Author: AIN Author

ಕಲಬುರ್ಗಿ:- ಇದೇ ತಿಂಗಳ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದ್ದು ಅಂದು ಎಲ್ಲೆಡೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿರೋ ಹಿನ್ನಲೆ ಕಲಬುರಗಿಯಲ್ಲಿ ರಾಮನವಮಿ ಉತ್ಸವ ಸಮಿತಿ ಉಚಿತವಾಗಿ ಹಣತೆಗಳನ್ನ ವಿತರಣೆ ಮಾಡಿತು. ನಗರದ ಶರಣ ಬಸವೇಶ್ವರ ದೇಗುಲದ ಅಂಗಳದಲ್ಲಿ ಈ ಸೇವಾ ಕಾರ್ಯ ನಡೆದಿದ್ದು ರಾಮ ಭಕ್ತರು ಆಸಕ್ತಿಯಿಂದ ಹಣತೆಗಳನ್ನ ಪಡೆದಿದ್ದು ವಿಶೇಷವಾಗಿತ್ತು. ಇದೇವೇಳೆ ಜಿಲ್ಲೆಯ108 ಗುಡಿಗಳಿಗೆ ತಲಾ 1008 ಹಣತೆಗಳನ್ನ ವಿತರಿಸಲು ರಾಮ ನವಮಿ ಉತ್ಸವ ಸಮಿತಿ ಸಂಕಲ್ಪ ಮಾಡಿದೆ ಅಂತ ಸಮಿತಿಯ ಮುಖ್ಯಸ್ಥ ರಾಜು ಭವಾನಿ ಹೇಳಿದ್ದಾರೆ…

Read More

ಎಂಟು ತಿಂಗಳ ದೇಶಿಯ ತಳಿಯಾದ ಕಿಲಾರಿ ಆಕಳ ಕರು ಎರಡು ಲಕ್ಷ ಹತ್ತು ಸಾವಿರ ರೂ.ಗೆ ಮಾರಾಟವಾಗಿದೆ ಈಗ ಕಿಲಾರಿ ತಳಿಯೂ ಅಳಿವಿನ ಅಂಚಿನಲ್ಲಿದ್ದು ಇದನ್ನು ರಕ್ಷಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆವೆಂದು ನಿಪ್ಪಾಣಿ ಸಮಾದಿಲಿಂಗ ಮಠದ ಸ್ವಾಮೀಜಿ ಅವರ ಅಭಿಪ್ರಾಯ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಅಣ್ಣಪ್ಪ ನಿಕ್ಕಮ ಎಂಬ ರೈತ ಜವಾರಿ ಆಕಳನ್ನು ಸಾಕಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಈ ಕರುವನ್ನು ಮತ್ತು ತಾಯಿಯನ್ನು ಅವರಖೋಡ ಗ್ರಾಮಸ್ಥರು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದರು. ಈಗ ಎಚ್.ಎಫ್ ತಳಿ(ಆಕಳು) ಹೆಚ್ಚು ಹಾಲು ಕೊಡುತ್ತೆ ಎಂಬ ಕಾರಣಕ್ಕೆ ದೇಶಿ ತಳಿ ಸಾಕುವವರ ಸಂಖ್ಯೆ ಕ್ರಮೇಣ ಕುಗ್ಗುತ್ತಿದೆ. ಎಂಟು ತಿಂಗಳ ಕಿಲಾರಿ ಕರುವನ್ನು ನಿಪ್ಪಾಣಿ ತಾಲ್ಲೂಕಿನ ಸಮಾಧಿಲಿಂಗ ಮಠದ ಸ್ವಾಮೀಜಿಗಳಾದ ಪ್ರಾಣಲಿಂಗ ಶ್ರೀಗಳು ಕೊಳ್ಳುವುದರ ಮೂಲಕ ಸಾಕಿದಂತ ರೈತರನ್ನು ಪ್ರೋತ್ಸಾಹಿಸಿದ್ದಾರೆ. ದೇಶಿಯ ತಳಿಗಳನ್ನು ಸಾಕಿ ನಿರುದ್ಯೋಗವನ್ನು ಹೋಗಲಾಡಿಸಿ ಎಂದು ಯುವಜನತೆಗೆ ಕಿವಿ ಮಾತು ಹೇಳಿದರು.

Read More

ಬೆಂಗಳೂರು : ಅರ್ಧಂಬರ್ಧ ಮಂದಿರ ಉದ್ಘಾಟಿಸಿ ವೋಟು ಬಾಚುತ್ತಿರುವವರು ಹಿಂದೂ ವಿರೋಧಿಗಳಲ್ಲವೇ? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಅಸಲಿ ಹಿಂದೂ ವಿರೋಧಿ ಯಾರು? ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು ಅಷ್ಟೇ ಎಂದು ಛೇಡಿಸಿದ್ದಾರೆ. ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ ಮಸೀದಿ ಚರ್ಚುಗಳಲ್ಲಲ್ಲ. ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ..? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ..? ಎಂದು ಕಿಡಿಕಾರಿದ್ದಾರೆ. ರಾಮಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ, ನಿಜವಾದ ಹಿಂದೂ ವಿರೋಧಿಗಳು ಯಾರು? ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ವೋಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ? ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿಬಿಡುವುದಿಲ್ಲವೇ..?…

Read More

ಈ ವಿಧಾನಗಳಲ್ಲಿ ಜೀರಿಗೆ ನೀರನ್ನು ಸೇವಿಸಿದರೆ ಬಹಳ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. 1. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕರಿಬೇವಿನ ನೀರು : ಜೀರಿಗೆ ಮತ್ತು ಕರಿಬೇವಿನ ಎಲೆಯ ನೀರು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಒಂದು ಲೋಟ ನೀರಿಗೆ 1 ಚಮಚ ಜೀರಿಗೆ ಮತ್ತು 5-7 ಕರಿಬೇವಿನ ಎಲೆಗಳನ್ನು ಹಾಕಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ಚಯಾಪಚಯ ದರ ಹೆಚ್ಚಾಗುತ್ತದೆ. ಅಲ್ಲದೆ ಜೀರಿಗೆ ಮತ್ತು ಕರಿಬೇವಿನ ಎಲೆಗಳ ನೀರು BMI ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕೊತ್ತಂಬರಿ ನೀರು : ಜೀರಿಗೆ ಮತ್ತು ಕೊತ್ತಂಬರಿ ಎರಡೂ ತೂಕವನ್ನು ಕಡಿಮೆ ಮಾಡುತ್ತದೆ. ಇಲ್ಲಿ ಕೂಡಾ ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯಬೇಕು. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಟ್ಟು ತೂಕವನ್ನು ಕಡಿಮೆ ಮಾಡುತ್ತದೆ. ಜೀರಿಗೆ…

Read More

ಮಲಯಾಳಂ (Malayalam) ಸಿನಿಮಾ (Music) ರಂಗದ ಹೆಸರಾಂತ ಸಂಗೀತ ನಿರ್ದೇಶಕ, ಸಿನಿಮಾ ಸಂಗೀತದಲ್ಲಿ ಸಾಕಷ್ಟ ಪ್ರಯೋಗಗಳನ್ನು ಮಾಡಿರುವ ಕೆ.ಜೆ. ಜಾಯ್ (KJ Joy) ನಿಧನರಾಗಿದ್ದಾರೆ (Passed Away). ಅವರಿಗೆ 77 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಲವ್ ಲೆಟರ್ ಸಿನಿಮಾದ ಮೂಲಕ 1975ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು ಜಾಯ್. ನಂತರ ಸರ್ಪಂ, ಪ್ರಿಯಾಪುತ್ರನ್, ಸ್ನೇಹ ಯಮುನಾ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದ ಹೆಗ್ಗಳಿಕೆ ಇವರದ್ದು. ಸಿನಿಮಾ ಸಂಗೀತದ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ ಜಾಯ್. ಮಲಯಾಳಂ ಸಿನಿಮಾ ರಂಗಕ್ಕೆ ಕೀ ಬೋರ್ಡ್ ಸೇರಿದಂತೆ ಅನೇಕ ಆಧುನಿಕ ವಾದ್ಯವನ್ನು ಪರಿಚಯಿಸಿದವರು. ಹಾಗಾಗಿ ಮಲಯಾಳಂ ಸಿನಿಮಾ ಕ್ಷೇತ್ರ ಮೊದಲ ಟೆಕ್ನೋ ಸಂಗೀತಾಗಾರ ಎಂದು ಕರೆಯುತ್ತಿದೆ.

Read More

ತೆಲುಗಿನ ಖ್ಯಾತ ನಟ ನಾಗಾರ್ಜುನ್ (Nagarjuna) ಮಾಲ್ಡೀವ್ಸ್ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡುವ ಮೂಲಕ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಷಯವಾಗಿ ನನಗೆ ಯಾವುದೇ ಭಯವಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಲಕ್ಷ ದ್ವೀಪದಲ್ಲಿ ಮೋದಿ ಕಾಣಿಸಿಕೊಂಡ ನಂತರ ಮಾಲ್ಡೀವ್ಸ್ ಮತ್ತು ಭಾರತದ ಮಧ್ಯ ಬಿರುಕು ಕಾಣಿಸಿಕೊಂಡಿದೆ. ಮಾಲ್ಡೀವ್ಸ್ ಪ್ರಯಾಣದ ಕುರಿತಂತೆ ಹಲವಾರು ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಈ ನಡುವೆ ಮಾಲ್ಡೀವ್ಸ್‌ನಿಂದ (Maldives) ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು (Mohamed Muizzu) ತಿಳಿಸಿದ್ದಾರೆಂದು ವರದಿಯಾಗಿದೆ.  ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಬ್ದುಲ್ಲಾ ನಜೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ…

Read More

ನಟ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿರುವ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರು ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ‘ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಚಂದನವನದ ಚೆಂದುಳ್ಳಿ ಚೆಲುವೆ, ಕೆಜಿಎಫ್‌ ಸಿನಿಮಾ ಬಳಿಕ ಖ್ಯಾತಿ ಪಡೆದಿರುವ ಶ್ರೀನಿಧಿ ಶೆಟ್ಟಿ ಅವರು ಸಹ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ್ದಾರೆ. ಇಬ್ಬರೂ ನಾಯಕಿಯರು ಸಂಕ್ರಾಂತಿ ಪ್ರಯುಕ್ತ ಫೋಟೋ ಶೂಟ್​ಗೆ ಫೋಸ್​ ನೀಡಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಜನಿ ರಾಘವನ್​ ಫೋಟೋಶೂಟ್​ ಮಾಡಿಸಿದ್ದಾರೆ. ರೈತ ಮಹಿಳೆಯ ರೀತಿ ಕಾಣಿಸಿಕೊಂಡಿರುವ ಅವರು ಆ ಮೂಲಕ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.

Read More

ಆಲ್ಕೋಹಾಲ್ ಸೇವನೆಯಿಂದ ಲಿವರ್ ಆರೋಗ್ಯ ಹದಗೆಡುತ್ತದೆ. ಇದು ಪ್ರಾಣಕ್ಕೂ ಸಂಚಕಾರ ತರಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಧೂಮಪಾನ, ಮದ್ಯಪಾನಗಳ ಅಭ್ಯಾಸ ಬಿಟ್ಟುಬಿಡಬೇಕೆಂದು ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತದೆ. ಆದರೆ, ಆಲ್ಕೋಹಾಲ್​ಗಿಂತಲೂ ಹೆಚ್ಚು ನಮ್ಮ ಲಿವರ್ ಮೇಲೆ ಪರಿಣಾಮ ಬೀರುವ ಕೆಲವು ಆಹಾರಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ನಮ್ಮ ಲಿವರ್ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಲಿವರ್ ರಕ್ತದಲ್ಲಿನ ಹೆಚ್ಚಿನ ರಾಸಾಯನಿಕ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಪಿತ್ತರಸ ಎಂಬ ಉತ್ಪನ್ನವನ್ನು ಹೊರಹಾಕುತ್ತದೆ. ಇದು ಲಿವರ್​ನಿಂದ ತ್ಯಾಜ್ಯ ಉತ್ಪನ್ನಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಅಂದರೆ, ಇದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭವಾಗಿ ಚಲಿಸುವಂತೆ ಮಾಡುತ್ತದೆ. ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಯು ಸುಲಭವಾಗಿ ಕೆಲಸ ಮಾಡಲು ಸಹಾಯ ಮಾಡಲು ನಮ್ಮ ಹೊಟ್ಟೆಯಲ್ಲಿ ವಿಷಕಾರಿ ಆಹಾರ ಸೇರಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಲಿವರ್ ಅನ್ನು ರಕ್ಷಿಸಲು ನೀವು ಕೆಲವು ಆಹಾರಗಳ ಸೇವನೆಯನ್ನು ಅವಾಯ್ಡ್​ ಮಾಡಬೇಕು. ಆ…

Read More

ನಾಡಿನೆಲ್ಲೆಡೆ  ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸ್ಯಾಂಡಲ್‍ವುಡ್ ಸ್ಟಾರ್ ನಟರು ಕೂಡ ಮಕರ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ತಮ್ಮದೇ ಸ್ಟೈಲ್‍ನಲ್ಲಿ ಶುಭಾಶಯ ತಿಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ. ತಮ್ಮ ಫಾರ್ಮ್​ ಹೌಸ್​ನಲ್ಲಿ ಆಪ್ತ ಬಳಗದೊಂದಿಗೆ ಸಂಕ್ರಾಂತಿ ಆಚರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ’ ಎಂದು ಹಸುವಿನ ಜೊತೆ ಇರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಟೇರ ಚಿತ್ರತಂಡದಿಂದ ಶುಭಾಶಯ ಕಾಟೇರ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಸಹ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಪ್ರೀತಿಯ ಶುಭಾಶಯಗಳು ಎಂದು ಕಾಟೇರ ಚಿತ್ರದ ಪೋಸ್ಟರ್​ ಹಂಚಿಕೊಂಡಿದ್ದಾರೆ. ರಾಕ್​ಲೈನ್​ ಪ್ರೊಡಕ್ಷನ್​ ಸಹ ನಾಡಿನ…

Read More

ಇಂದೋರ್:‌ ಶಿವಂ ದುಬೆ ತೂಫಾನ್ ಬ್ಯಾಟಿಂಗ್.. ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುತ ಆಟ.. ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಗೆದ್ದು ಬೀಗಿದ ಭಾರತ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್​ಗಳಲ್ಲಿ 173 ರನ್​ ಸಿಡಿಸಿತು. ಅಫ್ಘಾನ್​ ನೀಡಿದ 173 ರನ್​ಗಳ ಕಠೀಣ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಕ್ಲೀನ್​ ಬೌಡ್​ ಆಗಿ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ, ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಜೊತೆಗೂಡಿ ಜವಾಬ್ದಾರಿಯುವ ಆಟ ಪ್ರದರ್ಶಿಸಿದರು. ಈ ಜೋಡಿ 50 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿತು. ಕೊಹ್ಲಿ 16 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 29 ರನ್​ ಗಳಿಸಿ ನವೀನ್​ಗೆ ವಿಕೆಟ್ ಒಪ್ಪಿಸಿದರು.…

Read More