ ನದಿ ಸೇತುವೆ ಮೇಲೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಕ್ಯಾಮೆರಾ ಕಂಬಕ್ಕೆ ಡಿಕ್ಕಿ ಹೊಡೆದು ಮೈಸೂರು ಕಡೆಗೆ ಹೋಗುವ ರಸ್ತೆಗೆ ಹೋಗಿ ಮಗುಚಿ ಬಿದ್ದಿದೆ. ಡಿಕ್ಕಿಯ…

Read More

ಬೆಂಗಳೂರು:- ರಾಜ್ಯದಲ್ಲಿ ಇಂದು 119 ಮಂದಿಗೆ ಕೊರೊನಾ ದೃಢವಾಗಿದ್ದು, ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕಡಿಮೆಯಾಗಿದ್ದು 119 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 33 ಪಾಸಿಟಿವ್ ಪ್ರಕರಣ ಸೇರಿದಂತೆ ರಾಜ್ಯದಲ್ಲಿ 119 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಕೋವಿಡ್ ನಿಂದ 152 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4,942 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಪಾಸಿಟಿವಿಟಿ ದರ ಶೇ. 2.54 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Read More